For Quick Alerts
ALLOW NOTIFICATIONS  
For Daily Alerts

ಏನಿದು ಇಎಂಐ ಮುಕ್ತ ಸಾಲ (EMI free loan)? ಅರ್ಹತೆ, ಲಾಭಗಳ ಸಂಪೂರ್ಣ ಮಾಹಿತಿ ಇಲ್ಲಿದೆ ..

|

ನೀವು ಪಡೆಯುವ ಸಂಬಳದ ಗಣನೀಯ ಪ್ರಮಾಣ ಸಾಮಾನ್ಯವಾಗಿ ಬಾಡಿಗೆ, ಪ್ರಯಾಣ ವೆಚ್ಚ, ಕಾರು ಮತ್ತು ಮನೆ ಸಾಲ ಇಎಂಐಗಳಿಗಾಗಿ ಖರ್ಚು ಮಾಡಬೇಕಾಗುತ್ತದೆ. ಸಮನಾದ ಮಾಸಿಕ ಕಂತು (ಇಎಂಐ) ಎಂಬುದು ಪ್ರಮುಖ ಪಾವತಿ ಮತ್ತು ಮಾಸಿಕ ಬಡ್ಡಿಯ ಒಟ್ಟಾರೆ ಮೊತ್ತವಾಗಿದೆ. ಜನರ ವೇತನಗಳು ತುಂಬಾ ಹೆಚ್ಚಿಲ್ಲ. ವಾಸ್ತವವಾಗಿ, ಜನರು ಇಷ್ಟಪಡುವ ಬಹಳಷ್ಟು ವಿಷಯಗಳನ್ನು, ವಸ್ತುಗಳನ್ನು ಪಡೆಯಲು ಸಾಧ್ಯವಾಗದ ಕಾರಣ ಇಎಂಐ ಮೊರೆ ಹೋಗುತ್ತಾರೆ.

ಆದರೆ, ಸಾಲಕ್ಕಾಗಿ ಇಎಂಐ ಅನ್ನು ಪಾವತಿಸಲು ಸಾದ್ಯವಾಗದ ಪರಿಸ್ಥಿತಿಯನ್ನು ನೀವು ಎಂದಾದರೂ ಯೋಚಿಸಿದ್ದೀರಾ? ಇಎಂಐ ಮುಕ್ತ ಸಾಲವು (EMI free loan) ಹೊಸ ರೀತಿಯ ಸಾಲವಾಗಿದ್ದು, ಅಲ್ಲಿ ಸಾಲಗಾರನು ಪ್ರತಿ ತಿಂಗಳು ಪ್ರಿನ್ಸಿಪಲ್ ಮೊತ್ತವನ್ನು ಪಾವತಿಸಬೇಕಾದ ಅಗತ್ಯವಿರುವುದಿಲ್ಲ. ಪ್ರತಿ ತಿಂಗಳು ವಿದ್ಯುನ್ಮಾನವಾಗಿ ಮಾಸಿಕ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

 

ಪ್ರನ್ಸಿಪಲ್ ಮೊತ್ತವನ್ನು ತ್ರೈಮಾಸಿಕ, ಅರ್ಧ-ವರ್ಷದಲ್ಲಿ, ಭಾರೀ ಪ್ರಮಾಣದಲ್ಲಿ ಅಥವಾ ಬುಲೆಟ್ ಪಾವತಿಗಳ ಸರಣಿಯಲ್ಲಿ ಅನುಕೂಲಕ್ಕೆ ತಕ್ಕಂತೆ ಪಾವತಿಸಬಹುದು.

ಬಡ್ಡಿದರ ಪಾವತಿ

ಬಡ್ಡಿದರ ಪಾವತಿ

ಇಎಂಐ ಮುಕ್ತ ಸಾಲದ ಪ್ರಕಾರ ಗ್ರಾಹಕರು ಪ್ರತಿ ತಿಂಗಳು ಬಡ್ಡಿದರವನ್ನು ಮಾತ್ರ ಪಾವತಿಸಬೇಕಾಗುತ್ತದೆ ಮತ್ತು ತ್ರೈಮಾಸಿಕ, ಅರ್ಧವಾರ್ಷಿಕ ವಿಧಾನದಲ್ಲಿ ಪ್ರಿನ್ಸಿಪಲ್ ಹಣವನ್ನು ಪಾವತಿಸಬೇಕು.

ಗ್ರಾಹಕರು ಪ್ರತಿ ತಿಂಗಳು ಬಡ್ಡಿಯನ್ನು ಮಾತ್ರ ಪಾವತಿಸಿದರೆ, ವೈಯಕ್ತಿಕ ಸಾಲಕ್ಕೆ ಹೋಲಿಸಿದರೆ ಮಾಸಿಕ ಹೊರ ಹರಿವು ಗಣನೀಯವಾಗಿ ಕಡಿಮೆಯಾಗುತ್ತದೆ.

ಮುಂಗಡ ಪಾವತಿ

ಮುಂಗಡ ಪಾವತಿ

ಗ್ರಾಹಕರು ಆರು ತಿಂಗಳ ವಿತರಣೆಯ ನಂತರ ಸಾಲವನ್ನು ಮುಂಗಡವಾಗಿ ಪಾವತಿಸಬಹುದು. ಸಾಲ ಪೂರ್ಣಗೊಳ್ಳುವಿಕೆಯ ಆರು ತಿಂಗಳ ನಂತರ, ಯಾವುದೇ ಸ್ವತ್ತುಮರುಸ್ವಾಧೀನ ಶುಲ್ಕಗಳು ಅನ್ವಯಿಸುವುದಿಲ್ಲ.

