For Quick Alerts
ALLOW NOTIFICATIONS  
For Daily Alerts

ವೇತನ ಹೆಚ್ಚಳ (salary hike) ಪಡೆಯುವುದು ಹೇಗೆ? ಈ 10 ಸ್ಮಾರ್ಟ್ ಟಿಪ್ಸ್ ಮರಿಬೇಡಿ..

|

ನೀವು ಯಾವುದೋ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿರುತ್ತಿರಿ. ಆದರೆ ವರ್ಷವರ್ಷಕ್ಕೆ ಏರಬೇಕಾಗಿರುವ ವೇತನ ಹೆಚ್ಚಳ (salary hike) ಮಾತ್ರ ಕಡಿಮೆಯಿರುತ್ತದೆ. ಅದಕ್ಕೆ ಹಲವಾರು ಕಾರಣಗಳಿರಬಹುದು. ಇದು ತುಂಬಾ ಉದ್ಯೋಗಿಗಳ ಬೇಸರಕ್ಕೆ, ಆಕ್ರೋಶಕ್ಕೆ ಕಾರಣವಾಗಿರುತ್ತದೆ. ಕೆಲಸದಲ್ಲಿ ನಾನು ಎಷ್ಟೇ ಚೆನ್ನಾಗಿ ಕಾರ್ಯಕ್ಷಮತೆ/ದಕ್ಷತೆ ತೋರಿದ್ದರು ಉತ್ತಮ ವೇತನ ಹೆಚ್ಚಳ (good salary hike) ಇಲ್ಲವಲ್ಲಾ ಎಂಬ ಕೊರಗು ಬೇರೆ ಕಂಪನಿಗೆ ಹೋಗಲು ಪ್ರೇರೆಪಿಸುತ್ತದೆ.

ಭಾರತದಲ್ಲಿ ವೇತನ ಹೆಚ್ಚಳದ ಕುರಿತಾದ ಅಯಾನ್ ವರದಿಯಂತಹ ಇತ್ತೀಚಿನ ಸಮೀಕ್ಷೆಗಳು, 2019 ರಲ್ಲಿ ಪಡೆದ ಸರಾಸರಿ ವೇತನ ಹೆಚ್ಚಳವು ಶೇ. 9.7 ಮತ್ತು ಕಳೆದ ವರ್ಷ ಪಡೆದ ಶೇ. 9.5% ರಷ್ಟಿದೆ ಎಂದು ಅಂದಾಜಿಸಲಾಗಿದೆ. ಈ ವೇತನ ಹೆಚ್ಚಳವು ವರದಿಯ ಪ್ರಕಾರ, ಆರ್ಥಿಕ ಸಾಧನೆ ಮತ್ತು ನೋಟು ರದ್ದತಿಯ ಒಟ್ಟಾರೆ ಪ್ರಭಾವದಿಂದಾಗಿ 2011 ರಲ್ಲಿ ಪಡೆದ ಸರಾಸರಿ ಏರಿಕೆಗಿಂತ ಗಮನಾರ್ಹವಾಗಿ ಕಡಿಮೆಯಾಗಿದೆ.

 

ಪ್ರಮುಖ ಕ್ಷೇತ್ರಗಳಲ್ಲಿ ನೇಮಕಾತಿ ಕಡಿಮೆಯಾಗಿದೆ. ವರ್ಷದ ಆರಂಭದಲ್ಲಿ ಬಿಡುಗಡೆಯಾದ ಸಮೀಕ್ಷೆಯಲ್ಲಿ ಗ್ರಾಹಕ ಇಂಟರ್ನೆಟ್, ವೃತ್ತಿಪರ ಸೇವೆಗಳು ಮತ್ತು ಆಟೋಮೋಟಿವ್ ವಲಯಗಳು ವೇತನ ಹೆಚ್ಚಿಸುವ ನಿರೀಕ್ಷೆಯಿದೆ. ಆದಾಗ್ಯೂ, ಎನ್‌ಬಿಎಫ್‌ಸಿ ಬಿಕ್ಕಟ್ಟು, ವಾಹನ ಮಾರಾಟದಲ್ಲಿನ ಕುಸಿತ, ಜೊತೆಗೆ ವೃತ್ತಿಪರ ಸೇವಾ ಸಂಸ್ಥೆಗಳು ಎದುರಿಸುತ್ತಿರುವ ಸವಾಲುಗಳು, ಪ್ರಸ್ತುತ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಬಹುದು.

