For Quick Alerts
ALLOW NOTIFICATIONS  
For Daily Alerts

ಆನ್‌ಲೈನ್‌ ಶಾಪಿಂಗ್‌ಗೆ ಯಾವ ಕ್ರೆಡಿಟ್‌ ಕಾರ್ಡ್ ಉತ್ತಮ?

|

ಆನ್‌ಲೈನ್‌ನಲ್ಲಿ ಕಡಿಮೆ ದರದಲ್ಲಿ ಉತ್ತಮ ವಸ್ತುಗಳು ದೊರೆಯುತ್ತದೆ ಎಂದು ಹೇಳುವಾಗ ಯಾರು ಖರೀದಿ ಮಾಡದೆ ಇರುತ್ತಾರೆ ಹೇಳಿ?. ಇನ್ನು ಈ ಆನ್‌ಲೈನ್‌ ಶಾಪಿಂಗ್‌ಗೆ ನಮ್ಮ ಕ್ರೆಡಿಟ್‌ ಕಾರ್ಡ್‌ಗಳು ಬಹಳಷ್ಟು ಸಹಾಯ ಮಾಡುತ್ತಿದೆ. ಇದರಿಂದಾಗಿ ನಮಗೆ ಹಣವನ್ನು ಉಳಿತಾಯ ಮಾಡಲು ಹಾಗೂ ಆನ್‌ಲೈನ್‌ನಲ್ಲಿ ಉತ್ತಮ ಆಫರ್‌ ಇರುವಾಗಲೇ ಖರೀದಿ ಮಾಡಲು ಸಾಧ್ಯವಾಗುತ್ತದೆ. ಹಾಗೆಯೇ ನಾವಿದಲ್ಲಿಯೇ ಶಾಪಿಂಗ್‌ ಮಾಡಲು ಕೂಡಾ ಸಹಕಾರಿ. ಈ ಕ್ರೆಡಿಟ್‌ ಕಾರ್ಡ್‌ಗಳು ನಮಗೆ ಸರಳ ಇಎಂಐ ಸೇವೆಯನ್ನು ನೀಡುತ್ತದೆ. ಇದರಿಂದಾಗಿ ನೀವು ಖರೀದಿ ಮಾಡಿ ಬಳಿಕ ಇಸ್ಟಾಲ್‌ಮೆಂಟ್‌ನಲ್ಲಿ ಹಣವನ್ನು ಪಾವತಿ ಮಾಡಬಹುದು.

 

ಇನ್ನು ಹೆಚ್ಚು ಗ್ರಾಹಕರು ಆನ್‌ಲೈನ್‌ ಶಾಪಿಂಗ್‌ ಅನ್ನು ಆಯ್ಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಆನ್‌ಲೈನ್‌ ಕ್ರೆಡಿಟ್‌ ಕಾರ್ಡ್‌ನ ಬೇಡಿಕೆಯು ಅಧಿಕವಾಗುತ್ತಿದೆ. ಜನರು ಎಲ್ಲಾ ವಸ್ತುಗಳನ್ನು ಈಗ ಆನ್‌ಲೈನ್‌ ಮೂಲಕವೇ ಖರೀದಿ ಮಾಡುತ್ತಾರೆ. ತಮ್ಮ ಮೊಬೈಲ್‌ ಫೋನ್‌, ಹಿಯರ್‌ ಫೋನ್‌, ಬ್ಯಾಟರಿ, ಚಾರ್ಜರ್‌ನಿಂದ ಹಿಡಿದು ಆಹಾರದವರೆಗೂ ಎಲ್ಲವನ್ನೂ ಆನ್‌ಲೈನ್‌ ಮೂಲಕವೇ ಖರೀದಿ ಮಾಡುತ್ತಾರೆ. ಹೀಗೆ ಹೆಚ್ಚಿನ ಜನರು ಆನ್‌ಲೈನ್‌ ಮೂಲಕವೇ ಖರೀದಿ ಮಾಡುತ್ತಿರುವಾಗ ಆನ್‌ಲೈನ್‌ ಕ್ರೆಡಿಟ್‌ ಕಾರ್ಡ್‌ಗಳ ಬೇಡಿಕೆಯು ಅಧಿಕಗೊಂಡಿದೆ. ಆನ್‌ಲೈನ್‌ ಶಾಪಿಂಗ್‌ ಅನ್ನು ಸಂಭ್ರಮಿಸಬೇಕಾದರೆ ಶಾಪಿಂಗ್‌ ಕ್ರೆಡಿಟ್‌ ಕಾರ್ಡ್‌ಗಳು ಈಗ ಒಂದು ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ರಿಯಾಯಿತಿ, ಬೇರೆ ಬೇರೆ ರೀತಿಯ ಪ್ರಯೋಜನಗಳು ಇರುತ್ತದೆ. ಇನ್ನು ಕೆಲವು ಕ್ರೆಡಿಟ್‌ ಕಾರ್ಡ್‌ಗಳು ನೀವು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಪ್ರಮುಖ ಖರೀದಿಯಲ್ಲಿ ಇಎಂಐ ಪಡೆಯಲು ಅವಕಾಶ ನೀಡುತ್ತದೆ.

