For Quick Alerts
ALLOW NOTIFICATIONS  
For Daily Alerts

ಕ್ರೆಡಿಟ್ ಸ್ಕೋರ್ ಹೆಚ್ಚಿಸುವುದು ಹೇಗೆ? ಇಲ್ಲಿವೆ 6 ಮಾರ್ಗ

ಕ್ರೆಡಿಟ್ ಸ್ಕೋರ್ ಬಗ್ಗೆ ಹೆಚ್ಚಿನ ಜನರಿಗೆ ಅರಿವು ಇರುವುದಿಲ್ಲ. ಕ್ರೆಡಿಟ್ ಸ್ಕೋರ್ ಬಳಕೆಯು ಸಾಲದಾತರಿಗೆ ಮಾತ್ರ ಸೀಮಿತವಾಗುವುದಿಲ್ಲ. ಹೊಸ ಸಾಲ ಸೌಲಭ್ಯವನ್ನು ಪಡೆಯುವ ಅಥವಾ ನಿಮ್ಮ ಅಸ್ತಿತ್ವದಲ್ಲಿರುವ ಸಾಲದ ಮಿತಿಯನ್ನು ಹೆಚ್ಚಿಸುತ್ತದೆ.

By Siddu
|

ಕ್ರೆಡಿಟ್ ಸ್ಕೋರ್ ಬಗ್ಗೆ ಹೆಚ್ಚಿನ ಜನರಿಗೆ ಅರಿವು ಇರುವುದಿಲ್ಲ. ಕ್ರೆಡಿಟ್ ಸ್ಕೋರ್ ಬಳಕೆಯು ಸಾಲದಾತರಿಗೆ ಮಾತ್ರ ಸೀಮಿತವಾಗುವುದಿಲ್ಲ. ಹೊಸ ಸಾಲ ಸೌಲಭ್ಯವನ್ನು ಪಡೆಯುವ ಅಥವಾ ನಿಮ್ಮ ಅಸ್ತಿತ್ವದಲ್ಲಿರುವ ಸಾಲದ ಮಿತಿಯನ್ನು ಹೆಚ್ಚಿಸುತ್ತದೆ.

ಕೆಲಸದ ಅರ್ಜಿಗಳನ್ನು ಮೌಲ್ಯಮಾಪನ ಮಾಡಲು ಮತ್ತು ಬಡ್ಡಿದರಗಳು ನಿಗದಿಪಡಿಸುವುದಕ್ಕಾಗಿಯೂ ಹೆಚ್ಚಾಗಿ ಬಳಸಲಾಗುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ ಅಥವಾ ಕ್ರೆಡಿಟ್ ಸ್ಕೋರ್ ನ್ನು ಉತ್ತಮವನ್ನಾಗಿಸಲು ಈ ಕೆಳಗಿನ ಸಲಹೆಗಳು ನಿಮಗೆ ಸಹಾಯ ಮಾಡಬಹುದು. ಸಿಬಿಲ್ ಕ್ರೆಡಿಟ್ ಸ್ಕೋರ್ ಹೆಚ್ಚಿಸುವುದು ಹೇಗೆ?

ತಪ್ಪದೆ ವರದಿಗಳನ್ನು ಪರಿಶೀಲಿಸಿ

ತಪ್ಪದೆ ವರದಿಗಳನ್ನು ಪರಿಶೀಲಿಸಿ

ನಿಮ್ಮ ಬಾಕಿ ಉಳಿದಿರುವ ಸಾಲಗಳು, EMI, ಹಿಂದಿನ ಕ್ರೆಡಿಟ್ ಖಾತೆಗಳು ಮತ್ತು ಅಸ್ತಿತ್ವದಲ್ಲಿರುವ ಕ್ರೆಡಿಟ್ ಕಾರ್ಡ್ ಬಾಕಿಯನ್ನು ಕ್ರೆಡಿಟ್ ಸ್ಕೋರ್ ಪಟ್ಟಿ ಮಾಡುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ನ್ನು ಮೌಲ್ಯಮಾಪನ ಮಾಡಲು ಬಳಸಲಾಗುತ್ತದೆ. ತಪ್ಪು ಅಥವಾ ಅಪೂರ್ಣ ಮಾಹಿತಿ, ಗುಮಾಸ್ತನ ದೋಷಗಳು, ಮೋಸದ ವ್ಯವಹಾರ ಅಥವಾ ಕ್ರೆಡಿಟ್ ಅಪ್ಲಿಕೇಶನ್ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಮಾಡುತ್ತದೆ. ನಿಯಮಿತವಾಗಿ ಮಧ್ಯಂತರಗಳಲ್ಲಿ ಕ್ರೆಡಿಟ್ ವರದಿಯನ್ನು ವಿಮರ್ಶಿಸುವುದರಿಂದ ಇಂತಹ ದೋಷಗಳನ್ನು ಅಥವಾ ವಂಚನೆಗಳನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಮುಖ್ಯವಾಗಿ ಸಮಯಕ್ಕೆ ಸರಿಯಾಗಿ ಬಿಲ್ ಗಳನ್ನು ಪಾವತಿ ಮಾಡುವುದರಿಂದ ಕ್ರೆಡಿಟ್ ಸ್ಕೋರ್ ಸುಧಾರಿಸಬಹುದು.

