For Quick Alerts
ALLOW NOTIFICATIONS  
For Daily Alerts

ನಿಮ್ಮ ಪ್ರವಾಸದಲ್ಲಿ ಜಾಸ್ತಿ ಹಣ ಖರ್ಚು ಆಗಬಾರದು ಎಂದಾದರೆ ಇದನ್ಮೊಮ್ಮೆ ನೋಡಿ

|

ನೀವು ನಿಮ್ಮ ಕುಟುಂಬ ಅಥವಾ ಸ್ನೇಹಿತರೊಂದಿಗೆ ಪ್ರವಾಸ ತೆರಳಬೇಕೆಂದು ಯೋಚಿಸಿದ್ದೀರಾ? ಹಾಗಾದ್ರೆ ನೀವು ಇದನ್ನೊಮ್ಮೆ ಓದಲೇಬೇಕು. ಏಕೆಂದರೆ ಪೂರ್ವ ಯೋಜನೆ ಇಲ್ಲದ ಪ್ರವಾಸ ಸುಖಾಸುಮ್ಮನೆ ನಿಮ್ಮ ಬಜೆಟ್ ನ ಹೊರೆ ಹೆಚ್ಚಿಸಬಹುದು.

ದೇಶಿ ಅಥವಾ ವಿದೇಶದ ಅನೇಕ ಪ್ರಸಿದ್ಧ ತಾಣಗಳಿಗೆ ಭೇಟಿ ನೀಡಬೇಕು ಎನ್ನುವುದು ನಿಮ್ಮ ಮುಂಬರುವ ಯೋಜನೆಗಳಾಗಿರಬಹುದು. ಇದಕ್ಕಾಗಿ ನೀವು ಈಗಿನಿಂದಲೇ ಯೋಜನೆ ರೂಪಿಸಿಕೊಂಡರೆ ಹಣ ಹೆಚ್ಚು ಪೋಲಾಗದಂತೆ ನೋಡಿಕೊಳ್ಳಬಹುದು. ನೀವು ಬೇರೆ ಹೂಡಿಕೆಗಳಂತೆ ಮೊದಲೇ ಪ್ರವಾಸದ ಯೋಜನೆಯನ್ನು ರೂಪಿಸಿದರೆ ಕಡಿಮೆ ಖರ್ಚು ಮಾಡಿ ಹೆಚ್ಚು ಪ್ರತಿಫಲ ಪಡೆಯಲು ಸಾಧ್ಯವಾಗುತ್ತದೆ.

ನೀವು ನಿಮ್ಮ ಸಂಗಾತಿಯೊಂದಿಗೆ ಅಥವಾ ಸೀಮಿತ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಲು ಯೋಚಿಸುತ್ತಿದ್ದೀರಾ ಹಾಗಾದರೆ ಅದಕ್ಕೂ ಮುನ್ನ ಈ ಕೆಳಗಿನ ವಿವರಣೆ ಓದಿ

ಪೂರ್ವ ಯೋಜನೆ ರೂಪಿಸಿ
 

ಪೂರ್ವ ಯೋಜನೆ ರೂಪಿಸಿ

ನೀವು ಯಾವುದೇ ಪ್ರವಾಸಕ್ಕೆ ತೆರಳುವ 2 ತಿಂಗಳು ಮುಂಚಿತವಾಗಿ ಯೋಜನೆ ರೂಪಿಸುವುದು ಉತ್ತಮ. ಇದರಿಂದ ನೀವು ರಿಯಾಯಿತಿ ದರದಲ್ಲಿ ವಿಮಾನದ ಟಿಕೆಟ್ ಪಡೆಯಲು ಸಹಾಯವಾಗುತ್ತದೆ. ಜೊತೆಗೆ ನಿಮ್ಮ ಬಜೆಟ್‌ಗೆ ಸರಿಹೊಂದುವ ಹೋಟೆಲ್ ಹುಡುಕಲು ಸಮಯ ಸಿಗುತ್ತದೆ.

ಆದರೆ ನೀವು ಪ್ರಯಾಣದ ಸಂದರ್ಭದಲ್ಲಿ ವಿಮಾನ ಅಥವಾ ಬಸ್ ಟಿಕೆಟ್, ಹೋಟೆಲ್ ಬುಕಿಂಗ್ ದುಬಾರಿಯಾಗಬಹುದು. ಜೊತೆಗೆ ಹಲವು ಆಯ್ಕೆಗಳು ಸಿಗದೇ ಹೋಗಬಹುದು. ಯಾವುದಾದರೂ ನಿರ್ದಿಷ್ಟ ಹೋಂ ಸ್ಟೇ ಅಥವಾ ಹೋಟೆಲ್ ಬುಕಿಂಗ್ ಮಾಡಬೇಕು ಎಂದು ಬಯಸುವವರು ಪೂರ್ವ ನಿಯೋಜಿತವಾಗಿ ಬೇಗನೆ ಪ್ರಾರಂಭಿಸಬೇಕು.

