For Quick Alerts
ALLOW NOTIFICATIONS  
For Daily Alerts

ನೀವು ಆನ್ಲೈನ್ ವ್ಯವಹಾರ ಮಾಡುತ್ತಿರಾ? ಹಾಗಿದ್ದರೆ ತಪ್ಪದೇ ಓದಿ..

ಇಂದಿನ ಇಂಟರನೆಟ್ ಯುಗದಲ್ಲಿ ಆನ್‌ಲೈನ್ ಬ್ಯಾಂಕಿಂಗ್ ವ್ಯವಹಾರ ನಡೆಸುವಾಗ ಸಾಕಷ್ಟು ಎಚ್ಚರಿಕೆಯಿಂದಿರಬೇಕಾಗುತ್ತದೆ.

By Siddu
|

ಇಂದಿನ ಇಂಟರನೆಟ್ ಯುಗದಲ್ಲಿ ಆನ್‌ಲೈನ್ ಬ್ಯಾಂಕಿಂಗ್ ವ್ಯವಹಾರ ನಡೆಸುವಾಗ ಸಾಕಷ್ಟು ಎಚ್ಚರಿಕೆಯಿಂದಿರಬೇಕಾಗುತ್ತದೆ. ಯಾರದೋ ಬ್ಯಾಂಕ್ ಅಕೌಂಟ್ ಹ್ಯಾಕ್ ಆಯ್ತು, ಇನ್ಯಾರೋ ಆನ್‌ಲೈನ್ ವಂಚನೆ ಪ್ರಕರಣದಲ್ಲಿ ದುಡ್ಡು ಕಳೆದುಕೊಂಡರು ಎಂಬ ವರದಿಗಳನ್ನು ಪ್ರತಿದಿನ ಟಿವಿ, ಪತ್ರಿಕೆಗಳಲ್ಲಿ ನೋಡುತ್ತಲೇ ಇರುತ್ತೇವೆ.

 

ತಂತ್ರಜ್ಞಾನ ಬೆಳೆದಂತೆ ಅದರ ಅನುಕೂಲಗಳ ಜೊತೆಗೆ ವಂಚಿಸಲೆಂದೇ ಹುಟ್ಟಿಕೊಂಡಿರುವ ಇಂಟರ್‌ನೆಟ್ ನ ಇನ್ನೊಂದು ಮುಖವಾದ ಮಾಲವೇರ್, ವೈರಸ್‌ಗಳು, ಫಿಷಿಂಗ್ ಮುಂತಾದುವುಗಳ ಅಟ್ಯಾಕ್ ಸಾಮಾನ್ಯವಾಗಿ ಬಿಟ್ಟಿದೆ. ಇವುಗಳಿಂದ ನಮ್ಮ ಆನ್‌ಲೈನ್ ವ್ಯವಹಾರಗಳನ್ನು ರಕ್ಷಿಸಿಕೊಳ್ಳುವ ಹೊಣೆಗಾರಿಕೆ ನಮ್ಮ ಮೇಲೆಯೇ ಇದೆ ಎಂಬುದನ್ನು ಅರಿತುಕೊಳ್ಳುವುದು ಅಗತ್ಯ.

ಆನ್‌ಲೈನ್ ಮೂಲಕ ವ್ಯವಹಾರ ನಡೆಸುವಾಗ ಯಾವೆಲ್ಲ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಬೇಕು ಹಾಗೂ ನಮ್ಮ ಹಣವನ್ನು ಹೇಗೆ ಸುರಕ್ಷಿತವಾಗಿಟ್ಟುಕೊಳ್ಳಬೇಕು ಎಂಬ ಕುರಿತ ಪ್ರಮುಖ ಅಂಶಗಳನ್ನು ತಿಳಿಯೋಣ.