ತ್ವರಿತ ವಿತರಣ ಸೌಲಭ್ಯ

ತ್ವರಿತ ವಿತರಣ ಸೌಲಭ್ಯ

ಇಎಂಐ ಮುಕ್ತ ಸಾಲವು, ಸಾಲದ ತ್ವರಿತ ವಿತರಣೆಗೆ ಅವಕಾಶ ನೀಡುತ್ತದೆ. ಅರ್ಜಿಯನ್ನು ಸಲ್ಲಿಸಿದ ತರುವಾಯ ಅವಶ್ಯಕ ಪರಿಶೀಲನೆಗಳು ಮುಗಿದ ನಂತರ ಸಾಲ 24 ಗಂಟೆಗಳ ಒಳಗೆ ವಿತರಿಸಲ್ಪಡುತ್ತದೆ. ಈ ಪ್ರಕ್ರಿಯೆಯು ಸ್ವಯಂಚಾಲಿತ ಮತ್ತು ಕಾಗದರಹಿತವಾಗಿದ್ದು,ಈ ಅನುಕೂಲಕರ ವಿಧಾನ ಆಯ್ಕೆಯನ್ನು ಮಾಡಬಹುದು.

ಗುಪ್ತ ಶುಲ್ಕ ಇಲ್ಲ
 

ಗುಪ್ತ ಶುಲ್ಕ ಇಲ್ಲ

ಬೇರೆ ಸಂದರ್ಭಗಳಲ್ಲಿ ಸಾಲ ಪಡೆಯುವಾಗ ಅನೇಕ ಗುಪ್ತ ಶುಲ್ಕಗಳಿರುವುದು ನಿಮಗೆ ತಿಳಿದಿದೆ. ಆದರೆ ಇದು ಯಾವುದೇ ಗುಪ್ತ ಶುಲ್ಕಗಳು ಅಥವಾ ಪೂರ್ವ ಪಾವತಿ ಶುಲ್ಕಗಳನ್ನು ಹೊಂದಿಲ್ಲ. ಇದು ಕನಿಷ್ಠ ದಾಖಲಾತಿಯನ್ನು ಒಳಗೊಂಡಿದ್ದು, ಸುರಕ್ಷಿತ ಪ್ರಕ್ರಿಯೆಯಾಗಿದೆ.

ಮೊತ್ತ ಏರಿಕೆ/ಇಳಿಕೆಗೆ ಅವಕಾಶ

ಮೊತ್ತ ಏರಿಕೆ/ಇಳಿಕೆಗೆ ಅವಕಾಶ

ಇವು ಕೆಲವು ತಂತ್ರಜ್ಞಾನಚಾಲಿತ ಸಾಲ ನೀಡುವ ವಿಧಾನಗಳಲ್ಲಿ ಲಭ್ಯವಿದೆ. ಇದು ಗ್ರಾಹಕರಿಗೆ ಪ್ರಿನ್ಸಿಪಲ್ ಮರುಪಾವತಿ ಮೊತ್ತ ಹೆಚ್ಚಿಸಲು ಅಥವಾ ಕಡಿಮೆಗೊಳಿಸಲು ಆಯ್ಕೆಯನ್ನು ನೀಡುತ್ತದೆ.

ಉದಾಹರಣೆಗೆ, ನೀವು ಮೌಲ್ಯಮಾಪನ ಸ್ವೀಕರಿಸಿದಲ್ಲಿ ನಿಮ್ಮ ಪಾವತಿಗಳನ್ನು ಪುನರ್ರಚಿಸಬಹುದು ಮತ್ತು ನಿರ್ದಿಷ್ಟ ಸಮಯದ ಅವಧಿಗೆ ಹೆಚ್ಚಿನ ಮರುಪಾವತಿಗೆ ಅವಕಾಶವಿರುತ್ತದೆ.

ಕೊನೆ ಮಾತು

ಕೊನೆ ಮಾತು

ಗೃಹ ಸಾಲ, ವೈಯಕ್ತಿಕ ಸಾಲ, ವಾಹನ ಸಾಲಗಳನ್ನು ಪಡೆಯುತ್ತಿರುವ ನಿಮೆ ಅಲ್ಲಿನ ನಿಯಮಗಳು, ಶುಲ್ಕಗಳು, ಕಂತುಗಳ ಬಗ್ಗೆ ಗೊತ್ತೆರ ಇರುತ್ತದೆ. ಅದಕಕ್ಎ ಹೋಲಿಸಿದರೆ ಇಎಂಐ ಮುಕ್ತ ಸಾಲದಲ್ಲಿ, ಬಡ್ಡಿ ಪ್ರಮಾಣದ ಜೊತೆಗೆ ಪಾವತಿಸಬೇಕಾದ ಸಾಲವನ್ನು ಕಡಿಮೆ ಮಾಡುತ್ತದೆ. ಒಟ್ಟಾರೆ ಗ್ರಾಹಕ ಸ್ನೇಹಿ ವಿಧಾನವಾಗಿದ್ದು, ಇದು ಉತ್ತಮ ಉಳಿತಾಯ ಮಾಡಲು ಸಹಾಯಕವಾಗಿದ್ದು, ನಿಮ್ಮ ಅನುಕೂಲಕ್ಕೆ ತಕ್ಕಂತೆ ಆಯ್ಕೆ ಮಾಡಬಹುದು.

English summary

EMI free loan: Eligibility, benefits and other key details

The EMI-free loan is a new kind of loan where it is not necessary for the borrower to pay the principal amount every month.
Story first published: Wednesday, April 3, 2019, 11:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more