For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಪ್ರಾಪರ್ಟಿ ದಾಖಲೆ ಹಾಗೂ ಭೂ ದಾಖಲೆಗಳನ್ನು ಆನ್ಲೈನ್ ನಲ್ಲಿ ಪರಿಶೀಲಿಸುವುದು ಹೇಗೆ?

ಇತ್ತೀಚಿಗೆ ಭಾರತ ಸರ್ಕಾರವು ರಿಯಲ್ ಎಸ್ಟೇಟ್ ಬಿಲ್ (ರೇರಾ) ಜಾರಿ ತಂದಿದೆ. ಇದು ಖರೀದಿದಾರರನ್ನು ಯಾವುದೇ ರೀತಿಯ ವಂಚನೆಗೊಳಗಾಗುವುದರಿಂದ ರಕ್ಷಿಸುತ್ತದೆ.

By Siddu
|

ಆನ್ಲೈನ್ ಮೂಲಕ ಸ್ವತ್ತಿನ (ಪ್ರಾಪರ್ಟಿ) ಹಾಗು ಭೂ ದಾಖಲೆಗಳನ್ನು ಪರಿಶೀಲಿಸುವುದು ಈಗ ತುಂಬಾ ಸುಲಭ. ಕಂಪ್ಯೂಟರ್ ಬಟನ್ ಒತ್ತುವುದರ ಮೂಲಕ ನೀವು ಭೂ ಮಾಲೀಕರ ಮಾಹಿತಿ ಪಡೆಯಬಹುದು. ಆಸ್ತಿಯನ್ನು ಕೊಳ್ಳುವ ಮುನ್ನ ಸಂಬಂಧಿತ ಭೂ ದಾಖಲೆಗಳನ್ನು ಪರಿಶೀಲಿಸುವುದು ತುಂಬಾ ಮುಖ್ಯ. ಏಕೆಂದರೆ ರಿಯಲ್ ಎಸ್ಟೇಟ್ ಉದ್ಯಮವು ಒಂದು ಪಾರದರ್ಶಕವಲ್ಲದ, ಬಹಳಷ್ಟು ಕಪ್ಪು ಹಣವನ್ನು ಒಳಗೊಂಡಿರುವ ವಲಯವಾಗಿದೆ. ಇದಲ್ಲದೇ ಗರಿಷ್ಠ ಮಟ್ಟದ ವಂಚನೆಗಳು ನಡೆಯುವುದು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿಯೇ.

 

ಇತ್ತೀಚಿಗೆ ಭಾರತ ಸರ್ಕಾರವು ರಿಯಲ್ ಎಸ್ಟೇಟ್ ಬಿಲ್ (ರೇರಾ) ಜಾರಿ ತಂದಿದೆ. ಇದು ಖರೀದಿದಾರರನ್ನು ಯಾವುದೇ ರೀತಿಯ ವಂಚನೆಗೊಳಗಾಗುವುದರಿಂದ ರಕ್ಷಿಸುತ್ತದೆ. ಆದಾಗ್ಯೂ, ನೀವು ಯಾವುದೇ ಭೂಮಿ ಅಥವಾ ಆಸ್ತಿಯನ್ನು ಖರೀದಿಸಿರಬೇಕೆಂದಿದ್ದರೆ, ನೀವೇ ಖುದ್ದಾಗಿ ಅದರ ದಾಖಲೆಗಳನ್ನು ಪರಿಶೀಲಿಸುವುದು ಒಳಿತು.

ಇಂದು ನಾವು ಭಾರತದಲ್ಲಿ ಆನ್ಲೈನ್ ಮೂಲಕ ಭೂ ದಾಖಲೆಗಳನ್ನು ಪರಿಶೀಲಿಸುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತೇವೆ.

ಭಾರತದಲ್ಲಿ ಸ್ವತ್ತಿನ/ಭೂ ದಾಖಲೆಗಳನ್ನು ಆನ್ಲೈನ್ ನಲ್ಲಿ ಹೇಗೆ ಪರಿಶೀಲಿಸುವುದು?

ಭಾರತದಲ್ಲಿ ಸ್ವತ್ತಿನ/ಭೂ ದಾಖಲೆಗಳನ್ನು ಆನ್ಲೈನ್ ನಲ್ಲಿ ಹೇಗೆ ಪರಿಶೀಲಿಸುವುದು?

