For Quick Alerts
ALLOW NOTIFICATIONS  
For Daily Alerts

ಆಧಾರ್ ಕಾರ್ಡ್ ನೋಂದಾಯಿತ ಎಷ್ಟು ಸಿಮ್ ಕಾರ್ಡ್ ಜೋಡಣೆ ಸಾಧ್ಯ?

|

ವಿಶಿಷ್ಟ ಗುರುತಿನ ಚೀಟಿ ಆಧಾರ್ ಕಾರ್ಡ್ ಜೊತೆಗೆ ಎಷ್ಟು ಸಿಮ್ ಕಾರ್ಡ್ ಜೋಡಣೆ ಸಾಧ್ಯ, ಆಧಾರ್ ಜೊತೆಗೆ ಅಧಿಕೃತವಾಗಿ ಎಷ್ಟು ಸಿಮ್ ಕಾರ್ಡ್ ನೋಂದಾಯಿಸಲಾಗಿದೆ ಎಂಬುದನ್ನು ತಿಳಿಯುವುದು ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ...

 

ಭಾರತದಲ್ಲಿ ಪ್ರಮುಖ ಗುರುತಿನ ದಾಖಲೆಯಾಗಿ ಆಧಾರ್ ಕಾರ್ಡ್ ಬಳಸಲಾಗುತ್ತದೆ. ಸರ್ಕಾರದ ವಿವಿಧ ಯೋಜನೆಗಳಿಗೆ ಮಾತ್ರವಲ್ಲದೆ ಹಣಕಾಸು ಸೇವೆಗಳಿಗೂ ಆಧಾರ್ ಸಂಖ್ಯೆ ಜೋಡಣೆ ಮಾಡಲಾಗುತ್ತದೆ ಹಾಗೂ ವ್ಯವಹರಿಸಲು ಆಧಾರ್ ಸಂಖ್ಯೆ ಅಗತ್ಯವಿದೆ. ಬ್ಯಾಂಕ್ ಖಾತೆಗಳು, ವಾಹನಗಳು ಮತ್ತು ವಿಮಾ ಪಾಲಿಸಿಗಳೊಂದಿಗೆ ಆಧಾರ್ ಲಿಂಕ್ ಮಾಡಬೇಕಾಗುತ್ತದೆ. ಆಧಾರ್ ಕಾರ್ಡ್ ವ್ಯಕ್ತಿಯ ಹೆಸರು, ಹುಟ್ಟಿದ ದಿನಾಂಕ, ಲಿಂಗ, ವಿಳಾಸ ಮತ್ತು ಭಾವಚಿತ್ರದ ವಿವರಗಳನ್ನು ಒಳಗೊಂಡಿರುತ್ತದೆ.

How to link Aadhaar to DigiLocker : ಡಿಜಿಲಾಕರ್ ಜೊತೆ ಆಧಾರ್ ಲಿಂಕ್ ಮಾಡುವುದು ಹೇಗೆ?

ಟೆಲಿಕಾಂ ಇಲಾಖೆ ಆರಂಭಿಸಿರುವ ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್ಮೆಂಟ್ ಮತ್ತು ಕನ್ಸ್ಯೂಮರ್ ಪ್ರೊಟೆಕ್ಷನ್ (TAFCOP) ಮುಖ್ಯವಾಗಿ ಸಿಮ್ ಹಾಗೂ ಆಧಾರ್ ಸಂಖ್ಯೆ ಜೋಡಣೆ ಅಕ್ರಮದ ಬಗ್ಗೆ ನಿಗಾ ವಹಿಸಲಿದೆ. TAFCOP ಇದು ಮೊಬೈಲ್ ಬಳಕೆದಾರರು ತಮ್ಮ ಆಧಾರ್‌ನಲ್ಲಿ ನೋಂದಾಯಿಸಲಾದ ಸಿಮ್ ಕಾರ್ಡ್‌ಗಳನ್ನು ಪರಿಶೀಲಿಸಲು ಅನುವು ಮಾಡಿಕೊಡುತ್ತದೆ.

ಆಧಾರ್ ಕಾರ್ಡ್ ಜೊತೆಗೆ ಎಷ್ಟು ಸಿಮ್ ಕಾರ್ಡ್ ಜೋಡಣೆ ಸಾಧ್ಯ?

ನಿಮ್ಮ ಹೆಸರಿನಲ್ಲಿ ಎಷ್ಟು ಸಂಖ್ಯೆಗಳನ್ನು ನೀಡಲಾಗಿದೆ ಎಂಬುದನ್ನು ತಿಳಿಯಲು ನೀವು ಆಸಕ್ತಿ ಹೊಂದಿದ್ದರೆ, ನೀವು ಅದನ್ನು ದೂರಸಂಪರ್ಕ ಇಲಾಖೆಯ (DoT) ಹೊಸ ಪೋರ್ಟಲ್ ಮೂಲಕ ಮಾಡಬಹುದು, ಇದು ನಿಮ್ಮ ಆಧಾರ್ ಕಾರ್ಡ್‌ ಜೊತೆ ಹೊಂದಿಸಲಾಗಿರುವ ಒಟ್ಟು ಸಿಮ್ ಕಾರ್ಡ್‌ಗಳನ್ನು ಪರಿಶೀಲಿಸಲು ಸಹಾಯ ಮಾಡುತ್ತದೆ.

