For Quick Alerts
ALLOW NOTIFICATIONS  
For Daily Alerts

ವೋಟರ್ ಐಡಿಯಲ್ಲಿ ವಿವರಗಳನ್ನು ತಿದ್ದುಪಡಿ ಮಾಡುವುದು ಹೇಗೆ?

|

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಮತದಾರರು ಚುನಾವಣಾ ಚೀಟಿಯಲ್ಲಿ ತಮ್ಮ ಹೆಸರು, ವಿಳಾಸ ಮುಂತಾದ ವಿವರಗಳನ್ನು ನವೀಕರಿಸಬಹುದು. ಸಿಸ್ಟಮ್ ದೋಷಗಳಿಂದಾಗಿ ಹೆಚ್ಚಿನ ಮತದಾರರ ಐಡಿ ಕಾರ್ಡುಗಳಲ್ಲಿ ತಪ್ಪಾದ ವಿವರಗಳಿರುತ್ತವೆ. ಇಂತಹ ತಪ್ಪುಗಳು ನಿಮ್ಮ ವೋಟರ್ ಐಡಿಯಲ್ಲಿದ್ದರೆ ಅದನ್ನು ಸರಿಪಡಿಸಬಹುದು.

ನ್ಯಾಷನಲ್ ವೋಟರ್ಸ್ ಸರ್ವಿಸ್ ಪೋರ್ಟಲ್ ನಲ್ಲಿ ಆನ್ಲೈನ್ ನಲ್ಲಿ ಸರಿಪಡಿಸಬಹುದು.

ಮತದಾರರು ಫಾರ್ಮ್ 8 ಅನ್ನು nvsp.in ನಲ್ಲಿ ಸಲ್ಲಿಸಬೇಕು. ಫಾರ್ಮ್ 8 ರಲ್ಲಿ ಮತದಾರರು ತಮ್ಮ ಹೆಸರು, ಛಾಯಾಚಿತ್ರ, ಜನ್ಮ ದಿನಾಂಕ, ಲಿಂಗ, ಸಂಬಂಧಿಗಳ ಹೆಸರನ್ನು ಸರಿಪಡಿಸಬಹುದು / ಬದಲಾಯಿಸಬಹುದು.

ಮತದಾರರ ಕಾರ್ಡ್ ವಿವರ ಹೇಗೆ ಬದಲಾಯಿಸುವುದು?
 

ಮತದಾರರ ಕಾರ್ಡ್ ವಿವರ ಹೇಗೆ ಬದಲಾಯಿಸುವುದು?

ಮತದಾರರ ಕಾರ್ಡ್ / ಚುನಾವಣಾ ಪಟ್ಟಿಯಲ್ಲಿ ಹೆಸರು, ವಿಳಾಸ ಮತ್ತು ವಿವರಗಳನ್ನು ಹೇಗೆ ಬದಲಾಯಿಸುವುದು ಎಂಬುದನ್ನು ನೋಡೋಣ ಬನ್ನಿ.

STEP 1:

ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ ಗೆ ಬೇಟಿ ನೀಡಲು ಇಲ್ಲಿ ನೀಡಲಾದ ಲಿಂಕ್ ಮೇಲೆ ಕ್ಲಿಕ್ ಮಾಡಿ. https://www.nvsp.in/ (nvsp.in)

STEP 2:

ಚುನಾವಣಾ ರೋಲ್ ನಲ್ಲಿ ನಿಮ್ಮ ವಿವರ ಸರಿಪಡಿಸಲು ಸರಿಪಡಿಸಲು ಇಲ್ಲಿ ಕ್ಲಿಕ್ ಮಾಡಿ. https://www.nvsp.in/Forms/Forms/form8?lang=en-GB

ವಿವರ ತುಂಬಿರಿ

ವಿವರ ತುಂಬಿರಿ

STEP 3: ನ್ಯಾಷನಲ್ ವೋಟರ್ಸ್ ಸರ್ವಿಸ್ ಪೋರ್ಟಲ್ ನ ಫಾರ್ಮ್ 8 ಗೆ ಪ್ರವೇಶಿಸಿ.

STEP 4: ನಿಮ್ಮ ರಾಜ್ಯ, ಜಿಲ್ಲೆ, ವಿಧಾನಸಭೆ ಕ್ಷೇತ್ರವನ್ನು ಆಯ್ಕೆ ಮಾಡಿ.

STEP 5: ನಿಮ್ಮ ಹೆಸರು ಮತ್ತು ಚುನಾವಣಾ ರೋಲ್ ವಿವರಗಳನ್ನು ಒದಗಿಸಿ.

