ಅಡೆತಡೆಯಿಲ್ಲದೆ ಪಿಂಚಣಿ ಪಡೆಯಲು ಮನೆಯಿಂದಲೇ ಜೀವನ ಪ್ರಮಾಣಪತ್ರ ಸಲ್ಲಿಸುವುದು ಹೇಗೆ?
ಭಾರತ ಸರ್ಕಾರದ ಪ್ರಕಾರವಾಗಿ ನೀವು ಯಾವುದೇ ಅಡೆತಡೆ ಇಲ್ಲದೆ ಪಿಂಚಣಿಯನ್ನು ಪಡೆಯಬೇಕಾದರೆ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸುವುದು ಅತೀ ಮುಖ್ಯವಾಗಿದೆ. ನೀವು ಜೀವಂತವಾಗಿದ್ದೀರಿ ಎಂಬುವುದನ್ನು ಸಾಬೀತುಪಡಿಸಲು ಪ್ರತಿ ವರ್ಷಕ್ಕೊಮ್ಮೆ ಈ ಪ್ರಮಾಣ ಪತ್ರವನ್ನು ಪಿಂಚಣಿದಾರರು ಸಲ್ಲಿಕೆ ಮಾಡಬೇಕಾಗಿದೆ. ಆದರೆ ಈಗ ನೀವು ಈ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಲು ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಹೋಗಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು ತಾವು ಜೀವತವಾಗಿದ್ದಾರೆ ಎಂದು ಸಾಬೀತುಪಡಿಸುವ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಬಹುದು.
ಈ ಹೊಸ ನಿಯಮವು ಹಿರಿಯ ನಾಗರಿಕರಿಗೆ ಬಹಳ ಸಹಕಾರಿಯಾಗಲಿದೆ. ಈ ಕೊರೊನಾ ವೈರಸ್ ಸೋಂಕು ಸಂದರ್ಭದಲ್ಲಿ ಹಿರಿಯ ನಾಗರಿಕರು ಅಥವಾ ಅವರ ಕುಟುಂಬಸ್ಥರು ಮನೆಯಿಂದ ಹೊರಗೆ ಹೋಗುವುದನ್ನು ಈ ಮೂಲಕ ತಪ್ಪಿಸಬಹುದಾಗಿದೆ.
ಆನ್ಲೈನ್ ಮೂಲಕ ಜೀವನ ಪ್ರಮಾಣ ಪತ್ರ ಪಡೆಯುವುದು ಹೇಗೆ?
ನೀವು ಸರ್ಕಾರಿ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ನೀವು ಆಧಾರ್ ಮೂಲದಿಂದ ಜೀವನ ಪ್ರಮಾಣ ಪತ್ರವನ್ನು ಪಡೆಯಬಹುದು. ಅಥವಾ ನಿಮ್ಮ ಮನೆಗೆ ಬರುವ ಏಜೆಂಟ್ ಅಥವಾ ಪೋಸ್ಟ್ ಮ್ಯಾನ್ ಮೂಲಕವೂ ನೀವು ಡಿಜಿಟಲ್ ಜೀವನ ಪ್ರಮಾಣ ಪತ್ರವನ್ನು ಪಡೆಯಬಹುದು. ನೀವು ಜೀವನ ಪ್ರಮಾಣ ಪತ್ರವನ್ನು ವರ್ಷಕ್ಕೊಮ್ಮೆ ಸಲ್ಲಿಕೆ ಮಾಡದಿದ್ದರೆ ನಿಮ್ಮ ಪಿಂಚಣಿಯು ಸ್ಥಗಿತಗೊಳ್ಳುತ್ತದೆ, ಆದ್ದರಿಂದ ನೀವು ಈ ಡಿಜಿಟಲ್ ಜೀವನ ಪ್ರಮಾಣ ಪತ್ರವನ್ನು ವರ್ಷಕ್ಕೊಮ್ಮೆ ಸಲ್ಲಿಕೆ ಮಾಡಿ.

ಜೀವನ ಪ್ರಮಾಣ ಪತ್ರವನ್ನು ಪಡೆಯುವುದು ಹೇಗೆ?
