For Quick Alerts
ALLOW NOTIFICATIONS  
For Daily Alerts

ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ?

ಪ್ಯಾನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿಗಾಗಿ ಜನರು ಹುಡುಕುತ್ತಿರುತ್ತಾರೆ ಇಲ್ಲವೆ ಇನ್ನೊಬ್ಬರನ್ನೂ ಕೇಳುತ್ತಿರುತ್ತಾರೆ. ಹಣಕಾಸು ವ್ಯವಹಾರವನ್ನು ಸಮಗ್ರವಾಗಿ ನಿರ್ವಹಿಸಲು ಪ್ಯಾನ್ ಪ್ರಮುಖ ದಾಖಲೆಯಾಗಿದೆ.

By Siddu
|

ಪ್ಯಾನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿಗಾಗಿ ಜನರು ಹುಡುಕುತ್ತಿರುತ್ತಾರೆ ಇಲ್ಲವೆ ಇನ್ನೊಬ್ಬರನ್ನೂ ಕೇಳುತ್ತಿರುತ್ತಾರೆ. ಭಾರತದ ನಾಗರಿಕರು ಅಥವಾ ಎನ್ಆರ್ಐ ಗಳು ಆದಾಯ ತೆರಿಗೆ ಪಾವತಿ ಮಾಡಲು ಅಥವಾ ಹಣಕಾಸು ವ್ಯವಹಾರವನ್ನು ಸಮಗ್ರವಾಗಿ ನಿರ್ವಹಿಸಲು ಪ್ಯಾನ್ (ಶಾಶ್ವತ ಖಾತೆ ಸಂಖ್ಯೆ) ಪ್ರಮುಖ ದಾಖಲೆಯಾಗಿದೆ. ಇಂದು ಅನೇಕ ಸಂದರ್ಭಗಳಲ್ಲಿ ಪ್ಯಾನ್ ಕಾರ್ಡ್ (PAN CARD) ಅತ್ಯಗತ್ಯ. ಈಗ ಪ್ಯಾನ್ ಕಾರ್ಡ್ ಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಏಕೆಂದರೆ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿದ ನಂತರ, ನೀವು ಇನ್ನೂ ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ (ಎನ್ಎಸ್ಡಿಎಲ್) ಅಥವಾ ಯುಟಿಐ ಇನ್ಫ್ರಾಸ್ಟ್ರಕ್ಚರ್ ಟೆಕ್ನಾಲಜಿ (ಯುಟಿಐಟಿಐಟಿಎಲ್) ಗೆ ಸ್ವೀಕೃತಿ ರಶೀದಿ ಕಳುಹಿಸಬೇಕು.. ಪಾನ್ ಕಾರ್ಡ್ ನ ಮೂಲಭೂತ ಅಂಶಗಳನ್ನು ಅರಿತುಕೊಳ್ಳಬೇಕಾದದ್ದು ಅಗತ್ಯ. 2 ದಿನಗಳಲ್ಲಿ ಪಾನ್ ಕಾರ್ಡ್ ಪಡೆಯುವುದು ಹೇಗೆ?

 

ಪಾನ್ ಕಾರ್ಡ್ ಎಂದರೇನು?

ಪಾನ್ ಕಾರ್ಡ್ ಎಂದರೇನು?

ಪ್ಯಾನ್ ಕಾರ್ಡ್ ಯಾಕೆ ಬೇಕು? ಮಹತ್ವಗಳೇನು?ಪ್ಯಾನ್ ಕಾರ್ಡ್ ಯಾಕೆ ಬೇಕು? ಮಹತ್ವಗಳೇನು?

ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ?

ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ?

ಯಾರೂ ಬೇಕಾದರೂ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ಇಲ್ಲಿ ವಯಸ್ಸು ಮತ್ತು ರಾಷ್ಟ್ರೀಯತೆಯ ಪ್ರಶ್ನೆ ಎದುರಾಗುವುದಿಲ್ಲ. ಮೈನರ್ ಅಥವಾ ಮಗುವಿನ ಹೆಸರಿನಲ್ಲಿ ಕೂಡ ಪ್ಯಾನ್ ಕಾರ್ಡ್ ಮಾಡಿಸುವುದಾದರೆ ಪಾಲಕರ ರುಜು ಕಡ್ಡಾಯ. ಆದಾಯ ತೆರಿಗೆ ಇಲಾಖೆ ತಾಣಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. ಕೆಳಗಿನ ತಾಣಗಳು ಸಹ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ನೆರವಾಗುತ್ತವೆ.
NSDL Website (Application for PAN)
UTI Website
ಈ ಎರಡು ವೆಬ್ಸೈಟ್ ಗಳು ಸರ್ಕಾರದಿಂದ ಮಾನ್ಯತೆ ಪಡೆದಿವೆ. ಹೊಸ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕಾದರೆ ಕನಿಷ್ಠ ಎರಡು ಗುರುತಿನ ಚೀಟಿ ಮತ್ತು ವಿಳಾಸ ದೃಢಿಕರಣ ವನ್ನು ನೀಡಬೇಕಾಗುತ್ತದೆ.

