For Quick Alerts
ALLOW NOTIFICATIONS  
For Daily Alerts

ಮುಖ್ಯಮಂತ್ರಿ 1 ಲಕ್ಷ ವಸತಿ ಯೋಜನೆಗೆ ಅರ್ಜಿ ಸಲ್ಲಿಕೆ ಹಾಗು ಸ್ಟೇಟಸ್ ಚೆಕ್ ಮಾಡೋದು ಹೇಗೆ?

|

ಕರ್ನಾಟಕ ರಾಜ್ಯದ ಹಲವಾರು ವಸತಿ, ಆಶ್ರಯ ಯೋಜನೆಗಳ ಬಗ್ಗೆ ನಿಮಗೆ ಗೊತ್ತಿರುತ್ತದೆ. ಇದರಲ್ಲಿ ಮುಖ್ಯಮಂತ್ರಿ ಒಂದು ಲಕ್ಷ ವಸತಿ ಯೋಜನೆ ಬೆಂಗಳೂರು, ರಾಜೀವ್ ಗಾಂಧಿ ವಸತಿ ಯೋಜನೆ, ಆಶ್ರಯ ಕರ್ನಾಟಕ, ಅವಾಸ ಯೋಜನೆಯಂತಹ ಪ್ರಮುಖ ಯೋಜನೆಗಳಡಿ ಮನೆಗಾಗಿ ನಮ್ಮಲ್ಲಿ ಅನೇಕರು ಅರ್ಜಿ ಸಲ್ಲಿಸಿರುತ್ತಾರೆ. ಈ ಯೋಜನೆಗಳ ಫಲಾನುಭವಿಗಳ ಪಟ್ಟಿ, ಅರ್ಜಿ ಸಲ್ಲಿಕೆ ವಿಧಾನ ಅಥವಾ ಅರ್ಜಿಯ ಸ್ಟೇಟಸ್ ತಿಳಿದುಕೊಳ್ಳಲು ಹೆಚ್ಚಿನ ಫಲಾನುಭವಿಗಳು ಬಯಸುತ್ತಾರೆ.

ಪ್ರಧಾನ ಮಂತ್ರಿ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಫಲಾನುಭವಿಗಳ ಪಟ್ಟಿ
 

ಫಲಾನುಭವಿಗಳ ಪಟ್ಟಿ

ಇದೀಗ ಕರ್ನಾಟಕ ಸರ್ಕಾರವು 'ಮುಖ್ಯಮಂತ್ರಿ 1 ಲಕ್ಷ ವಸತಿ ಯೋಜನೆ'ಯ ಫಲಾನುಭವಿಗಳ ಪಟ್ಟಿಯನ್ನು ಇದರ ಅಧಿಕೃತ ವೆಬ್ಸೈಟ್ ashraya.karnataka.gov.in ನಲ್ಲಿ ಪ್ರಕಟಿಸಿದೆ.

ಮುಖ್ಯಮಂತ್ರಿ ಸ್ವ ಉದ್ಯೋಗ ಯೋಜನೆಗೆ (CMEGP) ನೋಂದಣಿ, ಅರ್ಜಿ ಸಲ್ಲಿಸುವುದು ಹೇಗೆ?

ಅನುಷ್ಠಾನ ಸಂಸ್ಥೆ

ಅನುಷ್ಠಾನ ಸಂಸ್ಥೆ

ಮುಖ್ಯಮಂತ್ರಿ 1 ಲಕ್ಷ ವಸತಿ ಯೋಜನೆಯನ್ನು ರಾಜೀವ್ ಗಾಂಧಿ ರೂರಲ್ ಹೌಸಿಂಗ್ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆ ಅನುಷ್ಠಾನಕ್ಕೆ ತರುತ್ತಿದೆ.

ಯೋಜನೆ ಉದ್ದೇಶ?

ಯೋಜನೆ ಉದ್ದೇಶ?

ಈ ಯೋಜನೆಯೆ ಮುಖ್ಯ ಉದ್ದೇಶ ಅಗ್ಗದ ದರದಲ್ಲಿ ಒಂದು ಲಕ್ಷ ಮನೆಗಳನ್ನು ಬಿಪಿಎಲ್ ಕುಟುಂಬಗಳಿಗೆ ಒದಗಿಸುವುದು. ನಿವೇಶನಗಳನ್ನು ಬೆಂಗಳೂರಿನಲ್ಲಿ (ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ) ನಿರ್ಮಿಸಲಾಗುವುದು.

ಅರ್ಹತೆ?

ಅರ್ಹತೆ?

- ಕರ್ನಾಟಕದ ನಾಗರಿಕರಿಗೆ ಮಾತ್ರ ಯೋಜನೆ ಅನ್ವಯವಾಗುತ್ತದೆ.

- ಬಿಪಿಎಲ್ ಕುಟುಂಬಗಳು ಅರ್ಹರು

- ಕುಟುಂಬಗಳ ವಾರ್ಷಿಕ ಆದಾಯ ರೂ. 87,000 ಕ್ಕಿಂತ ಕಡಿಮೆ ಇರಬೇಕು.

- ಅರ್ಜಿದಾರ ಬೆಂಗಳೂರಿನಲ್ಲಿ ಕನಿಷ್ಟ ಐದು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳಿಂದ ವಾಸವಾಗಿರಬೇಕು.

- ಅರ್ಜಿದಾರನಿಗೆ ಸ್ವಂತ ಮನೆ ಇದ್ದಿರಬಾರದು.

