For Quick Alerts
ALLOW NOTIFICATIONS  
For Daily Alerts

ಆಧಾರ್ ಕಾರ್ಡ್ ನಲ್ಲಿ ತಪ್ಪುಗಳಿದ್ದರೆ ಸರಿಪಡಿಸುವುದು ಹೇಗೆ?

By Siddu
|

ಆಧಾರ್ ಕಾರ್ಡ್ ಯೋಜನೆ 2009ರಲ್ಲಿ ಭಾರತ ವಾಸಿಗಳ ಜಾಗತಿಕ ಗುರುತಿನ ಮನ್ನಣೆಗಾಗಿ ಪ್ರಾರಂಭಿಸಲಾಗಿದೆ. ಸರ್ಕಾರ ಎಲ್ಲ ವ್ಯವಹಾರ ಮತ್ತು ಸೌಲಭ್ಯಗಳಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡುತ್ತಿರುವ ಸಂಗತಿ ನಮಗೆಲ್ಲ ತಿಳಿದಿದೆ. 12 ಅಂಕೆಗಳ ಆಧಾರ್ ನಂಬರ್ ಪ್ರತಿಯೊಬ್ಬ ಭಾರತೀಯನ ಗುರುತು ಹಾಗೂ ಹೆಮ್ಮೆಯ ಸಂಖ್ಯೆಯಾಗಿ ಮಾರ್ಪಟ್ಟಿದೆ. ಅನೇಕ ಸೇವೆಗಳ ಆಧಾರ ಸ್ಥಂಭವಾಗಿ ಹಾಗೂ ಅಪಾರ ಪ್ರಯೋಜನಗಳನ್ನು ಪಡೆಯುವ ಸೇತುವೆಯಾಗಿ ಆಧಾರ್ ಕಾರ್ಡ್ ಪ್ರಾಮುಖ್ಯತೆ ಪಡೆದಿದೆ.

ಆದರೆ ಆಧಾರ್ ಕಾರ್ಡ್ ಅರ್ಜಿ ತುಂಬುವ ಸಂದರ್ಭದಲ್ಲಿ ತಪ್ಪುಗಳಾಗಿದ್ದಲ್ಲಿ ಅದನ್ನು ಬದಲಾಯಿಸುವುದು ಅಥವಾ ಅಪ್ಡೇಟ್ ಮಾಡಬೇಕಾಗುತ್ತದೆ. ಹೆಸರು, ವಿಳಾಸ, ಜನ್ಮದಿನಾಂಕ, ಮೊಬೈಲ್ ನಂಬರ್ ಇತ್ಯಾದಿ ತಪ್ಪುಗಳಿದ್ದಲ್ಲಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಲೇಬೇಕಾಗುತ್ತದೆ. ಆಧಾರ್ ಲಿಂಕ್ ಮಾಡಿಲ್ಲವೆ? ಹಾಗಿದ್ದರೆ ಈ ಸೌಲಭ್ಯಗಳು ಸಿಗಲ್ಲ

 

ಆಧಾರ್ ಕಾರ್ಡ್ ನಲ್ಲಿ ಬದಲಾವಣೆ ಅಥವಾ ಅಪ್ಡೇಟ್ ಆನ್ಲೈನ್ ಮೂಲಕ ಇಲ್ಲವೇ ಆಪ್ಲೈನ್ ಮೂಲಕ ಮಾಡಬಹುದು. ಇಲ್ಲಿ ಆನ್ಲೈನ್ ಮೂಲಕ ಆಧಾರ್ ತಪ್ಪುಗಳನ್ನು ಸರಿಪಡಿಸುವುದು ಹೇಗೆ ಎಂಬುದನ್ನು ನೋಡೋಣ...

1. ಆಧಾರ್ ವೆಬ್ಸೈಟ್

ಭಾರತ ಸರ್ಕಾರದ ವಿಶಿಷ್ಟ ಗುರುತು ಪ್ರಾಧಿಕಾರದ ವೆಬ್ಸೈಟ್ ಭೇಟಿ ನೀಡಿ ತಪ್ಪುಗಳನ್ನು ಸರಿಪಡಿಸಲು ಆಧಾರ್ ವೆಬ್ಸೈಟ್ ಭೇಟಿ ನೀಡಿ. ಆಧಾರ್ ಕಾರ್ಡ್ ನಲ್ಲಿ ಬದಲಾವಣೆ ಮಾಡಲು ಅಥವಾ ಅಪ್ಡೇಟ್ ಮಾಡಲು ಯುಐಡಿಎಐ ಆಧಾರ್ ಕಾರ್ಡ್ ಸೆಲ್ಪ್ ಸರ್ವಿಸ್ ಅಪ್ಡೇಟ್ ಪೋರ್ಟಲ್(SSUP) ಪರಿಚಯಿಸಿದೆ.(https://ssup.uidai. gov.in/web/guest/update). ಈ ಪೋರ್ಟಲ್ ಗೆ ಭೇಟಿ ಕೊಟ್ಟ ನಂತರ ನಿಮ್ಮ ಆಧಾರ್ ನಂಬರ್ ಎಂಟರ್ ಮಾಡಿ. ತದನಂತರ ನಿಮ್ಮ ಮೊಬೈಲ್ ನಂಬರ್ ಗೆ ಒಟಿಪಿ ಕೋಡ್ ಬರುತ್ತದೆ.

