For Quick Alerts
ALLOW NOTIFICATIONS  
For Daily Alerts

ಅಕ್ಷಯ ತೃತೀಯ ಚಿನ್ನ ಕೊಳ್ಳುತ್ತೀರಾ? ಹಾಗಿದ್ದರೆ ಈ ಲೇಖನ ತಪ್ಪದೆ ಓದಲೇಬೇಕು...

By K G Krupal
|

ಅಕ್ಷಯ ತೃತೀಯ ಧಮಾಕಾ..! ಕೇವಲ 1 ರೂಪಾಯಿಗೆ ಚಿನ್ನ ಖರೀದಿಸಿ!!

ನಮ್ಮ ಸಂಸ್ಕೃತಿಯಂತೆ ಹಲವಾರು ಹಬ್ಬ ಹರಿದಿನಗಳಲ್ಲಿ ವಿಶೇಷವಾಗಿ ಅಕ್ಷಯ ತೃತೀಯದಂದು ಚಿನ್ನ-ಬೆಳ್ಳಿಗಳಂತಹ ಅಮೂಲ್ಯವಾದ ಲೋಹಗಳನ್ನು, ಕನಿಷ್ಟ ಪಕ್ಷ ಸಾಂಕೇತಿಕವಾಗಿಯಾದರೂ ಕೊಳ್ಳುವ ಸಂಪ್ರದಾಯ ರೂಢಿಯಲ್ಲಿದೆ. ಈ ಕಾರಣದಿಂದಾಗಿ ಅಕ್ಷಯ ತೃತೀಯಾ ಸಂದರ್ಭದಲ್ಲಿ ಚಿನ್ನದ ದರ ಹೆಚ್ಚಿನ ಏರಿಳಿತ ಕಾಣುತ್ತದೆ.(ಅಕ್ಷಯ ತೃತೀಯ)

ಏರಿಳಿತಗಳ ಊಹಾಪೋಹ
 

ಏರಿಳಿತಗಳ ಊಹಾಪೋಹ

ಈ ಸಂದರ್ಭದಲ್ಲಿ 2011ರ ಏಪ್ರಿಲ್ ನಲ್ಲಿ ಅಕ್ಷಯ ತೃತೀಯ ಮುಂಚಿನ ಕೆಲವು ದಿನಗಳಲ್ಲಿ ಬೆಳ್ಳಿಯ ಬೆಲೆಯು ರೂ. 75 ಸಾವಿರದ ಗಡಿ ದಾಟಿತ್ತು. ಅಂದರೆ ಕೇವಲ ಆರು ತಿಂಗಳಲ್ಲಿ ದ್ವಿಗುಣಗೊಂಡಿತ್ತು. ಅಕ್ಟೊಬರ್ 2010ರಲ್ಲಿ ರೂ. 25 ಸಾವಿರ ರೂಪಾಯಿಗಳ ಸಮೀಪವಿದ್ದ ಬೆಳ್ಳಿ, ಏಪ್ರಿಲ್ 2011ರಲ್ಲಿ ರೂ. 75 ಸಾವಿರದ ಗಡಿ ದಾಟಿದ ಸಂದರ್ಭದಲ್ಲಿ ಬೆಳ್ಳಿಯು ಒಂದು ಲಕ್ಷ ರೂಪಾಯಿಗಳನ್ನು ತಲುಪುತ್ತದೆ ಎಂಬ ಉಹಾಪೋಹವು ಬೇಡಿಕೆ ಹೆಚ್ಚುವಂತೆ ಮಾಡಿತು.

