For Quick Alerts
ALLOW NOTIFICATIONS  
For Daily Alerts

ಷೇರು ಪೇಟೆಯಲ್ಲಿ ಹೀಗಂತ ಇರುವುದು ಶಾರ್ಟ್ ಸೆಲ್ಲಿಂಗ್ ಅಲ್ಲ, ಹೂಡಿಕೆ ಹಣದ ಶಾರ್ಟ್ ಕಿಲ್ಲಿಂಗ್

By ಕೆ.ಜಿ.ಕೃಪಾಲ್
|

ಪಾಠ ನಂಬರ್ ಒಂದು ಎಂದು ಶುರು ಮಾಡುವ ಕಾಲ ಇದಲ್ಲ. ಒಳ್ಳೆ ಕಂಪೆನಿಗಳು, ಅದರ ಡಿವಿಡೆಂಡ್, ಸ್ಥಿರತೆ ಇತ್ಯಾದಿ ಮೂಲ ಅಂಶಗಳನ್ನು ಗಮನಿಸಿ ಷೇರು ಖರೀದಿ ಮಾಡಬೇಕು ಎಂದು ಗಿಳಿ ಪಾಠ ಹೇಳುವ ದಿನಗಳು ದೂರವಾಗಿವೆ. ಕಂಪೆನಿಗಳ ಸಾಧನೆಗೂ ಇಂದಿನ ದಿನಮಾನದಲ್ಲಿ ಷೇರುಪೇಟೆ ಪ್ರದರ್ಶಿಸುತ್ತಿರುವ ಏರಿಳಿತಗಳಿಗೂ ಸಂಬಂಧವಿಲ್ಲ.

ಕೆಲವೊಮ್ಮೆ ಷೇರುಪೇಟೆಯು ದೀರ್ಘಕಾಲೀನದಲ್ಲಿ ಬರಬಹುದಾದ ಲಾಭವನ್ನು ಅಲ್ಪ ಸಮಯದಲ್ಲೇ ನೀಡುತ್ತದೆ. ಅದು ಹೆಚ್ಚಿನ ಬಾರಿ ಭಾರಿ ಗಾತ್ರದ ಬಂಡವಾಳವಿರುವ ಕಂಪೆನಿಗಳಲ್ಲಿ ಹೆಚ್ಚಾಗಿರುತ್ತದೆ. ಇದಕ್ಕೆ ಉದಾಹರಣೆ ಅಂದರೆ ಇಂದಿನ (ಮೇ 14, 2019, ಮಂಗಳವಾರ) ಪೇಟೆಯಾಗಿದೆ.

ಇಂದಿನ ಪೇಟೆಯಲ್ಲಿ ಬೃಹತ್ ಕಂಪೆನಿಗಳಾದ ಲಾರ್ಸನ್ ಅಂಡ್ ಟೊಬ್ರೋ, ಟಾಟಾ ಸ್ಟೀಲ್ , ಬಯೋಕಾನ್, ಐಟಿಸಿ, ಭಾರತಿ ಏರ್ ಟೆಲ್, ಬ್ಯಾಂಕ್ ಆಫ್ ಬರೋಡ, ಇಂಡಸ್ ಇಂಡ್ ಬ್ಯಾಂಕ್, ಕೆನರಾ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್, ಜಿಂದಾಲ್ ಸ್ಟಿಲ್ ಅಂಡ್ ಪವರ್, ಜೆ ಎಸ್ ಡಬ್ಲ್ಯೂ ಸ್ಟಿಲ್, ಡಾಬರ್ , ಗೇಲ್ ಇಂಡಿಯಾ ನಂತಹ ಕಂಪನಿಗಳು ಹೆಚ್ಚಿನ ಏರಿಳಿತಗಳನ್ನು ಒಂದೇ ದಿನ ಪ್ರದರ್ಶಿಸಿವೆ.

 

ಇದಕ್ಕೆ ಮೂಲ ಕಾರಣ ಕಳೆದ ಒಂಬತ್ತು ದಿನಗಳಿಂದ ಷೇರುಪೇಟೆಯ ಸೂಚ್ಯಂಕಗಳು ಸತತವಾದ ಇಳಿದಿದ್ದವು. ಹಾಗಾಗಿ ಬೃಹತ್ ಕಂಪೆನಿಗಳು 'ವ್ಯಾಲ್ಯೂ ಪಿಕ್' ಗೆ ಅವಕಾಶ ನೀಡಿವೆ.

ಶಾರ್ಟ್ ಸೆಲ್ಲಿಂಗ್ ಅಂದರೆ ಏನು?

ಶಾರ್ಟ್ ಸೆಲ್ಲಿಂಗ್ ಅಂದರೆ ಏನು?