ಸಾಮಾನ್ಯವಾಗಿ ಮೌಲ್ಯಮಾಪನ ಪ್ರಕ್ರಿಯೆಯು(appraisal) ಪ್ರಾರಂಭವಾಗುವ ಮೊದಲು ಮೌಲ್ಯಮಾಪನ ನಿರ್ಧಾರಗಳನ್ನು ಮಾಡಲಾಗುತ್ತದೆ. ವಾಸ್ತವವಾಗಿ, ಸಂಸ್ಥೆಗೆ ನಿಮ್ಮ ಮೌಲ್ಯವನ್ನು ಹೈಲೈಟ್ ಮಾಡುವುದು ನಡೆಯುತ್ತಿರುವ ಪ್ರಕ್ರಿಯೆಯಾಗಿರಬೇಕು. ಮೌಲ್ಯಮಾಪಕನೊಂದಿಗೆ ಸಂಬಂಧವನ್ನು ಬೆಳೆಸುವುದು ಹೆಚ್ಚು ವಿಶ್ವಾಸವನ್ನು ನೀಡುತ್ತದೆ. ಏಕೆಂದರೆ ಅವರು ವರ್ಷವಿಡೀ ನಿಮ್ಮ ಕೊಡುಗೆ ಮತ್ತು ಶ್ರಮವನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ. ಹಾಗಾಗಿ ನಿಮ್ಮ ನಿರೀಕ್ಷೆಗಳ ಬಗ್ಗೆ ಕೂಡ ಮೌಲ್ಯಮಾಪಕರಿಗೆ ಸುಳಿವು ನೀಡಲು ಸಹಾಯ ಮಾಡುತ್ತದೆ.

ವೈಯಕ್ತಿಕವಾಗಿ ನಿಮ್ಮ ಕಾರ್ಯಕ್ಷಮತೆಯ ವಿಮರ್ಶೆಯ ಆಧಾರದ ಮೇಲೆ ಮೌಲ್ಯಮಾಪಕರನ್ನು ಸೆಳೆದು ನಿಮ್ಮ ಕೊಡುಗೆಯನ್ನು ವಿವರಿಸಿ ಹೆಚ್ಚಿನ ವೇತನ ಹೇಗೆ ಪಡೆಯಬಹುದು ಎಂಬುದು ತುಂಬಾ ಜನರ ಪ್ರಶ್ನೆಯಾಗಿರುತ್ತದೆ. ಹೀಗಾಗಿ ಇಲ್ಲಿ ಕೆಲ ವಿಧಾನಗಳನ್ನು ನೀಡಲಾಗಿದೆ ನೋಡೋಣ ಬನ್ನಿ..

1. ಸಿದ್ಧರಾಗಿರಿ

1. ಸಿದ್ಧರಾಗಿರಿ

ಕಳೆದ ಹಣಕಾಸು ವರ್ಷದಲ್ಲಿನ ನಿಮ್ಮ ಎಲ್ಲಾ ಪ್ರಮುಖ ಕೊಡುಗೆಗಳನ್ನು ಪಟ್ಟಿ ಮಾಡುವ ಸಂಪೂರ್ಣ ಕೆಲಸವನ್ನು ಮಾಡುವುದು ಅತ್ಯಗತ್ಯ. ಕಳೆದ ಒಂದು ವರ್ಷದಲ್ಲಿನ ನಿಮ್ಮ ಸಾಧನೆಗಳ ಪಟ್ಟಿ ಮಾಡಿ. ನೀವು ನಿಮ್ಮ ಮೇಲಧಿಕಾರಿಗಳು/ಗ್ರಾಹಕರು/ತಂಡದಿಂದ ಪ್ರಶಂಸೆ ಪಡೆದ ಬಗ್ಗೆ ವಿಶೇಷ ಟಿಪ್ಪಣಿ ಮಾಡಿ. ಮುಂಬರುವ ವರ್ಷದಲ್ಲಿ ನೀವು ಏನು ಮಾಡಲು ಬಯಸುತ್ತೀರಿ ಎಂಬುದನ್ನು ಸಹ ಹೈಲೈಟ್ ಮಾಡಿ. ಕಾರ್ಯಕ್ಷಮತೆ ವಿಮರ್ಶೆ ಸಭೆಯನ್ನು ವಿಂಗ್ ಮಾಡಬೇಡಿ ಮತ್ತು ನಿಮ್ಮ ಎಲ್ಲಾ ಟಿಪ್ಪಣಿಗಳು ಮತ್ತು ಮುದ್ರಣಗಳೊಂದಿಗೆ ಹೋಗಿ!