ಎಸ್‌ಬಿಐ Vs ಅಂಚೆ ಕಚೇರಿ ಎಫ್‌ಡಿ: ಎಲ್ಲಿ ಹೂಡಿಕೆ ಮಾಡಿದರೆ ಸೂಕ್ತ?

ಕ್ಯಾಷ್‌ಬ್ಯಾಕ್‌ ಆಫರ್‌, ವಿಶೇಷ ಆಫರ್‌, ವೋಚರ್‌ಗಳು, ರಿಯಾಯಿತಿ, ರಿವಾರ್ಡ್, ಬೋನಸ್‌ ರಿವಾರ್ಡ್, ಹೊಟೇಲ್‌ ಬುಕ್ಕಿಂಗ್‌ ಹಾಗೂ ವಿಮಾನಯಾನದಲ್ಲಿ ರಿಯಾಯಿತಿ, ಹೆಚ್ಚಿನ ಖರೀದಿ ಸಂದರ್ಭದಲ್ಲಿ ಇಎಂಐ ಪಡೆಯಲು ಅವಕಾಶ ಮೊದಲಾದ ಸೌಲಭವನ್ನು ನಾವು ಕ್ರೆಡಿಟ್‌ ಕಾರ್ಡ್ ಮೂಲಕ ಪಡೆಯಬಹುದು. ನೀವು ಆನ್‌ಲೈನ್‌ ಮೂಲಕ ಖರೀದಿ ಮಾಡಲು ಡೆಬಿಟ್‌ ಕಾರ್ಡ್ ಅನ್ನು ಬಳಸುವುದು ಉತ್ತಮ ಆಯ್ಕೆಯಾಗಿದೆ. ಹಾಗಾದರೆ ನಿಮಗೆ ಆನ್‌ಲೈನ್‌ ಶಾಪಿಂಗ್‌ಗೆ ಯಾವುದು ಉತ್ತಮ ಕ್ರೆಡಿಟ್‌ ಕಾರ್ಡ್. ತಿಳಿಯಲು ಮುಂದೆ ಓದಿ.

