For Quick Alerts
ALLOW NOTIFICATIONS  
For Daily Alerts

ಆನ್ಲೈನ್ ಮೂಲಕ ಪಿಪಿಎಫ್ ಸೌಲಭ್ಯ ಒದಗಿಸುವ ಬ್ಯಾಂಕುಗಳ ವಿವರ ಇಲ್ಲಿದೆ..

ಪ್ರಯಾಣ ಮಾಡುವ ಹವ್ಯಾಸ ಇರುವ ವ್ಯಕ್ತಿಗಳು ಸಮಯಕ್ಕೆ ಸರಿಯಾಗಿ ಬ್ಯಾಂಕಿಗೆ ಭೇಟಿಕೊಟ್ಟು ತಮ್ಮ ಪಿಪಿಎಫ್ ಖಾತೆಯಲ್ಲಿ ಹಣ ಇಡುವುದು ಕಷ್ಟವಾಗಬಹುದು.

By Siddu
|

ಪ್ರಯಾಣ ಮಾಡುವ ಹವ್ಯಾಸ ಇರುವ ವ್ಯಕ್ತಿಗಳು ಸಮಯಕ್ಕೆ ಸರಿಯಾಗಿ ಬ್ಯಾಂಕಿಗೆ ಭೇಟಿಕೊಟ್ಟು ತಮ್ಮ ಪಿಪಿಎಫ್ ಖಾತೆಯಲ್ಲಿ ಹಣ ಇಡುವುದು ಕಷ್ಟವಾಗಬಹುದು. ಈ ಹಿನ್ನೆಲೆಯಲ್ಲಿ ಹಲವು ಬ್ಯಾಂಕುಗಳು ಮುಂದುವರೆದ ತಂತ್ರಜ್ಞಾನ ಬಳಸಿ ಗ್ರಾಹಕರಿಗೆ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿವೆ. ಈಗ ಆನ್ಲೈನ್ ಮೂಲಕ ಹಣಕಾಸು ವ್ಯವಹಾರಗಳನ್ನು ಮಾಡಬಹುದಾಗಿದ್ದು, ಖಾತೆ ತೆರೆಯುವುದು, ಫಂಡ್ ವರ್ಗಾವಣೆ, ಪಿಪಿಎಫ್ ನಿರ್ವಹಣೆ ಮಾಡಬಹುದಾಗಿದೆ.

ನಿಮ್ಮ ಬ್ಯಾಂಕಿನವರು ಈ ತಂತ್ರಜ್ಞಾನವನ್ನು ಇನ್ನೂ ಬಳಸದಿದ್ದರೆ ಬ್ಯಾಂಕನ್ನು ಬದಲಾಯಿಸುವುದು ಉತ್ತಮ. ಪಿಪಿಎಫ್ ಖಾತೆ ತೆರೆಯಲು ಹಾಗೂ ನಿರ್ವಹಿಸಲು ಆನ್ಲೈನ್ ಹಾಘೂ ಆಫ್ಲೈನ್ ಮೂಲಕ ಸೌಲಭ್ಯ ಹೊಂದಿರುವ ಬ್ಯಾಂಕುಗಳ ವಿವರ ಇಲ್ಲಿದೆ ನೋಡಿ.. ಪಿಎಫ್ ಖಾತೆಯನ್ನು ವರ್ಗಾವಣೆ ಮಾಡುವುದು ಹೇಗೆ?

1. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ

1. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ

ಎಸ್ಬಿಐ ನಲ್ಲಿ ಪಿಪಿಎಫ್ ಖಾತೆ ತೆರೆದ ನಂತರ ಆನ್ಲೈನ್ ಮೂಲಕ ವ್ಯವಹರಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಯಾವುದೇ ಬ್ಯಾಂಕಿನ ಮೂಲಕ ನಿಮ್ಮ ಪಿಪಿಎಫ್ ಖಾತೆಗೆ ಫಂಡ್ ವರ್ಗಾವಣೆ ಮಾಡಬಹುದಾಗಿದೆ. ಪ್ರತಿಯೊಬ್ಬರೂ ಪಿಪಿಎಫ್ ಖಾತೆ ಸ್ಟೇಟ್ಮೆಂಟ್ ಗಳನ್ನು ಪರಿಶೀಲಿಸಬಹುದು. ಎಸ್ಬಿಐ ನ ಎಲ್ಲ ಶಾಖೆಗಳಲ್ಲಿ ಪಿಪಿಎಫ್ ಖಾತೆ ತೆರೆಯಬಹುದಾಗಿದೆ.

