For Quick Alerts
ALLOW NOTIFICATIONS  
For Daily Alerts

ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿ ಉಚಿತ ಎಲ್ಪಿಜಿ (LPG) ಕನೆಕ್ಷನ್ ಪಡೆಯುವುದು ಹೇಗೆ?

ಪ್ರಧಾನಿ ನರೇಂದ್ರ ಮೋದಿಯವರು 2016ರಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆ(ಪಿಎಂಯುವೈ) ಕ್ಷೇಮಾಭಿವೃದ್ಧಿ ಕಾರ್ಯಕ್ರಮವನ್ನು ಲಾಂಚ್ ಮಾಡಿದ್ದಾರೆ. ಐದು ಕೋಟಿ ಎಲ್ಪಿಜಿ ಸೌಲಭ್ಯ ಒದಗಿಸುವ ಗುರಿಯನ್ನು ಹೊಂದಲಾಗಿದೆ.

|

ಪ್ರಧಾನಿ ನರೇಂದ್ರ ಮೋದಿಯವರು 2016ರಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆ(ಪಿಎಂಯುವೈ) ಕ್ಷೇಮಾಭಿವೃದ್ಧಿ ಕಾರ್ಯಕ್ರಮವನ್ನು ಲಾಂಚ್ ಮಾಡಿದ್ದಾರೆ. ಈ ಯೋಜನೆ ಮೂಲಕ ಐದು ಕೋಟಿ ಎಲ್ಪಿಜಿ ಸೌಲಭ್ಯ ಒದಗಿಸುವ ಗುರಿಯನ್ನು ಹೊಂದಲಾಗಿದೆ.

 

ಏಪ್ರಿಲ್ 3, 2017ರವರೆಗೆ 20 ಲಕ್ಷ ಎಲ್ಪಿಜಿ ಕನೆಕ್ಷನ್ ಗಳನ್ನು ಪೂರ್ಣಗೊಳಿಸಲಾಗಿದ್ದು, ಹೆಚ್ಚುಕಡಿಮೆ 1 ಕೋಟಿಯಷ್ಟು ಫಲಾನುಭವಿಗಳು ಸಂಪರ್ಕಗಳಿಗಾಗಿ ನೋಂದಾಯಿಸಿದ್ದಾರೆ.

'ಅನಿಲಭಾಗ್ಯ ಯೋಜನೆ' ಅಡಿಯಲ್ಲಿ ಉಚಿತ ಗ್ಯಾಸ್ ಪಡೆಯಲು ಮರೆಯದಿರಿ'ಅನಿಲಭಾಗ್ಯ ಯೋಜನೆ' ಅಡಿಯಲ್ಲಿ ಉಚಿತ ಗ್ಯಾಸ್ ಪಡೆಯಲು ಮರೆಯದಿರಿ

ಅರ್ಹತೆ ಮಾನದಂಡ ಏನು?

ಅರ್ಹತೆ ಮಾನದಂಡ ಏನು?

1. 18 ವರ್ಷ ಮೇಲ್ಪಟ್ಟ ಮಹಿಳೆಯಾಗಿರಬೇಕು
2. ಆಯಾ ರಾಜ್ಯ ಸರ್ಕಾರದೊಂದಿಗೆ ನೋಂದಾಯಿಸಲ್ಪಟ್ಟಿರುವ ಬಿಪಿಎಲ್ ಕುಟುಂಬ/ಕುಟುಂಬ/ಘಟಕ
3. ನಕಲು ಮತ್ತು ತಪ್ಪು ನಿರ್ವಹಣೆ ತಪ್ಪಿಸಲು ಪ್ರಸ್ತುತ ನೋಂದಾಯಿತ SECC-2011 ಡೇಟಾ (ಗ್ರಾಮೀಣ)
4. ಎಲ್ಪಿಜಿ ಸಂಪರ್ಕಗಳನ್ನು ಮಹಿಳಾ ಫಲಾನುಭವಿಗಳಿಗೆ ನೀಡಲಾಗುವುದು ಮತ್ತು ಅವರ ಹೆಸರಿನಲ್ಲಿ ನೋಂದಾಯಿಸಲಾಗುವುದು.
5. ಬಿಪಿಎಲ್ ಕುಟುಂಬಗಳಿಗೆ ರೂ. 1,600 ವರೆಗೆ ಹಣಕಾಸಿನ ನೆರವು ನೀಡಲು ಯೋಜನೆ ಭರವಸೆ ನೀಡಿದೆ.