- ಅರ್ಜಿದಾರ ಬೇರೆ ಯಾವುದೇ ಯೋಜನೆಗಳಡಿ ಪ್ರಯೋಜನ ಪಡೆದಿರಬಾರದು.

ಬೇಕಾಗುವ ದಾಖಲಾತಿ
 

ಬೇಕಾಗುವ ದಾಖಲಾತಿ

- ರಹವಾಸಿ ಪ್ರಮಾಣ ಪತ್ರ (ಐದು ವರ್ಷಗಳಿಂದ ವಾಸವಾಗಿರುವ ಕುರಿತು)

- ಆಧಾರ್ ಕಾರ್ಡ್

- ಆದಾಯ ಪ್ರಮಾಣ ಪತ್ರ

ಮುಖ್ಯಮಂತ್ರಿ 1 ಲಕ್ಷ ವಸತಿ ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ?

ಮುಖ್ಯಮಂತ್ರಿ 1 ಲಕ್ಷ ವಸತಿ ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ?

ಮುಖ್ಯಮಂತ್ರಿ 1 ಲಕ್ಷ ವಸತಿ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವವರು ಅಧಿಕೃತ ವೆಬ್ಸೈಟ್ ashraya.karnataka.gov.in ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ (rajiv gandhi rural housing corporation limited) ಅರ್ಜಿ ಸಲ್ಲಿಕೆಗೆ ಹೆಚ್ಚಿನ ಮಾಹಿತಿ, ಮಾರ್ಗದರ್ಶಿಯನ್ನು ಒದಗಿಸುತ್ತದೆ.

ಅರ್ಜಿದಾರರು ನೋಂದಣಿ ಮಾಡಿ ಲಾಗಿನ್ ಆಗಬೇಕು. ನಂತರ ಅರ್ಜಿಯನ್ನು ತುಂಬಿ ಅಗತ್ಯ ದಾಖಲಾತಿಗಳೊಂದಿಗೆ ಅಪ್ಲೋಡ್ ಮಾಡಬೆಕಾಗುತ್ತದೆ.

ಆನ್ಲೈನ್ ಸ್ಟೇಟಸ್ ಚೆಕ್ ಮಾಡೋದು ಹೇಗೆ?

ಆನ್ಲೈನ್ ಸ್ಟೇಟಸ್ ಚೆಕ್ ಮಾಡೋದು ಹೇಗೆ?

ಮುಖ್ಯಮಂತ್ರಿ 1 ಲಕ್ಷ ವಸತಿ ಯೋಜನೆ ಬೆಂಗಳೂರು, ಇದರ ಆನ್ಲೈನ್ ಸ್ಟೇಟಸ್ ಚೆಕ್ ಮಾಡಲು ಈ ಹಂತಗಳನ್ನು ಅನುಸರಿಸಿ.

ಹಂತ ೧ - ಇಲ್ಲಿ ಕ್ಲಿಕ್ ಮಾಡಿ - ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಪುಟ ತೆರೆಯಿರಿ

ಹಂತ ೨ - ನಿಮ್ಮ ಜಿಲ್ಲೆ ಹಾಗು ಫಲಾನುಭವಿ ಕೋಡ್ ನಮೂದಿಸಿ.

ಹಂತ ೩ - ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.

ಸಬ್ಸಿಡಿ ಪಡೆಯೋದು ಹೇಗೆ?

ಸಬ್ಸಿಡಿ ಪಡೆಯೋದು ಹೇಗೆ?

ಫಲಾನುಭವಿಗಳು ಸಬ್ಸಿಡಿ ಪಡೆಯಲು ತಮ್ಮ ಕಟ್ಟಡ ನಿರ್ಮಾಣ ನಡೆಯುತ್ತಿರುವುದರ ಪೋಟೊ ಅನ್ನು ಅಪ್ಲೋಡ್ ಮಾಡಿ ಸಬ್ಸಿಡಿ ಪಡೆಯಬಹುದು. ಫಲಾನುಭಿಗಳು ಇದಕ್ಕಾಗಿ ಗೂಗಲ್ ಪ್ಲೇ ಸ್ಟೋರ್ ಮೂಲಕ I Mane Mobile App ಬಳಸಬೇಕು. ಮುಖ್ಯಮಂತ್ರಿ 1 ಲಕ್ಷ ವಸತಿ ಯೋಜನೆ ಫಲಾನುಭವಿಗಳ ಪಿಡಿಎಫ್ ಪಟ್ಟಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಫಲಾನುಭವಿಗಳ ಹೆಸರುಗಳು

ಫಲಾನುಭವಿಗಳ ಹೆಸರುಗಳು

ಅರ್ಜಿದಾರರು ತಮ್ಮ ಹೆಸರುಗಳನ್ನು CMOLHS ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಮತ್ತು ಅರ್ಜಿಯ ವಿವರದೊಂದಿಗೆ ಪಡೆಯಬಹುದು.

ಅಧಿಕೃತ ವೆಬ್ಸೈಟ್ ashraya.karnataka.gov.in ನಲ್ಲಿ ನಿಮ್ಮ ಹೆಸರು, ಮೊಬೈಲ್ ನಂಬರ್ ಅಥವಾ ರೇಷನ್ ಕಾರ್ಡ್ ನಂಬರ್ ನಮೂದಿಸಿ ವ್ಯೂ ಬಟನ್ ಮೇಲೆ ಕ್ಲಿಕ್ ಮಾಡಿ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹುಡುಕಿ

English summary

Chief Minister 1 Lakh Housing Scheme, How to apply and check status?

Karnataka government announced beneficiary list under Chief Minister 1 Lakh Housing Scheme bengaluru on their website.
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more