For Quick Alerts
ALLOW NOTIFICATIONS  
For Daily Alerts

ಪ್ಯಾನ್ ಕಾರ್ಡ್‌ ಮತ್ತು ಆಧಾರ್ ಕಾರ್ಡ್‌ 6 ಹೊಸ ನಿಯಮಗಳು ಇಲ್ಲಿವೆ..

|

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2019 ರಲ್ಲಿ ಘೋಷಿಸಿದಂತೆ ಹೊಸ ಆದಾಯ ತೆರಿಗೆ ನಿಯಮಗಳ ಪ್ರಕಾರ ಪ್ಯಾನ್ ಕಾರ್ಡ್‌ ಮತ್ತು ಆಧಾರ್ ಕಾರ್ಡ್‌ಗಳನ್ನು ಶೀಘ್ರದಲ್ಲೇ ಪರಸ್ಪರ ಬದಲಾಯಿಸಬಹುದು.

ಹೊಸ ನಿಯಮದಂತೆ ತೆರಿಗೆದಾರರು, ತಮ್ಮ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸಲು ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಅಗತ್ಯವಿರುತ್ತದೆ. ಈ ಹಿಂದೆ ಐಟಿಆರ್ ಸಲ್ಲಿಸಲು ಎರಡನ್ನೂ ಹೊಂದಿರಬೇಕಾಗಿತ್ತು. ಕೇಂದ್ರ ಬಜೆಟ್ ಸಂದರ್ಭದಲ್ಲಿ ಪ್ಯಾನ್ ಕಾರ್ಡ್‌ ಮತ್ತು ಆಧಾರ್ ಕಾರ್ಡ್‌ ಗಳಿಗೆ ಸಂಬಂಧಿಸಿದಂತೆ ಆದ ಬದಲಾವಣೆಗಳನ್ನು ನೋಡೋಣ.

1. ಪ್ಯಾನ್ ಅಥವಾ ಆಧಾರ್
 

1. ಪ್ಯಾನ್ ಅಥವಾ ಆಧಾರ್

ತೆರಿಗೆ ಪಾವತಿದಾರರ ಸುಲಭ ಮತ್ತು ಅನುಕೂಲಕ್ಕಾಗಿ ಪ್ಯಾನ್ ಮತ್ತು ಆಧಾರ್ ಅನ್ನು ಪರಸ್ಪರ ಬದಲಾಯಿಸಬಹುದು. ಇದರಲ್ಲಿ ಯಾವುದಾದರೂ ಒಂದು ಇದ್ದರೆ ಸಾಕು. ಪ್ಯಾನ್ ಕಾರ್ಡ್ ಇಲ್ಲದವರು ತಮ್ಮ ಆಧಾರ್ ಸಂಖ್ಯೆಯನ್ನು ಉಲ್ಲೇಖಿಸಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಅಗತ್ಯವಿರುವಲ್ಲೆಲ್ಲಾ ಪ್ಯಾನ್ ಅನ್ನು ಬಳಸುವಂತೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.

2. ಪ್ಯಾನ್ ಹಂಚಿಕೆ ನಿಯಮ

2. ಪ್ಯಾನ್ ಹಂಚಿಕೆ ನಿಯಮ

ಪ್ರಸ್ತಾವಿತ ನಿಯಮಗಳ ಪ್ರಕಾರ, ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಯಿಂದ ಜನಸಂಖ್ಯಾ ಡೇಟಾವನ್ನು ಪಡೆದ ನಂತರ ಆದಾಯ ತೆರಿಗೆ ಇಲಾಖೆ ಅಂತಹ ವ್ಯಕ್ತಿಗೆ ಆಧಾರ್ ಆಧಾರದ ಮೇಲೆ ಪ್ಯಾನ್ ಹಂಚಿಕೆ ಮಾಡುತ್ತದೆ.

3. ಪ್ಯಾನ್‌-ಆಧಾರ್ ಆಯ್ಕೆಗೆ ಅವಕಾಶ

3. ಪ್ಯಾನ್‌-ಆಧಾರ್ ಆಯ್ಕೆಗೆ ಅವಕಾಶ

ತೆರಿಗೆ ಪಾವತಿದಾರರು ಈಗಾಗಲೇ ತಮ್ಮ ಆಧಾರ್ ಅನ್ನು ಪ್ಯಾನ್‌ನೊಂದಿಗೆ ಲಿಂಕ್ ಮಾಡಿದ್ದರೆ, ಆದಾಯ ತೆರಿಗೆ ಕಾಯ್ದೆಯಡಿ ಪ್ಯಾನ್‌ಗೆ ಬದಲಾಗಿ ಆಧಾರ್ ಅನ್ನು ಬಳಸಲು ಆಯ್ಕೆ ಹೊಂದಿರುತ್ತಾರೆ.