2. ಏನು ಬದಲಾವಣೆ/ಅಪ್ಡೇಟ್ ಮಾಡಬಹುದು?

ಯುಐಡಿಎಐ ಆನ್ಲೈನ್ ಪೋರ್ಟಲ್ ಮೂಲಕ ಹೆಸರು, ಲಿಂಗ, ಜನ್ಮದಿನಾಂಕ, ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಅಪ್ಡೇಟ್ ಅಥವಾ ಬದಲಾವಣೆ ಮಾಡಬಹುದು.

3. ಹೆಸರು, ವಿಳಾಸ, ಲಿಂಗ, ಜನ್ಮದಿನಾಂಕ ಅಪ್ಡೇಟ್ ಹೇಗೆ?
 

3. ಹೆಸರು, ವಿಳಾಸ, ಲಿಂಗ, ಜನ್ಮದಿನಾಂಕ ಅಪ್ಡೇಟ್ ಹೇಗೆ?

ನಿಮ್ಮ ಮೊಬೈಲ್ ನಂಬರ್ ನೋಂದಣಿ ಆಗಿದ್ದರೆ ಮಾತ್ರ ಯುಐಡಿಎಐ ಮೂಲಕ ಆಧಾರ್ ಆನ್ಲೈನ್ ನಲ್ಲಿ ಹೆಸರು ಬದಲಾಯಿಸಬಹುದು.

ಸರಳ ವಿಧಾನಗಳು:

1. ಯುಐಡಿಎಐ ಆಫಿಸಿಯಲ್ ಪೋರ್ಟಲ್ ಗೆ ಭೇಟಿ ನೀಡಿ.(ಇಲ್ಲಿ ಕ್ಲಿಕ್ ಮಾಡಿ)

2. ಆಧಾರ್ ಅಪ್ಡೇಟ್ ಡಿಟೆಲ್ಸ್ ಆನ್ಲೈನ್ ಮೇಲೆ ಕ್ಲಿಕ್ ಮಾಡಿ

3. ನಿಮ್ಮ ಆಧಾರ್ ಡೇಟಾ ಅಪ್ಡೇಟ್(Upadate your aadhar data) ಮೇಲೆ ಕ್ಲಿಕ್ ಮಾಡಿ.

4. ಆಧಾರ್ ಸೆಲ್ಪ್ ಸರ್ವಿಸ್ ಅಪ್ಡೇಟ್ ಪೋರ್ಟಲ್ ಪುಟ ತೆರೆದುಕೊಳ್ಳುತ್ತದೆ.

5. ಈ To submit your update/ correction request online please ಲಿಂಕ್ ಮೇಲೆ ಕ್ಲಿಕ್ ಮಾಡಿ.

6. ಅಲ್ಲಿ ಹೊಸ ಪುಟ ತೆರೆದುಕೊಳ್ಳುತ್ತದೆ. ನಿಮ್ಮ ಆಧಾರ್ ನಂಬರ್ ಟೈಪ್ ಮಾಡಿ.

7. ನೋಂದಾಯಿತ ಮೊಬೈಲ್ ನಂಬರ್ ಗೆ ಒಟಿಪಿ ಬರುತ್ತದೆ. ನಂತರ ಒಟಿಪಿ, ಸೆಕ್ಯೂರಿಟಿ ಕೋಡ್ ಎಂಟರ್ ಮಾಡಿ. ಆಮೇಲೆ ಸಬ್ಮಿಟ್(Submit) ಮಾಡಿ.

8. ಅಪ್ಡೇಟ್ ಮಾಡಬೇಕಾದ ಆಧಾರ್ ಪುಟ ತೆರೆದುಕೊಳ್ಳುತ್ತದೆ.

9. ಅಪ್ಡೇಟ್ ಕೋರಿಕೆ ಪುಟದಲ್ಲಿ ನೀವು ಬದಲಾಯಿಸಲು ಇಚ್ಛಿಸುವ(ಹೆಸರು, ವಿಳಾಸ, ಲಿಂಗ, ಜನ್ಮದಿನಾಂಕ) ವಿವರಗಳನ್ನು ಅಪ್ಡೇಟ್ ಮಾಡಬಹುದು.