ಆನ್‌ಲೈನ್ ವ್ಯವಹಾರ ಸುರಕ್ಷತೆಗೆ ಪ್ರತಿಯೊಬ್ಬರೂ ಅನುಸರಿಸಬೇಕಾದ ಕ್ರಮಗಳು:

1. ಪಬ್ಲಿಕ್ ವೈಫೈ ಬಳಕೆ ಬೇಡ

1. ಪಬ್ಲಿಕ್ ವೈಫೈ ಬಳಕೆ ಬೇಡ

ಆನ್‌ಲೈನ್ ವ್ಯವಹಾರಕ್ಕೆ ಹಾಗೂ ಹಣ ಟ್ರಾನ್ಸಫರ್ ಮಾಡಲು ಯಾವತ್ತೂ ಪಬ್ಲಿಕ್ ವೈಫೈ ಅಥವಾ ಸೈಬರ್ ಕೆಫೆ, ಪಬ್ಲಿಕ್ ಕಂಪ್ಯೂಟರ್ ಗಳ ಬಳಕೆ ಮಾಡಕೂಡದು. ಖಾಸಗಿ ನೆಟ್‌ವರ್ಕ್‌ಗಳಿಗಿಂತ ಕಡಿಮೆ ಸುರಕ್ಷತೆ ಹೊಂದಿರುವ ಪಬ್ಲಿಕ್ ವೈಫೈ ಉಪಯೋಗಿಸಿ ಆನ್‌ಲೈನ್ ವ್ಯವಹಾರ ಮಾಡುವುದು ಅಪಾಯಕಾರಿ. ಯಾವಾಗಲೂ ನಿಮ್ಮ ಮೊಬೈಲ್‌ನ ಇಂಟರ್‌ನೆಟ್ ಮೂಲಕವೇ ವ್ಯವಹಾರ ನಡೆಸಿ.
ಯಾವುದೋ ತುರ್ತು ಪರಿಸ್ಥಿತಿಯಲ್ಲಿ ಪಬ್ಲಿಕ್ ವೈಫೈ ಬಳಸಿದರೂ ಆದಷ್ಟೂ ಬೇಗ ನಿಮ್ಮ ಖಾಸಗಿ ನೆಟ್‌ವರ್ಕ್ ಬಳಸಿ ಪಾಸವರ್ಡ್ ಬದಲಿಸಿ.

2. ಫೈರವಾಲ್ ಹಾಗೂ ಆಂಟಿ ವೈರಸ್

2. ಫೈರವಾಲ್ ಹಾಗೂ ಆಂಟಿ ವೈರಸ್

ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಆಂಟಿ ವೈರಸ್ ಆಪ್ ಇಲ್ಲದಿದ್ದರೆ ಕೂಡಲೇ ಇನಸ್ಟಾಲ್ ಮಾಡಿಕೊಳ್ಳಿ. ಆದಷ್ಟೂ ಪೇಡ್ ಆಂಟಿ ವೈರಸ್ ಆಪ್ ಬಳಸಿ ಹಾಗೂ ಅದನ್ನು ಅಟೊ ಅಪ್ ಡೇಟ್ ಮೋಡ್ ನಲ್ಲಿಡಿ. ಪ್ರತಿದಿನ ಇಂಟರ್‌ನೆಟ್‌ನಲ್ಲಿ ಹುಟ್ಟಿಕೊಳ್ಳುವ ವೈರಸ್, ಮಾಲವೇರ್‌ಗಳಿಂದ ರಕ್ಷಿಸಿಕೊಳ್ಳಲು ಅಪ್‌ಡೇಟ್ ಗಳು ಅಗತ್ಯ.
ಯಾವಾಗಲೂ ಫೈರವಾಲ್ ಸೆಟಿಂಗ್ ಆನ್ ಇರಲಿ. ಅಪಾಯಕಾರಿ ವೆಬ್‌ಸೈಟ್‌ಗಳನ್ನು ಈ ಫೈರವಾಲ್‌ಗಳು ತಡೆಯುತ್ತವೆ. ಫೈರವಾಲ್ ಗುರುತಿಸುವ ಅಪಾಯಕಾರಿ ವೆಬ್‌ಸೈಟ್ ಗಳಿಂದ ದೂರವಿರಿ.