ನಿಮ್ಮ ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ, ಪಿಂಚಣಿ, ಪಿಪಿಒ ನಂಬರ್, ಖಾತೆ ಸಂಖ್ಯೆಯನ್ನು ನಿಮ್ಮ ಮನೆಗೆ ಈ ಜೀವನ ಪ್ರಮಾಣ ಪತ್ರವನ್ನು ಮಾಡಲು ಅಂಚೆ ಇಲಾಖೆ ಸಿಬ್ಬಂದಿ ಅಥವಾ ಏಜೆಂಟ್ ಬರುವ ಮುನ್ನವೇ ಸಿದ್ದಪಡಿಸಿ ಇಟ್ಟುಕೊಳ್ಳಬೇಕು. ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಪಿಂಚಣಿ ವಿತರಣಾ ಸಂಸ್ಥೆ ಅಂದರೆ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ನೋಂದಣಿ ಮಾಡಿಕೊಂಡಿರಬೇಕು. "ಪಿಂಚಣಿದಾರರು 12 ಸಾರ್ವಜನಿಕ ವಲಯದ ಬ್ಯಾಂಕ್ಗಳ ಡೋರ್ಸ್ಟೆಪ್ ಬ್ಯಾಂಕಿಂಗ್ ಏಜೆಂಟ್ ಅಥವಾ ಅಂಚೆ ಇಲಾಖೆಯ ಡೋರ್ಸ್ಟೆಪ್ ಸೇವೆಯನ್ನು ಬಳಸಿಕೊಂಡು ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸಲ್ಲಿಸುವುದರ ಮೂಲಕ ತಡೆ ರಹಿತ ಪಿಂಚಣಿಯನ್ನು ಪಡೆಯಬಹುದು," ಎಂದು ಪಿಂಚಣಿ ಇಲಾಖೆಯು ಹೇಳಿದೆ.

12 ಸಾರ್ವಜನಿಕ ವಲಯದ ಬ್ಯಾಂಕ್ಗಳು ಯಾವುದು?
ಪಿಂಚಣಿದಾರರು 12 ಸಾರ್ವಜನಿಕ ವಲಯದ ಬ್ಯಾಂಕ್ಗಳ ಡೋರ್ಸ್ಟೆಪ್ ಬ್ಯಾಂಕಿಂಗ್ ಸೇವೆ ಮೂಲಕ ಮೊದಲ ಹಂತವನ್ನು ಮಾಡಬಹುದು. 12 ಸಾರ್ವಜನಿಕ ವಲಯದ ಬ್ಯಾಂಕ್ಗಳ ಏಜೆಂಟ್ಗಳು ಮನೆಗೆ ಬಂದು ಸೇವೆಯನ್ನು ಸಲ್ಲಿಸುತ್ತಾರೆ. 12 ಸಾರ್ವಜನಿಕ ವಲಯದ ಭಾರತೀಯ ಬ್ಯಾಂಕುಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ), ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ), ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಭಾರತೀಯ ಬ್ಯಾಂಕ್, ಇಂಡಿಯನ್ ಓವರೀಸಿಸ್ ಬ್ಯಾಂಕ್, ಪಂಜಾಬ್ ಆಂಡ್ ಸಿಂಧ್ ಬ್ಯಾಂಕ್, ಯುಕೋ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಈ ಹನ್ನೆರಡು 12 ಸಾರ್ವಜನಿಕ ವಲಯದ ಬ್ಯಾಂಕ್ಗಳು ಆಗಿದೆ.
ಎಲ್ಐಸಿ ಸರಳ ಪಿಂಚಣಿ 2021: ಹಿರಿಯ ನಾಗರಿಕ ಬಾಳಿಗೆ ಹೊಂಬೆಳಕು

ತಡೆರಹಿತ ಪಿಂಚಣಿ ಪಡೆಯಲು ಪಾಲಿಸಬೇಕಾದ ಹಂತ ಒಂದು
doorstepbanks.com or www.dsb.imfast.co.in ವೆಬ್ಸೈಟ್ ಮೂಲಕ ಅಥವಾ Doorstep Banking ಮೊಬೈಲ್ ಆಪ್ ಮೂಲಕ ಅಥವಾ ಟಾಲ್ ಫ್ರೀ ಸಂಖ್ಯೆ 18001213721/18001037188 ಗೆ ಕರೆ ಮಾಡುವ ಮೂಲಕ ನೀವು ಡೋರ್ಸ್ಟೆಪ್ ಬ್ಯಾಂಕಿಂಗ್ ಸೇವೆಯನ್ನು ಪಡೆಯಬಹುದು ಆಗಿದೆ. ಇದರಲ್ಲಿ ನಿಗದಿ ಪಡಿಸಿದ ದಿನ ಹಾಗೂ ಸಮಯಕ್ಕೆ ಸರಿಯಾಗಿ ನಿಮ್ಮ ಮನೆಗೆ ಏಜೆಂಟ್ ಒಬ್ಬರು ಬರುತ್ತಾರೆ. ಬಳಿಕ ನಿಮಗೆ ಆನ್ಲೈನ್ನಲ್ಲಿ ಜೀವನ ಪ್ರಮಾಣ ಆಪ್ ಮೂಲಕ ಜೀವನ ಪ್ರಮಾಣ ಪತ್ರವನ್ನು ನೀಡಲಿದ್ದಾರೆ. ಆದರೆ ಬ್ಯಾಂಕುಗಳು ಇದಕ್ಕಾಗಿ ನಿಮ್ಮಲ್ಲಿ ಸೇವಾ ಶುಲ್ಕವನ್ನು ಪಡೆಯಬಹುದು. ಆದರೆ ಈ ಬಗ್ಗೆ ವೆಬ್ಸೈಟ್ನಲ್ಲಿ ಯಾವುದೇ ಉಲ್ಲೇಖ ಮಾಡಲಾಗಿಲ್ಲ. ಎಸ್ಬಿಐ 75 ರೂಪಾಯಿ ಹಾಗೂ ಜಿಎಸ್ಟಿಯನ್ನು ಪಡೆಯುತ್ತದೆ.
