For Quick Alerts
ALLOW NOTIFICATIONS  
For Daily Alerts

ಅಕ್ಷಯ ತೃತೀಯದಂದು ಈ 'ಆಸ್ತಿ'ಯನ್ನೂ ಖರೀದಿಸಬಹುದು, ಮಾರಾಟವೂ ಸಲೀಸು

By ಕೆ.ಜಿ.ಕೃಪಾಲ್
|

ಇದೇ ಮೇ 7ನೇ ತಾರೀಕು, ಮಂಗಳವಾರ ಅಕ್ಷಯ ತೃತೀಯ. ಅಕ್ಷಯ ತೃತೀಯ ದಿನದಂದು ಚಿನ್ನ , ಬೆಳ್ಳಿ ಸ್ಥಿರಾಸ್ತಿ ಖರೀದಿಸುವುದು ಹಿಂದಿನಿಂದ ಬಂದ ವಾಡಿಕೆ. ಆದರೆ ಈಗ ಬದಲಾದ ಪರಿಸ್ಥಿತಿಯಲ್ಲಿ, ವಿಶೇಷವಾಗಿ ಚಿನ್ನ ಬೆಳ್ಳಿಗಳು ಹೆಚ್ಚು ಅಸ್ಥಿರತೆಯಿಂದ ಕೂಡಿದ್ದು, ಹೂಡಿಕೆಯ ಚಟುವಟಿಕೆಯಾಗಿರದೆ ಅದು ಸಹ ಒಂದು ರೀತಿಯ ವ್ಯಾವಹಾರಿಕ ಸರಕಾಗಿದೆ.

ಬೆಳ್ಳಿಯ ದರವು ಒಂದು ಕಿಲೋಗೆ 2008ರ ಡಿಸೆಂಬರ್ ನಲ್ಲಿ ರೂ.18,500ರಲ್ಲಿತ್ತು. ನಂತರ ಏರಿಕೆಯ ಪಥದಲ್ಲಿ ಚಲಿಸಿ ಏಪ್ರಿಲ್ 2011ರಲ್ಲಿ ರೂ.75,000ದ ಗಡಿ ದಾಟಿದೆ. ಸೋಜಿಗವೆಂದರೆ, ಆ ಸಂದರ್ಭದಲ್ಲಿ ಈ ಬೆಲೆಯಲ್ಲೂ ಸರಕು ಸಿಗುತ್ತಿಲ್ಲವೆಂದು ಪತ್ರಿಕೆಯಲ್ಲಿ ಬಂದ ಕಾರಣ ಬೇಡಿಕೆ ಹೆಚ್ಚಾಗಿದ್ದು ಕಾರಣವಾಗಿತ್ತು.

ಆರ್ಥಿಕ ವರ್ಷದ ಮೊದಲ ದಿನ ಷೇರು ಪೇಟೆ ಎಂಬ ಮಾಯೆ ಬಗ್ಗೆ

 

ಅಲ್ಲದೆ ಬೆಳ್ಳಿಯ ದರವು ಒಂದು ಲಕ್ಷಕ್ಕೆ ತಲುಪುವುದೆಂಬ ವಿಶ್ಲೇಷಣಾ ಸುದ್ದಿಯು ಸಹ ಹೆಚ್ಚು ಕೃತಕವಾದ ಬೇಡಿಕೆಯನ್ನುಂಟು ಮಾಡಿತು. ಇದೆಲ್ಲಾ ನಡೆದಿದ್ದು ಅಕ್ಷಯ ತೃತೀಯ ದಿನಕ್ಕಿಂತ ಕೆಲವು ದಿನ ಮೊದಲು. ಅಕ್ಷಯ ತೃತೀಯ ದಿನದಂದು ಬೆಳ್ಳಿಯ ಬೆಲೆ ಕುಸಿತಕ್ಕೊಳಗಾಗಿತ್ತು. 6ನೇ ಮೇ 2011ರಂದು, ಅಕ್ಷಯ ತೃತೀಯ ದಿನವಾಗಿದ್ದು ಅಂದು ಬೆಳ್ಳಿಯ ಬೆಲೆ ರೂ.53 ಸಾವಿರಕ್ಕೆ ಇಳಿದಿತ್ತು.