3. ವಂಚಿಸುವ ಇಮೇಲ್, ಮೆಸೇಜ್‌ಗಳಿಗೆ ಉತ್ತರಿಸಬೇಡಿ
 

3. ವಂಚಿಸುವ ಇಮೇಲ್, ಮೆಸೇಜ್‌ಗಳಿಗೆ ಉತ್ತರಿಸಬೇಡಿ

ನಿಮ್ಮ ಖಾಸಗಿ ಮಾಹಿತಿಗೆ ಕನ್ನ ಹಾಕುವ ಫಿಶಿಂಗ್ ಕುತಂತ್ರಗಳಿಗೆ ಬಲಿಯಾಗಬೇಡಿ. ಇಮೇಲ್ ಹಾಗೂ ಮೆಸೇಜ್‌ಗಳ ಮೂಲಕ ನಡೆಯುವ ಫಿಶಿಂಗ್ ಬಗ್ಗೆ ಜಾಗೃತಿ ಇರಲಿ. ನಿಮಗೆ ಕೋಟಿ ರೂಪಾಯಿ ಬಹುಮಾನ ಬಂದಿದೆ, ನಿಮ್ಮ ಅಕೌಂಟಿಗೆ ಕೋಟಿ ರೂಪಾಯಿ ಬರಲಿವೆ ಎಂಬ ಇಮೇಲ್‌ಗಳನ್ನು ತೆರೆಯದಿರುವುದೇ ಸೂಕ್ತ. ಇಂಥ ಸ್ಪ್ಯಾಮ್ ಇಮೇಲ್‌ಗಳನ್ನು ಗುರುತಿಸಿ ಸಾಧ್ಯವಾದರೆ ಅವನ್ನೆಲ್ಲ ಡಿಲೀಟ್ ಮಾಡಿ.

4. ಡಿಜಿಟಲ್ ಸರ್ಟಿಫಿಕೇಟ್ ಪರಿಶೀಲಿಸಿ

4. ಡಿಜಿಟಲ್ ಸರ್ಟಿಫಿಕೇಟ್ ಪರಿಶೀಲಿಸಿ

ಥರ್ಡ್ ಪಾರ್ಟಿ ಗೇಟ್‌ವೇ ಮೂಲಕ ಪಾವತಿ ಮಾಡುವಾಗ ಡಿಜಿಟಲ್ ಸರ್ಟಿಫಿಕೇಟ್ ಚೆಕ್ ಮಾಡಿ. ವೆಬ್‌ಸೈಟ್‌ನಲ್ಲಿ ಕಾಣಿಸುವ VeriSign ಎಂಬ ಚಿಹ್ನೆಯನ್ನು ಕ್ಲಿಕ್ ಮಾಡಿ ಅದರ ಡಿಜಿಟಲ್ ಸರ್ಟಿಫಿಕೇಟ್ ಹಾಗೂ ಇನ್ನಿತರ ಮಾಹಿತಿಯನ್ನು ಪರಿಶೀಲಿಸಬಹುದು.

5. ವರ್ಚ್ಯುವಲ್ ಕೀಬೋರ್ಡ್ ಬಳಸಿ

5. ವರ್ಚ್ಯುವಲ್ ಕೀಬೋರ್ಡ್ ಬಳಸಿ

ನೀವು ಕೀಬೋರ್ಡ್‌ನಿಂದ ಟೈಪ್ ಮಾಡುವ ಎಲ್ಲ ಮಾಹಿತಿಗಳನ್ನೂ ಓದಬಲ್ಲ ಮಾಲವೇರ್ ಹಾಗೂ ವೈರಸ್‌ಗಳು ಇವೆ. ಹೀಗಾಗಿ ಆನ್‌ಲೈನ್ ವ್ಯವಹಾರದಲ್ಲಿ ವರ್ಚ್ಯುವಲ್ ಕೀಬೋರ್ಡ್ ಬಳಸುವುದು ಸುರಕ್ಷಿತ. ಬ್ಯಾಂಕ್ ವೆಬ್‌ಸೈಟ್‌ಗಳಲ್ಲಿ ಲಭ್ಯವಿರುವ ವರ್ಚ್ಯುವಲ್ ಕೀಬೋರ್ಡ್ ಅನ್ನೇ ಬಳಸಿ.

