For Quick Alerts
ALLOW NOTIFICATIONS  
For Daily Alerts

ಸಂಬಳ ಖಾತೆಯನ್ನು ಉಳಿತಾಯ ಖಾತೆ ಆಗಿ ಪರಿವರ್ತಿಸುವುದು ಹೇಗೆ?

ಒಂದು ದೇಶದ ಆರ್ಥಿಕ ಸ್ಥಿರತೆಯನ್ನು ರೂಪಿಸುವಲ್ಲಿ ಬ್ಯಾಂಕುಗಳು ಮಹತ್ವದ ಪಾತ್ರ ವಹಿಸುತ್ತವೆ. ಬ್ಯಾಂಕಿನಲ್ಲಿ ಅನೇಕ ವಿಧವಾದ ಖಾತೆಗಳಿದ್ದು, ಅವುಗಳಲ್ಲಿ ಸ್ಯಾಲರಿ ಖಾತೆಯೂ ಒಂದು.

By Siddu
|

ಹಣ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಇದು ಬದುಕಲು ಬೇಕಾದ ಅತ್ಯಗತ್ಯ ವಸ್ತುಗಳಲ್ಲಿ ಒಂದು. ಹಣವಿಲ್ಲದೇ ಜೀವನದ ದೈನಂದಿನ ಚಟುವಟಿಕೆಗಳನ್ನು ನಡೆಸುವುದು ಕಷ್ಟವಾಗುತ್ತದೆ. ಬ್ಯಾಂಕ್ ಎಂಬ ಅರ್ಥಿಕ ಸಂಸ್ಥೆಯಲ್ಲಿ ಪ್ರತಿಯೊಬ್ಬರೂ ತಮ್ಮ ಹಣವನ್ನು ಡಿಪಾಸಿಟ್ ಅಥವಾ ವಿತಡ್ರಾ ಮಾಡಬಹುದು. ಒಂದು ದೇಶದ ಆರ್ಥಿಕ ಸ್ಥಿರತೆಯನ್ನು ರೂಪಿಸುವಲ್ಲಿ ಬ್ಯಾಂಕುಗಳು ಮಹತ್ವದ ಪಾತ್ರ ವಹಿಸುತ್ತವೆ. ಬ್ಯಾಂಕಿನಲ್ಲಿ ಅನೇಕ ವಿಧವಾದ ಖಾತೆಗಳಿದ್ದು, ಅವುಗಳಲ್ಲಿ ಸ್ಯಾಲರಿ ಖಾತೆಯೂ ಒಂದು. ಸ್ಯಾಲರಿ ಅಕೌಂಟ್ ಮತ್ತು ಸೇವಿಂಗ್ಸ್ ಅಕೌಂಟ್ ಬಗ್ಗೆ ವ್ಯತ್ಯಾಸ ತಿಳಿಯಿರಿ

ಸ್ಯಾಲರಿ ಖಾತೆ

ಸ್ಯಾಲರಿ ಖಾತೆ

 ಸ್ಯಾಲರಿ ಸ್ಲಿಪ್: ತಪ್ಪದೆ ತಿಳಿದುಕೊಳ್ಳಬೇಕಾದ 8 ಅಂಶಗಳು ಸ್ಯಾಲರಿ ಸ್ಲಿಪ್: ತಪ್ಪದೆ ತಿಳಿದುಕೊಳ್ಳಬೇಕಾದ 8 ಅಂಶಗಳು

