For Quick Alerts
ALLOW NOTIFICATIONS  
For Daily Alerts

ವಿಲ್ ಪತ್ರ ಬರೆಯುವಾಗ ಈ ಅಂಶಗಳು ನೆನಪಿರಲಿ..

|

ವಿಲ್ ಪತ್ರದ ಬಗ್ಗೆ ನಿವು ಕೇಳಿರಬಹುದು. ಆದರೆ ವಿಲ್ ಪತ್ರ ಬರೆಯುವುದು ಅಷ್ಟು ಸುಲಭದ ಕೆಲಸವಲ್ಲ. ನಮ್ಮಲ್ಲಿ ವಿಲ್ ಬಗ್ಗೆ ಇನ್ನೂ ಅನೇಕ ಜನರಿಗೆ ತಿಳಿದಿಲ್ಲ. ವಿಲ್ ಪತ್ರದಲ್ಲಿ ಏನು ಸೇರಿಸಬೇಕು ಮತ್ತು ಏನು ಸೇರಿಸಬಾರದು ಎಂದು ನಿರ್ಧರಿಸುವುದು ಕಷ್ಟಸಾಧ್ಯ.

ವಿಲ್ ಮಾಡಿಸುವಾಗ ಅದರ ನೋಂದಣಿ ಮಾಡಿಸುವುದು ಬಹಳ ಮುಖ್ಯ ಸಂಗತಿ. ನಿಮ್ಮ ಪ್ರೀತಿ ಪಾತ್ರರಿಗೆ ನಿಮ್ಮ ಆಸ್ತಿ ಯಾವುದೆ ಗೊಂದಲವಿಲ್ಲದೆ ಸೇರುವಂತವಾಗಲು ವಿಲ್ ಅತ್ಯಗತ್ಯ. ವಿಲ್ ನೋಂದಣಿ ಮಾಡಿಸದಿದ್ದರೆ ಯಾವುದೇ ಕಾನೂನು ಮಾನ್ಯತೆ ಇರುವುದಿಲ್ಲ. ವಿಲ್ ಮಾಡಿಸುವ ಮುನ್ನ ನಿಮ್ಮ ಆಸ್ತಿಯ ವಿವರ/ಲೆಕ್ಕವನ್ನು ಮತ್ತೊಮ್ಮೆ ಪರಿಶೀಲನೆ ಮಾಡಿ ನೋಂದಣಿ ಮಾಡಿಸಬೇಕಾಗುತ್ತದೆ.

ವಿಲ್ ಪತ್ರ ಬರೆಯುವಾಗ ಈ ಅಂಶಗಳು ನೆನಪಿರಲಿ..

 

ವಿಲ್ ಪತ್ರ ಬರೆಸುವಾಗ ಈ ಸಂಗತಿಗಳನ್ನು ತಪ್ಪದೇ ಗಮನಿಸಿ..

ಮೊದಲ ಹಂತ

ಹೆಸರು, ವಿಳಾಸ ಮತ್ತು ವಿಲ್ ಮೇಲೆ ಸಹಿ ಮಾಡಿರುವ ದಿನಾಂಕ ಸೇರಿದಂತೆ ಕೆಲ ಮೂಲಭೂತ ಅಂಶಗಳನ್ನು ತಪ್ಪದೆ ಸೇರಿಸಬೇಕು. ಇದು ನಿಮ್ಮ ಕೊನೆಯ ವಿಲ್ ಎಂದು ತಿಳಿದುಕೊಳ್ಳಬೇಕು. ಅಲ್ಲದೇ ಇದು ನಿಮ್ಮ ಹಿಂದಿನ ವಿಲ್ ಗಳ ಬದಲಿಗೆ ಬಳಸಲ್ಪಡುತ್ತದೆ. ಹೀಗಾಗಿ ವಿಲ್ ಮೇಲೆ ಸಹಿ ಮಾಡಿರುವ ದಿನಾಂಕವನ್ನು ಇನ್ನೊಮ್ಮೆ ಖಚಿತಪಡಿಸಿಕೊಳ್ಳುವುದು ಉತ್ತಮ.

ಎರಡನೇ ಹಂತ

ನಿಮ್ಮ ವಿಲ್ ನಲ್ಲಿರುವ ಸೂಚನೆ ಮತ್ತು ನಿರ್ಬಂಧನೆಗಳನ್ನು ಯಾರು ನೋಡಬಹುದು ಅಥವಾ ನಿರ್ವಹಿಸಬಹುದಾಗಿರುವ ವ್ಯಕ್ತಿಯನ್ನು ಹೆಸರಿಸಿ. ಏಕೆಂದರೆ ಆ ವ್ಯಕ್ತಿಯ ನಿಮ್ಮ ಕೊನೆ ಇಚ್ಛೆಯನ್ನು ಈಡೇರಿಸಿ ಕಾರ್ಯರೂಪಕ್ಕೆ ತರುವವರು. ಆ ವ್ಯಕ್ತಿ ಯಾವಾಗಲೂ ವಿಶ್ವಾಸಾರ್ಹ ವ್ಯಕ್ತಿ ಆಗಿರಬೇಕಾಗಿರುತ್ತದೆ. ಜೊತೆಗೆ ತನ್ನ ಕರ್ತವ್ಯವನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರಬೇಕು.