STEP 6: ನೀವು ಸರಿಪಡಿಸಲು ಬಯಸುವ ನಮೂದುಗಳನ್ನು ಮೇಲೆ(ಹೆಸರು, ವಯಸ್ಸು, ವಿಳಾಸ, ಲಿಂಗ, ಜನ್ಮದಿನಾಂಕ ಇತ್ಯಾದಿ) ಟಿಕ್ ಮಾಡಿ.

STEP 7: ಸರಿಪಡಿಸಲು ಬಯಸುವ ವಿವರಗಳ ಸರಿಯಾದ ಮಾಹಿತಿ ಒದಗಿಸಿ.

STEP 8: ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.

STEP 9: ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಒದಗಿಸಿ.

STEP 10: ನಿಮ್ಮ ಪ್ರಸ್ತುತ ಸ್ಥಳವನ್ನು ಉಲ್ಲೇಖಿಸಿ & CAPTCHA ಯನ್ನು ನಮೂದಿಸಿ.

ಚುನಾವಣಾ ಚೀಟಿಯನ್ನು (Voter ID) ಆನ್ಲೈನ್ ಮೂಲಕ ಪಡೆಯುವುದು ಹಾಗು ತಿದ್ದುಪಡಿ ಮಾಡುವುದು ಹೇಗೆ?

ಸೂಚನೆ

ಸೂಚನೆ

ಒಂದು ಸಮಯದಲ್ಲಿ ಗರಿಷ್ಠ 3 ವಿವರಗಳನ್ನು ಸರಿಪಡಿಸಬಹುದು. ಮತದಾರ ಕಾರ್ಡ್ ನಲ್ಲಿ ನೀವು 3 ಕ್ಕಿಂತಲೂ ಹೆಚ್ಚಿನ ವಿವರಗಳನ್ನು ಸರಿಪಡಿಸಲು ಬಯಸಿದ್ದರೆ, ಒಂದಕ್ಕಿಂತ ಹೆಚ್ಚಿನ ಬಾರಿ ಪ್ರಯತ್ನಿಸಬೇಕು.

ಅಗತ್ಯ ದಾಖಲೆಗಳು
 

ಅಗತ್ಯ ದಾಖಲೆಗಳು

ಸರಿಪಡಿಸಬೇಕಾದ ಅಥವಾ ಬದಲಿಸಬೇಕಾದ ಅಗತ್ಯ ವಿವರಗಳ ಆಧಾರದ ಮೇಲೆ ಅಗತ್ಯ ದಾಖಲಾತಿಗಳನ್ನು ಒದಗಿಸಬೇಕು.

ಉದಾ: ಛಾಯಾಚಿತ್ರವನ್ನು ಬದಲಾಯಿಸಲು ಸ್ಕ್ಯಾನ್ ಮಾಡಿದ ಪಾಸ್ಪೋರ್ಟ್ ಗಾತ್ರದ ಇತ್ತೀಚಿನ ಛಾಯಾಚಿತ್ರದ ಅಗತ್ಯವಿದೆ. ಜನ್ಮ ದಿನಾಂಕವನ್ನು ಬದಲಾಯಿಸಲು ವಯಸ್ಸಿನ ದಾಖಲಾತಿ ಅಗತ್ಯವಿರುತ್ತದೆ.

ಪ್ರಿಂಟ್ ಔಟ್ ತೆಗೆದುಕೊಳ್ಳಿ

ಪ್ರಿಂಟ್ ಔಟ್ ತೆಗೆದುಕೊಳ್ಳಿ

ನಿಮಗೆ ಬೇಕಾಗಿರುವ ಈ ಮೇಲಿನ ಯಾವುದೇ ವಿವರಗಳನ್ನು ನಮೂದಿಸಿದ ನಂತರ ನೀವು ಆನ್ಲೈನ್ ನಲ್ಲಿ ನಿಮ್ಮ ವೋಟರ್ ID ಡೌನ್ಲೋಡ್ ಮಾಡಿಕೊಳ್ಳಬಹುದು.ಅಲ್ಲದೇ ಅದನ್ನು ಪ್ರಿಂಟ್ ಮಾಡಿ ಲ್ಯಾಮಿನೇಟ್ ಮಾಡಿಸಬಹುದು.

ಈ ವ್ಯವಸ್ಥೆ ಜಾರಿಯಾದರೆ ಭಾರತದ ವೋಟಿಂಗ್ ಸಿಸ್ಟಮ್ ನಾಶವಾಗಲಿದೆ!

English summary

How to correct details in voter ID card?

Voters just need to submit Form 8 at nvsp.in With form 8 voters can correct/change name, photograph, date of birth, gender, name of relative & relation etc.
Story first published: Wednesday, April 10, 2019, 14:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more