For Quick Alerts
ALLOW NOTIFICATIONS  
For Daily Alerts

ಉಚಿತ ಕಾಲೇಜು ಶಿಕ್ಷಣ ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ?

|

ಕರ್ನಾಟಕ ಸರ್ಕಾರ ಉಚಿತ ಕಾಲೇಜು ಶಿಕ್ಷಣ ಸ್ಕೀಮ್ ಅನ್ನು ಘೋಷಣೆ ಮಾಡಿದೆ. ರಾಜ್ಯದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಶಿಕ್ಷಣ ನೀಡಲು ಈ ಯೋಜನೆಯನ್ನು ಘೋಷಿಸಲಾಗಿದೆ. ಸರಕಾರಿ ಪೂರ್ವ ವಿಶ್ವವಿದ್ಯಾನಿಲಯ, ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳಲ್ಲಿ ಓದುವ ಹುಡುಗಿಯರ ಕಾಲೇಜು ಶಿಕ್ಷಣದ ವೆಚ್ಚವನ್ನು ರಾಜ್ಯದ ಸರ್ಕಾರವು ಭರಿಸಲಿದೆ.

ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಓದುವ ಬಾಲಕಿಯರಿಗೆ ಕರ್ನಾಟಕ ಸರ್ಕಾರ ಉಚಿತ ಶಿಕ್ಷಣ ಒದಗಿಸಲಿದೆ.

ಯೋಜನಾ ಧ್ಯೇಯ
 

ಯೋಜನಾ ಧ್ಯೇಯ

ಕರ್ನಾಟಕ ಸರ್ಕಾರ ಘೋಷಿಸಿರುವ ಉಚಿತ ಕಾಲೇಜು ಶಿಕ್ಷಣ ಸ್ಕೀಮ್ ಮುಖ್ಯ ಧ್ಯೇಯವೆಂದರೆ ರಾಜ್ಯದಲ್ಲಿ ಹುಡುಗಿಯರ ಸಬಲೀಕರಣ, ಸಮಾನವಾದ ಅವಕಾಶಗಳನ್ನು ಒದಗಿಸುವುದು ಹಾಗು ಹುಡುಗಿಯರನ್ನು ಉನ್ನತ ಹುದ್ದಗಳಿಗೆ ಅಧಿಕಾರಕ್ಕೆ ತರುವುದು.

ಯೋಜನೆಗೆ ಕಾರಣ

ಯೋಜನೆಗೆ ಕಾರಣ

ವಿವಿಧ ಕಾರಣಗಳಿಂದ ಶಾಲಾ ಶಿಕ್ಷಣದ ನಂತರ ಬಹುತೇಕ ಹುಡುಗಿಯರು ಶಾಲೆ ಬಿಡುತ್ತಾರೆ. ಅಂದರೆ ಅರ್ಧಕ್ಕೆ ಶಾಲೆ ಬಿಡುವವರ ಡ್ರಾಪ್ ಔಟ್ ರೇಟ್ ಜಾಸ್ತಿ ಇದೆ. ಇದಕ್ಕೆ ಪ್ರಾಥಮಿಕವಾಗಿ ಕುಟುಂಬದ ಆರ್ಥಿಕ ಪರಿಸ್ಥಿತಿ ಉನ್ನತ ಶಿಕ್ಷಣ ಪಡೆಯುವಲ್ಲಿ ಅಡ್ಡಾಗಲಾಗುತ್ತದೆ. ಹಳ್ಳಿಗಳಿಂದ ಕಾಲೇಜುಗಳು ದೂರವಿರುವ ಕಾರಣ, ಬಸ್ ಸೌಲಭ್ಯ ಇಲ್ಲದಿರುವ ಕಾರಣ ಹೆಚ್ಚಿನ ಪಾಲಕರು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲ್ಲ. ಹೀಗಾಗಿ ಉಚಿತ ಕಾಲೇಜು ಶಿಕ್ಷಣ ಯೋಜನೆ ಹುಡುಗಿಯರು ಉನ್ನತ ಶಿಕ್ಷಣವನ್ನು ಪಡೆಯುವಂತೆ ಸಹಾಯ ಮಾಡುತ್ತದೆ. ಇದು ಹುಡುಗಿಯರ ಡ್ರಾಪ್ ಔಟ್ ಪ್ರಮಾಣವನ್ನು ಕಡಿಮೆ ಮಾಡಲಿದೆ.