6. ಟು ಸ್ಟೆಪ್ ವೆರಿಫಿಕೇಶನ್ ಇರಲಿ

6. ಟು ಸ್ಟೆಪ್ ವೆರಿಫಿಕೇಶನ್ ಇರಲಿ

ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್‌ನಲ್ಲಿ ಟು ಸ್ಟೆಪ್ ವೆರಿಫಿಕೇಶನ್ ಡಿಫಾಲ್ಟ್ ಇರದೇ ಇದ್ದಲ್ಲಿ ಅದನ್ನು ಚಾಲನೆಗೊಳಿಸಿ. ಅಂದರೆ ಯಾವುದೇ ವ್ಯವಹಾರ ಎರಡು ಹಂತಗಳ ಸುರಕ್ಷತಾ ಪರಿಶೀಲನೆಯ ನಂತರವೇ ಮುಂದುವರಿಯುತ್ತದೆ. ಉದಾಹರಣೆಗೆ- ಗೂಗಲ್‌ನ ಟು ಸ್ಟೆಪ್ ವೆರಿಫಿಕೇಶನ್ ನಿಮ್ಮ ಪಾಸ್‌ವರ್ಡ್, ಫಿಂಗರ್ ಪ್ರಿಂಟ್ ಪರಿಶೀಲನೆಯ ನಂತರವೇ ಬ್ಯಾಂಕ್ ವೆಬ್‌ಸೈಟ್ ಅನ್ನು ತೆರೆಯುತ್ತದೆ.

7. ಇಂಟರ್‌ನೆಟ್ ಕನೆಕ್ಷನ್ ಸುರಕ್ಷಿತವಾಗಿದೆಯಾ ಪರಿಶೀಲಿಸಿ

7. ಇಂಟರ್‌ನೆಟ್ ಕನೆಕ್ಷನ್ ಸುರಕ್ಷಿತವಾಗಿದೆಯಾ ಪರಿಶೀಲಿಸಿ

ವೆಬ್‌ಸೈಟ್‌ನ ಅಡ್ರೆಸ್ ಬಾರ್‌ನಲ್ಲಿ 'ಲಾಕ್' ಸಿಂಬಲ್ ಇರುವ ಬಗ್ಗೆ ಖಚಿತಪಡಿಸಿಕೊಳ್ಳಿ. ಹಾಗೆಯೇ https:// ಹಸಿರು ಬಣ್ಣದಲ್ಲಿರುವ ಬಗ್ಗೆ ಪರಿಶೀಲಿಸಿ. ಇದು ಹಸಿರು ಇದ್ದರೆ ಮಾತ್ರ ಸುರಕ್ಷಿತ ಎಂದರ್ಥ. ಒಂದು ವೇಳೆ ಇದು ಹಳದಿ ಅಥವಾ ಕೆಂಪು ಬಣ್ಣದಲ್ಲಿದ್ದರೆ ನಿಮ್ಮ ಮಾಹಿತಿ ಸೋರಿಕೆಯಾಗುವ ಅಪಾಯವಿರುತ್ತದೆ.

8. ಆನ್‌ಲೈನ್ ವ್ಯವಹಾರದ ಟ್ರ್ಯಾಕ್ ಇಟ್ಟುಕೊಳ್ಳಿ

8. ಆನ್‌ಲೈನ್ ವ್ಯವಹಾರದ ಟ್ರ್ಯಾಕ್ ಇಟ್ಟುಕೊಳ್ಳಿ

ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹಾಗೂ ಅನ್‌ಲೈನ್ ಪಾವತಿಗಳ ಪಟ್ಟಿ ಇಟ್ಟುಕೊಳ್ಳಿ. ಯಾವುದಾದರೂ ಒಂದು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಮಾತ್ರ ಆನ್‌ಲೈನ್ ವ್ಯವಹಾರ ನಡೆಸಿ. ಇದರಿಂದ ನಿಮ್ಮ ಆನ್‌ಲೈನ್ ವ್ಯವಹಾರಗಳ ಬಗ್ಗೆ ಸ್ಪಷ್ಟತೆ ಇರುತ್ತದೆ. ಯಾವುದೇ ಸಂಶಯಾಸ್ಪದ ವ್ಯವಹಾರ ಕಂಡು ಬಂದಲ್ಲಿ ತಕ್ಷಣ ಬ್ಯಾಂಕಿಗೆ ದೂರು ನೀಡಿ.

