For Quick Alerts
ALLOW NOTIFICATIONS  
For Daily Alerts

ಬೆಂಗಳೂರು ಮೂಲದ ಮಾಮ್ ಸ್ಟೋರ್ಸ್ ಸುರಭಿ ಭಾಟಿಯಾ ಸಾಧನೆ ಗೊತ್ತಾ?

|

ಅಂದುಕೊಂಡಂಥ ಪ್ರಾಡಕ್ಟ್ ಸಿಗಲಿಲ್ಲ ಎಂಬ ಸಿಟ್ಟು ಒಬ್ಬ ಮಹಿಳೆಯನ್ನು ಉದ್ಯಮಿಯನ್ನಾಗಿ ಮಾಡಿದ್ದರ ಸರಣಿಯ ಎರಡನೇ ಕಂತಿನಂತೆ ಇದೆ ಈ ಲೇಖನ. ಆಕೆ ಹೆಸರು ಸುರಭಿ ಭಾಟಿಯಾ. ಹೆರಿಗೆ ಪೂರ್ವದ ಹಾಗೂ ನಂತರದ ಸಮಯಕ್ಕೆ ಸರಿಯಾದ ಪ್ರಾಡಕ್ಟ್ ಗಳು ಸಿಗುತ್ತಿಲ್ಲ ಎಂಬ ಈ ಮಹಾತಾಯಿಯ ಸಿಟ್ಟು ಮಾಮ್ ಸ್ಟೋರ್ಸ್ ಎಂಬ ಸಂಸ್ಥೆಯನ್ನೇ ಹುಟ್ಟುಹಾಕುವಂತೆ ಮಾಡಿದೆ.

2017ನೇ ಇಸವಿಯಲ್ಲಿ ಗರ್ಭಿಣಿಯಾಗಿದ್ದ ಸುರಭಿ ಭಾಟಿಯಾ ಅವರಿಗೆ ದೊಡ್ಡ, ಅತಿ ದೊಡ್ಡ ಟಾಪ್ ಗಳು ಬೇಕಿದ್ದವು. ಆದರೆ ಅವರಿಗೆ ಅಂದುಕೊಂಡಂಥದ್ದು ಸಿಗುತ್ತಿರಲಿಲ್ಲ. ಇನ್ನು ಮಗಳು ಹುಟ್ಟಿದಳು. ಸುರಭಿ ಅವರ ಅಸಮಾಧಾನ ಮತ್ತೂ ಹೆಚ್ಚಾಯಿತು. ಡೈಪರ್ ಬ್ಯಾಗ್ ನಿಂದ ಪ್ರತಿಯೊಂದರ ಬಗ್ಗೆಯೂ ಅಸಮಾಧಾನ ಇರುತ್ತಿತ್ತು.

ಪ್ಲಾಸ್ಟಿಕ್ ಬಳಸಲಾಗುತ್ತದೆ, ಕಾರ್ಟೂನ್ ಗಳಲ್ಲಿ ಇರುವಂತೆ ಕಾಣುತ್ತವೆ ಹೀಗೆ. ಬಹುತೇಕ ಬ್ರ್ಯಾಂಡ್ ಹಾಗೂ ಪ್ರಾಡಕ್ಟ್ ಗಳಿಗೆ ಮಕ್ಕಳೇ ಗುರಿ ಎಂಬುದು ತಿಳಿಯುತ್ತದೆ. ತಾಯಂದಿರ ಅಗತ್ಯವನ್ನು ತುಂಬ ಚೆನ್ನಾಗಿ ಅರ್ಥ ಮಾಡಿಕೊಂಡ ಸುರಭಿ, 2018ರಲ್ಲಿ Mom Store ಆರಂಭಿಸುತ್ತಾರೆ.

Success Story: Tengin ಕಂಪೆನಿ ಕಟ್ಟಿದ ಅರಸೀಕೆರೆಯ ರೈತರ ಮಗSuccess Story: Tengin ಕಂಪೆನಿ ಕಟ್ಟಿದ ಅರಸೀಕೆರೆಯ ರೈತರ ಮಗ

