For Quick Alerts
ALLOW NOTIFICATIONS  
For Daily Alerts

ಮ್ಯೂಚುವಲ್ ಫಂಡ್ ಗಳಲ್ಲಿ ಹಣ ಹೂಡುವ ಮುನ್ನ ಇಲ್ಲೊಮ್ಮೆ ನೋಡಿ..

ಮ್ಯೂಚುವಲ್ ಫಂಡ್ ಗಳಲ್ಲಿ ಹಣ ಹೂಡುವ ಮುನ್ನ ನಿರೀಕ್ಷಿತ ವ್ಯಾಪ್ತಿ ಮತ್ತು ಉದ್ದೇಶಗಳ ಬಗ್ಗೆ ಸಂಪೂರ್ಣ ಸ್ಪಷ್ಟತೆ ಇರಬೇಕು. ಹಲವಾರು ಮ್ಯೂಚುವಲ್ ಫಂಡ್ ಗಳಲ್ಲಿ ಹಣ ಹೂಡುವ ಅವಶ್ಯಕತೆಯೇನಿಲ್ಲ.

By Siddu
|

ಮ್ಯೂಚುವಲ್ ಫಂಡ್ ಗಳಲ್ಲಿ ಹಣ ಹೂಡುವ ಮುನ್ನ ನಿರೀಕ್ಷಿತ ವ್ಯಾಪ್ತಿ ಮತ್ತು ಉದ್ದೇಶಗಳ ಬಗ್ಗೆ ಸಂಪೂರ್ಣ ಸ್ಪಷ್ಟತೆ ಇರಬೇಕು. ಹಲವಾರು ಮ್ಯೂಚುವಲ್ ಫಂಡ್ ಗಳಲ್ಲಿ ಹಣ ಹೂಡುವ ಅವಶ್ಯಕತೆಯೇನಿಲ್ಲ. ಬದಲಿಗೆ ನಿಮ್ಮ ಅಗತ್ಯಕ್ಕೆ ತಕ್ಕಂತೆ ಕೆಲವು ಮ್ಯೂಚುವಲ್ ಫಂಡ್ ಗಳಲ್ಲಿ ಹಣ ಹೂಡಿ. ನಿಮ್ಮ ಮ್ಯೂಚುವಲ್ ಫಂಡ್ ಪೋರ್ಟ್ಫೋಲಿಯೋ ನಿಮ್ಮ ಆರ್ಥಿಕ ಉದ್ದೇಶಕ್ಕೆ ಅನುಗುಣವಾಗಿ ನಿರ್ಮಿಸಿಕೊಳ್ಳಿ. ನಿಮ್ಮ ಪೋರ್ಟ್ಫೋಲಿಯೋ ನಿರ್ಮಿಸಲು ಪ್ರತಿ ವಿಭಾಗದ ಮ್ಯೂಚುಯಲ್ ಫಂಡ್ ಗಳಲ್ಲಿ ಹಣ ಹೂಡುವ ಅವಶ್ಯಕತೆ ಇಲ್ಲ. ಮ್ಯೂಚುವಲ್ ಫಂಡ್ಸ್ ವಿಧಗಳು ಯಾವುವು?

ಮ್ಯೂಚುವಲ್ ಫಂಡ್ ಗಳಲ್ಲಿ ಹಣ ಹೂಡುವ ಮುನ್ನ ಇಲ್ಲೊಮ್ಮೆ ನೋಡಿ..

