For Quick Alerts
ALLOW NOTIFICATIONS  
For Daily Alerts

ನೀವು ಪಿಎಫ್ ಖಾತೆ ಹೊಂದಿದ್ದಿರಾ? ಈ ಪ್ರಕ್ರಿಯೆ ತಿಳಿದುಕೊಳ್ಳಿ..

|

ಹಲವಾರು ಉದ್ಯೋಗಿಗಳಿಗೆ, ತಮ್ಮ ಸ್ವಂತ ಹಣವನ್ನು ಇಪಿಎಫ್ಒದಿಂದ ವಿತ್ ಡ್ರಾ ಮಾಡುವುದು ಕಠಿಣ ಕೆಲಸವಾಗಿತ್ತು. ಈ ಹಿಂದೆ ಕ್ಲೈಮ್ ಸೆಟಲ್ಮೆಂಟ್ ಪ್ರಕ್ರಿಯೆಗಾಗಿ ಹಲವಾರು ತಿಂಗಳುಗಳನ್ನೇ ವ್ಯಯಿಸಬೇಕಿತ್ತು. ಅಲ್ಲದೇ ಉದ್ಯೋಗದಾತರಿಂದ ದೃಢೀಕರಣ ಪಡೆಯುವ ಅಗತ್ಯ ಕೂಡ ಇತ್ತು.

ಆದರೆ ಕಾಲ ಬದಲಾದಂತೆ ನಿಯಮಗಳು, ಪ್ರಕ್ರಿಯೆಗಳು ಬದಲಾಗುತ್ತವೆ! ಪಿಎಫ್ ಚಂದಾದಾರರು ಮನೆಯಲ್ಲಿ ಕುಳಿತುಕೊಂಡೇ ಇಪಿಎಫ್ ವಿತ್ ಡ್ರಾ ಮಾಡಬಹುದಾಗಿದೆ. ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ) ತನ್ನ ಚಂದಾದಾರರಿಗೆ ಆನ್ಲೈನ್ ಮೂಲಕ ಇಪಿಎಫ್ ವಿತ್ ಡ್ರಾ ಮಾಡುವ ಸೌಲಭ್ಯವನ್ನು ಕಲ್ಪಿಸಿದೆ.

ಆದರೆ ಬೇಸರದ ಸಂಗತಿಯೆಂದರೆ, EPFO ಚಂದಾದಾರರಲ್ಲಿ ಹೆಚ್ಚಿನವರು ಕೆವೈಸಿ (ಬ್ಯಾಂಕ್ ವಿವರ ಮತ್ತು ಆಧಾರ್) ತಮ್ಮ ಯುನಿವರ್ಸಲ್ ಅಕೌಂಟ್ ನಂಬರ್ (UAN) ಸಂಪರ್ಕ ಹೊಂದಿರುವುದಿಲ್ಲ. ಹೀಗೆ ಮಾಡದಿದ್ದರೆ ಪಿಂಚಣಿ ವಿತ್ ಡ್ರಾ ಮಾಡಲು ಸಾಧ್ಯವಿರುವುದಿಲ್ಲ. ಹಾಗಾಗಿ, ಈ ಸೌಕರ್ಯ ಪಡೆಯಲು ಬಯಸುವ ಇಪಿಎಫ್ಓ ಚಂದಾದಾರರು ಈ ನಿಯಮಗಳನ್ನು ಪಾಲಿಸಬೇಕು.

 

ಯುನಿವರ್ಸಲ್ ಅಕೌಂಟ್ ನಂಬರ್ (UAN) ಖಾತೆಗೆ ಸಂಪರ್ಕ ಹೊಂದಿರದೇ ಇರುವ ಚಂದಾದಾರರು ಕೆವೈಸಿಪ್ರಕ್ರಯೆ 100% ಪೂರ್ಣಗೊಳಿಸಬೇಕಿದೆ.

ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿ

ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿ

UAN ಮತ್ತು ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ EPFO ವ್ಯಾಪ್ತಿಯಡಿಯಲ್ಲಿ ಬರುವ ಕಂಪನಿ ಮತ್ತು ಸಂಸ್ಥೆಗಳಿಂದ EPF ಚಂದಾದಾರರಿಗೆ ಈಗಾಗಲೇ ಸರ್ಕಾರ ನಿರ್ದೇಶಿಸಿದೆ. ಕಳೆದ ನಾಲ್ಕು ವರ್ಷಗಳಿಂದ KYC ಪ್ರಕ್ರಿಯೆ ನಡೆಯುತ್ತಿದೆ. ಆದರೆ ಇನ್ನೂ ಪೂರ್ಣಗೊಂಡಿಲ್ಲ. ನಿಮಗೆ ಗೊತ್ತಿರುವಂತೆ UAN ಮತ್ತು ಕೆವೈಸಿ ಸಂಪರ್ಕಿಸಲು ಇದು ಕಡ್ಡಾಯವಾಗಿದೆ.