ಅದಕ್ಕೂ ಮುನ್ನ ಸುರಭಿ ಅವರ ಹಿನ್ನೆಲೆ ಬಗ್ಗೆ ಹೇಳಿಬಿಡಬೇಕು. ಕೋಳಿಕ್ಕೋಡ್ ನ ಐಐಎಂ ವ್ಯಾಸಂಗ ಮುಗಿಸಿದ ಸುರಭಿ, ಯುನೈಟೆಡ್ ಸ್ಟೇಟ್ಸ್ ನ ಡೆಲಾಯಿಟ್ ನಲ್ಲಿ ಟೆಲಿಕಾಂ ಮತ್ತು ಮೀಡಿಯಾ ಟೆಕ್ನಾಲಜಿ ಕಂಪೆನಿಯಲ್ಲಿ ಸ್ಟ್ರಾಟೆಜಿ ಕನ್ಸಲ್ಟೆಂಟ್ ಆಗಿ ಕೆಲಸ ಮಾಡಿರುತ್ತಾರೆ. ಆ ನಂತರ ಆದಿತ್ಯ ಬಿರ್ಲಾ ಫ್ಯಾಷನ್ ಅಂಡ್ ರೀಟೇಲ್ ಲಿಮಿಟೆಡ್ ನಲ್ಲಿ ಬಿಜಿನೆಸ್ ಎಕ್ಸಲೆನ್ಸ್ ತಂಡದಲ್ಲಿ ಇರುತ್ತಾರೆ. ಈ ಕಂಪೆನಿಯು ಪೀಟರ್ ಇಂಗ್ಲೆಂಡ್ ಹಾಗೂ ಆಲೆನ್ ಸೊಲಿ ಮತ್ತಿತರ ಬ್ರ್ಯಾಂಡ್ ಗಳನ್ನು ಒಳಗೊಂಡಿದೆ.

2018ರಲ್ಲಿ ಉದ್ಯಮ ಆರಂಭ

2018ರಲ್ಲಿ ಉದ್ಯಮ ಆರಂಭ

ತಾವು ಗರ್ಭಿಣಿಯಾಗಿದ್ದಾಗ ಹಾಗೂ ನಂತರದ ಅನುಭವಗಳಿಂದ 2018ರಲ್ಲಿ ಉದ್ಯಮ ಆರಂಭಿಸಲು ಪ್ರೇರಣೆ ದೊರಕುತ್ತದೆ. ತಾಯಂದಿರಿಗಾಗಿಯೇ ಸಿದ್ಧಪಡಿಸುವ ಬಟ್ಟೆ ಮಾರುಕಟ್ಟೆಯಲ್ಲಿ ಸುರಭಿಯವರ ಸ್ಟಾರ್ಟ್ ಅಪ್ ದೊಂದು ಸಿಗ್ನೇಚರ್ ಇದೆ. ವರ್ಷಾವರ್ಷ 15ರಿಂದ 17 ಪರ್ಸೆಂಟ್ ಬೆಳವಣಿಗೆ ದಾಖಲಿಸುತ್ತಿದೆ. ಇನ್ನು ಮಕ್ಕಳ ದಿರಿಸಿನ ಮಾರುಕಟ್ಟೆಗೆ ಬಂದರೆ 2020ರಿಂದ 2025ರ ಮಧ್ಯೆ 15 ಪರ್ಸೆಂಟ್ ಬೆಳವಣಿಗೆ ಸಾಧಿಸುವ ಅಂದಾಜಿದೆ. ಸುರಭಿ ಅವರು ಮೊದಲಿಗೆ ಮಾರ್ಕೆಟ್ ರೀಸರ್ಚ್ ಮಾಡಿದ್ದಾರೆ. ಆ ನಂತರ ಸೂಕ್ತ ಮಾರಾಟಗಾರರನ್ನು ಗುರುತಿಸಿದ್ದಾರೆ. ತಮ್ಮದೇ ಅಪಾರ್ಟ್ ಮೆಂಟ್ ನಲ್ಲಿ ಒಂದು ಕೋಣೆಯನ್ನು ದಾಸ್ತಾನು ಇಡುವುದಕ್ಕೆ ಅಂತಲೇ ಮೀಸಲಿಟ್ಟು, ಕೆಲವು ಉತ್ಪನ್ನಗಳನ್ನು ತಲುಪಿಸಲು ಆರಂಭಿಸಿದ್ದಾರೆ. ತನ್ನದೇ ವಯಸ್ಸಿನ, ಹೆಚ್ಚಿನ ವಿದ್ಯಾಭ್ಯಾಸ ಮಾಡಿದ, ಈಗಾಗಲೇ ವೃತ್ತಿಯಲ್ಲಿ ಒಂದು ಸ್ಥಾನ ಗಳಿಸಿದ ಬಹುತೇಕ ಮಹಿಳೆಯರು ಆ ಅವಧಿಯಲ್ಲಿ ಏನು ನಿರೀಕ್ಷೆ ಮಾಡುತ್ತಾರೆ ಎಂಬ ಬಗ್ಗೆ ಅದಾಗಲೇ ಸುರಭಿ ಅವರಿಗೆ ತಿಳಿದಿತ್ತು. ಇನ್ನು ತಮ್ಮ ಹಿಂದಿನ ತಲೆಮಾರಿಗಿಂತ ಬೇರೆಯದೇ ಜೀವನಶೈಲಿ ಬಗ್ಗೆಯೂ ಅವರಿಗೆ ಗೊತ್ತಾಗಿತ್ತು. ಈ ಗ್ರಾಹಕರಿಗಾಗಿ ಮಾಮ್ ಸ್ಟೋರ್ ನಿಂದ ಪ್ರಾಡಕ್ಟ್ ಗಳನ್ನು ಒದಗಿಸಲು ಶುರು ಮಾಡಿದ್ದಾರೆ.

