For Quick Alerts
ALLOW NOTIFICATIONS  
For Daily Alerts

ಅಟಲ್ ಪಿಂಚಣಿ ಯೋಜನೆ(APY) ಮಾಡಿಸುವುದು ಹೇಗೆ?

|

ಮೋದಿ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಅಟಲ್ ಪಿಂಚಣಿ ಯೋಜನೆ ಕೂಡ ಒಂದು. ನಿವೃತ್ತಿ ಯೋಜನೆ ಅಡಿಯಲ್ಲಿ ಹೆಚ್ಚೆಚ್ಚು ಜನರು ಒಳಗೊಳ್ಳುವಂತೆ ಮಾಡಿ ನಿವೃತ್ತಿ ಭದ್ರತೆಯನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವವರನ್ನು ಗುರಿಯಾಗಿರಿಸಿಕೊಂಡು ಈ ಯೋಜನೆಯನ್ನು ಸಿದ್ದಪಡಿಸಲಾಗಿದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಪಿಎಫ್ಆರ್ ಡಿಎ) ಅಡಿಯಲ್ಲಿ ಯೋಜನೆಗೆ ಸಂಪೂರ್ಣ ಭದ್ರತೆ ಒದಗಿಸಲಾಗಿದೆ.

ಅಟಲ್ ಪಿಂಚಣಿ ಯೋಜನೆ(APY) ಮಾಡಿಸುವುದು ಹೇಗೆ?

 

ಯೋಜನೆ ಉದ್ದೇಶ

ದೇಶದ ನಾಗರಿಕರಿಗೆ ಸಾಮಾಜಿಕ ಭದ್ರತೆ ಒದಗಿಸಿ, ಇಂಯಹ ಯೋಜನೆಗಳ ಹೆಚ್ಚೆಚ್ಚು ಲಾಭ ಪಡೆದುಕೊಳ್ಳುವಂತೆ ಉತ್ತೇಜಿಸುವುದು. ಖಾಸಗಿ ಅಸಂಘಟಿತ ವಲಯದ ಮತ್ತು ದೇಶದ ಎಲ್ಲ ನಾಗರಿಕರೂ ಈ ಯೋಜನೆ ಲಾಭ ಪಡೆಯಬಹುದು. ಬಡ ಮತ್ತು ಮಧ್ಯಮ ವರ್ಗದ ಜನರು ತಮ್ಮ ನಿವೃತ್ತಿ ಜೀವನದಲ್ಲಿ ನೆಮ್ಮದಿಯಿಂದ ಜೀವನ ಸಾಗಿಸುವಂತಾಗಬೇಕು ಎಂಬುದೇ ಆಟಲ್ ಪಿಂಚಣಿ ಯೋಜನೆಯ ಪ್ರಮುಖ ಉದ್ದೇಶ.

ಅಟಲ್ ಪಿಂಚಣಿ ಯೋಜನೆ ಕುರಿತು ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ನೋಡಿ...

ಎಪಿವೈ ಖಾತೆ ತೆರೆಯುವುದು ಹೇಗೆ?

ಎಪಿವೈ ಖಾತೆ ತೆರೆಯುವುದು ಹೇಗೆ?

ಅಟಲ್ ಪಿಂಚಣಿ ಯೋಜನೆಯನ್ನು ಮಾಡಿಸಬೇಕಾದರೆ ಈಗಾಗಲೇ ಉಳಿತಾಯ ಖಾತೆ ಇರುವ ಬ್ಯಾಂಕಿಗೆ ತೆರಳಿ ಅರ್ಜಿ ತುಂಬಿ ಖಾತೆ ತೆರೆಯಬೇಕು. ಬ್ಯಾಂಕ್ ಖಾತೆಯಿಂದಲೇ ಹೂಡಿಕೆಯ ಮೊತ್ತ ಕಡಿತವಾಗುತ್ತದೆ. ಪ್ರತಿ ತಿಂಗಳು ಬ್ಯಾಂಕಿಗೆ ಹೋಗಬೇಕಾದ ಅಗತ್ಯವಿರುವುದಿಲ್ಲ. ಬದಲಾಗಿ ಖಾತೆಯಲ್ಲಿ ಬ್ಯಾಲೆನ್ಸ್ ಮೊತ್ತ ಇದ್ದರೆ ಸಾಕು. ಹಣ ಅಟಲ್ ಪಿಂಚಣಿ ಯೋಜನೆ ಖಾತೆಗೆ ತನ್ನಿಂದ ತಾನೇ ವರ್ಗಾವಣೆಯಾಗುತ್ತದೆ.