ಷೇರು ಪೇಟೆಯಲ್ಲಿ 'ಶಾರ್ಟ್ ಸೆಲ್ಲಿಂಗ್' ಎಂಬ ಚಟುವಟಿಕೆಯಿದೆ. ಹಾಗೆಂದರೆ ನಿಮ್ಮ ಬಳಿ ಷೇರುಗಳಿಲ್ಲದಿದ್ದರೂ, ಷೇರಿನ ದರವು ಕುಸಿಯಬಹುದು ಎಂದು ಮುಂಚೆಯೇ ಅಂದಾಜು ಮಾಡಿ, ಮಾರಾಟ ಮಾಡುವುದು. ಆ ನಂತರ ಅದೇ ಷೇರಿನ ದರವು ಕುಸಿದಾಗ ಮಾರಿದ್ದ ಪ್ರಮಾಣದಲ್ಲಿಯೇ (ಅಷ್ಟೇ ಸಂಖ್ಯೆಯ ಷೇರು) ಖರೀದಿಸಿ, ಲೆಕ್ಕ ಚುಕ್ತಾ ಮಾಡುವುದಾಗಿದೆ. ಒಂದು ವೇಳೆ ಹೀಗೆ 'ಶಾರ್ಟ್ ಸೆಲ್ಲಿಂಗ್' ನಲ್ಲಿ ಮಾರಾಟ ಮಾಡಿದ ಷೇರುಗಳನ್ನು ಕ್ಲಿಯರಿಂಗ್ ಹೌಸ್ ಗೆ, ವಿಲೇವಾರಿ ಮಾಡುವ ಸಮಯದೊಳಗೆ ತಲುಪದಿದ್ದಲ್ಲಿ ಅಷ್ಟು ಷೇರುಗಳನ್ನು 'ಆಕ್ಷನ್' ಪೇಟೆಯಲ್ಲಿ ಮಾರಾಟ ಮಾಡಿದವರ ಪರವಾಗಿ ಖರೀದಿಸಲಾಗುವುದು. ಈ ರೀತಿ ಖರೀದಿಸಿದ ಷೇರುಗಳನ್ನು ಮೂಲ ಖರೀದಿದಾರರಿಗೆ ನೀಡಿ, ಆಕ್ಷನ್ ಪೇಟೆಯಲ್ಲಿ ಖರೀದಿಸಿದಾಗ ತಗಲುವ ವೆಚ್ಚವನ್ನು ಶಾರ್ಟ್ ಸೆಲ್ಲಿಂಗ್ ಮಾಡುವವರಿಂದ ಸಂಗ್ರಹಿಸಲಾಗುವುದು.

ಏರಿಕೆ ಹಾದಿಯಲ್ಲಿ ಎಲ್ಲಿ ನಿಲ್ಲುವುದೆಂಬ ಖಾತ್ರಿ ಇಲ್ಲ

ಏರಿಕೆ ಹಾದಿಯಲ್ಲಿ ಎಲ್ಲಿ ನಿಲ್ಲುವುದೆಂಬ ಖಾತ್ರಿ ಇಲ್ಲ

ಇದು ಈಗ ವಿವರಿಸಿದಷ್ಟು ಸಲೀಸಲ್ಲ. ಏಕೆಂದರೆ, ಈ 'ಶಾರ್ಟ್ ಸೆಲ್ಲಿಂಗ್' ಹೆಚ್ಚು ಅಪಾಯಕಾರಿ ಪ್ರಕ್ರಿಯೆ. ಏಕೆಂದರೆ, ಒಂದು ಕಂಪೆನಿಯ ಷೇರಿನ ಬೆಲೆಯು ಏರಿಕೆ ಕಾಣಲು ಹಲವಾರು ಕಾರಣ ಇರುತ್ತದೆ. ಕೆಲವೊಮ್ಮೆ ಏರಿಕೆ ಹಾದಿ ಹಿಡಿದಲ್ಲಿ ಎಲ್ಲಿ ನಿಲ್ಲುವುದೆಂಬುದು ಕಲ್ಪನಾತೀತ. ಒಂದು ಕಂಪೆನಿಯ ಷೇರನ್ನು ರೂ.100ರಂತೆ ಮಾರಾಟ ಮಾಡಿದ್ದರೆ, ಏರಿಕೆಯ ದಿಶೆಯಲ್ಲಿರುವಾಗ ದಿನದ ಗರಿಷ್ಠ 'ಸರ್ಕ್ಯೂಟ್' ಲಿಮಿಟ್ ಅನ್ನು ತಲುಪಿದಾಗ ಆ 'ಶಾರ್ಟ್ ಸೆಲ್ಲಿಂಗ್' ಮಾಡಿರುವ ಷೇರನ್ನು ಖರೀದಿ ಮಾಡುವುದಕ್ಕಾಗದೆ ಇರುವ ಕಾರಣ ಅದನ್ನು ಆಕ್ಷನ್ ಪೇಟೆಯಲ್ಲಿ ಹರಾಜಿನ ಮೂಲಕ ತುಂಬಿಸಿಕೊಳ್ಳಲಾಗುವುದು.