 ಐಸಿಐಸಿಐ ಅಮೇಜಾನ್ ಪೇ ಕ್ರೆಡಿಟ್‌ ಕಾರ್ಡ್, ನಿಮ್ಮ ಆಯ್ಕೆ

ಐಸಿಐಸಿಐ ಅಮೇಜಾನ್ ಪೇ ಕ್ರೆಡಿಟ್‌ ಕಾರ್ಡ್, ನಿಮ್ಮ ಆಯ್ಕೆ

ಐಸಿಐಸಿಐ ಅಮೇಜಾನ್ ಪೇ ಕ್ರೆಡಿಟ್‌ ಕಾರ್ಡ್ ಭಾರತದ ಜನಪ್ರಿಯ ಕ್ಯಾಷ್‌ಬ್ಯಾಕ್‌ ಕ್ರೆಡಿಟ್‌ ಕಾರ್ಡ್ ಆಗಿದೆ. ಇದು ಅಮೆಜಾನ್‌ನಲ್ಲಿ ಶೇಕಡ ಐದರಷ್ಟು ಕ್ಯಾಷ್‌ಬ್ಯಾಕ್‌ ಅನ್ನು ನೀಡುತ್ತದೆ. ಬೇರೆ ಖರೀದಿಗಳಿಗೆ ಶೇಕಡ ಒಂದರಷ್ಟು ಫ್ಲ್ಯಾಟ್ ರಿವಾರ್ಡ್ ಇದೆ. ಅತಿದೊಡ್ಡ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಒಂದಾದ ಅಮೆಜಾನ್‌ನೊಂದಿಗೆ ಕೋ ಬ್ರಾಂಡ್‌ ಆಗಿರುವ ಈ ಕಾರ್ಡ್ 'ಫ್ರೀ ಫಾರ್ ಲೈಫ್' ವೈಶಿಷ್ಟ್ಯದ ಮೂಲಕ ದೇಶದಲ್ಲಿ ಶೀಘ್ರವಾಗಿ ಜನಪ್ರಿಯತೆಯನ್ನು ಗಳಿಸಿತು. ಫ್ಲಿಫ್‌ಕಾರ್ಟ್‌ನ ಆಕ್ಸಿಸ್‌ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ಗೆ ಹೋಲಿಕೆ ಮಾಡಿದರೆ ಅಮೆಜಾನ್‌ ಕಾರ್ಡ್ ಕಡಿಮೆ ಕ್ಯಾಷ್‌ಬ್ಯಾಕ್‌ ಅನ್ನು ನೀಡುತ್ತದೆ. ಶೇಕಡ ಒಂದರಷ್ಟು ಕ್ಯಾಷ್‌ಬ್ಯಾಕ್‌ ಅನ್ನು ನೀಡುತ್ತದೆ. ಆದರೆ ಈ ಕಾರ್ಡ್ ಫ್ರೀ ಆಗಿದೆ. ಆದ್ದರಿಂದ ನೀವು ಇದನ್ನು ಹೊಂದಿರುವುದು ಉತ್ತಮ.

ಈ ಡೆಬಿಟ್‌ ‌ಕಾರ್ಡ್‌‌ ಉಪಯೋಗಿಸಿ ಖರೀದಿ ಮಾಡಿದ್ರೆ ಪ್ರತಿ ಬಾರಿಯೂ ಶೇ.1 ಕ್ಯಾಶ್‌ಬ್ಯಾಕ್!

 ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಿಂದ ಏನು ಪ್ರಯೋಜನ?
 

ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಿಂದ ಏನು ಪ್ರಯೋಜನ?

ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ನಿಮಗೆ ಅನಿಯಮಿತ ಕ್ಯಾಷ್‌ಬ್ಯಾಕ್‌ ಅನ್ನು ಕೆಲವು ಸಂದರ್ಭಗಳಲ್ಲಿ ನೀಡುತ್ತದೆ. ಮುಖ್ಯವಾಗಿ ಉಬರ್‌, ಸ್ವಿಗ್ಗಿ, ಪಿವಿಆರ್‌, ಕ್ಯೂರ್‌ಫಿಟ್‌, ಮಿಂತ್ರಾ, ಟಾಟಾ ಸ್ಕೈ ಹಾಗೂ ಇತರೆ ಕಡೆ ಈ ಕ್ರೆಡಿಟ್‌ ಕಾರ್ಡ್ ಅನ್ನು ಬಳಸಿದರೆ ಅನಿಯಮಿತ ಕ್ಯಾಷ್‌ಬ್ಯಾಕ್‌ ದೊರೆಯಲಿದೆ. ಈ ಕಾರ್ಡ್ ಅನ್ನು ನಿಮಗೆ ನೀಡಿದ ಸಂದರ್ಭದಿಂದಲೇ ನೀವು ಕಾರ್ಡ್ ಅನ್ನು ಬಳಸಬಹುದು. ಹಾಗೆಯೇ ಮೊದಲಿಗೆ ನಿಮಗೆ 2,500 ಸ್ವಾಗತ ಕೊಡುಗೆಯಾಗಿ ದೊರೆಯಲಿದೆ. ಅದನ್ನು ನಿಮ್ಮ ಇಚ್ಛೆಯಂತೆ ಖರ್ಚು ಮಾಡಬಹುದಾಗಿದೆ. ಇನ್ನು ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಆಕರ್ಷಿತ ಪ್ರೋತ್ಸಾಹಕಗಳನ್ನು ನಿಮಗೆ ನೀಡುತ್ತದೆ. ಇದು ವರ್ಚುವಲ್‌ ಕ್ರೆಡಿಟ್‌ ಕಾರ್ಡ್ ಆಗಿದ್ದು, ನಿಮಗೆ ಅನುಕೂಲಕರ ಹಾಗೂ ಆರ್ಥಿಕ ಖರೀದಿಯನ್ನು ಮಾಡಲು ಅವಕಾಶವನ್ನು ನೀಡುತ್ತದೆ.