ಭಾರತ ಸರ್ಕಾರವು ಪ್ರಾರಂಭಿಸಿರುವ ರಾಷ್ಟ್ರೀಯ ಭೂಮಿ ದಾಖಲೆ ಆಧುನೀಕರಣ (NLRMP) ಯೋಜನೆ ಅಡಿಯಲ್ಲಿ ಗಣಕೀಕೃತಗೊಂಡಿರುವ ದಾಖಲೆಯ ಮಾಹಿತಿಗಳನ್ನು (ROR) ಹಲವು ರಾಜ್ಯಗಳು ಆನ್ಲೈನ್ ನಲ್ಲಿ ಒದಗಿಸಲು ಪ್ರಾರಂಭಿಸಿದೆ.
ಮೊಟ್ಟಮೊದಲು ನಾವು ಆಯಾ ರಾಜ್ಯಕ್ಕೆ ಅನ್ವಯವಾಗುವ ಭೂ ದಾಖಲೆಗಳ ಮಾಹಿತಿ ಒದಗಿಸುವ ಆನ್ಲೈನ್ ಪೋರ್ಟಲ್ ಹುಡುಕಬೇಕು. ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಪಂಜಾಬ್, ಬಿಹಾರ, ರಾಜಾಸ್ಥಾನ, ಮಧ್ಯಪ್ರದೇಶ ರಾಜ್ಯಗಳನ್ನೊಳಗೊಂಡಂತೆ ಹಲವು ರಾಜ್ಯಗಳು ಆನ್ಲೈನ್ ನಲ್ಲಿ ಭೂ ದಾಖಲೆಗಳನ್ನು ನಿರ್ವಹಿಸುತ್ತಿವೆ.

ಉದಾಹರಣೆಗಾಗಿ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಿಗೆ ಸಂಬಂಧಿಸಿದಂತೆ ಈ ದಾಖಲೆಗಳನ್ನು ನೀವೇ ಆನ್ಲೈನ್ ನಲ್ಲಿ ಹೇಗೆ ಕಂಡು ಹಿಡಿಯುವುದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಉಳಿದ ರಾಜ್ಯಗಳಿಗೆ ಸಂಬಂಧಿಸಿದ ದಾಖಲೆಗಳನ್ನು ನೀವೇ ಪರಿಶೀಲಿಸಲು ಸಹಾಯಕವಾಗುವ ವೆಬ್ಸೈಟ್ ವಿವರವನ್ನು ಮುಂದಕ್ಕೆ ತಿಳಿಸುತ್ತೇವೆ.

ಮಹಾರಾಷ್ಟ್ರದ ಭೂ ದಾಖಲೆಯನ್ನು ಆನ್ಲೈನ್ ನಲ್ಲಿ ಪರಿಶೀಲಿಸುವುದು
 

ಮಹಾರಾಷ್ಟ್ರದ ಭೂ ದಾಖಲೆಯನ್ನು ಆನ್ಲೈನ್ ನಲ್ಲಿ ಪರಿಶೀಲಿಸುವುದು

ಜನಪ್ರಿಯವಾಗಿ ಇ-ಮಹಾಭೂಮಿ ಎಂದು ಕರೆಯಲ್ಪಡುವ, ಮಹಾರಾಷ್ಟ್ರ ರಾಜ್ಯದ ಅಧಿಕೃತ ಭೂ ದಾಖಲೆ ಪರಿಶೀಲನಾ ವೆಬ್ಸೈಟ್ mahabhulekh.maharashtra.gov.in ಗೆ ಭೇಟಿ ಕೊಡಬೇಕು.
ನೀವು ಮೊದಲು ಜಿಲ್ಲೆಯನ್ನು ಆಯ್ಕೆ ಮಾಡಬೇಕು. ಜಿಲ್ಲೆ ಆಯ್ಕೆ ಮಾಡುತ್ತಿದ್ದಂತೆ, ಇನ್ನೊಂದು ವೆಬ್ ಪುಟಕ್ಕೆ ನಿರ್ದೇಶನಗೊಳ್ಳುತ್ತೀರಿ. ಅದರಲ್ಲಿ ನೀವು ತಾಲೂಕನ್ನು (Tehsil) ಮತ್ತು ಹಳ್ಳಿಯನ್ನು ಡ್ರಾಪ್ ಡೌನ್ ಪರಿವಿಡಿ ಮೂಲಕ ಆಯ್ಕೆ ಮಾಡಬೇಕು.
ಈಗ ನೀವು ಭೂಮಿಯ 7/12 ದಾಖಲೆಯನ್ನು ಸರ್ವೆ ನಂಬರ್ ಅಥವಾ ಹೆಸರನ್ನು ನಮೂದಿಸುವುದರ ಮೂಲಕ ಹುಡುಕಬಹುದು.
ಈಗ ನೀವು ಹುಡುಕು ಗುಂಡಿ (search button) ಒತ್ತುತ್ತಿದ್ದಂತೆ ಭೂಮಿಯ 7/12 ದಾಖಲೆ ಪ್ರದರ್ಶಿತವಾಗುತ್ತದೆ.
ನೀವು ಇದರ ಪ್ರತಿಯನ್ನು ಮುದ್ರಿಸಿಕೊಳ್ಳಬಹುದು. ಆದರೆ ಇದು ಕೇವಲ ನಿಮ್ಮ ಮಾಹಿತಿಗಾಗಿ ಉಪಯೋಗವಾಗುತ್ತದೆಯೇ ಹೊರತು ಇದನ್ನು ಯಾವುದೇ ರೀತಿಯ ಕಾನೂನುಬದ್ದ ಉದ್ದೇಶಗಳಿಗೆ ಬಳಸಲಾಗುವುದಿಲ್ಲ.