ಸ್ಯಾಲರಿ ಖಾತೆಯ ವೈಶಿಷ್ಟ್ಯಗಳು

ಸ್ಯಾಲರಿ ಖಾತೆಯ ವೈಶಿಷ್ಟ್ಯಗಳು

- ಉದ್ಯೋಗದಾತ ಕಂಪೆನಿಯು ಉದ್ಯೋಗಿಯ ಪರವಾಗಿ ಸ್ಯಾಲರಿ ಖಾತೆಯನ್ನು ತೆರೆಯುತ್ತದೆ.
- ನೌಕರರ ವೇತನವನ್ನು ಜಮಾ ಮಾಡುವುದು ಪ್ರಾಥಮಿಕ ಉದ್ದೇಶವಾಗಿದೆ.
- ಸ್ಯಾಲರಿ ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ಇಡಬೇಕಾದ ಅಗತ್ಯವಿಲ್ಲ.
- ಸ್ಯಾಲರಿ ಖಾತೆಗೆ ಯಾವುದೇ ರೀತಿಯ ಬಡ್ಡಿಯನ್ನು ನೀಡಲಾಗುವುದಿಲ್ಲ.
- ಒಂದು ವೇಳೆ ಸತತ ಮೂರು ತಿಂಗಳವರೆಗೆ ಸಂಬಳವು ಕ್ರೆಡಿಟ್ ಆಗದಿದ್ದಲ್ಲಿ ಸ್ಯಾಲರಿ ಖಾತೆಯನ್ನು ಉಳಿತಾಯ ಖಾತೆ ಎಂದು ಪರಿಗಣಿಸಲಾಗುವುದು. ನಿಮ್ಮ ಹಣವನ್ನು ದುಪ್ಪಟ್ಟುಗೊಳಿಸುವುದು ಹೇಗೆ? 

ಉಳಿತಾಯ ಖಾತೆ

ಉಳಿತಾಯ ಖಾತೆ

ಉಳಿತಾಯ ಖಾತೆಯು ರಿಟೇಲ್ ಬ್ಯಾಂಕಿನಲ್ಲಿಡುವ ಠೇವಣಿ ಖಾತೆಯಾಗಿದ್ದು, ಬ್ಯಾಂಕು ಠೇವಣಿ ಮಾಡಿದ ಮೊತ್ತದ ಮೇಲೆ ಬಡ್ಡಿಯನ್ನು ನೀಡುತ್ತದೆ. ಆದರೆ ಅದನ್ನು ನೇರವಾಗಿ ವಿನಿಮಯ ಮಾಧ್ಯಮದ ಹಣದಂತೆ ಬಳಸುವಂತಿಲ್ಲ. ಈ ರೀತಿಯ ಖಾತೆಗಳು ವಿತ್ತೀಯ ಲಾಭವನ್ನು ಗಳಿಸುವಾಗ ಅವರ ಲಿಕ್ವಿಡ್ ಅಸ್ಸೆಟ್ಸ್ ನ ಒಂದು ಭಾಗವನ್ನು ಎತ್ತಿಡಬೇಕಾಗುತ್ತದೆ.

ಉಳಿತಾಯ ಖಾತೆಯ ವೈಶಿಷ್ಟ್ಯಗಳು

ಉಳಿತಾಯ ಖಾತೆಯ ವೈಶಿಷ್ಟ್ಯಗಳು

- ಜನರಲ್ಲಿ ಉಳಿತಾಯದ ಮನೋಭಾವವನ್ನು ಪ್ರೋತ್ಸಾಹಿಸುವುದು ಇದರ ಏಕೈಕ ಉದ್ದೇಶವಾಗಿದೆ.
- ಯಾರು ಬೇಕಾದರೂ ಉಳಿತಾಯ ಖಾತೆಯನ್ನು ತೆರೆಯಬಹುದು.
- ಖಾತೆದಾರ ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ಇಡಬೇಕು.
- ಉಳಿತಾಯದ ಮೊತ್ತದ ಮೇಲೆ ಬಡ್ಡಿ ದರ ನಿಗದಿಪಡಿಸಲಾಗುತ್ತದೆ
- ಉಳಿತಾಯ ಖಾತೆಯಲ್ಲಿ ಓವರ್ ಡ್ರಾಫ್ಟ್ ಸೌಲಭ್ಯವಿಲ್ಲ.
- ಸಂಬಳ ಪಡೆಯುವ ವ್ಯಕ್ತಿಗಳಿಗೆ ಇದು ಸೂಕ್ತವಾದ ಖಾತೆಯಾಗಿದೆ.