ಕೆವೈಸಿ ಏಕೆ?

ಕೆವೈಸಿ ಏಕೆ?

EPFO UAN ಪೋರ್ಟಲ್ ಲಾಗ್ ಇನ್ ಮಾಡಿ ನಿಮ್ಮ KYC ಅನ್ನು ನೀವು ನವೀಕರಿಸಬಹುದು. KYC ನವೀಕರಣದ ನಂತರ ಖಾತೆ ಹಣ ವರ್ಗಾವಣೆ ಅಥವಾ ಹಿಂಪಡೆಯುವಲ್ಲಿ ಯಾವುದೇ ಸಮಸ್ಯೆ ಎದುರಿಸಬೇಕಾಗಿಲ್ಲ. ನಿಮ್ಮ ಇಪಿಎಫ್ ಖಾತೆಯಲ್ಲಿ ಬ್ಯಾಂಕ್ ಖಾತೆ ಮಾಹಿತಿಯನ್ನು ಅಪ್‌ಡೇಟ್ ಮಾಡದಿದ್ದಲ್ಲಿ ಕ್ಲೈಮ್ ವಿನಂತಿ ಸಹ ತಿರಸ್ಕರಿಸಬಹುದು. ನೀವು KYC ದಾಖಲೆಗಳನ್ನು ಪೂರ್ಣಗೊಳಿಸದಿದ್ದರೆ EPF ಚಂದಾದಾರರು ಯಾವುದೇ SMSಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಯುಎಎನ್ ಸಕ್ರಿಯಗೊಳಿಸಿ
 

ಯುಎಎನ್ ಸಕ್ರಿಯಗೊಳಿಸಿ

ಯುನಿವರ್ಸಲ್ ಅಕೌಂಟ್ ನಂಬರ್ (UAN) ಸಕ್ರಿಯಗೊಳಿಸುವುದರ ಮೂಲಕ ಚಂದಾದಾರರು ಯುಎಎನ್ ಅನ್ನು ಸಕ್ರಿಯಗೊಳಿಸಬೇಕಾಗುತ್ತದೆ. ಯುಎಎನ್ ಅನ್ನು ಸಕ್ರಿಯಗೊಳಿಸುವಾಗ ಮೊಬೈಲ್ ಸಂಖ್ಯೆಯನ್ನು ನೋಂದಣಿ ಮಾಡಬೇಕು ಎಂಬುದನ್ನು ಗಮನದಲ್ಲಿಡಿ. ನಿಮ್ಮ KYC ನವೀಕರಣ ಮಾಡಿದ ನಂತರ EPFO ಖಾತೆಯಿಂದ ನಿಮ್ಮ ಇಪಿಎಫ್ ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಕೇವಲ 3 ದಿನಗಳಲ್ಲಿ ನಡೆಯಲಿದೆ.

ಪ್ಯಾನ್, ಆಧಾರ್ ಮತ್ತು ಖಾತೆ ವಿವರ

ಪ್ಯಾನ್, ಆಧಾರ್ ಮತ್ತು ಖಾತೆ ವಿವರ

ಚಂದಾದಾರರ ಆಧಾರ್ ವಿವರ ಇಪಿಎಫ್ಒ ದತ್ತಾಂಶದಲ್ಲಿರಬೇಕು. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅವನು/ಅವಳು ಯುಐಡಿಎಐ ಯಿಂದ ಇ-ಕೆವೈಸಿ ಪರಿಶೀಲಿಸುವುದಕ್ಕಾಗಿ ಒಟಿಪಿ ಆಧಾರಿತ ಸೌಲಭ್ಯವನ್ನು ಹೊಂದಿರಬೇಕು. ಜೊತೆಗೆ ಇಪಿಎಫ್ಒ ಡೇಟಾಬೇಸ್ ಅನುಗುಣವಾಗಿ ಸದಸ್ಯರ ಬ್ಯಾಂಕ್ ಖಾತೆ ವಿವರ ಐಎಫ್ಎಸ್ಸಿ (IFSC) ಕೋಡ್ ಒಳಗೊಂಡಂತೆ ಮಾಹಿತಿ ಒದಗಿಸಬೇಕು. ಚಂದಾದಾರರ ಸೇವೆ 5 ವರ್ಷಕ್ಕಿಂತ ಕಡಿಮೆಯಿದ್ದರೆ ಇಪಿಎಫ್ ಫೈನಲ್ ಸೆಟಲ್ಮೆಂಟ್ ಕ್ಲೈಮ್ ಮಾಡುವುದಕ್ಕೆ ಪ್ಯಾನ್ (PAN) ನಂಬರ್ ನೀಡಬೇಕು. ಮಿಸ್ಡ್ ಕಾಲ್ ಮೂಲಕ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?

