For Quick Alerts
ALLOW NOTIFICATIONS  
For Daily Alerts

ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಖಾತೆ ಆನ್ಲೈನ್ ಮೂಲಕ ತೆರೆಯುವುದು ಹೇಗೆ?

|

ರಾಷ್ಟ್ರೀಯ ಪಿಂಚಣಿ ಯೋಜನಾ ಖಾತೆ (NPS)ಯನ್ನು ತೆರೆಯುವುದು ಬಲು ಸುಲಭ. ಇದಕ್ಕೆ ಕೇವಲ 25-30 ನಿಮಿಷಗಳು ಸಾಕು. ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್(ಎನ್ಎಸ್ಡಿಎಲ್) ಪಟ್ಟಿಗೆ ಸೇರಿರುವ 17 ಬ್ಯಾಂಕ್ ಒಂದರಲ್ಲಿ ನೀವು ಖಾತೆಯನ್ನು ತೆರೆಯಬಹುದು. ಪ್ಯಾನ್ ಕಾರ್ಡ್ ಲಿಂಕ್ ಮಾಡಿ, www.enps.nsdl.com ವೆಬ್ಸೈಟ್ ಮೂಲಕ ಆನ್ ಲೈನ್ ಖಾತೆಯನ್ನು ತೆರೆಯಬಹುದು.

 

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ(NPS ): 7 ಅತ್ಯುತ್ತಮ ಲಾಭಗಳು

ಅಗತ್ಯ ದಾಖಲೆಗಳು

ಅಗತ್ಯ ದಾಖಲೆಗಳು

ಅಟಲ್ ಪಿಂಚಣಿ ಯೋಜನೆ(APY) ಮಾಡಿಸುವುದು ಹೇಗೆ?

NPS ಖಾತೆ ತೆರೆಯುವುದು ಹೇಗೇ?

NPS ಖಾತೆ ತೆರೆಯುವುದು ಹೇಗೇ?

ಎನ್ಪಿಎಸ್ ಖಾತೆ ತೆರೆಯಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.

1. NSDL's eNPS ವೆಬ್ಸೈಟ್‍ ತಾಣ enps.nsdl.com ಗೆ ಹೋಗಿ.

2. ನೋಂದಣಿ (REGISTRATION) ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

3. ಆಗ ಒಂದು ಹೊಸ ವಿಂಡೋ ತೆರೆದುಕೊಳ್ಳುತ್ತದೆ. ಆನ್ಲೈನ್ ಚಂದಾದಾರರ ನೋಂದಣಿ (Online Subscriber's Registration) ಪುಟದಲ್ಲಿ ಹೊಸ ನೋಂದಣಿ (New Registration)ಯನ್ನು ಆಯ್ಕೆ ಮಾಡಿ.

4. ನಿಮ್ಮ ಖಾತೆ ತೆರೆಯಲು ಬೇಕಾದ ಸೂಕ್ತ ಮಾಹಿತಿ ಹಾಗೂ ಖಾತೆಯ ಬಗೆಯನ್ನು ಆಯ್ಕೆ ಮಾಡಿ.

5. ನಿಮ್ಮ ಬಳಿ ಆಧಾರ್ ಇದ್ದರೆ ಆಧಾರ್ ಕಾರ್ಡ್ ಆಯ್ಕೆ ಅಥವಾ ಪಾನ್ ಕಾರ್ಡ್ ಆಯ್ಕೆಯನ್ನೂ ಮಾಡಬಹುದು.

ಆಧಾರ್ ಕಾರ್ಡ್
 

ಆಧಾರ್ ಕಾರ್ಡ್

ನೀವು ಆಧಾರ್ ಕಾರ್ಡ್ ಆಯ್ಕೆ ಮಾಡಿದರೆ ಈ ಕೆಳಗಿನ ಕ್ರಮವನ್ನು ಅನುಸರಿಸಬೇಕಾಗುತ್ತದೆ.

1. Generate OTP ಮೇಲೆ ಕ್ಲಿಕ್/ಆಯ್ಕೆ ಮಾಡಿ.

2. ಎಲ್ಲಾ ವಿವರಗಳನ್ನು ನಮೂದಿಸಬೇಕು. ನಂತರ ನೋಂದಣಿಯಾದ ಮೊಬೈಲ್ ನಂಬರ್ ಗೆ ಒಟಿಪಿ ಬರುತ್ತದೆ.

3. ಆಧಾರ್ ಡೇಟಾಬೇಸ್ ನಿಂದ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಪಡೆದುಕೊಳ್ಳಲಾಗುವುದು.

4. ಆನ್ಲೈನ್ ಫಾರ್ಮ್ ನಲ್ಲಿ ತುಂಬಬೇಕಾದ ಕಡ್ಡಾಯ ಮಾಹಿತಿಯನ್ನು ನಮೂದಿಸಿ.

5. ಸ್ಕ್ಯಾನ್ ಮಾಡಿರುವ ಭಾವಚಿತ್ರ ಮತ್ತು ಸಹಿಯನ್ನು ಅಪ್ ಲೋಡ್ ಮಾಡಬೇಕು.

