For Quick Alerts
ALLOW NOTIFICATIONS  
For Daily Alerts

ಏನಿದು ಸ್ವಾವಲಂಬನ್ ಪಿಂಚಣಿ ಯೋಜನೆ? ತಪ್ಪದೇ ಪ್ರಯೋಜನ ನಿಮ್ಮದಾಗಿಸಿ..

|

ಸ್ವಾವಲಂಬನ್ ಪಿಂಚಣಿ ಯೋಜನೆಯನ್ನು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ-ಲೈಟ್ (National Pension System-Lite (NPS-Lite) ಎಂದೂ ಕರೆಯಲ್ಪಡುತ್ತದೆ. ಇದು ಆರ್ಥಿಕವಾಗಿ ಹಿಂದುಳಿದಿರುವ ಜನರನ್ನು ಗುರಿಯಾಗಿಟ್ಟುಕೊಂಡು, 18 ರಿಂದ 60 ವರ್ಷದೊಳಗಿನ ಚಂದಾದಾರರು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ಪಿಎಸ್) ಸೇರಬಹುದು. 60 ವರ್ಷ ವಯಸ್ಸಿನವರೆಗೆ ಕೊಡುಗೆಯನ್ನು ನೀಡಬಹುದು.

 

ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್ಆರ್ಡಿಎ), ಎನ್ಎಸ್ಡಿಎಲ್ ಇ-ಗವರ್ನನ್ಸ್ ಇನ್ಫ್ರಾಸ್ಟ್ರಕ್ಚರ್ ಅನ್ನು ಈ ಪಿಂಚಣಿ ಯೋಜನೆಗಾಗಿ ಸೆಂಟ್ರಲ್ ರೆಕಾರ್ಡ್ ಕೀಪಿಂಗ್ ಏಜೆನ್ಸಿ (CRA) ನೇಮಿಸಿದೆ ಎಂಬುದನ್ನು ಇಲ್ಲಿ ಗಮನಿಸಿ ಒಂದು ಪ್ರಮುಖ ಅಂಶವಾಗಿದೆ.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ-ಸ್ವಾವಲಂಬನ್ ಪ್ರಯೋಜನಗಳು ಮತ್ತು ಪ್ರಮುಖ ವಿವರಗಳನ್ನು ಇಲ್ಲಿ ನೀಡಲಾಗಿದೆ.

1. ಅರ್ಹತೆ

1. ಅರ್ಹತೆ

ಏನಿದು ಸ್ವಾವಲಂಬನ್ ಪಿಂಚಣಿ ಯೋಜನೆ? ತಪ್ಪದೇ ಪ್ರಯೋಜನ ನಿಮ್ಮದಾಗಿಸಿ..

2. ಪೋರ್ಟಬಿಲಿಟಿ ವೈಶಿಷ್ಟ್ಯ

2. ಪೋರ್ಟಬಿಲಿಟಿ ವೈಶಿಷ್ಟ್ಯ

ಹಣಕಾಸಿನ ವರ್ಷದಲ್ಲಿ ಯಾವುದೇ ಸಮಯದಲ್ಲಿ ಚಂದಾದಾರರು ಕೊಡುಗೆ ನೀಡಬಹುದು. ಅವನು ಅಥವಾ ಅವಳು ಮೊತ್ತ ಹೊಂದಿಸಲು ಮತ್ತು ಹೆಚ್ಚು ಉಳಿತಾಯ ಮಾಡಲು ಬಯಸಿದಲ್ಲಿ ಮೊತ್ತವನ್ನು ಸಹ ಬದಲಾಯಿಸಬಹುದು. ಇದು ಪೋರ್ಟಬಿಲಿಟಿ ವೈಶಿಷ್ಟ್ಯವನ್ನು ಹೊಂದಿದೆ. ಚಂದಾದಾರರು ತಮ್ಮ ನಗರ ಅಥವಾ ಉದ್ಯೋಗಾವಕಾಶವನ್ನು ಬದಲಿಸಿದರೂ ಎಲ್ಲಿಂದಲಾದರೂ ತಮ್ಮ ಖಾತೆಯನ್ನು ನಿರ್ವಹಿಸಬಹುದು.

3. ಹೂಡಿಕೆ, ಭದ್ರತೆ, ಅಪಾಯ
 

3. ಹೂಡಿಕೆ, ಭದ್ರತೆ, ಅಪಾಯ

ನಿವೃತ್ತಿ ವಯಸ್ಸಿನ ನಂತರ ಮಾಸಿಕ ಆದಾಯವನ್ನು ಪಡೆದುಕೊಳ್ಳಲು ಈ ಪಿಂಚಣಿ ಉತ್ತಮ ಉತ್ಪನ್ನವಾಗಿದೆ. ಈ ಯೋಜನೆಯು ಈಕ್ವಿಟಿ ಮಾರುಕಟ್ಟೆಯಲ್ಲಿ ನಿಮ್ಮ ಕೊಡುಗೆಗಳ ಒಂದು ಭಾಗವನ್ನು ಹೂಡಿಕೆ ಮಾಡುತ್ತದೆ.
ಎನ್ಪಿಎಸ್ - ಸ್ವಾವಲಂಬನ್ ನಲ್ಲಿರುವ ಇತರ ಇಕ್ವಿಟಿ ಆಧಾರಿತ ಹೂಡಿಕೆಯ ಯೋಜನೆಗಳಂತೆ ಹಣವನ್ನು ಕಳೆದುಕೊಳ್ಳುವ ಅಪಾಯ ಗಣನೀಯವಾಗಿ ಕಡಿಮೆ ಮಾಡಲಾಗುವುದು. ಹಣದ ಶೇ. 55 ಸರ್ಕಾರಿ ಭದ್ರತೆಗಳಲ್ಲಿ ಹೂಡಿಕೆ ಮಾಡಲಾಗುತ್ತದೆ ಮತ್ತು ಕಾರ್ಪೊರೇಟ್ ಶೇ. 40 ಬಾಂಡ್ ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ.