ಉದಾಹರಣೆ ಬೇಕೆ? ಇಲ್ಲಿದೆ ನೋಡಿ
 

ಉದಾಹರಣೆ ಬೇಕೆ? ಇಲ್ಲಿದೆ ನೋಡಿ

ಇಲ್ಲಿಯೂ ಷೇರು ಪೇಟೆಯು ತೇಜಿಯಲ್ಲಿದ್ದರೆ ಷೇರುಗಳು ಅತಿ ಹೆಚ್ಚಿನ ದರದಲ್ಲಿ ಚುಕ್ತಾ ಆಗಬಹುದು. ಇದು ಮೊದಲು 'ಶಾರ್ಟ್ ಸೆಲ್ಲಿಂಗ್' ಮಾಡಿರುವವರಿಗೆ ಹೆಚ್ಚು ನಷ್ಟವನ್ನು ಉಂಟುಮಾಡುತ್ತದೆ. ಒಂದೊಮ್ಮೆ ಷೇರುಪೇಟೆಯು ಅತಿ ಹೆಚ್ಚು ತೇಜಿಯಲ್ಲಿದ್ದಾಗ 'ಶಾರ್ಟ್ ಸೆಲ್ಲಿಂಗ್' ಮಾಡಿದವರಿಗೆ ಆಗಬಹುದಾದ ನಷ್ಟ ಊಹೆಗೂ ನಿಲುಕುವುದಿಲ್ಲ. ಈಗಿನ ದಿನಗಳಲ್ಲಿ ಪೇಟೆಯಲ್ಲಿ ಹೆಚ್ಚು 'ಶಾರ್ಟ್ ಸೆಲ್ಲಿಂಗ್' ಚಟುವಟಿಕೆ ನಡೆದಿದೆ ಎಂಬುದಕ್ಕೆ ಮಂಗಳವಾರ ಎನ್ ಎಸ್ ಇಯಲ್ಲಿ ಸುಮಾರು 20 ಸಾವಿರ ಅಶೋಕ್ ಲೇಲ್ಯಾಂಡ್, 64 ಸಾವಿರ ರಿಲಯನ್ಸ್ ಇನ್ಫ್ರಾ, 22 ಸಾವಿರ ರಿಲಯನ್ಸ್ ಇಂಡಸ್ಟ್ರೀಸ್ ಗಳು ಆಕ್ಷನ್ ಪೇಟೆಯಲ್ಲಿ ಖರೀದಿಸಲಾಗಿದೆ ಎಂಬುದೇ ಸಾಕ್ಷಿ.

ಚೇತರಿಕೆ ಪ್ರದರ್ಶಿಸಲು ಪೀಠಿಕೆಯೇ?

ಚೇತರಿಕೆ ಪ್ರದರ್ಶಿಸಲು ಪೀಠಿಕೆಯೇ?

ಇದು ಪೇಟೆಯಲ್ಲಿ ಕುಸಿತದಿಂದ ಪ್ರದರ್ಶಿತವಾಗುತ್ತಿರುವ ದರಗಳು ಕೃತಕವಾದವು ಎಂದು ತೋರಿಸುತ್ತದೆ. ಮಾರಾಟ ಮಾಡಿ, ಆ ನಂತರ ಅದಕ್ಕೆ ತಕ್ಕಂತೆ ಷೇರುಗಳ ವಿಲೇವಾರಿ ಮಾಡಿದ್ದಲ್ಲಿ ಸಹಜವಾದ ಚಟುವಟಿಕೆ, ಸರಬರಾಜು ಹೆಚ್ಚಾಗಿದ್ದರಿಂದ ಬೆಲೆ ಕುಸಿತವಾಗಿದೆ ಎನ್ನಬಹುದು. ಮಾರಾಟ ಮಾಡಿದ ಷೇರುಗಳನ್ನು ವಿಲೇವಾರಿ ಮಾಡಲು ಸಾಧ್ಯವಾಗದೆ, ಕೇವಲ ಶೂನ್ಯ ಮಾರಾಟದಿಂದ ಬೆಲೆ ಕುಸಿತಕ್ಕೊಳಗಾಗಿದ್ದಲ್ಲಿ, ಅಂತಹ ಷೇರುಗಳ ಬೆಲೆ ತೀವ್ರತರವಾದ ಚೇತರಿಕೆಯಿಂದ ಪುಟಿದೇಳುವ ಸಾಧ್ಯತೆ ಇದೆ. ಇಂದು ಸಂವೇದಿ ಸೂಚ್ಯಂಕವು ಸುಮಾರು 130 ಪಾಯಿಂಟುಗಳ ಕುಸಿತ ಕಂಡು, ಆ ನಂತರ 480 ಪಾಯಿಂಟುಗಳ ಜಿಗಿತದೊಂದಿಗೆ, ಅಂತ್ಯದಲ್ಲಿ 227 ಪಾಯಿಂಟುಗಳ ಏರಿಕೆ ಪಡೆದಿದೆ. ಇದು ಮುಂದಿನ ದಿನಗಳಲ್ಲಿ ಚೇತರಿಕೆ ಪ್ರದರ್ಶಿಸಲು ಪೀಠಿಕೆಯೇ ಎಂಬುದನ್ನು ಕಾದು ನೋಡೋಣ.

English summary

How short selling in share market sinks investors capitals?

How short selling in share market sinks investors capitals? very informative and timely article by financial columnist K.G.Krupal.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more