ಸಮಯಕ್ಕೆ ಸರಿಯಾಗಿ ಬಾಕಿ ಪಾವತಿ ಮಾಡಿ

ಸಮಯಕ್ಕೆ ಸರಿಯಾಗಿ ಬಾಕಿ ಪಾವತಿ ಮಾಡಿ

 ಸಿಬಿಲ್ ಕ್ರೆಡಿಟ್ ಸ್ಕೋರ್ ಬಗ್ಗೆ ನಿಮಗೆಷ್ಟು ಗೊತ್ತು? ಸಿಬಿಲ್ ಕ್ರೆಡಿಟ್ ಸ್ಕೋರ್ ಬಗ್ಗೆ ನಿಮಗೆಷ್ಟು ಗೊತ್ತು?

ಕ್ರೆಡಿಟ್ ಕಾರ್ಡ್ ನಿಯಮಿತವಾಗಿ ಬಳಸಿ

ಕ್ರೆಡಿಟ್ ಕಾರ್ಡ್ ನಿಯಮಿತವಾಗಿ ಬಳಸಿ

ಪಾವತಿಗಳನ್ನು ಮಾಡಲು ಕ್ರೆಡಿಟ್ ಕಾರ್ಡ್ ಗಳನ್ನು ಬಳಸುವುದು ಸಾಲಗಳನ್ನು ತೆಗೆದುಕೊಳ್ಳುವುದಕ್ಕೆ ಸಮನಾಗಿರುತ್ತದೆ. ನಿಮ್ಮ ಕ್ರೆಡಿಟ್ ಕಾರ್ಡ್ ಬಾಕಿಗಳ ಸಕಾಲದಲ್ಲಿ ಮರುಪಾವತಿ ಮಾಡದಿದ್ದಲ್ಲಿ ಕ್ರೆಡಿಟ್ ಸ್ಕೋರ್ ಅನ್ನು ಬಾಧಿಸುತ್ತದೆ. ಆದ್ದರಿಂದ ಕ್ರೆಡಿಟ್ ಕಾರ್ಡುಗಳನ್ನು ಬಳಸುವುದು ಮತ್ತು ಸಕಾಲಿಕ ಮರುಪಾವತಿಗಳನ್ನು ಖಾತರಿಪಡಿಸಿಕೊಳ್ಳುವುದನ್ನು ಅಸ್ತಿತ್ವದಲ್ಲಿರುವ ಸಾಲಗಾರರಿಗೆ ತಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಿಸಲು ಸಹಾಯ ಮಾಡುವುದು. ಯಾವುದು ಹೊಂದಿರದವರಿಗೆ ಕ್ರೆಡಿಟ್ ಇತಿಹಾಸವನ್ನು ಸ್ಥಾಪಿಸಲು ಇದು ಅತ್ಯಂತ ಅನುಕೂಲಕರ ಮಾರ್ಗವಾಗಿದೆ.