ಸಿಪ್ ಮಾರ್ಗ ಆಯ್ಕೆ ಮಾಡಿಕೊಳ್ಳಿ
ಭಾರಿ ಮೊತ್ತದ ಹೂಡಿಕೆ ಮಾಡುವ ಮೊದಲು ಯಾವಾಗಲೂ ಸಿಪ್ (SIP) ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಿ. ಕನಿಷ್ಠ ಮೂರು ವರ್ಷಗಳ ದೀರ್ಘಾವಧಿಯ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಹೂಡಿಕೆ ಮಾಡಿ. ನೀವು ರಿಸ್ಕ್ (risk) ತೆಗೆದುಕೊಳ್ಳಲು ಹಿಂಜರಿಯುವ ಹೂಡಿಕೆದಾರರಾಗಿದ್ದರೆ ಡೆಬ್ಟ ಅಥವಾ ಸರಿದೂಗುವ ಫಂಡ್ ಗಳಲ್ಲಿ ಹಣ ಹೂಡಿಕೆ ಮಾಡಿ. ಆನ್ಲೈನ್ ಮೂಲಕ ಮ್ಯೂಚುವಲ್ ಫಂಡ್(SIP) ಪ್ರಾರಂಭಿಸುವುದು ಹೇಗೆ?

ಸಲಹೆ ಪಡೆದುಕೊಳ್ಳಿ
ಕೇವಲ ಸಲಹೆಯ ಮೇರೆಗೆ ಹಣವನ್ನು ಎಂದಿಗೂ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಬೇಡಿ. ಹಣ ಹೂಡುವ ಮುನ್ನ ಸರಿಯಾದ ಮಾಹಿತಿ ಹಾಗೂ ಪರಿಶೀಲನೆ ನಡೆಸಿ ಮುಂದೆ ಸಾಗಿ. ನಿಮಗೆ ಸೂಕ್ತವಾದ ಮ್ಯೂಚುವಲ್ ಫಂಡ್ ಆಯ್ಕೆ ಮಾಡಿಕೊಳ್ಳಲು ಗೊಂದಲವಾದಲ್ಲಿ, ಯಾರಾದರೂ ನಿಪುಣ ರೊಂದಿಗೆ ಚರ್ಚಿಸಿ ಸಲಹೆ ಪಡೆದುಕೊಳ್ಳಿ. ಸಿಪ್ ಬಗ್ಗೆ ನಿಮಗೆಷ್ಟು ಗೊತ್ತು?

ವ್ಯವಸ್ಥಿತ ವರ್ಗಾವಣಾ ಯೋಜನೆ
ಮೌಲ್ಯಮಾಪನಗಳನ್ನು ಗಣನೆಗೆ ತೆಗೆದುಕೊಂಡು ಪಾಲಿಸಿ ಮತ್ತು ಮ್ಯೂಚುಯಲ್ ಫಂಡ್ ಪೋರ್ಟ್ಫೋಲಿಯೋ ಕ್ರಮಬದ್ಧ ಅಂತರ ಅವಧಿಗಳಲ್ಲಿ ಸರಿದೂಗಿಸಿ. ಒಂದರಿಂದ ಇನ್ನೊಂದು ಮ್ಯೂಚುಯಲ್ ಫಂಡ್ಮ್ಯೂಚುವಲ್ ಫಂಡ್ ಬದಲಾಯಿಸಬೇಕಾದಲ್ಲಿ, ವ್ಯವಸ್ಥಿತ ವರ್ಗಾವಣೆಯ ಯೋಜನೆ (STP) ಪರಿಗಣಿಸುವುದನ್ನು ಮರೆಯಬೇಡಿ.

ಸಿಪ್ ದೀರ್ಘಕಾಲದ ತನಕ ಮುಂದುವರಿಸಿ
ಒಂದು ವೇಳೆ ನಿಮ್ಮ ಖಾತೆ ಋಣಾತ್ಮಕವಾಗಿದ್ದರೆ (ಮೈನಸ್) ದಿಕ್ಕುಗೆಡಬೇಡಿ. ಮ್ಯೂಚುವಲ್ ಫಂಡ್ ಬಿಡಿಸಿಕೊಳ್ಳಬೇಡಿ ಅಥವಾ SIP ಗಳನ್ನು ನಿಲ್ಲಿಸಬೇಡಿ. ಅಲ್ಪಾವಧಿಯ ಮಾರುಕಟ್ಟೆಯ ವರ್ತನೆಯನ್ನು ಅವಲಂಬಿಸಿ ಯಾವ ನಿರ್ಧಾರವನ್ನೂ ತೆಗೆದುಕೊಳ್ಳಬೇಡಿ. ನಿಮ್ಮ SIP ಗಳನ್ನು ದೀರ್ಘಕಾಲದ ತನಕ ಮುಂದುವರಿಸಿ.