 ಏನಿದು ಎಸ್‌ಬಿಐ ಸಿಂಪ್ಲಿ ಕ್ಲಿಕ್ ಕ್ರೆಡಿಟ್ ಕಾರ್ಡ್?

ಏನಿದು ಎಸ್‌ಬಿಐ ಸಿಂಪ್ಲಿ ಕ್ಲಿಕ್ ಕ್ರೆಡಿಟ್ ಕಾರ್ಡ್?

ಸುಲಭವಾದ ಅರ್ಹತೆ ಮತ್ತು ಕಡಿಮೆ ವಾರ್ಷಿಕ ವೆಚ್ಚದ ಕಾರಣ, ಎಸ್‌ಬಿಐ ಸಿಂಪ್ಲಿಕ್ಲಿಕ್ ಕಾರ್ಡ್ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಕ್ರೆಡಿಟ್ ಕಾರ್ಡ್‌ಗಳಲ್ಲಿ ಒಂದಾಗಿದೆ. ಅಮೆಜಾನ್‌, ಬುಕ್‌ಮೈಶೋ, ಕ್ಲಿಯರ್‌ಟ್ರಿಪ್‌, ಲೆನ್ಸ್‌ಕಾರ್ಟ್, ನೆಟ್‌ಮೆಡ್ಸ್‌, ಅರ್ಬನ್‌ಕ್ಲಾಪ್‌ ಹಾಗೂ ಇತರ ಆಯ್ದ ಪಾಲುದಾರರೊಂದಿಗೆ ಆನ್‌ಲೈನ್ ಖರೀದಿಗಳಲ್ಲಿ ಕಾರ್ಡ್ 10X ರಿವಾರ್ಡ್ ಪಾಯಿಂಟ್‌ಗಳನ್ನು ನೀಡುತ್ತದೆ. ನೀವು ಯಾವುದೇ ಇತರ ಆನ್ಲೈನ್ ಖರೀದಿಗಳಲ್ಲಿ ಶೇಕಡ 1.25 ಕ್ಯಾಷ್‌ಬ್ಯಾಕ್‌ ಪಡೆಯುತ್ತೀರಿ. ನೀವು ಅಮೆಜಾನ್‌ನಲ್ಲಿ ರೂ. 10,000 ಖರ್ಚು ಮಾಡಿದರೆ, ಒಂದು ಸಾವಿರ ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯುತ್ತೀರಿ. ಹಾಗೆಯೇ ಅದನ್ನು ಅಮೆಜಾನ್ ಅಥವಾ ಕ್ಲಿಯರ್‌ಟ್ರಿಪ್ ಗಿಫ್ಟ್ ಕಾರ್ಡ್‌ಗಳಿಗೆ ವಿನಿಮಯ ಮಾಡಿಕೊಳ್ಳಬಹುದು. ಇನ್ನು ನಿಮ್ಮ ವಹಿವಾಟು ರೂ 2500 ಮೀರಿದಾಗ ನೀವು ಇಎಂಐ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಹಾಗೆಯೇ ಅಮೆಜಾನ್‌ನಲ್ಲಿ 500 ರೂಗಳ ಸ್ವಾಗತ ಕೊಡುಗೆ ದೊರೆಯಲಿದೆ. ಇದು ನಿಮ್ಮ ಖರೀದಿ ಅನುಭವವನ್ನು ಹೆಚ್ಚು ಆನಂದದಾಯಕವಾಗಿಸುತ್ತದೆ.