2. ನಿಮ್ಮ ಬಗ್ಗೆ ನಿಮ್ಮ ಲೆಕ್ಕಾಚಾರ

2. ನಿಮ್ಮ ಬಗ್ಗೆ ನಿಮ್ಮ ಲೆಕ್ಕಾಚಾರ

ನಿಮ್ಮ ನಿಜವಾದ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಲು ಸಂಸ್ಥೆಗೆ ನಿಮ್ಮ ಕೊಡುಗೆಯೇನು ಎಂಬುದನ್ನು ಮೌಲ್ಯಮಾಪನ ಮಾಡಿ. ಕಳೆದ ವರ್ಷದಲ್ಲಿ ನಿಮ್ಮ ಕಂಪನಿಗೆ ನೀವು ತಂದಿರುವ ಉತ್ಪಾದಕತೆ ಬಗ್ಗೆ ಲೆಕ್ಕಾಚಾರವಿರಲಿ ಹಾಗು ಅದರ ಬಗ್ಗೆ ಪ್ರಾಮಾಣಿಕವಾಗಿರಿ. ಕಾರ್ಯಸಾಧ್ಯವಾದ ಮಟ್ಟವನ್ನು ತಲುಪಲು ಮೌಲ್ಯಮಾಪಕರ ವಿಶ್ವಾಸವನ್ನು ಗಿಟ್ಟಿಸಿಕೊಳ್ಳಿ.

3. ನಿಮ್ಮ ಸವಾಲು
 

3. ನಿಮ್ಮ ಸವಾಲು

ನೆನಪಿಡಿ, ಪ್ರತಿ ಮೌಲ್ಯಮಾಪಕ/ವಿಭಾಗವು ಸೀಮಿತ ವೇತನ ಏರಿಕೆ ಸಂಖ್ಯೆಯಿಂದ ನಿರ್ಬಂಧಿಸಲ್ಪಡುತ್ತದೆ. ನಿಮ್ಮ ನ್ಯಾಯಯುತ ಪಾಲನ್ನು ಪಡೆಯುವುದನ್ನು ಖಾತ್ರಿಪಡಿಸಿಕೊಳ್ಳುವುದು ನಿಮ್ಮ ಸವಾಲು! ಕಂಪನಿಗೆ ನೀವು ನೀಡಿರುವ ಕೊಡುಗೆಯನುಸಾರ ನಿಮ್ಮ ಪಾಲನ್ನು ನ್ಯಾಯಯುತವಾಗಿ ಪಡೆಯಿರಿ.

4. ಆಕ್ಷೇಪಣೆಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ

4. ಆಕ್ಷೇಪಣೆಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ

ಸಂಭವನೀಯ ಪುಷ್‌ಬ್ಯಾಕ್‌ಗಳು ಅಥವಾ ನಕಾರಾತ್ಮಕ ಪ್ರತಿಕ್ರಿಯೆಯ ಸಂದರ್ಭಗಳನ್ನು ಗುರುತಿಸಲು ಮೌಲ್ಯಮಾಪಕರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಿ. ಮೌಲ್ಯಮಾಪಕನ ದೃಷ್ಟಿಕೋನವನ್ನು ಮನೋಹರವಾಗಿ ಸ್ವೀಕರಿಸಿ, ವಿಷಯಗಳನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ ಮತ್ತು ಪರಿಸ್ಥಿತಿಯನ್ನು ಧನಾತ್ಮಕವಾಗಿ ನಿರ್ವಹಿಸಿ. ರಕ್ಷಣಾತ್ಮಕ ನಡೆ ಇರಲಿ ಮತ್ತು ಯಾವುದೇ ಆಕ್ರಮಣಕಾರಿ ನಡವಳಿಕೆಯನ್ನು ಹೊಂದಬೇಡಿ.