ಬೆಳವಣಿಗೆ ಆಧಾರಿತ ಯೋಜನೆಗಳಲ್ಲಿ ಹಣ ಹೂಡಿ
ನೇರ (Direct) ಮ್ಯೂಚುವಲ್ ಫಂಡ್ ವ್ಯವಸ್ಥೆಗೆ ಪ್ರಾಶಸ್ತ್ಯ ನೀಡಿ. ಲಾಭಾಂಶ ಆಧಾರಿತ ಮ್ಯೂಚುಯಲ್ ಫಂಡ್ ಗಳಲ್ಲಿ ಹಣ ಹೂಡುವ ಬದಲು ಯಾವಾಗಲೂ ಬೆಳವಣಿಗೆಗೆ ಆಧಾರಿತ ಯೋಜನೆಗಳಲ್ಲಿ ಹಣ ಹೂಡಿ. ಹೊಸ ಪ್ರಸ್ತಾವನೆಗಳಿಗೆ ಗಳಿಂದ ದೂರವಿರಿ.

ದಾಖಲೆ ಪತ್ರಗಳ ಬಗ್ಗೆ ತಿಳಿದುಕೊಳ್ಳಿ
ದಯವಿಟ್ಟು ನೆನಪಿಡಿ ಮ್ಯೂಚುವಲ್ ಫಂಡ್ ಹೂಡಿಕೆ ಮಾರುಕಟ್ಟೆಯ ಏರಿಳಿತಗಳನ್ನು ಅವಲಂಬಿಸಿರುತ್ತದೆ. ಇದರಿಂದ ನಾವು ಹೂಡಿಕೆಯಲ್ಲಿ ಹೂಡಿದ ಹಣಕ್ಕೆ ತಿರುಗಿ ಪಡೆಯುವ ಆದಾಯದಲ್ಲೂ ಏರಿಳಿತಗಳಿರುತ್ತವೆ. ದಯವಿಟ್ಟು ಹಣ ಹೂಡುವ ಮೊದಲು ನಿಮ್ಮ ದಾಖಲೆ ಪತ್ರಗಳ ಸೂಚನೆಗಳನ್ನು ಕೂಲಂಕುಶವಾಗಿ, ಎಚ್ಚರಿಕೆಯಿಂದ ಓದಿ.

ಕೊನೆಮಾತು
ನಾವು ನೀಡಿರುವ ಈ ವಿವರಣೆಗಳು ನಿಮಗೆ ಸಮಂಜಸವಾದ ಮ್ಯೂಚುವಲ್ ಫಂಡ್ ಆಯ್ಕೆ ಮಾಡಲು ಸಹಕರಿಸ ಬಹುದೆಂದು ಭಾವಿಸುತ್ತೇವೆ. ಈ ಅಂಶಗಳನ್ನು ಅನುಸರಿಸಿ ನಿಮಗೆ ಸಮರ್ಪಕವಾದ ಮ್ಯೂಚುಯಲ್ ಫಂಡ್ ಆಯ್ಕೆ ಮಾಡಿ ಲಾಭ ಪಡೆಯುತ್ತೀರಿ ಎಂದು ಆಶಿಸುತ್ತೇವೆ. ಧೈರ್ಯಂ ಸರ್ವತ್ರ ಸಾಧನಂ. ತಡಮಾಡಬೇಡಿ, ಧೈರ್ಯದಿಂದ ಮುನ್ನುಗ್ಗಿ...
ಹ್ಯಾಪಿ ಇನ್ವೆಸ್ಟಿಂಗ್ ! ಆಲ್ ದಿ ಬೆಸ್ಟ್!!

Read more: ಮ್ಯೂಚುವಲ್ ಫಂಡ್

English summary

Important Factors to be considered before Investing in Mutual Funds

Important Factors to be considered before Investing in Mutual Funds
Story first published: Friday, May 18, 2018, 15:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X