ನೋಂದಣಿ ಅರ್ಜಿ

ನೋಂದಣಿ ಅರ್ಜಿ

ಉಳಿತಾಯ ಖಾತೆ ಹೊಂದಿರುವ ಬ್ಯಾಂಕ್ ನಲ್ಲಿ ಯೋಜನೆ ಬಗ್ಗೆ ವಿಚಾರಿಸಿ ಅರ್ಜಿ ಪಡೆದುಕೊಳ್ಳಬೇಕು. ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ ಬ್ಯಾಂಕ್ ಗೆ ಸಲ್ಲಿಕೆ ಮಾಡಬೇಕು. ಆನ್ ಲೈನ್ ಮೂಲಕವೂ ಅರ್ಜಿ ಸಲ್ಲಿಕೆ ಮಾಡಬಹುದು.

ಮೊಬೈಲ್ ಮತ್ತು ಆಧಾರ್ ಸಂಖ್ಯೆ ನೀಡಿ
 

ಮೊಬೈಲ್ ಮತ್ತು ಆಧಾರ್ ಸಂಖ್ಯೆ ನೀಡಿ

ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ನೀಡಿದರೆ ಯೋಜನೆಯ ಮಾಹಿತಿಯನ್ನು ಎಸ್ಎಂಎಸ್ ಗಳ ಮೂಲಕ ಪಡೆದುಕೊಳ್ಳಬಹುದು. ಆಧಾರ್ ಸಂಖ್ಯೆಯನ್ನು ಇಲ್ಲಿ ಕಡ್ಡಾಯ ಮಾಡಿಲ್ಲ ಆದರೆ ನೀಡಿದರೆ ಒಳಿತು. ಏಕೆಂದರೆ ನಿ್ಮಮ ಗ್ರಾಹಕರನ್ನು ಗುರುತಿಸಿ(ಕೆವೈಸಿ) ಪ್ರಕ್ರಿಯೆ ಫಲಾನುಭವಿಗಳ ಗುರುತಿಗೆ ಆಧಾರ್ ನಂಬರ್ ಪ್ರಮುಖ ದಾಖಲೆಯಾಗಿರುತ್ತದೆ. ಎಲ್ಲ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳು ಅಟಲ್ ಪಿಂಚಣಿ ಯೋಜನೆ ಸೌಲಭ್ಯವನ್ನು ಹೊಂದಿವೆ.

ಎಪಿವೈ ನಲ್ಲಿ ಎಷ್ಟು ಹೂಡಿಕೆ ಮಾಡಬೇಕು?

ಎಪಿವೈ ನಲ್ಲಿ ಎಷ್ಟು ಹೂಡಿಕೆ ಮಾಡಬೇಕು?

ಕನಿಷ್ಟ 20 ವರ್ಷ ಹೂಡಿಕೆ ಮಾಡಬೇಕಾಗುತ್ತದೆ. 18 ವರ್ಷದವರಾದರೆ 42 ವರ್ಷ ಕಾಲ ತಿಂಗಳಿಗೆ ರೂ. 210, 20 ವರ್ಷದವರಾದರೆ 40 ವರ್ಷಗಳವರೆಗೆ ರೂ. 248, 25 ವರ್ಷದವರಾದರೆ 35 ವರ್ಷ ಮಾಸಿಕ ರೂ. 376, 30 ವರ್ಷದವರಾದರೆ 30 ವರ್ಷಗಳವರೆಗೆ ಮಾಸಿಕ ರೂ. 577 ಹಾಗೂ 40 ವರ್ಷದವರಾದರೆ 20 ವರ್ಷಗಳ ಕಾಲ ಮಾಸಿಕ ರೂ. 1454 ಹೂಡಿಕೆ ಮಾಡಬೇಕಾಗುತ್ತದೆ. (ತಿಂಗಳಿಗೆ ರೂ. 5000 ಪಿಂಚಣಿ ಪಡೆಯಬೇಕಾದರೆ)