 

9. ಪ್ರೈವೇಟ್ ಬ್ರೌಸಿಂಗ್

9. ಪ್ರೈವೇಟ್ ಬ್ರೌಸಿಂಗ್

ಗೂಗಲ್ ಕ್ರೋಮ್ ಬ್ರೌಸರ್‌ನಲ್ಲಿ ಲಭ್ಯವಿರುವ ಇಂಕಾಗ್ನಿಟೊ ಮೋಡ್ ನಲ್ಲಿ ಪ್ರೈವೇಟ್ ಬ್ರೌಸಿಂಗ್ ವ್ಯವಹಾರ ನಡೆಸುವ ಮೂಲಕ ನಮ್ಮ ಮಾಹಿತಿಯನ್ನು ಸುರಕ್ಷಿತವಾಗಿಟ್ಟುಕೊಳ್ಳಬಹುದು. ಪ್ರೈವೇಟ್ ಬ್ರೌಸಿಂಗ್‌ನಲ್ಲಿ ನಾವು ದಾಖಲಿಸುವ ಪಾಸವರ್ಡ್, ಹಿಸ್ಟರಿ ಸೇವ್ ಆಗುವುದಿಲ್ಲ. ಅಲ್ಲದೆ ಇದು ಡಿವೈಸ್‌ನಲ್ಲಿನ ಕ್ಯಾಚೆ ಹಾಗೂ ಕುಕೀಸ್‌ಗಳನ್ನು ಡಿಲೀಟ್ ಮಾಡುತ್ತದೆ.

10. ಪಾಸ್‌ವರ್ಡ್ ನೆನಪಿನಲ್ಲಿರಲಿ

10. ಪಾಸ್‌ವರ್ಡ್ ನೆನಪಿನಲ್ಲಿರಲಿ

ನಿಮ್ಮ ಪಾಸ್‌ವರ್ಡ್ ಸುರಕ್ಷಿತವಾಗಿಟ್ಟುಕೊಳ್ಳುವುದು ಅತಿ ಅಗತ್ಯ. ಅದಕ್ಕಾಗಿ ಈ ಸೂಚನೆಗಳನ್ನು ಪಾಲಿಸಿ:
ಎ. ನಿಮ್ಮ ಕುಟುಂಬ ಸದಸ್ಯರು ಸೇರಿದಂತೆ ಯಾರೊಂದಿಗೂ ಪಾಸ್‌ವರ್ಡ್ ಹಂಚಿಕೊಳ್ಳಬೇಡಿ.
ಬಿ. ಎಲ್ಲಾದರೂ ಪಾಸ್‌ವರ್ಡ್ ಬರೆದು ಇಟ್ಟಿದ್ದರೆ ಅದು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಿ. ಆದರೂ ಪಾಸ್‌ವರ್ಡ್ ಬರೆದು ಇಡುವುದು ಸರಿಯಲ್ಲ. ಪಾಸ್‌ವರ್ಡ್ ಅನ್ನು ನೆನಪಿಟ್ಟುಕೊಳ್ಳುವುದೇ ಸೂಕ್ತ.
ಸಿ. ಕನಿಷ್ಠ ೨ ರಿಂದ ೩ ತಿಂಗಳಿಗೆ ಒಮ್ಮೆಯಾದರೂ ಪಾಸ್‌ವರ್ಡ್ ಬದಲಿಸಿ.
ಡಿ. ಎಲ್ಲ ಅಕೌಂಟ್‌ಗಳಿಗೆ ಒಂದೇ ಪಾಸ್‌ವರ್ಡ್ ಇಡುವುದು ಬೇಡ. ಒಂದೇ ಪಾಸ್‌ವರ್ಡ್ ಇದ್ದರೆ ಅಕಸ್ಮಾತ್ ಒಂದು ಅಕೌಂಟ್ ಹ್ಯಾಕ್ ಆದರೆ ಎಲ್ಲ ಅಕೌಂಟ್‌ಗಳಿಗೂ ಅಪಾಯ ಎದುರಾಗುತ್ತದೆ.
ಇ. ಬ್ರೌಸರ್‌ಗಳು ಪಾಸ್‌ವರ್ಡ್ ಸೇವ್ ಮಾಡಿಕೊಳ್ಳಲು ಬಿಡಬೇಡಿ.
ಎಫ್. ಸುಲಭವಾಗಿ ಪತ್ತೆ ಹಚ್ಚಲಾಗದ ರೀತಿ ಪಾಸ್‌ವರ್ಡ್ ಇರಲಿ. ಆದಷ್ಟೂ ಅಲ್ಫಾನ್ಯೂಮರಿಕ್ ಕ್ಯಾರೆಕ್ಟರ್ ಹಾಗೂ ಸಿಂಬಾಲ್‌ಗಳಿಂದ ಕೂಡಿರುವ ಪಾಸ್‌ವರ್ಡ್ ಇರಲಿ. ಇಂಗ್ಲಿಷ್‌ನ ಅಪ್ಪರ್ ಹಾಗೂ ಲೋವರ್ ಕೇಸ್ ಕ್ಯಾರೆಕ್ಟರ್‌ಗಳ ಮಿಶ್ರಣವಿರಲಿ.