ಗಮನಿಸಿ: 75 ವರ್ಷಕ್ಕಿಂತ ಮೇಲ್ಪಟ್ಟವರು ತೆರಿಗೆ ರಿಟರ್ನ್ ಫೈಲ್ ಮಾಡಬೇಕಾಗಿಲ್ಲ, ಷರತ್ತು ಅನ್ವಯ

ಅಂಚೆ ಕಚೇರಿ ಸಿಬ್ಬಂದಿ ಮೂಲಕ ಜೀವನ ಪ್ರಮಾಣ ಪತ್ರ ಪಡೆಯುವುದು ಹೇಗೆ?
ಇನ್ನು ನೀವು ಅಂಚೆ ಕಚೇರಿ ಸಿಬ್ಬಂದಿ ಮೂಲಕವು ಜೀವನ ಪ್ರಮಾಣ ಪತ್ರ ಪಡೆಯಬಹುದು. ಅದಕ್ಕಾಗಿ ನೀವು ಮೊದಲು Postinfo ಆಪ್ ಅನ್ನು ಡೌನ್ಲೋಡ್ ಮಾಡಬೇಕು ಅಥವಾ ವೆಬ್ಸೈಟ್ಗೆ ಭೇಟಿ ನೀಡಬೇಕು. ನೀವು ಅಲ್ಲಿ ನೋಂದಾವಣಿ ಮಾಡಿದ ಬಳಿಕ ಡೋರ್ಸ್ಟೆಪ್ ಸೇವೆ ದೊರೆಯಲಿದೆ. ಇನ್ನು ಅಂಚೆ ಕಚೇರಿಯ ಈ ಸೇವೆಗೆ ಯಾವುದೇ ಸೇವಾ ಶುಲ್ಕ ಇಲ್ಲ. ನಿಮ್ಮ ಪ್ರಮಾಣ ಪತ್ರವನ್ನು ಸಲ್ಲಿಸಿದ ಬಳಿಕ, ನಿಮ್ಮ ಪ್ರಮಾಣ ಐಡಿ ಜೆನರೇಟ್ ಆಗುತ್ತದೆ. ಅದು ಕೂಡಲೇ ನಿಮ್ಮ ರಾಷ್ಟ್ರೀಯ ಮಾಹಿತಿ ಕೇಂದ್ರಕ್ಕೆ ದೊರೆಯಲಿದೆ. ಈ ಐಡಿಯು ನಿಮಗೆ ಈ ವರ್ಷದ ಜೀವನ ಪ್ರಮಾಣ ಪತ್ರವನ್ನು https://jeevanpramaan.gov.in ಮೂಲಕ ಪಡೆಯಲು ಸಹಾಯ ಮಾಡಲಿದೆ. ನಿಮಗೆ ಈ ಪ್ರಮಾಣ ಪತ್ರವನ್ನು ಪಡೆಯಲು ನಿಮ್ಮ ಬಳಿಕ ಇಮೇಲ್ ಐಡಿ ಅಥವಾ ಮೊಬೈಲ್ ಸಂಖ್ಯೆ ಇರಬೇಕು. ಒಟಿಪಿಯು ನಿಮ್ಮೆ ಇಮೇಲ್ಗೆ ಅಥವಾ ಮೊಬೈಲ್ಗೆ ಬರುತ್ತದೆ. ಆ ಬಳಿಕ ನೀವು ಜೀವನ ಪ್ರಮಾಣ ಪತ್ರದ ಪಿಡಿಎಫ್ ಪ್ರತಿ ಪಡೆಯಬಹುದು. ಇದಕ್ಕಾಗಿ ನಿಮಗೆ ಪ್ರತಿ ಬಾರಿ 70 ರೂಪಾಯಿ ವಿಧಿಸಲಾಗುತ್ತದೆ.