500ರಿಂದ 5000 ರುಪಾಯಿ ತನಕ ಉತ್ಪನ್ನಗಳು
 

500ರಿಂದ 5000 ರುಪಾಯಿ ತನಕ ಉತ್ಪನ್ನಗಳು

ಮಾಮ್ ಸ್ಟೋರ್ ನಲ್ಲಿನ ಡೈಪರ್ ಬ್ಯಾಗ್ ನಿಂದ ತಾಯಂದಿರಿಗೆ ಬಹಳ ಸಹಾಯ ಆಗುತ್ತದೆ ಎನ್ನುತ್ತಾರೆ ಸುರಭಿ. ಏಕೆಂದರೆ ಆ ಬ್ಯಾಗ್ ನಲ್ಲಿ ಲ್ಯಾಪ್ ಟಾಪ್ ಮತ್ತು ಬೇರೆ ಆಕ್ಸೆಸರಿಗಳನ್ನೂ ಇಡಬಹುದು. ಇನ್ನು ಮಾಮ್ ಸ್ಟೋರ್ಸ್ ನಿಂದ ಟಾಪ್ ಗಳು, ಲೆಗ್ಗಿನ್ಸ್, ಮೆಟರ್ನಿಟಿ ಡೆನಿಮ್ ಗಳು, ಡ್ರೆಸ್ ಗಳು, ಗೌನ್ ಗಳು ಸಿಗುತ್ತವೆ. ಇನ್ನು ಗರ್ಭಿಣಿ ಹಾಗೂ ಬಾಣಂತಿಯರಿಗಾಗಿಯೇ ಒಳ ಉಡುಪುಗಳು, ಹಾಲೂಡಿಸುವುದಕ್ಕೆ ಅನುಕೂಲವಾಗುವಂಥ ದಿರಿಸುಗಳು ಸಹ ದೊರೆಯುತ್ತವೆ. ಜತೆಗೆ ಹಾಲೂಡಿಸುವ ದಿಂಬು ಜತೆಗೆ ಸಪೋರ್ಟ್ ಬೆಲ್ಟ್ ಕೂಡ ಸಿಗುತ್ತವೆ. 500ರಿಂದ 5000 ರುಪಾಯಿ ತನಕ ಉತ್ಪನ್ನಗಳು ದೊರೆಯುತ್ತವೆ. ಭಾರತದಾದ್ಯಂತ ಖರೀದಿ ಮಾಡಬಹುದು. ಈ ಸ್ಟಾರ್ಟ್ ಅಪ್ ನದೇ ವೆಬ್ ಸೈಟ್ ಹಾಗೂ ವಿವಿಧ ಸೋಷಿಯಲ್ ಮೀಡಿಯಾ ಚಾನೆಲ್ ಗಳಿವೆ. ಇನ್ ಸ್ಟಾಗ್ರಾಮ್ ನಲ್ಲಿ 70 ಸಾವಿರಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.