ಪರೋಕ್ಷ ದಾನ

ಸೋಜಿಗವೆಂದರೆ ಅಕ್ಷಯ ತೃತೀಯ ಹಿಂದಿನ ದಿನದಿಂದ ಬೆಳ್ಳಿಯ ಬೆಲೆ ಕುಸಿಯಿತು. ಅಂದರೆ ಅಕ್ಷಯ ತೃತೀಯಾ ದಿನದಂದು ದಾನ ಮಾಡಬೇಕೆಂದಿರುವುದರಿಂದ ರೂ. 75 ಸಾವಿರದ ಸಮೀಪ ಬೆಳ್ಳಿ ಖರೀದಿಸಿದವರು ಪರೋಕ್ಷವಾಗಿ ದಾನ ಮಾಡಿದಂತಾಯಿತಲ್ಲವೇ? ಅಂದು ಆ ಬೆಳೆಗೆ ಖರೀದಿಸಿದ ಬೆಳ್ಳಿಯನ್ನು ಇಂದಿಗೂ ಹೋಲ್ಡ್ ಮಾಡಿರುವವರು ಸಾಕಷ್ಟು ಹೂಡಿಕೆದಾರರಿದ್ದಾರೆ.

ಡಿಮ್ಯಾಟ್ ರೂಪ

ಅಕ್ಷಯ ತೃತೀಯದಂದು ಚಿನ್ನ ಕೊಳ್ಳಬೇಕೆಂದಿರುವವರಿಗೆ ಪರ್ಯಾಯವಾದ ಮಾರ್ಗವೊಂದಿದೆ. ಅದೆಂದರೆ ಸ್ಟಾಕ್ ಎಕ್ಸ್ ಚೇಂಜ್ ಮೂಲಕ ಚಿನ್ನವನ್ನು ಒಂದೊಂದೇ ಗ್ರಾಂನಷ್ಟು ಡಿಮ್ಯಾಟ್ ರೂಪದಲ್ಲಿ ಕೊಳ್ಳಲು ಅವಕಾಶವಿದೆ. ಇದು ಬೌತಿಕ ರೂಪದಲ್ಲಿ ಇಲ್ಲದೆ ಡಿಮ್ಯಾಟ್ ರೂಪದಲ್ಲಿರುತ್ತದೆ.

ಆಭರಣ ಅಂಗಡಿಗಳ ಮುಂದೆ ನಿಲ್ಲಬೇಕಿಲ್ಲ
 

ಆಭರಣ ಅಂಗಡಿಗಳ ಮುಂದೆ ನಿಲ್ಲಬೇಕಿಲ್ಲ

ಅಕ್ಷಯ ತೃತೀಯ ದಿನದಂದು ಆಭರಣಗಳ ಅಂಗಡಿಯ ಮುಂದೆ ಸರತಿಯಲ್ಲಿ ಚಿನ್ನ ಕೊಳ್ಳುವುದಕ್ಕೆ ಬದಲಾಗಿ ಷೇರು ವಿನಿಮಯ ಕೇಂದ್ರಗಳ ಸದಸ್ಯರ, ಉಪದಲ್ಲಾಲರ ಅಥವಾ ಫ್ರಾಂಚೈಸಿಗಳ ಟರ್ಮಿನಲ್‌ನ ಮೂಲಕವೂ ಚಿನ್ನ ಖರೀದಿಸಬಹುದಾಗಿದೆ.

