For Quick Alerts
ALLOW NOTIFICATIONS  
For Daily Alerts

ಆಧಾರ್‌ ಕಾರ್ಡ್‌: ಮನೆಯಲ್ಲೇ ಕುಳಿತು ಮೊಬೈಲ್ ಸಂಖ್ಯೆಯನ್ನು ಅಪ್‌ಡೇಟ್‌ ಮಾಡಿ

|

ಆಧಾರ್‌ ಕಾರ್ಡ್‌ ವಿತರಿಸುವ ಪ್ರಾಧಿಕಾರವಾದ ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಆಧಾರ್ ಸಂಬಂಧಿತ ಸೇವೆಗಳನ್ನು ನಿರ್ವಹಿಸಲು ಕಾರ್ಡುದಾರರಿಗೆ ಪ್ರಕ್ರಿಯೆಯನ್ನು ಸರಾಗಗೊಳಿಸುವ ಹಲವಾರು ಕ್ರಮಗಳನ್ನು ಕೈಗೊಂಡಿದೆ.

 

ಈ ಹೊಸ ಕ್ರಮಗಳಲ್ಲಿ ಬಯೋಮೆಟ್ರಿಕ್ ಮಾಹಿತಿಯನ್ನು ನವೀಕರಿಸುವುದರಿಂದ ಹಿಡಿದು ವಿಳಾಸ, ಮೊಬೈಲ್ ಸಂಖ್ಯೆ, ಹೆಸರು ಇತ್ಯಾದಿಗಳನ್ನು ಬದಲಾಯಿಸುತ್ತವೆ. ಇದರೊಂದಿಗೆ ಯುಐಡಿಎಐ ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ನೊಂದಿಗೆ ಕೈಜೋಡಿಸಿದೆ. ಈ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತೆರಳುವ ಪೋಸ್ಟ್‌ಮ್ಯಾನ್ ಮೂಲಕ ಆಧಾರ್ ಕಾರ್ಡ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯನ್ನು ಅಪ್‌ಡೇಟ್‌ ಮಾಡಬಹುದಾಗಿದೆ.

ಲಕ್ಷಾಂತರ ಪೋಸ್ಟ್‌ಮ್ಯಾನ್‌ಗಳಿಂದ ಸೇವೆ

ಲಕ್ಷಾಂತರ ಪೋಸ್ಟ್‌ಮ್ಯಾನ್‌ಗಳಿಂದ ಸೇವೆ

ನಿಮ್ಮ ಆಧಾರ್‌ನಲ್ಲಿನ ಮೊಬೈಲ್ ಸಂಖ್ಯೆಯನ್ನು ಐಪಿಪಿಬಿ ಅದರ ಪೋಸ್ಟ್ ಮೆನ್ ಮೂಲಕ ಅಪ್‌ಡೇಟ್‌ ಮಾಡುತ್ತಾರೆ. ಅದೂ ನಿಮ್ಮ ಮನೆಗೆ ಬರುವ ಮೂಲಕವೇ ಅಪ್‌ಡೇಟ್‌ ಮಾಡುತ್ತಾರೆ. ಸುಮಾರು 650 ಐಪಿಪಿಬಿ ಶಾಖೆಗಳು ಮತ್ತು 1,46,000 ಪೋಸ್ಟ್‌ಮ್ಯಾನ್‌ಗಳ ದೊಡ್ಡ ನೆಟ್‌ವರ್ಕ್ ಮೂಲಕ ಈ ಸೇವೆ ಲಭ್ಯವಾಗಲಿದೆ ಎಂದು ಐಪಿಪಿಬಿ ತಿಳಿಸಿದೆ. ಈ ಸೇವೆ ಒದಗಿಸುವವರಿಗೆ ಸ್ಮಾರ್ಟ್ ಫೋನ್ ಮತ್ತು ಬಯೋಮೆಟ್ರಿಕ್ ಸಾಧನಗಳನ್ನು ನೀಡಲಾಗಿದ್ದು, ಈ ಸಾಧನಗಳಿಂದ ಆಧಾರ್ ಕಾರ್ಡ್‌ದಾರರ ಮನೆ ಬಾಗಿಲಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ.

