For Quick Alerts
ALLOW NOTIFICATIONS  
For Daily Alerts

ಅಟಲ್ ಪಿಂಚಣಿ ಯೋಜನೆ ಬಗ್ಗೆ ಗೊತ್ತಿರಬೇಕಾದ 6 ಕೀ ಪಾಯಿಂಟ್ಸ್

|

ಅಟಲ್ ಪಿಂಚಣಿ ಯೋಜನೆ (ಎಪಿವೈ) ಅಸಂಘಟಿತ ವಲಯದ ಕಾರ್ಮಿಕರನ್ನು ತಮ್ಮ ನಿವೃತ್ತಿ ಜೀವನಕ್ಕಾಗಿ ಸ್ವಯಂಪ್ರೇರಣೆಯಿಂದ ಉಳಿತಾಯ ಮಾಡಲು ಪ್ರೋತ್ಸಾಹಿಸುವ ಯೋಜನೆಯಾಗಿದೆ ಎಂದು ನ್ಯಾಷನಲ್ ಸೆಕ್ಯುರಿಟಿಸ್ ಡಿಪಾಸಿಟರಿ (ಎನ್ಎಸ್ಡಿಎಲ್) ವರದಿ ಮಾಡಿದೆ.

ಕೇಂದ್ರ ಸರ್ಕಾರದ ಪ್ರಮುಖ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಎಪಿವೈ ಮುಖ್ಯವಾದದ್ದು. ನಿವೃತ್ತಿ ಭದ್ರತೆ ಒದಗಿಸುವ ಧ್ಯೇಯದೊಂದಿಗೆ ಈ ಯೋಜನೆಯನ್ನು ಆರಂಭಿಸಲಾಗಿದೆ. ಮೂಲಭೂತವಾಗಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾದಿಕಾರ ಅಡಿಯಲ್ಲಿ ಯೋಜನೆಗೆ ಸಂಪೂರ್ಣ ಭದ್ರತೆ ಒದಗಿಸಲಾಗಿದೆ.

ಪಿಂಚಣಿ ರೂಪದಲ್ಲಿ ಒಂದಿಷ್ಟು ಉಳಿತಾಯ ಮಾಡಲು ಜಾರಿಗೊಳಿಸಿರುವ ಅಟಲ್ ಪಿಂಚಣಿ ಯೋಜನೆಯ (APY) ಪ್ರಮುಖ ಕೀ ಪಾಯಿಂಟ್ಸ್ ಗಳ ವಿವರ ಇಲ್ಲಿ ನೀಡಲಾಗಿದೆ.

1. ಪಿಂಚಣಿ ಮೊತ್ತ
 

1. ಪಿಂಚಣಿ ಮೊತ್ತ

ಅಟಲ್ ಪಿಂಚಣಿ ಯೋಜನೆಯಡಿ (APY) ಚಂದಾದಾರರು 60 ವರ್ಷ ವಯಸ್ಸು ದಾಟಿದ ಬಳಿಕೆ ಮಾಸಿಕ ಪಿಂಚಣಿ ಕನಿಷ್ಠ ರೂ. 1000 ದಿಂದ ರೂ. 5000 ವರೆಗೆ ಮೊತ್ತ ಪಡೆಯಬಹುದು. ಎಪಿವೈ ಯೋಜನೆಗೆ ಪಾವತಿ ಮಾಡುವ ಪ್ರೀಮಿಯಂ ಮೊತ್ತ, ಪಡೆಯುವ ಪಿಂಚಣಿಯ ಮೊತ್ತ ನೋಂದಣಿಯಾದ ವಯಸ್ಸಿನ ಮೇಲೆ ಆಧಾರದ ಮೇಲೆ ನಿರ್ಧಾರವಾಗಲಿದೆ.

2. ವಯಸ್ಸು ಮತ್ತು ತಿಂಗಳ ಕೊಡುಗೆ

2. ವಯಸ್ಸು ಮತ್ತು ತಿಂಗಳ ಕೊಡುಗೆ

ಚಂದಾದಾರರು ಯೋಜನೆಗೆ ನೋಂದಣಿಯಾದ ವಯಸ್ಸು ಮತ್ತು ಆಯ್ಕೆ ಮಾಡಿಕೊಂಡ ಪಿಂಚಣಿ ಮೊತ್ತವನ್ನು ಅವಲಂಬಿಸಿ ಮಾಸಿಕವಾಗಿ ರೂ. 42 ರಿಂದ ರೂ. 210 ವರೆಗೆ ಪಾವತಿ ಮಾಡುತ್ತಾ ಹೋಗಬೇಕು.