ಹಂತ - 1
 

ಹಂತ - 1

ಪ್ಯಾನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಲು 49A ಫಾರ್ಮ್ ಅನ್ನು ಭರ್ತಿ ಮಾಡಬೇಕು. ಈ ಅರ್ಜಿ ನಮೂನೆ NSDL ವೆಬ್ಸೈಟ್ ನಲ್ಲಿ ಲಭ್ಯವಿರುತ್ತದೆ. ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. https://www.onlineservices.nsdl.com/paam/endUserRegisterContact.html

ಹಂತ - 2

ಹಂತ - 2

ಅರ್ಜಿಯಲ್ಲಿ ಮಾಹಿತಿಯನ್ನು ಸಂಪೂರ್ಣವಾಗಿ ತುಂಬಿರಿ. ಫಾರ್ಮ್ ತುಂಬುವ ಮುನ್ನ ನೀಡಲಾಗಿರುವ ಸೂಚನೆಗಳನ್ನು ತಪ್ಪದೇ ಓದಿ. ಈ ಲಿ0ಕ್ ಮೂಲಕ ಫಾರ್ಮ್ ತುಂಬಿ. https://tin.tin.nsdl.com/pan/Instructions49A.html#instruct_form49A

ಪಾವತಿ ವಿಧಾನ

ಪಾವತಿ ವಿಧಾನ

ಭಾರತೀಯ ವಿಳಾಸ ಹೊಂದಿರುವ ಪ್ಯಾನ್ ಗಾಗಿ ಅರ್ಜಿ ಸಲ್ಲಿಸಲು ರೂ. 107(ಸೇವಾ ತೆರಿಗೆ ಸೇರಿದಂತೆ) ಮತ್ತು ವಿದೇಶಿ ಸಂವಹನ ವಿಳಾಸ ಹೊಂದಿರುವವರು ರೂ. 994 (ಸೇವೆಯ ತೆರಿಗೆ ಸೇರಿದಂತೆ) ಪಾವತಿಸಬೇಕು. ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಡಿಮಾಂಡ್ ಡ್ರಾಫ್ಟ್ ಮೂಲಕ ನೀವು ಪಾವತಿಸಬಹುದು. ನೀವು ಪಾವತಿ ಮಾಡಿದ ನಂತರ, ಸ್ವೀಕೃತಿ ಪಡೆಯುವಿರಿ ಹಾಗು ಆಧಾರ್ ಪ್ರಮಾಣೀಕರಣ ಪ್ರಕ್ರಿಯೆಗೆ ಒಳಗಾಗಬೇಕಾಗುತ್ತದೆ. ನಿಮ್ಮ ಆಧಾರ್ ಗೆ ಲಿಂಕ್ ಮಾಡಿದ ಮೊಬೈಲ್ / ಇಮೇಲ್ ಗೆ OTP ಅನ್ನು ಕಳುಹಿಸಲಾಗುತ್ತದೆ.

ಯಾವ ಗುರುತಿನ ದಾಖಲೆ ನೀಡಬಹುದು?

ಯಾವ ಗುರುತಿನ ದಾಖಲೆ ನೀಡಬಹುದು?

ಒಂದು ಬಾರಿ ಅರ್ಜಿ ಮಾಗು ಪಾವತಿ ಯಶಸ್ವಿಯಾದ ನಂತರ ಡಾಕ್ಯುಮೆಂಟ್ ಗಳನ್ನು NSDL ಗೆ ಕೋರಿಯರ್/ಪೋಸ್ಟ್ ಮೂಲಕ ಕಳುಹಿಸಬೇಕು. ಕ್ಲಿಕ್ ಮಾಡಿ. COMPLETE LIST OF DOCUMENTS.
* ಎಸ್ಎಸ್ಎಲ್ಸಿ ಪ್ರಮಾಣ ಪತ್ರ
* ನೋಂದಾಯಿತ ಶಿಕ್ಷಣ ಸಂಸ್ಥೆಯಿಂದ ಪದವಿ ಪ್ರಮಾಣ ಪತ್ರ
* ಕ್ರೆಡಿಟ್ ಕಾರ್ಡ್
* ಬ್ಯಾಂಕ್ ಸ್ಟೇಟ್ ಮೆಂಟ್
* ರೇಷನ್ ಕಾರ್ಡ್
* ಚಾಲನಾ ಪರವಾನಗಿ
* ಮತದಾನ ಗುರುತಿನ ಚೀಟಿ
* ಪಾಸ್ ಪೋರ್ಟ್