ಸ್ಯಾಲರಿ ಅಕೌಂಟ್ ಅನ್ನು ಸೇವಿಂಗ್ಸ್ ಅಕೌಂಟ್ ಆಗಿ ಪರಿವರ್ತಿಸುವುದು ಹೇಗೆ?

ಸ್ಯಾಲರಿ ಅಕೌಂಟ್ ಅನ್ನು ಸೇವಿಂಗ್ಸ್ ಅಕೌಂಟ್ ಆಗಿ ಪರಿವರ್ತಿಸುವುದು ಹೇಗೆ?

ಪ್ರತಿ ತಿಂಗಳು ಉದ್ಯೋಗದಾತ ಕಂಪೆನಿಗಳು ನೌಕರರ ಬ್ಯಾಂಕ್ ಖಾತೆಗೆ ಸ್ಯಾಲರಿಯನ್ನು ಜಮಾ ಮಾಡುತ್ತವೆ. ಒಂದು ವೇಳೆ ಸತತ ಮೂರು ತಿಂಗಳವರೆಗೆ ನೌಕರರ ಬ್ಯಾಂಕ್ ಖಾತೆಗೆ ಸ್ಯಾಲರಿ ಜಮಾ ಆಗದಿದ್ದಲ್ಲಿ, ಸ್ಯಾಲರಿ ಖಾತೆಯನ್ನು ಉಳಿತಾಯ ಖಾತೆ ಎಂದು ಪರಿಗಣಿಸಲಾಗುವುದು ಮತ್ತು ಉಳಿತಾಯ ಖಾತೆಗೆ ಅನ್ವಯಿಸುವ ಎಲ್ಲಾ ನಿಯಮ ಮತ್ತು ನಿಬಂಧನೆಗಳು ಇನ್ನು ಮುಂದೆ ಉಳಿತಾಯ ಖಾತೆಯಾಗಿ ಮಾರ್ಪಡುವ ಸ್ಯಾಲರಿ ಖಾತೆಗಳಿಗೆ ಅನ್ವಯಿಸುತ್ತದೆ. ಬ್ಯಾಂಕ್ ಮತ್ತು ಖಾತೆದಾರರ ನಡುವೆ ಸ್ಯಾಲರಿ ಖಾತೆಯ ಒಪ್ಪಂದ ಇದ್ದರೂ, ಬದಲಾವಣೆಯ ನಂತರ ಸ್ಯಾಲರಿ ಖಾತೆಯು ಹಿಂದಿನ ಪ್ರಯೋಜನಗಳನ್ನು ಒದಗಿಸುವುದಿಲ್ಲ.