ನಿಮ್ಮ ಆಧಾರ್‌ ಮೂಲಕ ಎಷ್ಟು ಸಿಮ್‌ ಖರೀದಿ ಮಾಡಲಾಗಿದೆ ಎಂದು ತಿಳಿಯುವುದು ಹೇಗೆ?

ಟೆಲಿಕಮ್ಯೂನಿಕೇಷನ್ ಇಲಾಖೆ(DoT) ಪ್ರಾರಂಭಿಸಿದ ಪೋರ್ಟಲ್ ಅನ್ನು TAFCOP ಎಂದು ಕರೆಯಲಾಗುತ್ತದೆ. DoT ಹೊರಡಿಸಿದ ನಿಯಮಗಳ ಪ್ರಕಾರ ಒಬ್ಬ ನಾಗರಿಕ ಒಂದು ಆಧಾರ್ ಕಾರ್ಡ್‌ ಜೊತೆಗೆ ಅಧಿಕೃತವಾಗಿ 9 ಮೊಬೈಲ್ ಸಂಖ್ಯೆಗಳನ್ನು ಮಾತ್ರ ನೀಡಬಹುದು.

 
ಆಧಾರ್ ಕಾರ್ಡ್ ಜೊತೆಗೆ ಎಷ್ಟು ಸಿಮ್ ಕಾರ್ಡ್ ಜೋಡಣೆ ಸಾಧ್ಯ?

ನಿಮ್ಮ ಆಧಾರ್ ಕಾರ್ಡ್‌ನ ಜೊತೆಗೆ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗಳನ್ನು ಪರಿಶೀಲಿಸುವುದು ಹೇಗೆ ಮತ್ತು ಹಂತ-ಹಂತದ ಮಾರ್ಗದರ್ಶಿ ವಿಧಾನ ಇಲ್ಲಿದೆ

ಹಂತ 1: TAFCOP ನ ಅಧಿಕೃತ ವೆಬ್‌ಸೈಟ್ ತೆರೆಯಿರಿ - tafcop.dgtelecom.gov.in.

ಹಂತ 2: OTP ಸ್ವೀಕರಿಸಲು ನಿಮ್ಮ 10-ಅಂಕಿಯ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.

ಹಂತ 3: ಪೋರ್ಟಲ್‌ಗೆ ಸೈನ್ ಇನ್ ಮಾಡಲು OTP ಅನ್ನು ನಮೂದಿಸಿ ಮತ್ತು ಮೌಲ್ಯೀಕರಣ(validation) ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ಹಂತ 4: ಸೈನ್-ಇನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ಹಂತ 5: ನಿಮ್ಮ ನಿರ್ದಿಷ್ಟ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ಎಲ್ಲಾ ವಿಭಿನ್ನ ಮೊಬೈಲ್ ಸಂಖ್ಯೆಗಳನ್ನು ನೀವು ನೋಡಬಹುದಾದ ಪುಟಕ್ಕೆ ನಿಮ್ಮನ್ನು ಕರೆದೊಯ್ಯಲಾಗುತ್ತದೆ.

ಗಮನಿಸಿ: ಪರಿಶೀಲನೆ ವೇಳೆಯಲ್ಲಿ ಬಳಕೆಯಲ್ಲಿಲ್ಲದ ಸಂಖ್ಯೆಗಳನ್ನು ನೀವು ನೋಡಿದರೆ ಅಥವಾ ನೀವು ಗುರುತಿಸದಿದ್ದರೆ ಅವುಗಳನ್ನು ವರದಿ ಮಾಡಿ ಇದರಿಂದ ಅವುಗಳನ್ನು ನಿಮ್ಮ ಆಧಾರ್ ಕಾರ್ಡ್‌ನಿಂದ ತೆಗೆದುಹಾಕಬಹುದು.

ಮಾರ್ಗಸೂಚಿಗಳ ಪ್ರಕಾರ, ವೈಯಕ್ತಿಕ ಮೊಬೈಲ್ ಚಂದಾದಾರರು ತಮ್ಮ ಹೆಸರಿನಲ್ಲಿ ಒಂಬತ್ತು ಮೊಬೈಲ್ ಸಂಪರ್ಕಗಳನ್ನು ನೋಂದಾಯಿಸಿಕೊಳ್ಳಬಹುದು. "ಈ ವೆಬ್‌ಸೈಟ್ ಅನ್ನು ಚಂದಾದಾರರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಆರಂಭಿಸಲಾಗಿದೆ. ಚಂದಾದಾರರು ತಮ್ಮ ಹೆಸರಿನಲ್ಲಿ ಬಳಸಲಾಗುತ್ತಿರುವ ಮೊಬೈಲ್ ಸಂಖ್ಯೆಗಳನ್ನು ಪರಿಶೀಲಿಸಲು, ಹೆಚ್ಚುವರಿ ಮೊಬೈಲ್ ಸಂಖ್ಯೆ ಇದ್ದರೆ ಅದನ್ನು ತೆಗೆದು ಹಾಕಲು ಸಹಾಯ ಮಾಡುವ ಸಲುವಾಗಿ ಪ್ರಾರಂಭ ಮಾಡಲಾಗಿದೆ," ಎಂದು ಇಲಾಖೆಯು ಹೇಳಿದೆ.

English summary

Aadhaar Card update: Know how many SIM cards are linked with your Aadhaar

Aadhaar card is an important identification document in India. Telecom Analytics for Fraud management and Consumer Protection (TAFCOP) has been launched by the Department of Telecom which allows mobile users to check SIM cards registered in their Aadhaar.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X