ದಾಖಲಾತಿಗಳು

ದಾಖಲಾತಿಗಳು

ಪ್ರಧಾನಮಂತ್ರಿ ಉಜ್ವಲ ಯೋಜನೆಯ ನೋಂದಾಯಿಸಲು ಮತ್ತು ಸೌಲಭ್ಯ ಪ್ರಯೋಜನಗಳನ್ನು ಪಡೆಯಲು ಈ ಕೆಳಗಿನ ದಾಖಲಾತಿಗಳನ್ನು ಒದಗಿಸಬೇಕಾಗುತ್ತದೆ.
1. ಬಿಪಿಎಲ್ ಪ್ರಮಾಣ ಪತ್ರ (ಬಡತನ ರೇಖೆಗಿಂತ ಕೆಳಗಿರುವ)

2. ಬಿಪಿಲ್ ಪಡಿತರ ಚೀಟಿ (ಬಡತನ ರೇಖೆಗಿಂತ ಕೆಳಗಿರುವ ರೇಷನ್ ಕಾರ್ಡ್)
ಈಕೆಳಗಿ
3. ಆಧಾರ್ ಕಾರ್ಡ್, ಚುನಾವಣಾ ಚೀಟಿ, ಡ್ರೈವಿಂಗ್ ಕಾರ್ಡ್, ಪಾಸ್ಪೋರ್ಟ್ ಇವುಗಳಲ್ಲಿ ಯಾವುದಾದರೊಂದು ದಾಖಲಾತಿ
4. ವಿಳಾಸ ದಾಖಲಾತಿಯಾಗಿ ಆಧಾರ್ ಕಾರ್ಡ್, ಚುನಾವಣಾ ಚೀಟಿ, ಡ್ರೈವಿಂಗ್ ಕಾರ್ಡ್, ಪಾಸ್ಪೋರ್ಟ್, ಗೃಹ ನೋಂದಣಿ ಡಾಕ್ಯುಮೆಂಟ್ ಇವುಗಳಲ್ಲಿ ಯಾವುದಾದರೊಂದು ಒದಗಿಸಬೇಕು.
5. ಪಾಸ್ಪೋರ್ಟ್ ಅಳತೆಯ ಭಾವಚಿತ್ರ
ಎಲ್ಪಿಜಿ ಹಂಚಿದಾರರ ಕೇಂದ್ರದಲ್ಲಿ ಸಿಗುವ ಅರ್ಜಿಯನ್ನು ತಪ್ಪದೆ ತುಂಬಿ ನೀಡಬೇಕು.

ಎಲ್ಪಿಜಿ ಸಂಪರ್ಕ ಪಡೆಯುವುದು ಹೇಗೆ?
 

ಎಲ್ಪಿಜಿ ಸಂಪರ್ಕ ಪಡೆಯುವುದು ಹೇಗೆ?

1. ಈ ಯೋಜನೆಯಲ್ಲಿ ಪಾರದರ್ಶಕತೆ ಮತ್ತು ಒಗ್ಗಟ್ಟನ್ನು ಕಾಯ್ದುಕೊಳ್ಳಲು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಬಿಪಿಎಲ್ ಕುಟುಂಬಗಳ ಪಟ್ಟಿ ಆನ್ಲೈನ್ ಮೂಲಕ ಲಭ್ಯವಾಗುವಂತೆ ಮಾಡಿವೆ.
2. ಪ್ರಸ್ತುತ ಗ್ರಾಮೀಣ ಅಥವಾ ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿನವರು)ಎಂದು ನೋಂದಾಯಿಸಲ್ಪಟ್ಟವರು ತಮ್ಮ ಬಿಪಿಎಲ್ ಕಾರ್ಡ್ ಅನ್ನು ಹತ್ತಿರದ ಎಲ್ಪಿಜಿ ವಿತರಕರಿಗೆ ತೆಗೆದುಕೊಳ್ಳಬಹುದು. ಉಚಿತ ಅಥವಾ ಸಬ್ಸಿಡಿ ಎಲ್ಪಿಜಿ ಸಿಲಿಂಡರ್ ಗಾಗಿ ನೋಂದಾಯಿಸಿಕೊಳ್ಳಿ.
3. 14.2 ಕೆಜಿ ಸಿಲಿಂಡರ್ ಮೇಲಿನ ರೂ. 1,600ಗಳ ಸರ್ಕಾರಿ ರಿಯಾಯಿತಿಯು ರೂ. 1,450 ಭದ್ರತಾ ಠೇವಣಿಯನ್ನು ಒಳಗೊಂಡಿರುತ್ತದೆ. ಜತೆಗೆ ಗ್ಯಾಸ್ ಸ್ಟೋವ್, ISI ಸ್ಟಾಡಂರ್ಡ್ ಪೈಪ್ ಸಹ ನೀಡಲಾಗುತ್ತದೆ.