4. ಹೆಚ್ಚಿನ ಮೌಲ್ಯದ ವಹಿವಾಟು
 

4. ಹೆಚ್ಚಿನ ಮೌಲ್ಯದ ವಹಿವಾಟು

ಹೆಚ್ಚಿನ ಮೌಲ್ಯದ ಕೆಲವು ನಿಗದಿತ ವಹಿವಾಟುಗಳಿಗೆ ಪ್ಯಾನ್/ಆಧಾರ್ ಉಲ್ಲೇಖ ಮತ್ತು ದೃಢೀಕರಣ ಒದಗಿಸುವುದು ಕಡ್ಡಾಯಗೊಳಿಸುವ ಮೂಲಕ ಹೆಚ್ಚಿನ ಮೌಲ್ಯದ ವಹಿವಾಟುಗಳನ್ನು ಪತ್ತೆಹಚ್ಚಲು ಹಣಕಾಸು ಸಚಿವಾಲಯ ಹೆಜ್ಜೆ ಇಟ್ಟಿದೆ. ಸಂಬಂಧಿತ ದಾಖಲೆಗಳನ್ನು ಸ್ವೀಕರಿಸುವ ವ್ಯಕ್ತಿಯು ನಿಗದಿತ ವಹಿವಾಟುಗಳಿಗೆ ಪ್ಯಾನ್ ಮತ್ತು ಆಧಾರ್‌ನ ಸರಿಯಾದ ಉಲ್ಲೇಖ ಮತ್ತು ದೃಢೀಕರಣವನ್ನು ಖಚಿತಪಡಿಸಿಕೊಳ್ಳಬೇಕು ಎಂಬ ನಿಯಮವನ್ನೂ ಬಜೆಟ್ ನಲ್ಲಿ ಪರಿಚಯಿಸಲಾಗಿದೆ. ಈ ನಿಬಂಧನೆಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ದಂಡದ ನಿಬಂಧನೆಗಳನ್ನು ತಿದ್ದುಪಡಿ ಮಾಡಲು ಸಹ ಪ್ರಸ್ತಾಪಿಸಲಾಗಿದೆ.

5. ಪ್ಯಾನ್ ಅಮಾನ್ಯ

5. ಪ್ಯಾನ್ ಅಮಾನ್ಯ

ಪ್ರಸ್ತುತ, ಆದಾಯ ತೆರಿಗೆ ಕಾಯ್ದೆಯ ಪ್ರಕಾರ ನಿಗದಿತ ದಿನಾಂಕದೊಳಗೆ ಆಧಾರ್‌ನೊಂದಿಗೆ ಪ್ಯಾನ್ ಕಾರ್ಡ್ ಜೋಡಣೆ ಹೊಂದಿಲ್ಲದಿದ್ದರೆ ಪ್ಯಾನ್ ಅನ್ನು ಅಮಾನ್ಯವಾಗಿಸಬಹುದು. ವ್ಯಕ್ತಿಯು ಆಧಾರ್ ಸಂಖ್ಯೆಯನ್ನು ಉಲ್ಲೇಖಿಸಲು ವಿಫಲವಾದರೆ, ಅಂತಹ ವ್ಯಕ್ತಿಗೆ ನೀಡಲಾದ ಪ್ಯಾನ್ ಅನ್ನು ನಿಷ್ಕ್ರಿಯಗೊಳಿಸಲಾಗುವುದು ಎಂದು ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ.

6. 50,000 ಸಾವಿರ ಅಧಿಕ ವಹಿವಾಟು

6. 50,000 ಸಾವಿರ ಅಧಿಕ ವಹಿವಾಟು

ಪ್ಯಾನ್ ಕಾರ್ಡ್ ಬದಲಿಗೆ ಆಧಾರ್ ಕಾರ್ಡ್ ಬಳಕೆಗೆ ಅವಕಾಶ ಕಲ್ಪಿಸಿರುವುದರಿಂದ, ರೂ. 50,000ಕ್ಕಿಂತ ಅಧಿಕ ವಹಿವಾಟು ನಡೆಸುವ ಬ್ಯಾಂಕ್ ಗ್ರಾಹಕರಿಗೂ ಅನ್ವಯವಾಗಲಿದೆ. ಈವರೆಗೆ ರೂ. 50 ಸಾವಿರಗಳಿಗೂ ಅಧಿಕ ವಹಿವಾಟು ನಡೆಸುವ ವೇಳೆ ಕಡ್ಡಾಯವಾಗಿ ಪ್ಯಾನ್ ಕಾರ್ಡ್ ನಮೂದಿಸಬೇಕಿತ್ತು. ಇನ್ನು ಮುಂದೆ ಈ ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಇಲ್ಲದಿರುವವರು ಆಧಾರ್ ನಂಬರ್ ದಾಖಲಿಸಿದರೂ ಸಾಕಾಗುತ್ತದೆ.

ಕೊನೆ ಮಾತು

ಕೊನೆ ಮಾತು

ಇಲ್ಲಿಯವರೆಗೆ ಯಾವ ಯಾವ ವ್ಯವಹಾರ/ವಹಿವಾಟುಗಳ ಸಂದರ್ಭದಲ್ಲಿ ಪ್ಯಾನ್ ಕಾರ್ಡ್ ಕಡ್ಡಾಯವಾಗಿತ್ತೋ ಅಲ್ಲೆಲ್ಲಾ ಆಧಾರ್ ಕಾರ್ಡ್ ಸ್ವೀಕರಿಸಲು ಬ್ಯಾಂಕ್ ಸೇರಿದಂತೆ ಎಲ್ಲ ಸಂಸ್ಥೆಗಳು ಸಿದ್ಧತೆ ನಡೆಸಬೇಕೆಂದು ಕಂದಾಯ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ತಿಳಿಸಿದ್ದಾರೆ.

English summary

PAN card, Aadhaar New rules: Here are 6 news rules..

Under the new income tax rules, as announced by Nirmala Sitharaman, PAN cards and Aadhaar cards will be made interchangeable soon.
Story first published: Monday, July 8, 2019, 11:36 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more