ಚಿನ್ನದ ಬೆಲೆ ಏರಿಕೆ: ಸೆಪ್ಟೆಂಬರ್ 27ರಂದು ಯಾವ ನಗರದಲ್ಲಿ ಬೆಲೆ ಎಷ್ಟಿದೆ?

 ಆಕ್ಸಿಸ್ ಬ್ಯಾಂಕ್ ನಿಯೋ ಕ್ರೆಡಿಟ್ ಕಾರ್ಡ್ ಬಗ್ಗೆ ತಿಳಿಯಿರಿ

ಆಕ್ಸಿಸ್ ಬ್ಯಾಂಕ್ ನಿಯೋ ಕ್ರೆಡಿಟ್ ಕಾರ್ಡ್ ಬಗ್ಗೆ ತಿಳಿಯಿರಿ

ಮಿಂತ್ರ, ಬುಕ್‌ಮೈಶೋ, ರೆಡ್‌ಬಸ್, ಫ್ರೀಚಾರ್ಜ್ ಮತ್ತು ಜಬಾಂಗ್ ಮೂಲಕ ಶಾಪಿಂಗ್‌ ಮಾಡುವ ಜನರಿಗೆ ಆಕ್ಸಿಸ್ ಬ್ಯಾಂಕ್ ನಿಯೋ ಕ್ರೆಡಿಟ್ ಕಾರ್ಡ್ ಉತ್ತಮವಾಗಿದೆ. ಇದರಲ್ಲಿ ಅತೀ ಕಡಿಮೆ ನೋಂದಣಿ ದರ, 250 ಇರುವ ಕಾರಣದಿಂದಾಗಿ ಮಿಂತ್ರ, ಬುಕ್‌ಮೈಶೋ, ರೆಡ್‌ಬಸ್, ಮೊದಲಾದವುಗಳಲ್ಲಿ ಶಾಪಿಂಗ್‌ ಮಾಡುವ ಜನರಿಗೆ ಆಕ್ಸಿಸ್ ಬ್ಯಾಂಕ್ ನಿಯೋ ಕ್ರೆಡಿಟ್ ಕಾರ್ಡ್ ಉತ್ತಮವಾಗಿದೆ. ಇದು 2500 ರೂಪಾಯಿಗಳನ್ನು 45 ದಿನಗಳಲ್ಲಿ ಖರ್ಚು ಮಾಡಿದ ನಂತರ 250 ರೂಪಾಯಿ ನೋಂದಣಿ ವೆಚ್ಚವನ್ನು ಮನ್ನಾ ಮಾಡಲಾಗುತ್ತದೆ. ಇನ್ನು ಮಿಂತ್ರ, ಬುಕ್‌ಮೈಶೋ, ರೆಡ್‌ಬಸ್ ಮತ್ತು ಫ್ರೀಚಾರ್ಜ್ ಶೇಕಡ 10 ರಿಯಾಯಿತಿಯನ್ನು ನೀಡುತ್ತವೆ. ಹೆಚ್ಚುವರಿಯಾಗಿ ಖರ್ಚು ಮಾಡಿದ ಪ್ರತಿ 200 ರೂಪಾಯಿಗಳಿಗೆ ನೀವು ಎರಡು ರಿವಾರ್ಡ್ ಪಾಯಿಂಟ್‌ ಅನ್ನು ಪಡೆಯಬಹುದು.

 ಹೆಚ್‌ಎಸ್‌ಬಿಸಿ ಕ್ಯಾಷ್‌ಬ್ಯಾಕ್ ಕ್ರೆಡಿಟ್ ಕಾರ್ಡ್: ನಿಮಗೇನು ಲಾಭ?