5. ಸಂಸ್ಥೆಯ ಬಗ್ಗೆ ಯೋಚಿಸಿ

5. ಸಂಸ್ಥೆಯ ಬಗ್ಗೆ ಯೋಚಿಸಿ

ಸಂಸ್ಥೆಯ ಆರ್ಥಿಕ ಕಾರ್ಯಕ್ಷಮತೆ ಮತ್ತು ನೀವು ಕಾರ್ಯನಿರ್ವಹಿಸುವ ಉದ್ಯಮ/ಮಾರುಕಟ್ಟೆಯನ್ನು ಅರ್ಥಮಾಡಿಕೊಳ್ಳಿ. ಸ್ವ-ಕೇಂದ್ರಿತ ನಡವಳಿಕೆಯನ್ನು ತಪ್ಪಿಸಿ ಮತ್ತು ಸಂಸ್ಥೆಯ ಬೆಳವಣಿಗೆ ಮತ್ತು ಲಾಭದಾಯಕತೆಗೆ ಹೊಂದಿಕೊಂಡಂತೆ ನಿಮ್ಮನ್ನು ಪ್ರದರ್ಶಿಸಿ.

6. ಡ್ರಾಮಾ ಮಾಡಬೇಡಿ

6. ಡ್ರಾಮಾ ಮಾಡಬೇಡಿ

ಭಾವನಾತ್ಮಕ ಸಂಭಾಷಣೆಗಿಂತ ಹೆಚ್ಚಾಗಿ ಉತ್ಪಾದಕ ಮತ್ತು ಮೌಲ್ಯ ಆಧಾರಿತ ಸಂಭಾಷಣೆ ನಿಮ್ಮದಾಗಿರಲಿ. ಮೌಲ್ಯಮಾಪಕರೊಂದಿಗಿನ ಸಂಭಾಷಣೆಯ ಉದ್ದಕ್ಕೂ ಸಕಾರಾತ್ಮಕತೆ ಮತ್ತು ಉತ್ಸಾಹವನ್ನು ಪ್ರದರ್ಶಿಸಲು ಮರೆಯದಿರಿ.

7. ನಿಮ್ಮ ಸಂಗತಿಗಳನ್ನು ತಿಳಿದುಕೊಳ್ಳಿ

7. ನಿಮ್ಮ ಸಂಗತಿಗಳನ್ನು ತಿಳಿದುಕೊಳ್ಳಿ

ನಿಮ್ಮ ಕಂಪನಿಯ ಬಗ್ಗೆ ಸರಿಯಾದ ಮಾಹಿತಿ ನಿಮಗಿರಲಿ. ಮಾನವ ಸಂಪನ್ಮೂಲ, ನಿಮ್ಮ ಕಾರ್ಯಕ್ಷಮತೆ, ಕಂಪನಿ, ಮಾರುಕಟ್ಟೆ ಮತ್ತು ಸಾಮಾನ್ಯ ಪ್ರವೃತ್ತಿಗಳಿಗೆ ಸಂಬಂಧಿಸಿದ ಡೇಟಾ ಮತ್ತು ಮಾಹಿತಿಯೊಂದಿಗೆ ನಿಮ್ಮನ್ನು ಸಜ್ಜುಗೊಳಿಸಿ.

8. ವಾಸ್ತವಿಕವಾಗಿರಿ

8. ವಾಸ್ತವಿಕವಾಗಿರಿ

ನೀವು ಯಾವುದೇ ಬೇಡಿಕೆಗಳನ್ನು ಇಡುವ ಮೊದಲು ಕೆಲಸ ಮಾಡುವ ಕಂಪನಿಯ ಇತಿಮಿತಿ, ಡೀಲ್ ಬ್ರೇಕರ್ ಮತ್ತು ನಿರ್ಬಂಧಗಳನ್ನು ಅರ್ಥಮಾಡಿಕೊಳ್ಳಿ. ವೇತನ ಹೆಚ್ಚಳದ ಬಗ್ಗೆ ಉಲ್ಲೇಖಿಸುವಾಗ ವಾಸ್ತವಿಕವಾಗಿರಿ. ಕಾರ್ಯಕ್ಷಮತೆಯ ರಿವ್ಯೂ ಮೀಟಿಂಗ್ ಸಮಯಯದಲ್ಲಿ ಹೆದರಬೇಡಿ. ಮುಕ್ತವಾಗಿ ಮಾತನಾಡಿ.