11. ಲಾಗ್ ಔಟ್ ಮಾಡುವುದನ್ನು ಮರೆಯದಿರಿ

11. ಲಾಗ್ ಔಟ್ ಮಾಡುವುದನ್ನು ಮರೆಯದಿರಿ

ಅಕೌಂಟ್‌ನಿಂದ ಲಾಗ್ ಔಟ್ ಮಾಡದೆ ಎದ್ದು ಹೋಗುವ ಅಭ್ಯಾಸ ಬೇಡ. ಕೆಲ ಹೊತ್ತು ಯಾವುದೇ ವ್ಯವಹಾರ ನಡೆಯದಿದ್ದರೆ ಅಕೌಂಟ್ ತನ್ನಿಂತಾನೇ ಲಾಗ್ ಔಟ್ ಆಗುವಂತೆ ಬಹುತೇಕ ಬ್ಯಾಂಕ್‌ಗಳು ಸುರಕ್ಷತಾ ಕ್ರಮ ಅಳವಡಿಸಿವೆ. ಆದರೂ ನೀವಾಗಿಯೇ ಲಾಗ್ ಔಟ್ ಮಾಡುವುದು ಸುರಕ್ಷಿತ.

ಕೊನೆಮಾತು

ಕೊನೆಮಾತು

ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರೂ ಆನ್‌ಲೈನ್ ವ್ಯವಹಾರ ನಡೆಸುತ್ತೇವೆ. ಇದು ಅನಿವಾರ್ಯ ಕೂಡ ಆಗಿದೆ. ಆದರೆ ಸುರಕ್ಷತೆಯ ಅನ್‌ಲೈನ್ ವ್ಯವಹಾರ ನಮ್ಮ ಆದ್ಯತೆಯಾಗಿರಲೇಬೇಕು. ಕಷ್ಟಪಟ್ಟು ದುಡಿದ ಹಣ ಯಾರೋ ವಂಚಕರ ಪಾಲಾಗದಂತೆ ಜಾಗೃತಿ ವಹಿಸುವುದು ನಮ್ಮ ಕರ್ತವ್ಯ. ಅರಿವು ಹಾಗೂ ಜಾಗೃತಿ ನಮ್ಮ ಧ್ಯೇಯವಾಕ್ಯವಾಗಿರಲಿ.

Read more about: online frauds money finance news
English summary

How To Keep Your Online Transactions Safe & Secure

We often come across reports where people lose money because their account got hacked or someone lost money due to an online fraud.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X