ಹೆಚ್‌ಎಸ್‌ಬಿಸಿ ಕ್ಯಾಷ್‌ಬ್ಯಾಕ್ ಕ್ರೆಡಿಟ್ ಕಾರ್ಡ್: ನಿಮಗೇನು ಲಾಭ?

ನಿಮ್ಮ ಎಲ್ಲಾ ಆನ್‌ಲೈನ್‌ ಶಾಪಿಂಗ್‌, ಖರೀದಿಗಳ ಮೇಲೆ ಹೆಚ್‌ಎಸ್‌ಬಿಸಿ ಕ್ಯಾಷ್‌ಬ್ಯಾಕ್ ಕ್ರೆಡಿಟ್ ಕಾರ್ಡ್ ನಿಮಗೆ ಹೆಸರಿನಂತೆಯೇ ಕ್ಯಾಶ್‌ಬ್ಯಾಕ್ ನೀಡುತ್ತದೆ. ಅದು ಕೂಡಾ ಅನಿಯಮಿತ ಕ್ಯಾಷ್‌ಬ್ಯಾಕ್‌ ಇದಾಗಿದೆ. ಇನ್ನು ಯಾವುದೇ ನಿಗದಿತ ಅಥವಾ ಕನಿಷ್ಠ ಖರೀದಿ ನಿಯಮವಿಲ್ಲದೆಯೇ ನೀವು ಕ್ಯಾಷ್‌ಬ್ಯಾಕ್‌ ಪಡೆಯಬಹುದು. ಅಂದರೆ ನೀವು ನಿಮ್ಮ ಎಲ್ಲಾ ಖರೀದಿಯಲ್ಲಿ, ಎಷ್ಟೇ ಕಡಿಮೆ, ಹೆಚ್ಚು ಖರೀದಿ ಮಾಡಿದರೂ ನಿಮಗೆ ಕ್ಯಾಷ್‌ಬ್ಯಾಕ್‌ ದೊರೆಯಲಿದೆ. ಎಲ್ಲಾ ಆನ್‌ಲೈನ್ ಖರೀದಿಗಳಲ್ಲಿ ನೀವು 1.5 ಶೇಕಡಾ ಕ್ಯಾಷ್‌ಬ್ಯಾಕ್ ಪಡೆಯಲಿದ್ದೀರಿ. ಮತ್ತು ಕಾರ್ಡ್‌ನೊಂದಿಗೆ ಇತರ ಎಲ್ಲಾ ಖರೀದಿಗಳಲ್ಲಿ 1 ಪ್ರತಿಶತ ಕ್ಯಾಶ್‌ಬ್ಯಾಕ್ ಪಡೆಯಬಹುದು. ನೀವು ರೂ. 2,250 ಸೈನ್ ಅಪ್ ಪ್ರೋತ್ಸಾಹಧನ ಪಡೆಯಬಹುದು. ದೇಶೀಯ ವಿಮಾನಗಳಿಗಾಗಿ ಇದರಲ್ಲಿ 2,000 ಕೂಪನ್‌ಗಳು ಇರುತ್ತದೆ. ಹಾಗೆಯೇ ರೂ. 250 ಸ್ವಿಗ್ಗಿ ಆಹಾರ ವಿತರಣಾ ವೋಚರ್ ಕೂಡಾ ದೊರೆಯುತ್ತದೆ. ನಿಮಗೆ ಸ್ವಿಗ್ಗಿಯಲ್ಲಿ 20% ರಿಯಾಯಿತಿಯನ್ನು ಹಾಗೂ ಅಮೆಜಾನ್ ಖರೀದಿಗಳಲ್ಲಿ 5% ರಿಯಾಯಿತಿಯನ್ನು ಕೂಡಾ ಕಾರ್ಡ್ ನಿಮಗೆ ನೀಡುತ್ತದೆ.

English summary

Best Credit Cards For Online Shopping In 2021 India

Best Credit Cards For Online Shopping In 2021 India, To know more Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X