For Quick Alerts
ALLOW NOTIFICATIONS  
For Daily Alerts

'ಉದ್ಯೋಗಿನಿ ಯೋಜನೆ' ಅಡಿಯಲ್ಲಿ 3 ಲಕ್ಷ ಸಾಲ ಹಾಗು 90 ಸಾವಿರ ಸಬ್ಸಿಡಿ ಪಡೆಯಿರಿ

ರಾಜ್ಯ ಸರ್ಕಾರ ‘ಉದ್ಯೋಗಿನಿ’ ಯೋಜನೆಯಲ್ಲಿ ಮಹತ್ತರ ಬದಲಾವಣೆ ಮಾಡಿದ್ದು, ಮೂರು ಲಕ್ಷದವರೆಗೆ ಸಾಲ ಸೌಲಭ್ಯ ಒದಗಿಸಲಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಉದ್ಯೋಗಿನಿ ಯೋಜನೆಯನ್ನು ಪ್ರ

|

ರಾಜ್ಯ ಸರ್ಕಾರ 'ಉದ್ಯೋಗಿನಿ' ಯೋಜನೆಯಲ್ಲಿ ಮಹತ್ತರ ಬದಲಾವಣೆ ಮಾಡಿದ್ದು, ಮೂರು ಲಕ್ಷದವರೆಗೆ ಸಹಾಯಧನ ಒದಗಿಸಲಿದೆ.
ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಉದ್ಯೋಗಿನಿ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಕರ್ನಾಟಕ ಸರಕಾರದ ಪ್ರಮುಖ ನವೀನ ಯೋಜನೆಗಳಲ್ಲಿ ಇದು ಕೂಡ ಒಂದು.

 

ಮಹಿಳಾ ಸಬಲೀಕರಣದ ಧ್ಯೇಯ

ಮಹಿಳಾ ಸಬಲೀಕರಣದ ಧ್ಯೇಯ

ಕಡಿಮೆ ಬಂಡವಾಳದಲ್ಲಿ ನಡೆಸಬಹುದಾದ ಟಾಪ್ 10 ಬಿಸಿನೆಸ್ ಐಡಿಯಾಕಡಿಮೆ ಬಂಡವಾಳದಲ್ಲಿ ನಡೆಸಬಹುದಾದ ಟಾಪ್ 10 ಬಿಸಿನೆಸ್ ಐಡಿಯಾ

ಸಾಲ ನೀಡುವ ಬ್ಯಾಂಕುಗಳು

ಸಾಲ ನೀಡುವ ಬ್ಯಾಂಕುಗಳು

ವಾಣಿಜ್ಯ ಬ್ಯಾಂಕುಗಳು, ಜಿಲ್ಲೆಯ ಸಹಕಾರಿ ಬ್ಯಾಂಕುಗಳು ಮತ್ತು ಆರ್ಆರ್ಬಿಗಳಂತಹ ಹಣಕಾಸು ಸಂಸ್ಥೆಗಳ ಮೂಲಕ ಸಾಲಗಳನ್ನು ಹೊಂದಿಸಲಾಗುತ್ತದೆ. ಖಾಸಗಿ ಸಂಸ್ಥೆಗಳಿಂದ ಅತಿಹೆಚ್ಚು ಬಡ್ಡಿದರದಲ್ಲಿ ಸಾಲ ಪಡೆಯುವ ಮಹಿಳಾ ಉದ್ಯಮಿಗಳನ್ನು ಸಹಕರಿಸಲು ಈ ಯೋಜನೆ ಬಹಳ ಪ್ರಯೋಜನಕಾರಿಯಾಗಿದೆ.

ರೂ. 3 ಲಕ್ಷ ಸಾಲ ಸೌಲಭ್ಯ
 

ರೂ. 3 ಲಕ್ಷ ಸಾಲ ಸೌಲಭ್ಯ

ಮಹಿಳಾ ಸಬಲೀಕರಣದ ಧ್ಯೇಯದೊಂದಿಗೆ ಆರಂಭಿಸಲ್ಪಟ್ಟ ‘ಉದ್ಯೋಗಿನಿ' ಯೋಜನೆಯಲ್ಲಿ ಸರ್ಕಾರ ಮಹತ್ತರ ಬದಲಾವಣೆ ತಂದಿದ್ದು, ರೂ. 3 ಲಕ್ಷ ಸಾಲ ಸೌಲಭ್ಯ ಒದಗಿಸಲಿದ್ದು, ರೂ. 90,000 ಸಬ್ಸಿಡಿ ನೀಡಲಾಗುವುದು.