9. ಮಾತನಾಡಿ

9. ಮಾತನಾಡಿ

ಕಾರ್ಯಕ್ಷಮತೆಯ ರಿವ್ಯೂ ಮೀಟಿಂಗ್ ಸಮಯಯದಲ್ಲಿ ನಿಮ್ಮ ಫರ್ಪಾರ್ಮೆನ್ಸ್ ಬಗ್ಗೆ ಕಡಿಮೆ ಅಂದಾಜು ಮಾಡಲ್ಪಟ್ಟಿದ್ದರೆ, ಮೌಲ್ಯಮಾಪಕರೊಂದಿಗೆ ಪ್ರಾಮಾಣಿಕ ಸಂಭಾಷಣೆ ನಡೆಸಲು ಹಿಂಜರಿಯಬೇಡಿ. ಪ್ರಾಮಾಣಿಕವಾಗಿ ವಿವರಣೆಯನ್ನು ಕೇಳುವುದು ಮತ್ತು ಆಕ್ರಮಣಕಾರಿಯಾಗಿರುವುದರ ನಡುವಿನ ಅಂತರ ಮೀರಬಾರದು.

10. ನಿಮ್ಮನ್ನು ನೀವು ನಿರ್ವಹಿಸಿ

10. ನಿಮ್ಮನ್ನು ನೀವು ನಿರ್ವಹಿಸಿ

ನೀವು ಸ್ವೀಕರಿಸುವ ಸಂಬಳ ಅಥವಾ ವೇತನ ಹೆಚ್ಚಳಕ್ಕೆ ಕಾರಣವಾಗುವ ಅನೇಕ ಬಹು ಅಂಶಗಳಿವೆ ಎಂದು ತಿಳಿಯಿರಿ. ಅವುಗಳು ನಿಮ್ಮ ಕಾರ್ಯಕ್ಷಮತೆಗೆ ಸಂಬಂಧವಿಲ್ಲದಿರಬಹುದು. ನಿಮ್ಮ ಪ್ರೇರಕರ ಬಗ್ಗೆ ಯೋಚಿಸಿ, ನಿಮ್ಮ ಡೀಲ್ ಬ್ರೇಕರ್‌ಗಳನ್ನು ಅಭಿವೃದ್ಧಿಪಡಿಸಲು ಮತ್ತು ರೂಪಿಸಲು ಅಗತ್ಯವಿರುವ ಅಂಶಗಳನ್ನು ಪ್ರಶಂಸಿಸಿ. ನೆನಪಿಡಿ, ಪ್ರಮುಖವಾಗಿ ಉದ್ಯೋಗದಲ್ಲಿನ ಸಂಬಂಧಗಳನ್ನು ನಿರ್ವಹಿಸುವುದು ಮತ್ತು ನಿರ್ಮಿಸುವುದು ತಕ್ಷಣದ ಕಾರ್ಯಕ್ಷಮತೆ ವಿಮರ್ಶೆಗಿಂತ ಹೆಚ್ಚಿನದಾಗಿದೆ. ಎಚ್ಚರಿಕೆಯಿಂದ ಪೋಷಿಸುತ್ತಾ ಮುನ್ನಡೆಯಿರಿ!

ನೀವು ಕೆಲಸ ಮಾಡುವ ಕಂಪನಿ ಈ ಸೌಲಭ್ಯಗಳನ್ನು ಒದಗಿಸಬೇಕು..

ಉದ್ಯೋಗಿಗಳಿಗೆ ಆಶ್ಚರ್ಯಕರ ಸೌಲಭ್ಯಗಳನ್ನು ನೀಡುವ 15 ಕಂಪನಿಗಳು

ಸ್ಯಾಲರಿ ಸ್ಲಿಪ್: ತಪ್ಪದೆ ತಿಳಿದುಕೊಳ್ಳಬೇಕಾದ 8 ಅಂಶಗಳು

ಟೇಕ್ ಹೋಂ ಸ್ಯಾಲರಿ (Take Home Salary) ಹೆಚ್ಚಿಸಿಕೊಳ್ಳುವುದು ಹೇಗೆ?

Read more about: salary money savings ಸಂಬಳ
English summary

How to get a good salary hike? Follow these 10 smart tips

If you are an individual looking to claim your worth in the next performance review cycle, here are some ways in which you could soften the blow, while holding your own.
Story first published: Friday, July 19, 2019, 10:44 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more