ಮೊಬೈಲ್ ಸಂಖ್ಯೆಗಳನ್ನು ಮಾತ್ರ ಅಪ್‌ಡೇಟ್‌ ಮಾಡಲಾಗುವುದು

ಮೊಬೈಲ್ ಸಂಖ್ಯೆಗಳನ್ನು ಮಾತ್ರ ಅಪ್‌ಡೇಟ್‌ ಮಾಡಲಾಗುವುದು

ಪ್ರಸ್ತುತ ಐಪಿಪಿಬಿ ಆಧಾರ್ ಹೊಂದಿರುವವರಿಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಅಪ್‌ಡೇಟ್‌ ಮಾಡಲು ಮಾತ್ರ ಸಹಾಯ ಮಾಡುತ್ತಿದೆ. ಮಕ್ಕಳಿಗೆ ಆಧಾರ್ ಕಾರ್ಡ್‌ಗಳನ್ನು ಪಡೆಯಲು ಸಹಾಯ ಮಾಡಲು ಸಂಸ್ಥೆಯು ಶೀಘ್ರದಲ್ಲೇ ಹೊಸ ಸೇವೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.

ಅಧಿಕೃತ ಮಾಹಿತಿ
 

ಅಧಿಕೃತ ಮಾಹಿತಿ

ಸಂವಹನ ಸಚಿವಾಲಯ ಇತ್ತೀಚೆಗೆ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಮಾಡಿದ ಟ್ವೀಟ್‌ನಲ್ಲಿ ಈ ಹೊಸ ವೈಶಿಷ್ಟ್ಯವನ್ನು ಪ್ರಕಟಿಸಿದೆ. ಆಧಾರ್ ಹೊಂದಿರುವವರು ತಮ್ಮ ಮೊಬೈಲ್ ಸಂಖ್ಯೆಯನ್ನು ಪೋಸ್ಟ್‌ಮ್ಯಾನ್ ಮೂಲಕ ಅವರ ಮನೆ ಬಾಗಿಲಿನಲ್ಲೇ ಅಪ್‌ಡೇಟ್ ಮಾಡಬಹುದು ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ.

ಐಪಿಪಿಬಿಯ ಉದ್ದೇಶವೇನು ?

ಐಪಿಪಿಬಿಯ ಉದ್ದೇಶವೇನು ?

ಐಪಿಪಿಬಿಯನ್ನು ಸಂವಹನ ಸಚಿವಾಲಯದ ಅಂಚೆ ಇಲಾಖೆಯಡಿ ಸ್ಥಾಪಿಸಲಾಯಿತು. ಭಾರತ ಸರ್ಕಾರವು ಅದರಲ್ಲಿ ಶೇಕಡಾ 100 ರಷ್ಟು ಪಾಲನ್ನು ಹೊಂದಿದ್ದು, ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು 2018 ರ ಸೆಪ್ಟೆಂಬರ್‌ನಲ್ಲಿ ಪ್ರಾರಂಭಿಸಿದರು. ಬ್ಯಾಂಕಿಂಗ್ ವ್ಯಹವಾರ ಮಾಡದ ಜನರಿಗೆ ಬ್ಯಾಂಕಿಂಗ್ ಮತ್ತು ಅಂತಹುದೇ ಸೇವೆಗಳನ್ನು ಒದಗಿಸುವುದು ಈ ಸಂಸ್ಥೆಯ ಪ್ರಾಥಮಿಕ ಉದ್ದೇಶವಾಗಿದೆ.

ಇದು 1,55,000 ಅಂಚೆ ಕಚೇರಿಗಳ ನೆಟ್‌ವರ್ಕ್‌ನ ಲಾಭವನ್ನು ಪಡೆದುಕೊಳ್ಳುತ್ತದೆ, ಅದರಲ್ಲಿ ಸುಮಾರು 1,35,000 ಗ್ರಾಮೀಣ ಪ್ರದೇಶಗಳಲ್ಲಿವೆ. ಇದು 3,00,000 ಅಂಚೆ ನೌಕರರ ನೆಟ್‌ವರ್ಕ್ ಅನ್ನು ಹೊಂದಿದೆ.

 

English summary

Aadhaar Card: You Can Update Mobile Number At Doorstep: Details Here

Individuals can now update mobile numbers on their Aadhaar cards at their doorstep with the help of a postman.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X