ಹಣ ಕ್ಲೈಮ್ ಪ್ರಕ್ರಿಯೆ

ಹಣ ಕ್ಲೈಮ್ ಪ್ರಕ್ರಿಯೆ

ಇಪಿಎಫ್ ವಿತ್ ಡ್ರಾವಲ್ ಅಥವಾ ಪಿಂಚಣಿ ವಿತ್ ಡ್ರಾವಲ್ ಮುಂತಾದ ಸೇವೆಗಳಿಗೆ ನೀವು ಅರ್ಹತೆ ಹೊಂದಿಲ್ಲದಿದ್ದರೆ ಆ ಆಯ್ಕೆಯನ್ನು ಡ್ರಾಪ್-ಡೌನ್ ಮೆನುವಿನಲ್ಲಿ ತೋರಿಸಲಾಗುವುದಿಲ್ಲ. ಚಂದಾದಾರರು ಅರ್ಹರಾಗಿದ್ದರೆ, ಆನ್ಲೈನಿನಲ್ಲಿ ಹಣ ಕ್ಲೈಮ್ ಮಾಡಲು ಬಯಸುವ ವಿಧಾನ ಆಯ್ಕೆ ಮಾಡಿದ ನಂತರ ಅರ್ಜಿ ಫಾರ್ಮ್ ತೆರೆದುಕೊಳ್ಳುತ್ತದೆ. ಅದರಲ್ಲಿ ಸಂಪೂರ್ಣ ವಿವರ ತುಂಬಿದ ನಂತರ ದೃಢೀಕರಣಕ್ಕಾಗಿ ಓಟಿಪಿ ನಮೂದಿಸಿ ಪ್ರಕ್ರಿಯೆ ಮುಗಿಸಿ. ಬೇಕಿದಲ್ಲಿ ಟ್ರ್ಯಾಕ್ ಕ್ಲೈಮ್ ಸ್ಟೇಟಸ್ ಟ್ಯಾಬ್ ಆಯ್ಕೆ ಮಾಡುವ ಮೂಲಕ ಅರ್ಜಿಯ ವಿವರ ಪರಿಶೀಲಿಸಬಹುದು.

ಪಿಎಫ್ ಪಾಸ್ಬುಕ್

ಪಿಎಫ್ ಪಾಸ್ಬುಕ್

ಪ್ರಾವಿಡೆಂಟ್ ಫಂಡ್ ಪಾಸ್ಬುಕ್ ಅನ್ನು ವೀಕ್ಷಿಸಲು, ಇಲ್ಲಿ ನೀಡಲಾದ ಲಿಂಕ್ ಮೇಲೆ ಕ್ಲಿಕ್ ಮಾಡಿ. (https://passbook.epfindia.gov.in/MemberPassBook/Login.jsp) ನಿಮ್ಮ UAN ನಂಬರ್ ಮತ್ತು ಪಾಸ್ವರ್ಡ್ ನಮೂದಿಸಿ ಮುಂದುವರೆಯಿರಿ. ಪಿಎಫ್ ಪಾಸ್ಬುಕ್ ಗಾಗಿ ಪ್ರಾವಿಡೆಂಟ್ ಫಂಡ್ ಮೂಲಕ ನಿರ್ವಹಿಸಲ್ಪಡುವ ಉದ್ಯೋಗದಾತರನ್ನು ಸಂಪರ್ಕಿಸಬೇಕು. ಸಾಮಾನ್ಯವಾಗಿ, ವಿನಾಯಿತಿ ಪಡೆದ ಸಂಸ್ಥೆಗಳು ಇತರ ನೌಕರ ಸೇವೆಗಳೊಂದಿಗೆ ಅವರ ಅಂತರ್ಜಾಲದ ಪೋರ್ಟಲ್ ನಲ್ಲಿ ಈ ವಿವರಗಳನ್ನು ನೀಡುತ್ತವೆ.

Read more about: pf epf money banking savings epfo
English summary

How to claim EPF amount? Must know these things

the EPFO had been taking steps to reduce the time taken to settle PF claims. Earlier the EPFO had introduced the 'Composite claim form (Aadhaar).
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more