ಅರ್ಹತೆ ಮಾನದಂಡ

ಅರ್ಹತೆ ಮಾನದಂಡ

ಮಹಿಳೆಯರನ್ನು ಉದ್ಯಮಶೀಲರನ್ನಾಗಿ ರೂಪಿಸುವ ಈ ಯೋಜನೆಯಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದ್ದು, ವಾರ್ಷಿಕ ರೂ. 1.5 ಲಕ್ಷ ಆದಾಯ ಹೊಂದಿರುವ 55 ವರ್ಷದೊಳಗಿನ ಎಲ್ಲಾ ವರ್ಗದ ಮಹಿಳೆಯರಿಗೆ ಸಾಲ ಒದಗಿಸಲಾಗುತ್ತದೆ.

ಯಾವ ಉದ್ಯಮಕ್ಕಾಗಿ ಸಾಲ

ಯಾವ ಉದ್ಯಮಕ್ಕಾಗಿ ಸಾಲ

ಬೇಕರಿ, ಮೀನು ಮಾರಾಟ, ದಿನಸಿ ಅಂಗಡಿ, ಉಪ್ಪಿನಕಾಯಿ, ಅಗರಬತ್ತಿ, ಕಾಫಿ -ಟೀ ಅಂಗಡಿ, ಟೈಲರಿಂಗ್, ಎಸ್‌ಟಿಡಿ ಬೂತ್‌, ಬ್ಯೂಟಿ ಪಾರ್ಲರ್‌, ಅಗರಬತ್ತಿ, ಕ್ಲಿನಿಕ್‌, ಜಿಮ..., ಸಿಹಿ ಅಂಗಡಿ, ಹಿಟ್ಟಿನ ಗಿರಣಿ, ಪೋಟೋ ಸ್ಟೂಡಿಯೋ, ಕಾಂಡಿಮೆಂಟ್ಸ್, ಚಪ್ಪಲಿ ಮಾರಾಟ ಮಳಿಗೆ ಸೇರಿದಂತೆ 88ಕ್ಕೂ ಹೆಚ್ಚು ಪ್ರಮಾಣದ ಸಣ್ಣ ಉದ್ಯಮಗಳ ಆರಂಭಕ್ಕೆ ಸಾಲ ಸಿಗಲಿದೆ.

ಸಾಲ ಪಡೆಯೋದು ಹೇಗೆ?

ಸಾಲ ಪಡೆಯೋದು ಹೇಗೆ?

ಎಲ್ಲಾ ಜಿಲ್ಲೆಗಳಲ್ಲಿರುವ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಯೋಜನೆ ಕಾರ್ಯಗತವಾಗಲಿದೆ. ತಾಲೂಕು, ಜಿಲ್ಲಾ ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿಗಮದ ಮೂಲಕ ನಿರೀಕ್ಷಕರು ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ. ಇದರಲ್ಲಿ 90,000 ರೂ. ಗಳನ್ನು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಭರಿಸಲಿದೆ.

ವಯೋಮಿತಿ ಹಾಗು ಸಾಲ ಮಿತಿ ಏರಿಕೆ

ವಯೋಮಿತಿ ಹಾಗು ಸಾಲ ಮಿತಿ ಏರಿಕೆ

ಈ ಹಿಂದೆ ಯೋಜನಾ ಫಲಾನುಭವಿಗಳ ವಯೋಮಿತಿಯನ್ನು 45ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಈಗ 55 ವರ್ಷಗಳಿಗೆ ವಯೋಮಿತಿಯನ್ನು ಹೆಚ್ಚಿಸಲಾಗಿದೆ. ಜತೆಗೆ ವಾರ್ಷಿಕ ಆದಾಯದ ಮಿತಿಯನ್ನು 40 ಸಾವಿರದಿಂದ ರೂ. 1.5 ಲಕ್ಷಗಳಿಗೆ ಏರಿಸಲಾಗಿದೆ. ಕಳೆದ 40 ವರ್ಷಗಳಿಂದ ಉದ್ಯೋಗಿನಿ ನಿಯಮಗಳು ಬದಲಾಗಿರಲಿಲ್ಲ.

ಮಹಿಳೆಯರಿಗೆ ಸಾಲ ಸೌಲಭ್ಯ ಒದಗಿಸುವ 9 ಯೋಜನೆಗಳು ಮಹಿಳೆಯರಿಗೆ ಸಾಲ ಸೌಲಭ್ಯ ಒದಗಿಸುವ 9 ಯೋಜನೆಗಳು

English summary

Udyogini Scheme, 3 lakh loans, 90,000 subsidy

Udyogini assists women in gaining self-reliance through self employment, especially in the trade and service sector. Udyogini empowers women by providing loans through Banks and other finanicial institutions; it also provides a subsidy from the Corporation for undertaking business activities / micro enterprises.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X