10. ಎಲ್ಲಾ ಮಾಹಿತಿಗಳನ್ನು ತುಂಬಿದ ನಂತರ BPO service provider based on the Avg. response time ಸೆಲೆಕ್ಟ್ ಮಾಡಿ. ನಂತರ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ.

11. ಯಶಸ್ವಿ ಸಲ್ಲಿಕೆ ನಂತರ ಅಪ್ಡೇಟ್ ರಿಕ್ವೆಸ್ಟ್ ನಂಬರ್(URN) ಜನರೇಟ್ ಆಗುತ್ತದೆ. ತದನಂತರ ನಿಮಗೆ ಸಂದೇಶ ಬರುತ್ತದೆ. ಇಲ್ಲಿಗೆ ನಿಮ್ಮ ಆನ್ಲೈನ್ ಅಪ್ಡೇಟ್ ಪ್ರಕ್ರಿಯೆ ಯಶಸ್ವಿಯಾಗುತ್ತದೆ.

4. ಹೊಸ ಮೊಬೈಲ್ ನಂಬರ್ ಸೇರ್ಪಡೆ ಹೇಗೆ?

ಈಗಾಗಲೇ ನೋಂದಾಯಿಸಲ್ಪಟ್ಟ ಮೊಬೈಲ್ ನಂಬರ್ ಹೊರತುಪಡಿಸಿ ಹೊಸ ನಂಬರ್ ಸೇರಿಸಲು ಹತ್ತಿರದ ಆಧಾರ್ ದಾಖಲಾತಿ ಕೇಂದ್ರಕ್ಕೆ ಬೇಟಿ ನೀಡಬೇಕು.

1. ಹತ್ತಿರದ ಆಧಾರ್ ದಾಖಲಾತಿ ಕೇಂದ್ರಕ್ಕೆ ಬೇಟಿ ನೀಡಿ.

2. ನಿಮ್ಮ 12 ಅಂಕೆಗಳ ಆಧಾರ್ ನಂಬರ್ ಮತ್ತು ನೋಂದಾಯಿತ ಹಳೆ ಮೊಬೈಲ್ ನಂಬರ್ ಒದಗಿಸಿ.

3. ಹೊಸದಾಗಿ ನೀಡಿದ ಮೊಬೈಲ್ ನಂಬರ್ ಗೆ ಒಟಿಪಿ ಬರುತ್ತದೆ.

4. ಒಟಿಪಿ ಪರಿಶೀಲನೆ ನಂತರ ಬಯೋಮೆಟ್ರಿಕ್ ಸ್ಕ್ಯಾನ್ ಮಾಡಲಾಗುತ್ತದೆ.

5. ಪ್ರಕ್ರಿಯೆ ಪೂರ್ಣಗೊಂಡ ನಂತರ ಹೊಸ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಬರುತ್ತದೆ.

6. 72 ಗಂಟೆಗಳ ಒಳಾಗಾಗಿ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡಲಾಗುತ್ತದೆ.

ಆಧಾರ್ ಕಾರ್ಡ್ ಯಾಕೆ ಬೇಕು?

ಎಲ್ಪಿಜಿ ಸಬ್ಸಿಡಿ(LPG Subsidy), ಜನ್ ಧನ್ ಯೋಜನೆ, ಪಾಸ್ಪೋರ್ಟ್, ಡಿಜಿಟಲ್ ಲಾಕರ್, ಚುನಾವಣಾ ಚೀಟಿ ಲಿಂಕ್, ತಿಂಗಳ ಪಿಂಚಣಿ, ಪ್ರಾವಿಡೆಂಟ್ ಫಂಡ್, ಹೊಸ ಖಾತೆ ತೆರೆಯಲು, ಡಿಜಿಟಲ್ ಜೀವನ ಪತ್ರ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು, ಆದಾಯ ತೆರಿಗೆ ಕಟ್ಟಲು ಆಧಾರ್ ಕಾರ್ಡ್ ಬೇಕಾಗುತ್ತದೆ. (Read more: ಆಧಾರ್ ಕಾರ್ಡ್)

English summary

How to update or correct details in aadhaar card online

Aadhar program was launched in 2009 with the objective to give a universal identity to every Indian citizen. UIDAI has introduced Aadhar Card Self Service Update Portal (SSUP) to apply for Aadhar Card Correction and Aadhar update.
Company Search
Enter the first few characters of the company's name or the NSE symbol or BSE code and click 'Go'
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more