ಮೂರನೇ ಹಂತ

ಭೋಗ್ಯಪತ್ರ ಹಕ್ಕು ಮತ್ತು ಆಸ್ತಿ ಯಾರಿಗೆ ಸೇರಬೇಕು ಎಂಬುದನ್ನು ಸ್ಪಷ್ಟವಾಗಿ ಹೇಳಿರಬೇಕು. ಅಥವಾ ಕೊಡುಗೆ ಎಂಬ ಹೆಸರಿನಲ್ಲೂ ನೀಡಿಕೆ ಮಾಡಬಹುದು. ನಿಮ್ಮ ಪೂರ್ವಜರಿಗೆ ಸೇರಿದ ಆಸ್ತಿಯನ್ನು ಕಾನೂನು ಬದ್ಧವಾಗಿ ವ್ಯಕ್ತಿಯೊಬ್ಬರಿಗೆ ನಾಮಕರಣ ಮಾಡಿ ನೀಡಬಹುದು.

ನಾಲ್ಕನೇ ಹಂತ

ನೀವು ಷೇರುಗಳನ್ನು ಹೊಂದಿದ್ದರೆ ಅಥವಾ ಕಂಪನಿಯೊಂದರಲ್ಲಿ ಪಾಲುದಾರಿಕೆ ಹೊಂದಿದ್ದರೆ ಅಥವಾ ಕಂಪನಿಯ ಮಾಲೀಕರಾಗಿದ್ದರೂ ಕೂಡ ವಿಲ್ ಮಾಡಿಸಬಹುದು. ಪಾಲುದಾರಿಕೆ ಹೊಂದಿದ್ದರೆ ಕೆಲ ನಿಬಂಧನೆಗಳನ್ನು ಪಾಲಿಸಸಬೇಕಾಗುತ್ತದೆ.

ಐದನೇ ಹಂತ

ಹಿಂದು ಅವಿಭಕ್ತ ಕುಟುಂಬಕ್ಕೆ ಸಂಬಂಧಿಸಿದ ಷೇರುಗಳಿದ್ದಲ್ಲಿ ವಿಲ್ ನಲ್ಲಿಯೇ ತಿಳಿಸಬೇಕಾಗುತ್ತದೆ. ಆಸ್ತಿ ಸಾಮಾಜಿಕವಾಗಿದ್ದಾಗಿರಲಿ, ವೈಯಕ್ತಿಕವಾಗಿದ್ದಾಗಿರಲಿ, ಸಾಲವಾಗಿರಲಿ ಅಥವಾ ಸಂಪತ್ತಾಗಿರಲಿ ಎಲ್ಲವನ್ನು ವಿಲ್ ನಲ್ಲಿ ಸ್ಪಷ್ಟವಾಗಿ ಬರೆಸಬೇಕಾಗುತ್ತದೆ.

ಆರನೇ ಹಂತ

ಸ್ಥಳೀಯ ಕಾನೂನಿಗೆ ಅನ್ವಯವಾಗಿ ವಿದೇಶದಲ್ಲಿ ಹೊಂದಿರುವ ಆಸ್ತಿಯನ್ನು ವಿಲ್ ನಲ್ಲಿ ಇಂಥವರಿಗೆ ನೀಡುತ್ತೇನೆ ಎಂದು ಬರೆಸಬಹುದು.

ಏಳನೆ ಹಂತ

ಸಾಕು ಪ್ರಾಣಿ, ತೈಲ ವರ್ಣ ಚಿತ್ರಗಳು, ಎಲೆಕ್ಟ್ರಾನಿಕ್ ವಸ್ತುಗಳು, ಬೌದ್ದಿಕ ಆಸ್ತಿ, ಪುಸ್ತಕ, ಸಾಮಾಜಿಕ ಜಾಲತಾಣದ ಖಾತೆ, ವೈಯಕ್ತಿಕ ಸಾಮಗ್ರಿಗಳನ್ನು ಇಂಥವರಿಗೆ ನೀಡಬೇಕು ಎಂದು ವಿಲ್ ನಲ್ಲಿ ಬರೆಸಬೇಕು.

ಕೊನೆ ಮಾತು

ಸರಳವಾಗಿ ಹೇಳಬೇಕೆಂದರೆ ವಿಲ್ ನಲ್ಲಿ ಸ್ಥಿರಾಸ್ತಿ ಮತ್ತು ಚರಾಸ್ತಿ ಎಲ್ಲವನ್ನು ಚಾಚೂ ತಪ್ಪದೇ ಸೇರಿಸಿರಬೇಕು. ಅದು ವಾಹನ, ಆಭರಣ, ನಗದು, ವಿಮಾ ಪಾಲಿಸಿ ಯಾವುದಾದರೂ ಆಗಿರಬಹುದು. ಅಲ್ಲದೇ ಜಮೀನು, ನಿವೇಶನ, ಕಟ್ಟಡ, ಅಂಗಡಿ ಕೂಡ ಆಗಿರಬಹದು. ಹೀಗೆ ಎಲ್ಲವನ್ನೂ ತಪ್ಪದೇ ನಮೂದಿಸಿ ಇದರ ಜವಾಬ್ಧಾರಿ ನಿರ್ವಹಣೆಗೆ ನಂಬಿಕಸ್ತ ವ್ಯಕ್ತಿಯನ್ನು ಹೆಸರಿಸಬೇಕು.

Read more about: money
English summary

How to write Will? Must know these things

How to write Will? Must know these things.
Story first published: Thursday, May 23, 2019, 16:30 [IST]
Company Search
Enter the first few characters of the company's name or the NSE symbol or BSE code and click 'Go'

Find IFSC

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more