ಆರೋಗ್ಯಕರ ಕ್ರೆಡಿಟ್ ಮಿಶ್ರಣ ನಿಮ್ಮದಾಗಿರಲಿ

ಆರೋಗ್ಯಕರ ಕ್ರೆಡಿಟ್ ಮಿಶ್ರಣ ನಿಮ್ಮದಾಗಿರಲಿ

ನಿಮ್ಮ ಕ್ರೆಡಿಟ್ ಮಿಶ್ರಣಗಳ ಸಂಯೋಜನೆಯು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ಮನೆ ಸಾಲಗಳು ಮತ್ತು ಕಾರು ಸಾಲಗಳಂತಹ ಸುರಕ್ಷಿತ ಸಾಲಗಳ ಹೆಚ್ಚಿನ ಪಾಲನ್ನು ಹೊಂದಿರುವ ಸಾಲದಾತರಿಗೆ ಸಾಲ ನೀಡುವವರು ಆದ್ಯತೆ ನೀಡುವಂತೆ, ಕ್ರೆಡಿಟ್ ಬ್ಯೂರೋಗಳು ಅಂತಹ ಸಾಲಗಾರರಿಗೆ ಹೆಚ್ಚಿನ ಮೊತ್ತವನ್ನು ನೀಡುತ್ತವೆ. ನೀವು ಸಾಲಕ್ಕೆ ಅಥವಾ ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದರೆ, ಸಾಲದಾತನು ಕ್ರೆಡಿಟ್ ಬ್ಯೂರೊಗಳಿಂದ ನಿಮ್ಮ ಕ್ರೆಡಿಟ್ ವರದಿಯನ್ನು ಕೋರುತ್ತಾನೆ. ಈ ವಿನಂತಿಗಳನ್ನು ಕಠಿಣ ವಿಚಾರಣೆಗಳೆಂದು ಪರಿಗಣಿಸಲಾಗುತ್ತದೆ. ನೀವು ಈಗಾಗಲೇ ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಸಾಲಕ್ಕಾಗಿ ನೇರವಾಗಿ ಅರ್ಜಿ ಸಲ್ಲಿಸುವುದು ಸರಿಯಲ್ಲ.

ಕ್ರೆಡಿಟ್ ಬಳಕೆ ಮೇಲ್ವಿಚಾರಣೆ

ಕ್ರೆಡಿಟ್ ಬಳಕೆ ಮೇಲ್ವಿಚಾರಣೆ

ಕ್ರೆಡಿಟ್ ಬಳಕೆ ಅನುಪಾತವು ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯನ್ನು ಪಡೆದುಕೊಳ್ಳುತ್ತದೆ. ನಿಮ್ಮ ಒಟ್ಟು ಕ್ರೆಡಿಟ್ ಮಿತಿಯ 30%-40% ಅನುಪಾತದ ಒಳಗೆ ಕ್ರೆಡಿಟ್ ಬಳಕೆ ಇರುವಂತೆ ನೋಡಿಕೊಳ್ಳಿ. ನೀವು ಆಗಾಗ್ಗೆ 30-40% ಮಟ್ಟವನ್ನು ಮೀರಿದ್ದರೆ, ನಿಮ್ಮ ಕ್ರೆಡಿಟ್ ಮಿತಿಯನ್ನು ಹೆಚ್ಚಿಸಲು ನಿಮ್ಮ ಕಾರ್ಡ್ ವಿತರಕರನ್ನು ಕೇಳಿ ಅಥವಾ ಇನ್ನೊಂದು ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಿ.

ಖಾತರಿಪಡಿಸಿದ ಸಾಲ ಖಾತೆಗಳನ್ನು ಮಾನಿಟರ್ ಮಾಡಿ

ಖಾತರಿಪಡಿಸಿದ ಸಾಲ ಖಾತೆಗಳನ್ನು ಮಾನಿಟರ್ ಮಾಡಿ

ಜಂಟಿ ಸಾಲಗಾರನ ಸಹಿ, ಖಾತರಿಪಡಿಸುವಿಕೆ ಅಥವಾ ಜಂಟಿ ಸಾಲಗಾರರಾಗಿದ್ದರೆ ಕ್ರೆಡಿಟ್ ಖಾತೆಗಳಲ್ಲಿ ಯಾವುದೇ ತಪ್ಪಿದ ಪಾವತಿಗಳು ಅಥವಾ ಡಿಫಾಲ್ಟ್ ಗಳಿಗೆ ಇಬ್ಬರೂ ಸಮಾನವಾಗಿ ಜವಾಬ್ದಾರರಾಗಿರುತ್ತಾರೆ. ನಿಮ್ಮ ಕ್ರೆಡಿಟ್ ವರದಿ ಪ್ರಾಥಮಿಕ ಅಥವಾ ಇತರ ಅರ್ಜಿದಾರರಂತೆ ನಕಾರಾತ್ಮಕ ಪರಿಣಾಮವನ್ನು ಹೊಂದಿರುತ್ತದೆ. ಆದ್ದರಿಂದ, ಆ ಖಾತೆಗಳಲ್ಲಿ ಮಾಡಿದ ಮರುಪಾವತಿಗಳ ಬಗ್ಗೆ ಗಮನವಿಡಿ. ಖಾತೆಗಳ ನಿಯಮಿತ ಮರುಪಾವತಿಗಳನ್ನು ಖಚಿತಪಡಿಸುವುದು ಕ್ರೆಡಿಟ್ ಸ್ಕೋರ್ ಸ್ಥಿರವಾಗಿ ಹೆಚ್ಚಿಸಲು ಸಹಕರಿಸುತ್ತದೆ.

English summary

How to improve credit score? fallow these 6 steps

The use of credit score is no more limited to just lenders’ evaluating their risk of providing you fresh credit facility or increasing your existing credit limits.
Story first published: Tuesday, October 17, 2017, 12:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X