ಮಹಾರಾಷ್ಟ್ರದ ಸ್ವತ್ತಿನ (ಪ್ರಾಪರ್ಟಿ) ದಾಖಲೆಯನ್ನು ಆನ್ಲೈನ್ ನಲ್ಲಿ ಪರಿಶೀಲಿಸುವುದು

ಮಹಾರಾಷ್ಟ್ರದ ಸ್ವತ್ತಿನ (ಪ್ರಾಪರ್ಟಿ) ದಾಖಲೆಯನ್ನು ಆನ್ಲೈನ್ ನಲ್ಲಿ ಪರಿಶೀಲಿಸುವುದು

ರಾಜ್ಯದ ಅಧಿಕೃತ ಭೂ ದಾಖಲೆ ಪರಿಶೀಲನ ವೆಬ್ಸೈಟ್ ಗೆ ಭೇಟಿ ಕೊಡಿ. ಸ್ವತ್ತಿನ ವಿವರ ತಿಳಿಯಲು, ಇಸವಿ, ಜಿಲ್ಲೆ ಆಯ್ಕೆ ಮಾಡಿ ಹಾಗೂ ಗ್ರಾಮದ ಹೆಸರನ್ನು ನಮೂದಿಸಿ.
ಸ್ವತಿನ ಸಂಖ್ಯೆ/ಸರ್ವೆ ಸಂಖ್ಯೆ/CTS ಸಂಖ್ಯೆ/Milkat ಸಂಖ್ಯೆ/Gat ಸಂಖ್ಯೆ/ನಿವೇಶನ ಸಂಖ್ಯೆ ನಮೂದಿಸಿ.
ಹುಡುಕು ಗುಂಡಿ ಒತ್ತುತ್ತಿದ್ದಂತೆ ಸ್ವತ್ತಿನ ವಿವರಗಳು ತೆರೆಯ ಮೇಲೆ ಪ್ರದರ್ಶಿತವಾಗುತ್ತದೆ.