2. ಕೆನರಾ ಬ್ಯಾಂಕು

2. ಕೆನರಾ ಬ್ಯಾಂಕು

ಕೆನರಾ ಬ್ಯಾಂಕಿನ ಗ್ರಾಹಕರು ಆನ್ಲೈನ್ ಪಿಪಿಎಫ್ ಖಾತೆಯನ್ನು ತೆರೆಯಬಹುದು. ಫಂಡ್ ವರ್ಗಾವಣೆ ಮತ್ತು ಸ್ಟೇಟ್ಮೆಂಟ್ ಗಳನ್ನು ಪರಿಶೀಲಿಸಬಹುದು. ತಂತ್ರಜ್ಞಾನದ ಹಿನ್ನೆಲೆಯಲ್ಲಿ ಬ್ಯಾಂಕು ಹಲವು ಸೌಲಭ್ಯಗಳನ್ನು ಪೂರೈಸುತ್ತಿದೆ.

3. ಐಸಿಐಸಿಐ ಬ್ಯಾಂಕು

3. ಐಸಿಐಸಿಐ ಬ್ಯಾಂಕು

ಐಸಿಐಸಿಐ ಗ್ರಾಹಕರು ಫಂಡ್ ವರ್ಗಾವಣೆ ಮತ್ತು ಸ್ಟೇಟ್ಮೆಂಟ್ ಗಳನ್ನು ಆನ್ಲೈನ್ ಪಿಪಿಎಫ್ ಖಾತೆಯನ್ನು ತೆರೆಯುವುದರ ಮೂಲಕ ಪರಿಶೀಲಿಸಬಹುದು. ಬ್ಯಾಂಕಿನ ವೆಬ್ಸೈಟ್ ನಲ್ಲಿ ಖಾತೆ ತೆರೆಯಲು ಹಾಗೂ ನಾಮಿನೆಷನ್ ಫಾರ್ಮ್ ಲಭ್ಯವಿರುತ್ತವೆ.

4. ಎಕ್ಸಿಸ್ ಬ್ಯಾಂಕು

4. ಎಕ್ಸಿಸ್ ಬ್ಯಾಂಕು

ಎಕ್ಸಿಸ್ ಬ್ಯಾಂಕಿನ ಆನ್ಲೈನ್ ಸೇವೆಯ ಮೂಲಕ ಕೂಡ ಫಂಡ್ ಗಳನ್ನು ವರ್ಗಾವಣೆ ಮಾಡಬಹುದಾಗಿದೆ. ಬ್ಯಾಂಕಿನ ಕೆಲ ಶಾಖೆಗಳಲ್ಲಿ ಮಾತ್ರ ಪಿಪಿಎಫ್ ಖಾತೆ ತೆರೆಯುವ ಸೌಲಭ್ಯ ಕಲ್ಪಿಸಲಾಗಿದೆ. ನಿಮ್ಮ ಹತ್ತಿರದ ಶಾಖೆಯಲ್ಲಿ ಪಿಪಿಎಫ್ ಖಾತೆ ಸೌಲಭ್ಯ ಇಲ್ಲದಿದ್ದಲ್ಲಿ ಅಧಿಕೃತ ಶಾಖೆಯಲ್ಲಿ ಖಾತೆ ತೆರೆದು ಆನ್ಲೈನ್ ವ್ಯವಹಾರ ನಡೆಸಬಹುದು.

5. ಇನ್ನಿತರ ಬ್ಯಾಂಕುಗಳು

5. ಇನ್ನಿತರ ಬ್ಯಾಂಕುಗಳು

ಆನ್ಲೈನ್ ಮೂಲಕ ಪಿಪಿಎಫ್ ವರ್ಗಾವಣೆ ಮಾಡಬಹುದಾದ ಇನ್ನಿತರ ಬ್ಯಾಂಕುಗಳ ವಿವರ ಇಲ್ಲಿದೆ.
- ಸ್ಟೇಟ್ ಬ್ಯಾಂಕ್ ಆಫ್ ಮೈಸೂರು
- ಐಡಿಬಿಐ ಬ್ಯಾಂಕ್
- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯ
- ಬ್ಯಾಂಕ್ ಆಫ್ ಇಂಡಿಯ
- ಸ್ಟೇಟ್ ಬ್ಯಾಂಕ್ ಆಫ್ ಟ್ರಾವನ್ಕೊರ್
- ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ

Read more about: ppf banking money sbi online
English summary

List Of Banks Offering Online PPF Facility

Individuals who have PPF account should make sure that each year before April 5, the deposit is made to avail maximum benefits. One can produce the same when filing tax returns.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X