ಪಾನ್ ಕಾರ್ಡ್ ರಿಪ್ರಿಂಟ್

ಪಾನ್ ಕಾರ್ಡ್ ರಿಪ್ರಿಂಟ್

ನಿಮಗೆ ಪಾನ್ ಕಾರ್ಡ್ ಸಂಖ್ಯೆ ನೀಡಲಾಗಿದ್ದರೆ ಮಾತ್ರ ಈ ಸೌಲಭ್ಯ ಬಳಸಿಕೊಳ್ಳಲು ಸಾಧ್ಯವಿದೆ. ಎನ್ಎಸ್ಡಿಎಲ್ ವೆಬ್ಸೈಟ್ ಮೂಲಕ ಇದನ್ನು ಪರಿಶೀಲಿಸಬಹುದು.

ಪಾನ್ ಕಾರ್ಡ್ ನ ಗುಣಲಕ್ಷಣಗಳೇನು?

ಪಾನ್ ಕಾರ್ಡ್ ನ ಗುಣಲಕ್ಷಣಗಳೇನು?

ಪೊನೆಟಿಕ್ಸ್ ಸೌಂಡ್ ಆಧಾರದಲ್ಲಿ ಹೊಸ ಪಾನ್ ಕಾರ್ಡ್ ಗಳಮನ್ನು ನೀಡಲಾಗುತ್ತಿದೆ ಮತ್ತು ಅನೇಕ ಅಂಶಗಳ ದಾಖಲೆ ಇರುತ್ತದೆ. ಪೂರ್ಣ ಹೆಸರು, ಹುಟ್ಟಿದ ದಿನಾಂಕ, ಲಿಂಗ ಮತ್ತು ತಂದೆಯ ಹೆಸರನ್ನು ಒಳಗೊಂಡಿರುತ್ತದೆ. ಕಾರ್ಡ್ ನ ಬಲಬದಿಯಲ್ಲಿ ಪಾನ್ ಕಾರ್ಡ್ ನೀಡಿರುವ ದಿನಾಂಕವನ್ನು ತಿಳಿಸಲಾಗಿರುತ್ತದೆ.

10 ಇಂಗ್ಲಿಷ್ ಅಕ್ಷರಗಳು ಏನನ್ನು ಸೂಚಿಸುತ್ತವೆ?

10 ಇಂಗ್ಲಿಷ್ ಅಕ್ಷರಗಳು ಏನನ್ನು ಸೂಚಿಸುತ್ತವೆ?

1. ಮೊದಲ ಇಂಗ್ಲಿಷ್ 5 ಅಕ್ಷರಗಳನ್ನು ಕೋರ್ ಗುಂಪು ಎಂದು ಕರೆಯಬಹುದು.
2. ಕಾರ್ಡ್ ನ ಮೊದಲ ಮೂರು ಅಕ್ಷರಗಳು A ದಿಂದ Z ವರೆಗಿನ ಅಕ್ಷರಗಳಲ್ಲಿ ಯಾವುದು ಇರಬಹುದು.
3. ಕಾರ್ಡ್ ನ ನಾಲ್ಕನೇ ಅಕ್ಷರ ವಿವಿಧ ಸಂಗತಿಯನ್ನು ಸೂಚನೆ ಮಾಡುತ್ತದೆ.
C - ಕಂಪನಿ
P - ವ್ಯಕ್ತಿ
H - ಹಿಂದು ಅವಿಭಕ್ತ ಕುಟುಂಬ
F - ವಿಭಾಗ A - ವ್ಯಕ್ತಿಗಳ ಗುಂಪು
T - ಟ್ರಸ್ಟ್
B - ವ್ಯಕ್ತಿಯ ಗುರುತು
L - ಸ್ಥಳೀಯ ಸಂಸ್ಥೆ
J - ಕಾನೂನು ಪ್ರಕಾರ ವ್ಯಕ್ತಿ ಎಂದು ಪರಿಗಣಿಸ್ಪಡುವುದು.
G - ಸರ್ಕಾರ
AAACA- ಕಂಪನಿ, AAAHA-ಹಿಂದು ಅವಿಭಕ್ತ ಕುಟುಂಬ
4. ಐದನೇ ಅಕ್ಷರವು ಒಂದನೇ ಅಕ್ಷರದ ತದ್ರೂಪಾಗಿರುತ್ತದೆ.

