For Quick Alerts
ALLOW NOTIFICATIONS  
For Daily Alerts

ಹೊಸ ಐಟಿಆರ್(ITR) ಅರ್ಜಿ: ನಿಮಗೆ ಗೊತ್ತಿರಬೇಕಾದ ಕೆಲ ಅಂಶಗಳು

By Siddu
|

ಆದಾಯ ತೆರಿಗೆ ಇಲಾಖೆ ಲೆಕ್ಕಪತ್ರ ವಿವರ ಅರ್ಜಿಯನ್ನು(ಐಟಿಆರ್) ಈ ಬಾರಿ ಮತ್ತಷ್ಟು ಸರಳಗೊಳಿಸಿದೆ.

ತೆರಿಗೆದಾರರು ಸಲ್ಲಿಸುವ ಐಟಿಆರ್ ಅರ್ಜಿಗಳು ಇನ್ನಷ್ಟು ಸರಳಗೊಂಡಿದ್ದು, ಏಪ್ರಿಲ್‌ 1ರಿಂದ ಹೊಸ ನಮೂನೆಯ ಅರ್ಜಿಗಳು ಲಭ್ಯ ಇರುತ್ತವೆ. ಆದಾಯ ತೆರಿಗೆ ಲೆಕ್ಕಪತ್ರ ವಿವರ ಸಲ್ಲಿಕೆಗೆ ಜುಲೈ 31 ಕೊನೆಯ ದಿನಾಂಕವಾಗಿದೆ.

ಆಧಾರ್ ಕಡ್ಡಾಯ
 

ಆಧಾರ್ ಕಡ್ಡಾಯ

ಅರ್ಜಿ ಸಲ್ಲಿಕೆ ಸಂದರ್ಭದಲ್ಲಿ ತೆರಿಗೆದಾರರು ಆಧಾರ್ ನಂಬರ್ ಸಲ್ಲಿಸುವುದು ಕಡ್ಡಾಯವಾಗಿದೆ. ಇದರೊಂದಿಗೆ ಪ್ಯಾನ್‌ ಮತ್ತು ತೆರಿಗೆ ಪಾವತಿ ಮಾಹಿತಿ ಒದಗಿಸಬೇಕು. ಮೂಲದಲ್ಲಿಯೇ ತೆರಿಗೆ ಕಡಿತ ವಿವರ(ಟಿಡಿಎಸ್) ಸ್ವಯಂ ದಾಖಲಾಗಲಿದೆ.

ITR ನಲ್ಲಿ ಕೇವಲ 18 ಕಾಲಂ

ITR ನಲ್ಲಿ ಕೇವಲ 18 ಕಾಲಂ

ಐಟಿಆರ್-1 ಅರ್ಜಿಯಲ್ಲಿ ಈ ಹಿಂದೆ ಇದ್ದ ಅನೇಕ ಅನಗತ್ಯ ಕಾಲಂಗಳನ್ನು 2017-18ನೇ ಸಾಲಿನ ಆರ್ಥಿಕ ವರ್ಷದ ಹೊಸ ಅರ್ಜಿಯಲ್ಲಿ ಕೈಬಿಡಲಾಗಿದ್ದು, ಕೇವಲ 18 ಕಾಲಂ ಮಾತ್ರ ಉಳಿಸಿಕೊಳ್ಳಲಾಗಿದೆ ಎಂದು ತೆರಿಗೆ ಇಲಾಖೆ ತಿಳಿಸಿದೆ. ಐಟಿಆರ್ ವಿವರ ಸಲ್ಲಿಕೆ ಅರ್ಜಿಯಲ್ಲಿ ಕೆಲವು ಕಾಲಂಗಳನ್ನು ಮಾತ್ರ ಭರ್ತಿ ಮಾಡಬೇಕಾಗುತ್ತದೆ.

80ಸಿ, 80 ಡಿ ಕಾಲಂ

80ಸಿ, 80 ಡಿ ಕಾಲಂ

ತೆರಿಗೆ ಕಾಯಿದೆ ಸೆಕ್ಷನ್ 80C, 80D ಅಡಿಯಲ್ಲಿ ಜೀವವಿಮೆ, ಭವಿಷ್ಯನಿಧಿ, ಗೃಹಸಾಲ, ವೈದ್ಯಕೀಯ ವಿಮೆಗಳ ಮೇಲೆ ತೆರಿಗೆ ಕಡಿತ ಇಲ್ಲವೇ ತೆರಿಗೆ ವಿನಾಯಿತಿ ಪಡೆಯಲು ಈ ಮೊದಲಿದ್ದ 80C ಮತ್ತು 80 ಕಾಲಂ ಉಳಿಸಿಕೊಳ್ಳಲಾಗಿದೆ.

ಐಟಿಆರ್-4 ಮತ್ತು ಸುಗಮ
 

ಐಟಿಆರ್-4 ಮತ್ತು ಸುಗಮ

ಬಿಸಿನೆಸ್ ಆದಾಯ ಹೊಂದಿರದ ಹಿಂದು ಅವಿಭಜಿತ ಕುಟುಂಬ ಮತ್ತು ವ್ಯಕ್ತಿಗಳು ಐಟಿಆರ್1 ಸಹಜ, ಐಟಿಆರ್ 2 ಮತ್ತು 2ಎ ಮತ್ತು ಬಿಸಿನೆಸ್ ಆದಾಯ ಹೊಂದಿರುವವರು ಐಟಿಆರ್-4 ಸುಗಮ ಅರ್ಜಿ ಭರ್ತಿ ಮಾಡಬೇಕಾಗುತ್ತದೆ.

VIA ಕಾಲಂ

VIA ಕಾಲಂ

ಸಂಬಳ ಪಡೆಯುತ್ತಿರುವ ನೌಕರರು ತೆರಿಗೆ ಕಡಿತದ ಹೆಚ್ಚುವರಿ ಹಣ ಮರಳಿ ಪಡೆಯಲು ಭರ್ತಿ ಮಾಡುತ್ತಿದ್ದ VIA ಕಾಲಂ ಅನ್ನು ಹೊಸ ಐಟಿಆರ್ ಅರ್ಜಿಯಲ್ಲಿ ತೆಗೆದು ಹಾಕಲಾಗಿದೆ.

English summary

New Income Tax Return Form: 6 things you should know

The government on Friday notified a simplified Income Tax Return form for individuals which will be available for filing ITR for Assessment Year 2017-18 from April 1.
Story first published: Saturday, April 1, 2017, 15:45 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more