ಉದ್ದೇಶಗಳೇನು ಗೊತ್ತೆ?

ಉದ್ದೇಶಗಳೇನು ಗೊತ್ತೆ?

- ಶಾಲಾ ಶಿಕ್ಷಣದ ನಂತರ ಅರ್ಧಕ್ಕೆ ಶಾಲೆ ಬೀಡುವ ಹುಡುಗಿಯರ ಡ್ರಾಪ್-ಔಟ್ ದರವನ್ನು ಕಡಿಮೆ ಮಾಡುವುದು.

- ಹುಡುಗಿಯರಿಗೆ ಆರ್ಥಿಕವಾಗಿ ಬೆಂಬಲ ಒದಗಿಸುವುದು

- ಹುಡುಗಿಯರಿಂದ ಎಷ್ಟು ಸಾಧ್ಯವೋ ಅಷ್ಟು ಅಧ್ಯಯನ ಮಾಡುವಂತೆ ಪ್ರೋತ್ಸಾಹಿಸುವುದು.

- ಶಿಕ್ಷಣದ ಮೂಲಕ ಹುಡುಗಿಯರು ಮತ್ತು ಅವರ ಕುಟುಂಬಗಳ ಸಬಲೀಕರಣ

ಪ್ರಯೋಜನಗಳು
 

ಪ್ರಯೋಜನಗಳು

ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳಾದ ಪೂರ್ವ ವಿಶ್ವವಿದ್ಯಾಲಯ, ಸ್ನಾತಕೋತ್ತರ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳಲ್ಲಿ ಬಾಲಕಿಯರು ಉಚಿತ ಕಾಲೇಜು ಶಿಕ್ಷಣ ಪಡೆಯಬಹುದು.

ಉಚಿತ ಕಾಲೇಜು ಶಿಕ್ಷಣ ಯೊಜನೆ ಮೂಲಕ ರಾಜ್ಯದ ಸುಮಾರು 3.7 ಲಕ್ಷ ಬಾಲಕಿಯರಿಗೆ ಪ್ರಯೋಜನವಾಗಲಿದೆ.

ಯೋಜನಾ ವೆಚ್ಚ, ಕಾಯಿದೆ

ಯೋಜನಾ ವೆಚ್ಚ, ಕಾಯಿದೆ

ಈ ಯೋಜನೆಗಾಗಿ ವಾರ್ಷಿಕ ರೂ. 95 ಕೋಟಿ ವೆಚ್ಚವಾಗಲಿದೆ. 2018-19ರ ಶೈಕ್ಷಣಿಕ ವರ್ಷದಿಂದ ಈ ಯೋಜನೆಯು ಅನ್ವಯವಾಗುತ್ತದೆ. ಡಿಸೆಂಬರ್ 2018 ರಲ್ಲಿ ರಾಜ್ಯ ಸಚಿವ ಸಂಪುಟ ಈ ಯೋಜನೆಯನ್ನು ಅನುಮೋದಿಸಿದೆ. ಶಾಲಾ ಶಿಕ್ಷಣದ ನಂತರ ಹುಡುಗಿಯರು ಸಾಮಾನ್ಯವಾಗಿ ಕಾಲೇಜು ಬಿಡುತ್ತಾರೆ. ಶಿಕ್ಷಣ ಹಕ್ಕು ಕಾಯಿದೆ ಶಾಲಾ ಶಿಕ್ಷಣದ ತನಕ ಹುಡುಗಿಯರ ಕಡ್ಡಾಯ ಶಿಕ್ಷಣ ಬೆಂಬಲಿಸುತ್ತದೆ. ಶಿಕ್ಷಣ ಸಾಲವನ್ನು ತೆಗೆದುಕೊಳ್ಳುವ ಮುನ್ನ ಇಲ್ಲೊಮ್ಮೆ ನೋಡಿ..

English summary

How to get Free College Education Scheme Benefits?

The Government of Karnataka has announced the Free College Education Scheme to provide free college education to the girls studying in the state.
Story first published: Friday, April 12, 2019, 11:25 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more