ಪ್ರಕ್ರಿಯೆ ಯಶಸ್ವಿಯಾಗದಿದ್ದರೆ?

ಪ್ರಕ್ರಿಯೆ ಯಶಸ್ವಿಯಾಗದಿದ್ದರೆ?

ನಿಮ್ಮ ಆಧಾರ್ ದೃಢೀಕರಣ ಪ್ರಕ್ರಿಯೆಯು ಯಶಸ್ವಿಯಾಗಲಿಲ್ಲ ಅಥವಾ ಎನ್ಎಸ್ಡಿಎಲ್ ಸಹಾಯವಾಣಿ ಪ್ರಕಾರ, ನಿಮ್ಮ ಮೊಬೈಲ್ ಸಂಖ್ಯೆ ಆಧಾರ್ ನೊಂದಿಗೆ ನೋಂದಣಿಯಾಗದಿದ್ದರೆ ಅಂಗೀಕಾರ ರಶೀದಿಯನ್ನು ಮುದ್ರಿಸಿ, ನಿಮ್ಮ ಛಾಯಾಚಿತ್ರವನ್ನು ಅಂಟಿಸಿ ಮತ್ತು ರಶೀದಿಯನ್ನು ಸಹಿ ಮಾಡಿ. ನೀವು ಅಪ್ಲೋಡ್ ಮಾಡಲಾದ ದಾಖಲೆಗಳ ಫೋಟೊ ಕಾಪಿ ಅನ್ನು ಕಚೇರಿ ವಿಳಾಸಕ್ಕೆ ಕಳುಹಿಸಬೇಕು.

ಸುಳ್ಳು ನಂಬಿಕೆಗಳು

ಸುಳ್ಳು ನಂಬಿಕೆಗಳು

ಪ್ಯಾನ್ ಕಾರ್ಡ್ ನ್ನು ಕೇವಲ ತೆರಿಗೆ ತುಂಬಲು ಬಳಸಲಾಗುತ್ತದೆ ಎಂದು ಹಲವರು ನಂಬಿಕೊಂಡಿದ್ದಾರೆ. ಇದನ್ನು ಹೊರತಾಗಿಯೂ ಪ್ಯಾನ್ ಕಾರ್ಡ್ ನ್ನು ಹಲವು ಕಡೆ ಬಳಕೆ ಮಾಡಬಹುದು. ಬ್ಯಾಂಕ್ ಖಾತೆ ತೆರೆಯಲು, ಆಸ್ತಿ ಮತ್ತು ವಾಹನ ಮಾರಾಟ ಮತ್ತು ಖರೀದಿ ವೇಳೆ, ಷೇರು ಮತ್ತು ಮ್ಯೂಚುವಲ್ ಫಂಡ್ ನಲ್ಲಿ ಹಣ ಹೂಡಿಕೆ ಮಾಡುವ ವೇಳೆ ಗುರುತಿನ ಪತ್ರವಾಗಿ ಬಳಕೆ ಮಾಡಬಹುದು.

ಕೊನೆ ಮಾತು

ಕೊನೆ ಮಾತು

ಆಧುನಿಕ ಸಮಾಜದ ರೀತಿ ನೀತಿಗಳಿಗೆ ಅನುಸಾರವಾಗಿ ನಡೆದುಕೊಳ್ಳಬೇಕಾದರೆ ಪಾನ್ ಕಾರ್ಡ್ ಅತ್ಯಗತ್ಯ. ನಿಮ್ಮ ಬಳಿ ಪಾನ್ ಕಾರ್ಡ್ ಇಲ್ಲದಿದ್ದರೆ ಕೂಡಲೆ ಅರ್ಜಿ ಹಾಕುವುದು ಉತ್ತಮ. ಸ್ವಲ್ಪ ಸಮಯವನ್ನು ಮೀಸಲಿಟ್ಟು ಕಾರ್ಡ್ ಮಾಡಿಕೊಂಡರೆ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ.

English summary

How to Apply for PAN Card?

PAN stands for Permanent account number and is 10 digit alphanumeric number which is allotted by the Income Tax department to the person who applies for the same.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X