4. ಸರ್ಕಾರದಿಂದ 1,000 ಕೊಡುಗೆ

4. ಸರ್ಕಾರದಿಂದ 1,000 ಕೊಡುಗೆ

ಎನ್ಎಸ್ಡಿಎಲ್ ವೆಬ್ಸೈಟ್ ಪ್ರಕಾರ, ಈ ಪಿಂಚಣಿ ಯೋಜನೆಯು ನಿವೃತ್ತಿ ಪ್ರಯೋಜನಗಳನ್ನು ಅಸಂಘಟಿತ ವಲಯದವರಿಗೆ ಒದಗಿಸುತ್ತದೆ. ಈ ಯೋಜನೆಯಡಿಯಲ್ಲಿ, ಭಾರತ ಸರಕಾರವು ಪ್ರತಿ ಎನ್ಪಿಎಸ್-ಸ್ವಾವಲಂಬನ್ ಖಾತೆಗೆ ವಾರ್ಷಿಕ ರೂ. 1,000 ಕೊಡುಗೆ ನೀಡುತ್ತದೆ.

5. ಜೀವಮಾನ ವರ್ಷಾಶನ

5. ಜೀವಮಾನ ವರ್ಷಾಶನ

ಯೋಜನೆ ನಿರ್ಗಮನದ ಸಮಯದಲ್ಲಿ, ಪಿಎಫ್ಆರ್ಡಿಎ ಜೊತೆ ಎಂಪಿನಲ್ ಮಾಡಲಾದ ಐಆರ್ಡಿಎ- ರೆಗ್ಯುಲೇಟೆಡ್ ಲೈಫ್ ಇನ್ಶುರೆನ್ಸ್ ಕಂಪೆನಿಯಿಂದ ಜೀವಮಾನ ವರ್ಷಾಶನವನ್ನು ಖರೀದಿಸಲು ಚಂದಾದಾರರು ಕನಿಷ್ಟ ಶೇ. ೪೦ ರಷ್ಟು ಹೂಡಿಕೆ ಮಾಡುವ ಅಗತ್ಯವಿದೆ. ಶೇ. 40 ಕ್ಕಿಂತ ಹೆಚ್ಚಿನ ಮೊತ್ತಕ್ಕೆ ವರ್ಷಾಶನವನ್ನು ಖರೀದಿಸುವ ಆಯ್ಕೆ ಇರುತ್ತದೆ. 60 ವರ್ಷ ವಯಸ್ಸು ತಲುಪಿದ ನಂತರ ಉಳಿದ ಪಿಂಚಣಿ ಸಂಪತ್ತನ್ನು ಹಿಂಪಡೆಯಬಹುದು.

6. 60 ವರ್ಷಕ್ಕಿಂತ ಮುಂಚಿತ ಮೊತ್ತ ಹಿಂಪಡೆಯಲು

6. 60 ವರ್ಷಕ್ಕಿಂತ ಮುಂಚಿತ ಮೊತ್ತ ಹಿಂಪಡೆಯಲು

ಒಬ್ಬ ವ್ಯಕ್ತಿ 60 ವರ್ಷಕ್ಕಿಂತ ಮುಂಚಿತವಾಗಿ ಯಾವುದೇ ಸಮಯದಲ್ಲಿ ಮೊತ್ತ ಹಿಂತೆಗೆದುಕೊಳ್ಳಲು ಬಯಸಿದರೆ, ಯಾವುದೇ ಐಆರ್ಡಿಎ - ರೆಗ್ಯುಲೇಟೆಡ್ ಲೈಫ್ ಇನ್ಶುರೆನ್ಸ್ ಕಂಪೆನಿಯಿಂದ ಜೀವಮಾನ ವರ್ಷಾಶನವನ್ನು ಖರೀದಿಸಲು ಕನಿಷ್ಠ ಶೇ. 80 ರಷ್ಟು ಪಿಂಚಣಿ ಮೊತ್ತ ಹೂಡಿಕೆ ಮಾಡಬೇಕಾಗುತ್ತದೆ. ಉಳಿದ ಶೇ. 20ರಷ್ಟು ಪಿಂಚಣಿ ಭಾಗವನ್ನು ಭಾರೀ ಮೊತ್ತದೊಂದಿಗೆ ಹಿಂಪಡೆಯುವಂತೆ ಮಾಡಬಹುದು.

7. ನಾಮಿನಿ ಆಯ್ಕೆ

7. ನಾಮಿನಿ ಆಯ್ಕೆ

ಸಾವಿನ ಸಂದರ್ಭದಲ್ಲಿ, ಎನ್ಪಿಎಸ್ ಪಿಂಚಣಿ ಮೊತ್ತ ಶೇ. 100 ರಷ್ಟು ಸ್ವೀಕರಿಸಲು ನಾಮಿನಿಗೆ ಆಯ್ಕೆ ಲಭ್ಯವಿರುತ್ತದೆ. ಒಂದು ವೇಳೆ, ನಾಮಿನಿ NPS ನೊಂದಿಗೆ ಮುಂದುವರಿಯಲು ಬಯಸಿದರೆ, ಅಂತವರು ಪ್ರತ್ಯೇಕವಾಗಿ NPS ಗೆ ಚಂದಾದಾರರಾಗಬೇಕು.

Read more about: nps pension savings money
English summary

National Pension System- Swavalamban: Pension, benefits and other key details

National Pension System-Swavalamban is also known as National Pension System-Lite (NPS-Lite).
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X