ನೆನಪಿನಲ್ಲಿಡಬೇಕಾದ ಅಂಶಗಳು

ನೆನಪಿನಲ್ಲಿಡಬೇಕಾದ ಅಂಶಗಳು

ಸ್ಯಾಲರಿ ಖಾತೆಯನ್ನು ಉಳಿತಾಯ ಖಾತೆಯಾಗಿ ಪರಿವರ್ತಿಸುವ ಮುನ್ನ ಖಾತೆದಾರನು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶಗಳು ಇಂತಿವೆ.
- ಮಿನಿಮಮ್ ಬ್ಯಾಲೆನ್ಸ್ ಅವಶ್ಯಕವಾಗಿರುವ ಉಳಿತಾಯ ಖಾತೆಗಳಲ್ಲಿ ಸಾಮಾನ್ಯವಾಗಿ ಆಯಾ ಉಳಿತಾಯ ಖಾತೆಯ ಪ್ರಕಾರ ಮಿನಿಮಮ್ ಬ್ಯಾಲೆನ್ಸ್ ಎಂದು ಇರುವ ನಿರ್ದಿಷ್ಟ ಮೊತ್ತವನ್ನು ಇಡಬೇಕಾಗುತ್ತದೆ.
- ಪರಿವರ್ತಿಸುವ ಮುನ್ನ ಖಾತೆಯನ್ನು ನಿರ್ವಹಿಸಲು ಬೇಕಾದ ಮಿನಿಮಮ್ ಬ್ಯಾಲೆನ್ಸ್ ಮೊತ್ತ ಎಷ್ಟು ಎಂದು ಪರಿಶೀಲಿಸುವುದು ಉತ್ತಮ. ಇದು ಅತ್ಯವಶ್ಯಕ. ಏಕೆಂದರೆ ಉಳಿತಾಯ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇರದಿದ್ದಲ್ಲಿ ಬ್ಯಾಂಕುಗಳು ಭಾರಿ ಶುಲ್ಕವನ್ನು ಪೆನಾಲ್ಟಿಯಂತೆ ವಿಧಿಸುತ್ತದೆ.
- ಉಳಿತಾಯ ಖಾತೆಯಲ್ಲಿಡಬೇಕಾದ ಕನಿಷ್ಠ ಮೊತ್ತವು ಭಾರತದಾದ್ಯಂತ ಇರುವ ಎಲ್ಲಾ ಬ್ಯಾಂಕುಗಳಲ್ಲಿ ಬೇರೆ ಬೇರೆ ಇದೆ. ಉದಾಹರಣೆಗೆ ಖಾಸಗಿ ಬ್ಯಾಂಕುಗಳಾದ ಆಕ್ಸಿಸ್ ಬ್ಯಾಂಕಿನಲ್ಲಿ ಉಳಿತಾಯ ಖಾತೆಯಲ್ಲಿಡಬೇಕಾದ ಮಿನಿಮಮ್ ಬ್ಯಾಲೆನ್ಸ್ ರೂ. 10,000, ಅಂತರಾಷ್ಟ್ರೀಯ ಬ್ಯಾಂಕುಗಳಾದ ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕಿನ ಉಳಿತಾಯ ಖಾತೆಯಲ್ಲಿ ರೂ. 25,000 ಮಿನಿಮಮ್ ಬ್ಯಾಲೆನ್ಸ್ ಇಡಬೇಕು.

ಕೊನೆ ಮಾತು

ಕೊನೆ ಮಾತು

ಶಾಖೆಗಳು ಮತ್ತು ಎಟಿಎಂಗಳ ಲಭ್ಯತೆ ಬ್ಯಾಂಕಿನ ಆಯ್ಕೆಯ ಮೇಲೆ ಪ್ರಭಾವ ಬೀರುವ ಪ್ರಾಥಮಿಕ ಅಂಶವಾಗಿದೆ. ಸ್ಯಾಲರಿ ಖಾತೆಯನ್ನು ಬ್ಯಾಂಕ್ ಖಾತೆಯಾಗಿ ಬದಲಾಯಿಸುವ ಮೊದಲು ಬ್ಯಾಂಕು ಎಲ್ಲಾ ಕಡೆ ಲಭ್ಯವಿರುವ ಶಾಖೆ ಮತ್ತು ಎಟಿಎಂ ಜಾಲವನ್ನು ಹೊಂದಿದೆಯೇ ಎಂಬುದನ್ನು ಪರಿಶೀಲಿಸಬೇಕು. ಸುರಕ್ಷಿತ ಬ್ಯಾಂಕಿಂಗ್ ಅನುಕೂಲಕ್ಕಾಗಿ ವಿಶೇಷವಾಗಿ ತುರ್ತು ಸಮಯದಲ್ಲಿ ಇದರ ಅಗತ್ಯವಿರುತ್ತದೆ.

English summary

How To Convert Salary Account To Savings Bank Account?

A Salary is a form of payment from an employer to an employee, which is usually specified in an employment contract.
Story first published: Wednesday, April 25, 2018, 12:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X