ಹೋಟೆಲ್ ಮತ್ತು ಪ್ರಯಾಣದ ಟಿಕೆಟ್ ಬುಕಿಂಗ್ ಮಾಡಲು ಸಾಕಷ್ಟು ವೆಬ್‌ಸೈಟ್ ಹಾಗೂ ಆ್ಯಪ್‌ಗಳಿವೆ. ಇದರಿಂದ ಕಡಿಮೆ ದರಗಳನ್ನು ಹೊಂದಿರುವ ಆಯ್ಕೆಯನ್ನು ಮಾಡಲು ನಿಮಗೆ ಸಮಯ ಸಿಕ್ಕಂತಾಗುತ್ತದೆ.

ವ್ಯವಸ್ಥಿತ ಹೂಡಿಕೆಗಳು

ವ್ಯವಸ್ಥಿತ ಹೂಡಿಕೆಗಳು

ನೀವು ವಿದೇಶ ಪ್ರವಾಸ ಮಾಡಲು ಅಥವಾ ದೀರ್ಘಾವಧಿ ಪ್ರವಾಸ ತೆರಳಲು ಹೆಚ್ಚು ಹಣ ಬೇಕಾಗುತ್ತದೆ. ಒಮ್ಮೆಲೆ ಅಷ್ಟೊಂದು ಹಣವನ್ನು ಹೊಂದಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ರಜೆಯ ಖರ್ಚುಗಳಿಗಾಗಿ ಪ್ರತ್ಯೇಕವಾಗಿ ಉಳಿತಾಯ ನಿಧಿಯನ್ನು ನಿರ್ಮಿಸಿ.

ಪ್ರತಿ ತಿಂಗಳು ನಿಮ್ಮ ಸಂಬಳದಲ್ಲಿ ಶೇಕಡಾ 5 ರಿಂದ 10ರಷ್ಟು ಹಣವನ್ನು ಪ್ರತ್ಯೇಕವಾಗಿ ಉಳಿತಾಯ ಖಾತೆಯೊಂದರಲ್ಲಿ ಹೂಡಿಕೆ ಮಾಡಿ. ಹೀಗೆ ಮಾಡುವುದರಿಂದ ಹಣ ಯಾವುದೋ ಕಾರಣಗಳಿಂದ ಖರ್ಚಾಗುವುದನ್ನು ತಪ್ಪಿಸುತ್ತದೆ. ನಿಮ್ಮ ಸಂಗಾತಿಯೊಂದಿಗೆ ಸೇರಿ ರಜಾ ದಿನಗಳ ಖರ್ಚಿಗೆ ಹಣ ಉಳಿತಾಯ ಮಾಡಿದರೆ, ಪ್ರತಿ ವರ್ಷವೂ ಆರಾಮವಾಗಿ ವಿದೇಶಿ ಪ್ರವಾಸ ಮಾಡಲು ಸಾಧ್ಯವಾಗುತ್ತದೆ.

ಸಂಶೋಧನೆ
 

ಸಂಶೋಧನೆ

ಪ್ರವಾಸ ತೆರಳುವವರಿಗಾಗಿಯೇ ಸಾಕಷ್ಟು ಪ್ಯಾಕೇಜ್‌ಗಳನ್ನು ನೀಡುವ ಕಂಪನಿಗಳಿವೆ. ಆದರೆ ಇವು ನಿಮಗೆ ದುಬಾರಿ ಎನಿಸಬಹುದು ಮತ್ತು ನಿಮ್ಮ ಸಮಯಕ್ಕೆ ಸರಿ ಹೊಂದದೇ ಇರಬಹುದು. ಹೀಗಾಗಿ ನೀವು ಯಾವುದಾದರೂ ತಾಣಗಳಿಗೆ ಭೇಟಿ ನೀಡುತ್ತೀರಾ ಎಂದು ಬಯಸಿದರೆ ಟ್ರಾವೆಲ್ ಏಜೆಂಟ್ ಸಹಾಯಕ್ಕೆ ಮುಂದಾಗದೇ ಆ ತಾಣದ ಬಗ್ಗೆ ಹಾಗೂ ಎಷ್ಟು ಖರ್ಚು ಆಗುತ್ತದೆ ಎಂದು ಸ್ವತಃ ನೀವೇ ಸಂಶೋಧನೆ ನಡೆಸಿ.