ಗುಜರಾತ್ ರಾಜ್ಯದ ಭೂ ದಾಖಲೆಗಳನ್ನು ಆನ್ಲೈನ್ ನಲ್ಲಿ ಪರಿಶೀಲಿಸುವುದು

ಗುಜರಾತ್ ರಾಜ್ಯದ ಭೂ ದಾಖಲೆಗಳನ್ನು ಆನ್ಲೈನ್ ನಲ್ಲಿ ಪರಿಶೀಲಿಸುವುದು

ಗುಜರಾತ್ ರಾಜ್ಯದ ಭೂ ದಾಖಲೆಗಳನ್ನು ಪರಿಶೀಲಿಸುವ ಅಧಿಕೃತ ವೆಬ್ಸೈಟ್ https://anyror.gujarat.gov.in/ ಇದು anyror ಎಂದು ಜನಪ್ರಿಯವಾಗಿದೆ.
ವೆಬ್ಸೈಟ್ ಗೆ ಭೇಟಿ ಕೊಟ್ಟು ಭೂ ದಾಖಲೆ ವೀಕ್ಷಿಸಿ ಗುಂಡಿಯನ್ನು ಒತ್ತಬೇಕು. ನೀವು ಭೂ ದಾಖಲೆ ವೀಕ್ಷಿಸಲು 7/12 (ಸಾತ್ಬಾರಾ) ಎಂಬ ಪುಟಕ್ಕೆ ನಿರ್ದೇಶಿಸಲ್ಪಡುತ್ತೀರಿ. ಅಲ್ಲಿ ನೀವು ಜಿಲ್ಲೆ, ತಾಲೂಕು, ಗ್ರಾಮ ಮತ್ತು ಸರ್ವೆ ಸಂಖ್ಯೆಯ ವಿವರಗಳನ್ನು ಸಲ್ಲಿಸಬೇಕು.
ನಂತರ ತೆರೆಯ ಮೇಲೆ ಕಾಣಿಸುವ ವೆರಿಫಿಕೇಶನ್ ಸಂಕೇತ (captcha) ದಾಖಲಿಸಿ ಮತ್ತು ವಿವರ ಪಡೆಯಲು ಇರುವ ಬಟನ್ ಒತ್ತಬೇಕು. ಈಗ ಭೂಮಿಯ ದಾಖಲೆಗಳು ನಿಮ್ಮ ತೆರೆಯ ಮೇಲೆ ತೋರಲ್ಪಡುತ್ತವೆ. ನೀವು ಇದರ ಪ್ರತಿಯನ್ನು ಮುದ್ರಿಸಿಕೊಳ್ಳಬಹುದು. ಆದರೆ ಇದು ಅಧಿಕೃತವಾಗಿ ಪ್ರಮಾಣೀಕರಿಸಿರುವ ಪ್ರತಿ ಅಲ್ಲ. ನಿಮಗೆ ಪ್ರಮಾಣಿತ ಪ್ರತಿ ಬೇಕಾದರೆ ನೀವು ಇ-ಧಾರ ಕೇಂದ್ರಕ್ಕೆ ಭೇಟಿ ನೀಡಿ ದಾಖಲೆಯ ಮಾಹಿತಿಗಳನ್ನು (ROR) ಪಡೆಯಲು ವಿನಂತಿ ಪತ್ರ ಸಲ್ಲಿಸಿ ಸರ್ವೆ ನಂಬರ್ ವಿವರಗಳನ್ನೊಳಗೊಂಡ ಮುದ್ರಿತ ಪ್ರತಿ ಪಡೆಯಬಹುದು.

ಗಮನಿಸಿ

ಗಮನಿಸಿ

ಗಮನಿಸಬೇಕಾದ ವಿಷಯವೆಂದರೆ ಎಲ್ಲಾ ರಾಜ್ಯಗಳಲ್ಲಿಯು ಆನ್ಲೈಲ್ ದಾಖಲೆ ಪರಿಶೀಲಿಸುವ ಕ್ರಮ ಸಾಮಾನ್ಯವಾಗಿ ಮೇಲಿನಂತೆಯೇ ಇರುತ್ತದೆ. ಸದ್ಯಕ್ಕೆ ಒಂದೇ ಕಡೆ ದಾಖಲೆ ಪರಿಶೀಲಿಸುವ ಸೌಲಭ್ಯ ಇಲ್ಲದಿರುವುದರಿಂದ ನೀವು ಪ್ರತೀ ರಾಜ್ಯಕ್ಕೆ ಸಂಬಂಧಿಸಿದ ವೆಬ್ಸೈಟ್ ಗಳಿಗೆ ಪ್ರತ್ಯೇಕವಾಗಿ ಭೇಟಿ ನೀಡಿ ದಾಖಲೆ ಪರಿಶೀಲಿಸುವುದು ಅನಿವಾರ್ಯ.
ಇಲ್ಲಿ ಕೆಳಗೆ ಪ್ರತಿ ರಾಜ್ಯಗಳ ಭೂ ದಾಖಲೆ ಪರಿಶೀಲಿಸುವ ವೆಬ್ಸೈಟ್ ಗಳ ಪಟ್ಟಿ ನೀಡಿದ್ದೇವೆ. ನೀವು ಇಲ್ಲಿಂದ ವಿವರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು
ನಿಮಗೆ ಈ ಮಾಹಿತಿ ಉಪಯೋಗಿಕಾರಿ ಎನಿಸಿತೆ? ಇದನ್ನು ನಿಮ್ಮ ಸ್ನೇಹಿತರ ಮತ್ತು ಬಂಧು ಬಳಗದವರ ಜೊತೆ ಹಂಚಿಕೊಳ್ಳಲು ಮರೆಯಬೇಡಿ. ನಿಮ್ಮ ಅಭಿಪ್ರಾಯ ತಿಳಿಸಿ..

Read more about: property india rera act money
English summary

How to check Property Records and Land Records online in India?

Checking land records online is very easy today. With one click button, you will come to know information about the land owner. It is important to check the land record before purchasing the property because real estate is a non-transparent sector where a lot of black money is involved.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X