ಇ.ಟಿ.ಎಫ್ ಚಿನ್ನ

ಷೇರು ಬ್ರೋಕರ್ ಮುಂಚಿತವಾಗಿ ಸಂಪರ್ಕಿಸಿ ಅವರಲ್ಲಿ ನೊಂದಾಯಿಸಿಕೊಳ್ಳಿರಿ. ಅವಕಾಶವಿದ್ದಾಗಲೆಲ್ಲಾ ಉಳಿತಾಯದ ಮಾದರಿಯಾಗಿ ಚಿನ್ನ ಸಂಗ್ರಹಿಸಿರಿ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಮತ್ತು ನ್ಯಾಶನಲ್ ಸ್ಟಾಕ್ ಎಕ್ಸ್‌ಚೇಂಜ್ ಮೂಲಕ ಒಂದು ಗ್ರಾಂ ಘಟಕಗಳಲ್ಲಿ ಯೂನಿಟ್‌ಗಳನ್ನು ಪಡೆಯಬಹುದು. ಬೇಡಿಕೆ-ಪೂರೈಕೆ, ಚಿನ್ನಿವಾರ ಪೇಟೆಯನ್ನಾಧರಿಸಿ ಇ.ಟಿ.ಎಫ್.ಗಳ ಮೂಲಕ ಚಿನ್ನ ಖರೀದಿಸಬಹುದು. ಇದಕ್ಕೆ ಷೇರು ಟ್ರೇಡಿಂಗ್ ಖಾತೆಯೇ ಸಾಕಾಗುವುದು. ವಿಶೇಷ ರಿಜಿಸ್ಟ್ರೇಷನ್ ಅವಶ್ಯಕತೆಯಿಲ್ಲ. ಈ ವಿಧದಲ್ಲಿ ಚಿನ್ನವನ್ನು ಭೌತಿಕವಾಗಿ ಪರಿವರ್ತಿಸಲು ಅವಕಾಶವಿಲ್ಲ.

ಮಾರಾಟ ಮಾಡಬಹುದು

ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್‌ಗಳ ಯೂನಿಟ್‌ಗಳನ್ನು ಹೂಡಿಕೆದಾರರು ಸಿಸ್ಟಮೆಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ರೀತಿ ನಿಯತಕಾಲಿಕ ಹೂಡಿಕೆ ಮಾಡಿ ಸುಭದ್ರವಾದ ಹೂಡಿಕೆ ರೂಪಿಸಿಕೊಳ್ಳಬಹುದಾಗಿದೆ. ಹಣದ ಅವಶ್ಯಕತೆಯಿದ್ದಾಗ ಈ ಇ.ಟಿ.ಎಫ್ ಗೋಲ್ಡ್ ಯುನಿಟ್ ಗಳನ್ನು ಸ್ಟಾಕ್ ಎಕ್ಸ್ ಚೇಂಜ್ ಗಳಲ್ಲಿ ಮಾರಾಟ ಮಾಡಬಹುದಾಗಿದೆ.

ಸಂಜೆ 4.30-7ರ ವರೆಗೆ ವಹಿವಾಟಿಗೆ ಅವಕಾಶ

ಸ್ಟಾಕ್ ಎಕ್ಸ್ ಚೇಂಜ್ ಗಳು ಗೋಲ್ಡ್ ಇಟಿಎಫ್ ಗಳ ಮೂಲಕ ಚಿನ್ನ ಖರೀದಿಸುವವರಿಗೆ ಅನುಕೂಲವಾಗಲೆಂದು ಕೇವಲ ಗೋಲ್ಡ್ ಇಟಿಎಫ್ ಗಳಲ್ಲಿ ವ್ಯವಹರಿಸಲು ಸಂಜೆ 4-30ರಿಂದ 7 ಗಂಟೆಯವರೆಗೂ ವಹಿವಾಟಿಗೆ ವಿಶೇಷ ಅವಕಾಶ ಮಾಡಿಕೊಟ್ಟಿವೆ. ಈ ಅಕ್ಷಯ ತೃತೀಯದಂದು ಡಿಮ್ಯಾಟ್ ರೂಪದ ಚಿನ್ನ ಕೊಳ್ಳಲು ಅಡಿಪಾಯ ಹಾಕಿ.

English summary

Do you buy akshaya tratiya gold? If so, this article must read ...

Akshaya Tritiya, falling on the third day of the bright half of the lunar month of Vaisakha of the traditional Hindu calendar, is one of the four most auspicious days of the year for Hindu. Day is particularly considered auspicious for buying long term assets like gold and silver, including ornaments made of
Story first published: Friday, April 28, 2017, 14:30 [IST]
Company Search
Enter the first few characters of the company's name or the NSE symbol or BSE code and click 'Go'
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more