ನೀವು ವಿದೇಶಿ ತಾಣಗಳಿಗೆ ಭೇಟಿ ನೀಡುವುದಾದರೆ ವೀಸಾ ನಿಯಮಗಳನ್ನು ಸರಿಯಾಗಿ ತಿಳಿದುಕೊಳ್ಳಿ ಮತ್ತು ನೀವು ಹೊರಡುವ ಮುನ್ನ ಅವುಗಳನ್ನು ವಿಂಗಡಿಸಿ. ಯೋಜನೆ ಇಲ್ಲದಿದ್ದರೆ ನೀವು ಹಣ ವಿನಿಮಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ನೀವು ತೆರಳುವ ದೇಶದಲ್ಲಿ ಹೆಚ್ಚು ಸ್ವೀಕೃತವಾಗುವ ಹಣವನ್ನೇ ಉದಾಹರಣೆಗೆ ಅಮೆರಿಕನ್ ಡಾಲರ್‌ಗಳಂತಹ ಕರೆನ್ಸಿಯನ್ನು ಕೊಂಡೊಯ್ಯಲು ಸಾಧ್ಯವಾಗುತ್ತದೆ. ಆದರೆ ಅವುಗಳನ್ನು ಹೆಚ್ಚು ಒಯ್ಯದಂತೆ ನೋಡಿಕೊಳ್ಳಿ.

ಕ್ರೆಡಿಟ್ ಕಾರ್ಡ್‌ಗಳು ತುರ್ತು ಸಂದರ್ಭದಲ್ಲಿ ಸಹಾಯವಾಗುತ್ತವೆ. ಆದರೆ ವಹಿವಾಟು ಶುಲ್ಕವನ್ನು ಉಳಿಸಲು ಕ್ರೆಡಿಟ್ ಕಾರ್ಡ್‌ಗಳನ್ನು ಸಾಧ್ಯವಾದಷ್ಟು ಕಡಿಮೆ ಬಳಸಿ. ಮತ್ತು ಬದಲಾಗಿ ವಿದೇಶಿ ವಿನಿಮಯ ಕಾರ್ಡ್‌ (Forex card)ನಲ್ಲಿ ಹಣವನ್ನು ಹೂಡಿ ಬಳಕೆ ಮಾಡುವುದರಿಂದ ಹಣ ಉಳಿತಾಯವಾಗುತ್ತದೆ.

ನಿಮಗೆ ಅಗತ್ಯವಿದ್ದರೆ, ನಿಮ್ಮ ಬಜೆಟ್‌ಗೆ ಅನುಗುಣವಾಗಿ ಅಂತರರಾಷ್ಟ್ರೀಯ ರೋಮಿಂಗ್ ಪ್ಯಾಕ್‌ಗಳನ್ನು ನಿಮ್ಮ ಫೋನ್‌ನಲ್ಲಿ ಸಕ್ರಿಯಗೊಳಿಸಿ. ನೀವು ಹೊರಡುವ ಮುನ್ನ ಈ ಎಲ್ಲಾ ಸಂಭವನೀಯ ವೆಚ್ಚಗಳನ್ನು ವಿಂಗಡಿಸಿ.

ನಿಮ್ಮ ಬಜೆಟ್‌ ನೋಡಿಕೊಳ್ಳಿ

ನಿಮ್ಮ ಬಜೆಟ್‌ ನೋಡಿಕೊಳ್ಳಿ

ಯಾವುದೇ ಪ್ರವಾಸಕ್ಕೆ ತೆರಳುವ ಮುನ್ನ ಅದು ನಿಮ್ಮ ಬಜೆಟ್‌ಗೆ ಸರಿಹೊಂದುವುದೇ ಎಂದು ಅರಿತು ಮುಂದುವರಿಯಿರಿ. ಮಗುವಿನ ಶಾಲಾ ಶುಲ್ಕದಂತಹ ಯಾವುದೇ ಅಗತ್ಯವಾದ ಹಣವನ್ನು ಮನದಲ್ಲಿಟ್ಟುಕೊಂಡು ಹೆಚ್ಚು ವೆಚ್ಚ ತಗುಲದಂತೆ ನೋಡಿಕೊಳ್ಳಿ.

ಹೋಟೆಲ್ ಒದಗಿಸುವ ಯಾವುದೇ ಹೆಚ್ಚುವರಿ ಸೇವೆಗಳನ್ನು ಸಹ ನೀವು ಬಿಟ್ಟು ಬಿಡಬಹುದು. ನಿಮ್ಮ ತುರ್ತು ಖರ್ಚುಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ರೂಪಿಸಬೇಕು. ಏಕೆಂದರೆ ಖರ್ಚು ಅತಿರೇಕಕ್ಕೆ ಹೋಗದಂತೆ ಅಥವಾ ಎಲ್ಲಾ ಹಣ ಖರ್ಚು ಆಗದಂತೆ ತಡೆಯುವುದು ನಿಮ್ಮ ಬಜೆಟ್ ಮೇಲೆ ಆಧರಿಸಿರುತ್ತದೆ.

English summary

Financial Plan For A Vacation

If you have many spots in your bucket list that would wish to visit with your family or friends. Than read thise tips for how to financially plan for a vacation
Story first published: Saturday, November 23, 2019, 13:04 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more