ಎಪಿವೈ ಯೋಜನೆಗೆ 18 ರಿಂದ 40 ವಯಸ್ಸಿನ ಎಲ್ಲಾ ಭಾರತೀಯರು ಅರ್ಹರಾಗಿರುತ್ತಾರೆ. ೧೮ನೇ ವಯಸ್ಸಿಗೆ ನೋಂದಣಿಯಾದ ಚಂದಾದಾರರು ರೂ. 42 ಹಾಗೂ ರೂ. 210 ಮಾಸಿಕವಾಗಿ ಪಾವತಿ ಮಾಡುತ್ತಾ ಹೋದರೆ ಪ್ರತಿ ತಿಂಗಳು ಕ್ರಮವಾಗಿ ರೂ. 1,000 ದಿಂದ 5,000 ವರೆಗೆ ಪಿಂಚಣಿ ಪಡೆಯಲು ಅವಕಾಶವಿರುತ್ತದೆ.

3. ಪಾವತಿ ವಿಧಾನ

3. ಪಾವತಿ ವಿಧಾನ

ಚಂದಾದಾರರು ಅಟಲ್ ಪಿಂಚಣಿ ಯೋಜನೆಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಮೂರು ವಿಧಗಳಲ್ಲಿ ಪಾವತಿ ಮಾಡಬಹುದಾಗಿದೆ. ಮಾಸಿಕ, ತ್ರೈಮಾಸಿಕ ಹಾಗೂ ಅರ್ಧ ವಾರ್ಷಿಕ.

4. ಸಂಗಾತಿಗೆ ಪಿಂಚಣಿ
 

4. ಸಂಗಾತಿಗೆ ಪಿಂಚಣಿ

ಅಟಲ್ ಪಿಂಚಣಿ ಯೋಜನೆಯಡಿ ಪಿಂಚಣಿ ಹಣ ಸಿಗಲಿದ್ದು, ಚಂದಾದಾರರ ನಿಧನದ ನಂತರ ಅವರ ಜೀವನ ಸಂಗಾತಿಗೆ ದೊರಕಲಿದೆ. ಚಂದಾದಾರರಿಗೆ 60 ವರ್ಷ ತುಂಬುವ ಸಂದರ್ಭ ಸಂಗ್ರಹವಾದ ಪಿಂಚಣಿಯ ಮೊತ್ತವನ್ನು ಅವರ ಸಂಗಾತಿಗೆ ನೀಡಲಾಗುತ್ತದೆ.

5. ಅವಧಿಗೂ ಮುನ್ನ ಹಣ ಹಿಂಪಡೆಯರಿ

5. ಅವಧಿಗೂ ಮುನ್ನ ಹಣ ಹಿಂಪಡೆಯರಿ

ಅಕಾಲಿಕ ಸಾವು/ ಮಾರಣಾಂತಿಕ ಕಾಯಿಲೆಯಂಥ ಸಂದರ್ಭಗಳಲ್ಲಿ ಪಿಂಚಣಿ ಯೋಜನೆಯೆ ಚಂದಾದಾರರು 60 ವರ್ಷಕ್ಕಿಂತ ಮುಂಚೆಯೇ ಹಣವನ್ನು ಹಿಂಪಡೆಯಬಹದು.

ತೆರಿಗೆ ವಿನಾಯಿತಿ

ತೆರಿಗೆ ವಿನಾಯಿತಿ

ಆದಾಯ ತೆರಿಗೆ ಕಾಯ್ದೆ 80 ಸಿಸಿಡಿ (1ಬಿ) ಪ್ರಕಾರ ಎಪಿವೈ ಯೋಜನೆಯಲ್ಲಿ ಹೂಡಿಕೆ ಮಾಡಲಾಗುವ ಮೊತ್ತದ ಗರಿಷ್ಠ 50 ಸಾವಿರ ರೂಪಾಯಿಗಳಿಗೆ ಆದಾಯ ತೆರಿಗೆ ವಿನಾಯಿತಿ ಹಾಗೂ ಕಾಯ್ದೆ 80ಸಿ ಪ್ರಕಾರ ಪ್ರತಿ ವರ್ಷ 1.5 ಲಕ್ಷ ರೂ. ಅಥವಾ ಅದಕ್ಕೂ ಮೇಲ್ಪಟ್ಟ ಮೊತ್ತಕ್ಕೆ ಆದಾಯ ತೆರಿಗೆ ವಿನಾಯಿತಿಯನ್ನು ಪಡೆದುಕೊಳ್ಳಬಹುದು.

English summary

Atal Pension Yojana: Must know these 6 key Points

Atal Pension Yojana or APY, a pension scheme, encourages workers from the unorganised sector to save voluntarily for their retirement, according to National Securities Depository.
Story first published: Monday, September 9, 2019, 11:18 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more