ಆಕರ್ಷಕ ಲಾಭಾಂಶ ನೀಡುವ ಲಾಭಾಂಶ

ಆಕರ್ಷಕ ಲಾಭಾಂಶ ನೀಡುವ ಲಾಭಾಂಶ

ಆ ನಂತರದ ವರ್ಷಗಳಲ್ಲಿ ಸುಮಾರು ರೂ.30 ಸಾವಿರಕ್ಕೆ ಕುಸಿದು, ಸದ್ಯ ರೂ.40 ಸಾವಿರದ ಸಮೀಪವಿದೆ. ಆದರೆ 2011ರ ಏಪ್ರಿಲ್ ನಲ್ಲಿ ಅಲ್ಪಕಾಲೀನದಲ್ಲಿ ಹೆಚ್ಚಿನ ಲಾಭ ಗಳಿಸಬಹುದೆಂದು ಬೆಳ್ಳಿ ಗರಿಷ್ಠದಲ್ಲಿ ಖರೀದಿಸಿದವರಿಗೆ ಹೂಡಿಕೆಯ ಮೌಲ್ಯವು ಕರಗಿದ್ದನ್ನು ಮೂಕಪ್ರೇಕ್ಷಕರಾಗಿ ನೋಡುವಂತಾಯಿತು. ಹೀಗೆ ವ್ಯಾವಹಾರಿಕ ದೃಷ್ಟಿಯಿಂದ ನೋಡುವ ಈಗಿನ ದಿನಗಳಲ್ಲಿ ಅಕ್ಷಯ ತೃತೀಯ ದಿನದಂದು ಕೈಲಿರುವ ಸಂಪತ್ತು / ಸ್ವತ್ತು ಅಕ್ಷಯವಾಗಲಿ ಎಂಬ ಉದ್ದೇಶದಿಂದ ಖರೀದಿ ಮಾಡುವುದಾಗಿರುವುದರಿಂದ ಗ್ರಾಹಕರು ತಮ್ಮ ಚಿಂತನೆಯನ್ನು ಬದಲಿಸಿ, ನೇರವಾಗಿ ಆಕರ್ಷಕವಾದ ಲಾಭಾಂಶ ವಿತರಿಸುವ/ಘೋಷಿಸಿರುವ ಉತ್ತಮವಾದ ಕಂಪೆನಿಗಳ ಷೇರುಗಳಲ್ಲಿ ಹೂಡಿಕೆ ಮಾಡಿದಲ್ಲಿ ಉದ್ದೇಶ ನೆರವೇರುತ್ತದೆ.

ಲಾಭಾಂಶ ಲಭ್ಯವಾಗುವ ಕಂಪೆನಿಗಳಿವು
 

ಲಾಭಾಂಶ ಲಭ್ಯವಾಗುವ ಕಂಪೆನಿಗಳಿವು

ಅಲ್ಲದೆ ಸ್ವತ್ತು ಲಾಭಾಂಶ ನೀಡುವುದರೊಂದಿಗೆ ಬೆಲೆ ಏರಿಕೆಯನ್ನು ಕಾಣುವ ಅವಕಾಶಗಳನ್ನು ಒದಗಿಸುತ್ತವೆ. ಓದುಗರು ಗಮನಿಸಬೇಕಾದ ಅಂಶವೆಂದರೆ, ಇಲ್ಲಿ ಯಾವುದೇ ಗ್ಯಾರಂಟಿ ಇರದಿದ್ದರೂ ಕಂಪೆನಿಗಳ ಇತಿಹಾಸ, ಸಾಮರ್ಥ್ಯ, ಘನತೆ, ಗೌರವಗಳನ್ನು ಗಮನದಲ್ಲಿರಿಸಿ ಮೌಲ್ಯಗಳು ಕುಸಿತದಲ್ಲಿದ್ದಾಗ ಖರೀದಿಸಬೇಕು. ಆಕರ್ಷಕ ಲಾಭಾಂಶ ಘೋಷಿಸಿದ್ದು, ಅಕ್ಷಯ ತೃತೀಯ ದಿನದಂದು ಖರೀದಿಸಿದರೂ ಲಾಭಾಂಶ ಲಭ್ಯವಾಗುವಂತಹ ಕಂಪೆನಿಗಳೆಂದರೆ:

1. ಇನ್ಫೋಸಿಸ್ : ಪ್ರತಿ ಷೇರಿಗೆ ರೂ.10.50

2. ಸಯಂಟ್ : ಪ್ರತಿ ಷೇರಿಗೆ ರೂ.9

3. ಟಿಸಿಎಸ್ : ಪ್ರತಿ ಷೇರಿಗೆ ರೂ.18

4. ಮರ್ಕ್ : ಪ್ರತಿ ಷೇರಿಗೆ ರೂ.440

5. ಜಿ ಎಚ್ ಸಿ ಎಲ್: ಪ್ರತಿ ಷೇರಿಗೆ ರೂ.5

6. ವಿಶಾಖ ಇಂಡಸ್ಟ್ರೀಸ್: ಪ್ರತಿ ಷೇರಿಗೆ ರೂ.7

7. ಟಾಟಾ ಕಾಫಿ : ಪ್ರತಿ ಷೇರಿಗೆ ರೂ.1.50

8. ಕ್ಯಾಸ್ಟ್ರಾಲ್ : ಪ್ರತಿ ಷೇರಿಗೆ ರೂ.2.75

ಒಂದು ಗಂಟೆಯಲ್ಲಿ ನೂರು ರುಪಾಯಿ ಏರುಪೇರು, ಷೇರು ಪೇಟೆ ಮಾಯೆ ಗುರೂ

ಈ ಷೇರುಗಳು ವ್ಯಾಲ್ಯೂ ಪಿಕ್ ಆಗಲಿವೆ

ಈ ಷೇರುಗಳು ವ್ಯಾಲ್ಯೂ ಪಿಕ್ ಆಗಲಿವೆ

ಕಂಪೆನಿಗಳು ವಿತರಿಸುವ ಈ ಲಾಭಾಂಶಗಳು ಹೂಡಿಕೆದಾರರಿಗೆ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತವೆ. ಪ್ರತಿ ಷೇರಿಗೆ ಒಂದು ಷೇರಿನಂತೆ ಬೋನಸ್ ಷೇರು ಪ್ರಕಟಿಸಿರುವ ಬಯೋಕಾನ್ ಷೇರಿನ ಬೆಲೆ ಕುಸಿತ ಕಂಡಿರುವುದರಿಂದ ಅದು ಉತ್ತಮ ವ್ಯಾಲ್ಯೂ ಪಿಕ್ ಆಗಿದೆ. ಇನ್ನು ಲಾಭಂಶವಿಲ್ಲದ, ಹೆಚ್ಚು ಕುಸಿತದಿಂದ ವ್ಯಾಲ್ಯೂ ಪಿಕ್ ಹಂತದಲ್ಲಿರುವ ಕಂಪನಿಗಳು ಸಹ ಉತ್ತಮ ಲಾಭ ತಂದುಕೊಂಡಬಹುದು. ಬ್ರಿಟಾನಿಯ, ಡಾಬರ್, ಯೆಸ್ ಬ್ಯಾಂಕ್, ಮದರ್ಸನ್ ಸುಮಿ, ಚೆನ್ನೈ ಪೆಟ್ರೋ, ಬಿಎಚ್ ಇಎಲ್, ಆರ್ ಇಸಿ, ಬಿಇಎಲ್, ಅಶೋಕ್ ಲೇಲ್ಯಾಂಡ್, ತಿರುಮಲೈ ಕೆಮಿಕಲ್ಸ್, ಐಒಸಿ ಮುಂತಾದ ಅಗ್ರಮಾನ್ಯ ಕಂಪೆನಿಗಳು ಉತ್ತಮ ಭವಿಷ್ಯ ಹೊಂದಿದ್ದು, ಇತ್ತೀಚಿನ ದಿನಗಳಲ್ಲಿ ವಿಭಿನ್ನ ಕಾರಣದಿಂದಾಗಿ ಹೆಚ್ಚಿನ ಕುಸಿತ ಕಂಡಿವೆ. ಇವು ವ್ಯಾಲ್ಯೂ ಪಿಕ್ ಅವಕಾಶ ಒದಗಿಸಿವೆ.

ಸುಲಭ ನಗದೀಕರಣ ಮಾಡಿಕೊಳ್ಳಬಹುದಾದ ಸ್ವತ್ತು ಷೇರುಗಳು

ಸುಲಭ ನಗದೀಕರಣ ಮಾಡಿಕೊಳ್ಳಬಹುದಾದ ಸ್ವತ್ತು ಷೇರುಗಳು

ನೆನಪಿನಲ್ಲಿಡಬೇಕಾದ ಅಂಶವೆಂದರೆ: ಪೇಟೆಯು ಕೇವಲ ಅಂತರ್ಗತವಾಗಿ ಅಡಕವಾಗಿರುವ ಸಾಧನೆಗಳನ್ನು ಮಾತ್ರ ಪರಿಗಣಿಸಿ, ಏರಿಳಿತಗಳನ್ನು ಪ್ರದರ್ಶಿಸುವುದಿಲ್ಲ. ಹೆಚ್ಚಿನ ಏರಿಳಿತಗಳು ಬಾಹ್ಯ ಕಾರಣಗಳಿಂದ ಪ್ರೇರಿತವಾಗುವುದು ಎಂಬುದನ್ನು ಮನದಲ್ಲಿಟ್ಟುಕೊಂಡು, ಒಂದು ವೇಳೆ ಪೇಟೆಯಲ್ಲಿ ನಾವು ಕೊಂಡಂತಹ ಷೇರು ಹಾನಿಗೊಳಗಾದರೆ ನಮ್ಮ ಬಂಡವಾಳ ಅಪಾಯಕ್ಕೊಳಗಾಗುತ್ತದೆ ಎಂಬುದನ್ನು ಅರಿತು ಷೇರುಗಳಲ್ಲಿ ಹೂಡಿಕೆ ನಿರ್ಧರಿಸಬೇಕು. ಹೂಡಿಕೆಯು ಅಲ್ಪಕಾಲೀನ ಅಲ್ಲದೆ ದೀರ್ಘಕಾಲೀನವಾಗಿಯೂ ಮುಂದುವರೆಸಬಹುದು. ಬೇಕೆನಿಸಿದಾಗ ಪೇಟೆಯ ದರದಲ್ಲಿ ನಿರ್ಗಮಿಸಿ ನಗದೀಕರಣ ಮಾಡಿಕೊಳ್ಳುವ ಸುಲಭವಾದ ಸ್ವತ್ತು- ಷೇರುಗಳು.

English summary

Akshaya Tritiya: Value pick of equity share

Akshaya Tritiya on May 7th, 2019. People believe that, gold- silver and fixed asset purchase will be auspicious on that day. Even share purchase also good on this day how? Here is the suggestion by financial columnist K.G. Krupal.
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more