ಭರವಸೆ, ಭದ್ರತೆ

ಭರವಸೆ, ಭದ್ರತೆ

1. ಬಿಪಿಎಲ್ ಕುಟುಂಬಗಳಿಗೆ ರೂ. 1,600 ವರೆಗೆ ಹಣಕಾಸಿನ ನೆರವು ನೀಡಲು ಯೋಜನೆ ಭರವಸೆ ನೀಡಿದೆ.
2. 14.2 ಕೆಜಿ ಸಿಲಿಂಡರ್ ಮೇಲಿನ ರೂ. 1,600ಗಳ ಸರ್ಕಾರಿ ರಿಯಾಯಿತಿಯು ರೂ. 1,450 ಭದ್ರತಾ ಠೇವಣಿಯನ್ನು ಒಳಗೊಂಡಿರುತ್ತದೆ. ಜತೆಗೆ ಗ್ಯಾಸ್ ಸ್ಟೋವ್, ISI ಸ್ಟಾಡಂರ್ಡ್ ಪೈಪ್ ಸಹ ನೀಡಲಾಗುತ್ತದೆ.
3. 5 ಕೆ.ಜಿ ಸಿಲಿಂಡರ್ ಕೂಡ ಬಿಪಿಎಲ್ ಕಾರ್ಡುದಾರರಿಗೆ ಲಭ್ಯವಿದ್ದು, ರೂ. 161 ವೆಚ್ಚದಲ್ಲಿ ವರ್ಷದಲ್ಲಿ ಒಟ್ಟು 34 ಬಾರಿ ಮರುಬಳಸಬಹುದು.

ಪ್ರಧಾನಮಂತ್ರಿ ಉಜ್ವಲ ಯೋಜನೆ ಅರ್ಜಿ ಎಲ್ಲಿ ಲಭ್ಯ

ಪ್ರಧಾನಮಂತ್ರಿ ಉಜ್ವಲ ಯೋಜನೆ ಅರ್ಜಿ ಎಲ್ಲಿ ಲಭ್ಯ

ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಸಂಬಂಧಿತ ಅರ್ಜಿಯನ್ನು ಎಲ್ಪಿಜಿ ಹಂಚಿಕೆದಾರರು ಅಥವಾ ಅಂತರ್ಜಾಲದಿಂದ ಡೌನ್ಲೋಡ್ ಮಾಡಬಹುದು. ಈ ಯೋಜನೆಯ ಸೌಲಭ್ಯಗಳನ್ನು ಪಡೆಯಲು ಫಲಾನುಭವಿಗಳು ಸಂಬಂಧಿತ ದಾಖಲಾತಿ ಮತ್ತು ಬಿಪಿಎಲ್ ಕಾರ್ಡ್ ಗಳನ್ನು ಸಲ್ಲಿಸಬೇಕಾಗುತ್ತದೆ.  

https://cx.indianoil.in/webcenter/portal/LPG/pages_lpgservices

http://mylpg.in/index.aspx

English summary

How to Get Free LPG Connection for BPL Families

The Pradhan Mantri Ujjwala Yojana was launched and was widely accepted, with over 95.1 lakh connections being registered and distributed in 11 states so far. The Yojana was formulated to ensure that no rural or below-poverty-line (BPL) family or individual would have to resort of cooking over wood, charcoal,
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X