ಇನ್ನೂರು ಪರ್ಸೆಂಟ್ ಬೆಳವಣಿಗೆ

ಇನ್ನೂರು ಪರ್ಸೆಂಟ್ ಬೆಳವಣಿಗೆ

ಈ ವರೆಗೆ ಯಾವುದೆಲ್ಲ ಪ್ರಾಡಕ್ಟ್ ಗಳನ್ನು ನೀಡಲಾಗಿದೆಯೋ ಅವೆಲ್ಲಕ್ಕೂ ಅದ್ಭುತ ಪ್ರತಿಕ್ರಿಯೆ ಬಂದಿದೆ ಎನ್ನುತ್ತಾರೆ ಸುರಭಿ. ಅಷ್ಟೇ ಅಲ್ಲ, ಗ್ರಾಹಕರು ನೀಡುವ ಯಾವುದೇ ಸಕಾರಾತ್ಮಕ ಸಲಹೆ ಸೂಚನೆಗಳನ್ನು ಸ್ವೀಕರಿಸಲು ಮಾಮ್ ಸ್ಟೋರ್ಸ್ ಸಿದ್ಧವಿದೆ ಎಂದು ಕೂಡ ಹೇಳುತ್ತಾರೆ. ನವಜಾತ ಮಕ್ಕಳಿಗೆ ಉತ್ಪನ್ನಗಳನ್ನು ತಯಾರಿಸುವುದಕ್ಕೆ ಬೇಡಿಕೆ ಇದೆ. ಏಕೆಂದರೆ ಲಾಕ್ ಡೌನ್ ಅವಧಿಯಲ್ಲಿ ಸಾಕಷ್ಟು ಮಳಿಗೆಗಳು ಮುಚ್ಚಿವೆ ಎನ್ನುತ್ತಾರೆ ಸುರಭಿ. ಕಳೆದ ಎರಡು ವರ್ಷದಲ್ಲಿ ಇನ್ನೂರು ಪರ್ಸೆಂಟ್ ಬೆಳವಣಿಗೆ ಸಾಧಿಸಿದೆಯಂತೆ ಮಾಮ್ ಸ್ಟೋರ್ಸ್. ಆದರೆ ಈ ವರ್ಷದ ಮೊದಲ ತ್ರೈಮಾಸಿಕದ ಆದಾಯವು ಕಳೆದ ವರ್ಷದ ಮೊದಲ ತ್ರೈಮಾಸಿಕದಷ್ಟೇ ಇದೆ ಎನ್ನುತ್ತಾರೆ.

50 ಲಕ್ಷದ ತನಕ ವಹಿವಾಟು

50 ಲಕ್ಷದ ತನಕ ವಹಿವಾಟು

ಲಾಕ್ ಡೌನ್ ಅವಧಿಯಲ್ಲಿ ಎಷ್ಟೋ ಪ್ರಮುಖ ಬ್ರ್ಯಾಂಡ್ ಗಳು ಬಾಗಿಲು ಹಾಕಿದಾಗಲೂ ವ್ಯವಹಾರ ಮುಂದುವರಿಸುವ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಅವರಿಗೆ ಬೇಸರ ಏನಿಲ್ಲ. ಏಕೆಂದರೆ, ಕೆಲವು ಆರ್ಡರ್ ಗಳು ಕ್ಯಾನ್ಸಲ್ ಆಗಿದೆ. ಆದರೆ ಆರ್ಗಾನಿಕ್ ಬೆಳವಣಿಗೆ ಹೆಚ್ಚಾಗಿದೆ ಎನ್ನುತ್ತಾರೆ. ಬೆಂಗಳೂರು ಮೂಲದ ಈ ಸ್ಟಾರ್ಟ್ ಅಪ್ ನಲ್ಲಿ ಸದ್ಯಕ್ಕೆ ಒಂಬತ್ತು ಮಂದಿ ಸಿಬ್ಬಂದಿ ಇದ್ದಾರೆ. 50 ಲಕ್ಷದ ತನಕ ವಹಿವಾಟು ನಡೆಸುತ್ತಿದೆ. ಒಂಬತ್ತು ಜನರಲ್ಲಿ ಡಿಸೈನಿಂಗ್ ತಂಡ ಕೂಡ ಇದೆ. ಅದರಲ್ಲಿ ಬಟ್ಟೆ ಉತ್ಪಾದನೆಯನ್ನು ಹೊರಗಿನವರಿಗೆ ಗುತ್ತಿಗೆ ಆಧಾರದಲ್ಲಿ ನೀಡಲಾಗಿದೆ. ಮಹಿಳೆಯರಿಗೆ ಗರ್ಭಿಣಿಯಾದ ಅವಧಿಯಲ್ಲಿ ಅಗತ್ಯವನ್ನು ಪುರೈಸುವುದು ಮತ್ತು ಮಕ್ಕಳಿಗೆ ಐದು ವರ್ಷದ ತನಕ ಬೇಕಾದದ್ದನ್ನು ನೀಡುವುದು ಎರಡಕ್ಕೂ ಸ್ವಲ್ಪ ಮಟ್ಟಿಗೆ ನೇರವಾದ ಸ್ಪರ್ಧೆ ಇದೆ. ಆದರೆ ಅದನ್ನು ಎದುರಿಸಲು ಮಾಮ್ ಸ್ಟೋರ್ಸ್ ಸಿದ್ಧವಿದೆ ಎನ್ನುತ್ತಾರೆ ಸುರಭಿ.

English summary

Bengaluru Based 'The Mom Store' CEO Surabhi Bhatia Success Story

The Mom Stores, Bengaluru based start up recorded growth during Corona lock down. Here is the success story of Mom Stores CEO Surbhi Bhatia success story.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X