6. ಆನ್ಲೈನ್ ಪೇಮೆಂಟ್ ಗೆ ಬೇಕಾದ ಎಲ್ಲಾ ವಿವರಗಳನ್ನು ಸಲ್ಲಿಸಬೇಕು.

7. ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಸೌಲಭ್ಯವನ್ನು ಪಡೆದುಕೊಳ್ಳಬೇಕು.

ಪಾನ್ ಕಾರ್ಡ್

ಪಾನ್ ಕಾರ್ಡ್

ನೀವು ಪಾನ್ ಕಾರ್ಡ್ ಆಯ್ಕೆ ಮಾಡಿಕೊಂಡಿದ್ದರೆ ಈ ಕೆಳಗಿನ ಹಂತವನ್ನು ಅನುಸರಿಸಬೇಕು.

1. ಉಳಿತಾಯ ಖಾತೆಯನ್ನು ಹೊಂದಿರುವ ಬ್ಯಾಂಕ್ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಬ್ಯಾಂಕ್ ಕೆವೈಸಿ ವಿವರವನ್ನು ಪರಿಶೀಲಿಸುತ್ತದೆ.

2. ಪರಿಶೀಲನೆಗಾಗಿ ನಿಮ್ಮ ಖಾತೆಯಿಂದ ರೂ. 125 ಶುಲ್ಕವನ್ನು ಬ್ಯಾಂಕ್ ಪಡೆದುಕೊಳ್ಳುತ್ತದೆ.

3. ಆನ್ಲೈನ್ ಫಾರ್ಮ್ ನಲ್ಲಿ ಕಡ್ಡಾಯ ವಿವರಗಳನ್ನು ಭರ್ತಿಮಾಡಬೇಕು.

4. ಕೆವೈಸಿ ಪರಿಶೀಲನೆಗಾಗಿ ನಿಮ್ಮ ಹೆಸರು ಮತ್ತು ವಿಳಾಸ ಬ್ಯಾಂಕ್ ಖಾತೆಯ ಮಾಹಿತಿಗೆ ಹೊಂದಾಣಿಕೆಯಾಗಬೇಕು ಎಂಬುದನ್ನು ಮುಖ್ಯವಾಗಿ ಗಮನಿಸಬೇಕು.

5. ಸ್ಕ್ಯಾನ್ ಮಾಡಿರುವ ಭಾವಚಿತ್ರ ಮತ್ತು ಸಹಿಯನ್ನು ಅಪ್ ಲೋಡ್ ಮಾಡಬೇಕು.

6. ಆನ್ಲೈನ್ ಪಾವತಿ(ಪೇಮೆಂಟ್) ಮಾಡಬೇಕು.

7. ಆನ್ಲೈನ್ ಪೇಮೆಂಟ್ ಯಶಸ್ವಿಯಾದ ಮೇಲೆ PRAN ಚಾಲ್ತಿಗೆ ಬರುತ್ತದೆ.

ರಾಷ್ಟ್ರೀಯ ಪಿಂಚಣಿ ಯೋಜನೆ

ರಾಷ್ಟ್ರೀಯ ಪಿಂಚಣಿ ಯೋಜನೆ

ರಾಷ್ಟ್ರೀಯ ಪಿಂಚಣಿ ಯೋಜನೆಯು ನಾಗರೀಕರಿಗೆ ನಿವೃತ್ತಿ ನಂತರ ಭದ್ರತೆಯನ್ನು ಒದಗಿಸುತ್ತದೆ. ಈ ಯೋಜನೆ ತೆರಿಗೆ ಪ್ರಯೋಜನಗಳನ್ನು ಒಳಗೊಂಡಿದ್ದು, ವ್ಯಕ್ತಿ ನಿವೃತ್ತಿ ಹೊಂದಿದ ಮೇಲೆ ನಿರಂತರವಾಗಿ ಪಿಂಚಣಿಯನ್ನು ಪಡೆದುಕೊಳ್ಳುತ್ತಾನೆ.

NPS ಟೋಲ್ ಫ್ರೀ ನಂಬರ್

NPS ಟೋಲ್ ಫ್ರೀ ನಂಬರ್

ಎನ್ಪಿಎಸ್ ಖಾತೆ ತೆರೆಯಲು ಯಾವುದೇ ತೊಂದರೆ ಅಥವಾ ಗೊಂದಲವಿದ್ದಲ್ಲಿ ನೀವು ಟೋಲ್ ಫ್ರೀ ಸಂಖ್ಯೆ 1800110708ಕ್ಕೆ ಕರೆಮಾಡಬಹುದು. ಇವರು ಚಂದಾದಾರರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುವರು.

English summary

How To Open A National Pension Scheme (NPS) Account Online?

Opening an NPS account now takes just 25-30 minutes. If you have an account in any of the 17 banks empanelled with the National Securities Depository Ltd (NSDL) and it is linked to your PAN, you can apply online for an NPS account at enps.nsdl.com.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X