ಹಣ ವಿತ್ ಡ್ರಾ

ಹಣ ವಿತ್ ಡ್ರಾ

ಯೋಜನೆ ಮಾಡಿಸಿಕೊಂಡವರು 60 ವರ್ಷ ತುಂಬಿದ ನಂತರದಲ್ಲಿ ಪಿಂಚಣಿಗೆ ಅರ್ಜಿ ಸಲ್ಲಿಕೆ ಮಾಡಬಹುದು. 60 ವರ್ಷಕ್ಕೂ ಮುನ್ನ ಯಾವ ಕಾರಣಕ್ಕೂ ಹಣ ನೀಡಲಾಗುವುದಿಲ್ಲ. ಸಾವು ಮತ್ತಿತರ ಅಪಘಾತ ಸಂದರ್ಭದಲ್ಲಿ ಕೆಲ ವಿನಾಯಿತಿ ಕಲ್ಪಿಸಲಾಗಿದೆ. ಈ ಮೇಲಿನಂತೆ ಮಾಸಿಕ ಹಣ ಹೂಡಿಕೆ ಮಾಡಿದರೆ 60ನೇ ವರ್ಷದಿಂದ ತಿಂಗಳಿಗೆ ರೂ. 5000 ಪಿಂಚಣಿ ಪಡೆಯಬಹುದಾಗಿದೆ.

ಅವಧಿ ಮುಗಿದರೆ ಏನಾಗುತ್ತದೆ?

ಅವಧಿ ಮುಗಿದರೆ ಏನಾಗುತ್ತದೆ?

ನಿಗದಿತ ಅವಧಿಯಲ್ಲಿ ಹಣ ಸಂದಾಯವಾಗದಿದ್ದರೆ ಅದನ್ನು ದಂಡ ರೂಪದಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅತಿ ಕನಿಷ್ಠ ಪ್ರಮಾಣದ ಅಂದರೆ ರೂ. 1-10 ವರೆಗೆ ದಂಡ ವಿಧಿಸಬಹುದು.

ವಯಸ್ಸಿನ ಮಿತಿ

ವಯಸ್ಸಿನ ಮಿತಿ

18-40 ವಯಸ್ಸಿನ ಎಲ್ಲಾ ಭಾರತೀಯರು ಈ ಯೋಜನೆ ಸೌಲಭ್ಯ ಪಡೆಯಬಹುದು.

ಯೋಜನೆ ಅನ್ವಯ ತಿಂಗಳಿಗೆ 1000 ದಿಂದ 5000 ವರೆಗೆ ಪಡೆದುಕೊಳ್ಳಲು ಸಾಧ್ಯವಿದೆ. 60 ವರ್ಷದ ನಂತರ ಪೆನ್ಶನ್ ದೊರೆಯಲಿದ್ದು, ನೀವು ಕಟ್ಟುವ ಹಣದ ಆಧಾರದ ಮೇಲೆ ಪೆನ್ಶನ್ ಹಣ ನಿರ್ಧರಿತವಾಗಿರುತ್ತದೆ.

ಕೊನೆ ಮಾತು

ಕೊನೆ ಮಾತು

ಯೋಜನೆದಾರರು ತಮ್ಮ ಪಿಂಚಣಿ ಮೊತ್ತ ಹೆಚ್ಚು ಅಥವಾ ಕಡಿಮೆ ಮಾಡಿಕೊಳ್ಳಲು ಅವಕಾಶವಿಲ್ಲ. ಅರ್ಜಿ ತುಂಬುವ ವೇಳೆಯೇ ನಿರ್ದಿಷ್ಟ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. (kannadagoodreturns.in)

English summary

What is Atal Pension Yojana? How yo open Atal Pension Yojana?

Atal Pension Yojana is a scheme launched by the government in the union budget 2014-15. This is a guaranteed pension scheme and is administered by the Pension Fund Regulatory and Development Authority (PFRDA). The APY will be focused on all citizens in the unorganized se
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more