For Quick Alerts
ALLOW NOTIFICATIONS  
For Daily Alerts

EPF ಅಕೌಂಟಿನ ನಾಮಿನಿ ಆನ್ಲೈನ್ ಮೂಲಕ ಬದಲಾಯಿಸುವ ಗೈಡ್ ಇಲ್ಲಿದೆ...

By ಸುಶಾಂತ್ ಕಾಳಗಿ
|

ಕಾರ್ಮಿಕರ ಭವಿಷ್ಯ ನಿಧಿ ಪ್ರಾಧಿಕಾರ (Employees Provident Fund Organisation -EPFO) ವು ತನ್ನ ಎಲ್ಲಾ ಪ್ರಾವಿಡೆಂಟ್ ಫಂಡ್ ಚಂದಾದಾರರ ಸಾಮಾಜಿಕ ಭದ್ರತೆಗಾಗಿ ಅವರ ಪಿಎಫ್ ಖಾತೆಗೆ ನಾಮಿನಿ ನೀಡುವ ಸೌಲಭ್ಯವನ್ನು ಒದಗಿಸುತ್ತದೆ. ಒಂದು ವೇಳೆ ಪಿಎಫ್ ಚಂದಾದಾರರೊಬ್ಬರು ಮೃತಪಟ್ಟಲ್ಲಿ ಅವರ EPF ಖಾತೆಯಿಂದ ಆನ್ಲೈನ್ ಮೂಲಕ ಹಣ ಹಿಂಪಡೆಯಲು, ಪೆನ್ಷನ್ ಪಡೆಯಲು (EPS), ಮತ್ತು ವಿಮಾ ಹಣ (EDLI) ಪಡೆಯಲು ಪಿಎಫ್ e-Nomination ಮಾಡುವುದು ಅಗತ್ಯವಾಗಿರುತ್ತದೆ.

 

"ಇಪಿಎಫ್ ಸದಸ್ಯರು ಅವರ ಖಾತೆಯಲ್ಲಿ ಈಗಿರುವ ಇಪಿಎಫ್ ಅಥವಾ ಇಪಿಎಸ್ ನಾಮಿನೇಶನ್ ಬದಲಾಗಿ ಹೊಸ ನಾಮಿನೇಶನ್ ಅರ್ಜಿಗಳನ್ನು ಸಲ್ಲಿಸಬಹುದು." ಎಂದು ಇಪಿಎಫ್ ಇತ್ತೀಚೆಗೆ ಟ್ವೀಟ್ ಮಾಡಿ ಈ ಬಗ್ಗೆ ಮಾಹಿತಿ ನೀಡಿದೆ.

ಅಂದರೆ ಇಪಿಎಫ್ ಸದಸ್ಯನೊಬ್ಬ ಈಗಿರುವ ಇಪಿಎಫ್ ಅಥವಾ ಇಪಿಎಸ್ ನಾಮಿನೇಶನ್ ಬದಲಾಯಿಸಬೇಕಾದಲ್ಲಿ ಹೊಸ ಇಪಿಎಫ್ ಅಥವಾ ಇಪಿಎಸ್ ನಾಮಿನೇಶನ್ ಸಲ್ಲಿಸಬೇಕಾಗುತ್ತದೆ. ಹೀಗೆ ಹೊಸ ನಾಮಿನೇಶನ್ ಸಲ್ಲಿಸಿದಾಗ ಹಳೆಯ ನಾಮಿನೇಶನ್ ರದ್ದಾಗಿ ಹೊಸ ನಾಮಿನೇಶನ್ ಜಾರಿಗೆ ಬರುತ್ತವೆ.

 EPF ಖಾತೆಯ ನಾಮಿನಿ ಬದಲಾಯಿಸುವುದು ಹೇಗೆ?

ಹಾಗಾದರೆ ಇಪಿಎಫ್ ಖಾತೆಗೆ ಹೊಸ ನಾಮಿನೇಶನ್ ಮಾಡುವುದು ಅಥವಾ ಇರುವ ನಾಮಿನೇಶನ್ ಬದಲಾಯಿಸುವುದು ಹೇಗೆಂದು ಹಂತ ಹಂತವಾಗಿ ತಿಳಿಯೋಣ.

EPF ಖಾತೆಯ ನಾಮಿನಿ ಅನ್ಲೈನ್ ಮೂಲಕ ಬದಲಾಯಿಸುವ ವಿಧಾನ

ಇಪಿಎಫ್ ಸದಸ್ಯರು ತಮ್ಮ UAN ಲಾಗಿನ್ ಮೂಲಕ ಯಾವಾಗ ಬೇಕಾದರೂ, ಎಲ್ಲಿಂದಾದರೂ ಇ-ನಾಮಿನೇಶನ್ ಫೈಲ್ ಮಾಡಬಹುದು. ವಿವಾಹದ ನಂತರ ನಾಮಿನೇಶನ್ ಬದಲಾಯಿಸಬೇಕಾಗುವ ಅಗತ್ಯ ಬರುವುದರಿಂದ ಹಾಗೂ ಆನ್ಲೈನ್ ಮೂಲಕ ಪಿಎಫ್, ಪೆನ್ಷನ್ ಮತ್ತು 7 ಲಕ್ಷ ರೂಪಾಯಿಗಳವರೆಗಿನ ವಿಮಾ ಮೊತ್ತ ಪಡೆಯಲು ಇ-ನಾಮಿನೇಶನ್ ಫೈಲ್ ಮಾಡಬಹುದು. ಇದಕ್ಕಾಗಿ ಉದ್ಯೋಗಿಯ ಸೆಲ್ಫ್ ಡಿಕ್ಲೆರೇಶನ್ ಮಾತ್ರ ಅಗತ್ಯವಾಗಿದ್ದು, ಬೇರಾವುದೇ ದಾಖಲೆ ಅಥವಾ ಉದ್ಯೋಗ ನೀಡಿರುವ ಕಂಪನಿಯ ಅನುಮತಿ ಬೇಕಾಗುವುದಿಲ್ಲ ಎಂದು ಇಪಿಎಫ್ಓ ಮಾರ್ಗಸೂಚಿಗಳಲ್ಲಿ ಹೇಳಲಾಗಿದೆ.

ಇ-ನಾಮಿನೇಶನ್ ಫೈಲ್ ಮಾಡುವ ಸ್ಟೆಪ್ - ಬೈ -ಸ್ಟೆಪ್ ಗೈಡ್

EPFO ಪೋರ್ಟಲ್ ಗೆ ಹೋಗಿ ಅದರಲ್ಲಿ 'Services' ಆಯ್ಕೆ ಮಾಡಿ ಅದರೊಳಗೆ 'For Employees' ಸೆಕ್ಷನ್ ಆಯ್ಕೆ ಮಾಡಿ, 'Member UAN/Online Service' ಕ್ಲಿಕ್ ಮಾಡಿ.

 

ಈಗ UAN ಮತ್ತು Password ಬಳಸಿ ಲಾಗಿನ್ ಆಗಿ.

ಈಗ 'Manage' ಟ್ಯಾಬ್ ಒತ್ತಿ ಅದರೊಳಗೆ 'E-Nomination' ಕ್ಲಿಕ್ ಮಾಡಿ.

ಫ್ಯಾಮಿಲಿ ಡಿಕ್ಲೆರೇಶನ್ ಅಪ್ಡೇಟ್ ಮಾಡಲು 'Yes' ಎಂಬುದನ್ನು ಕ್ಲಿಕ್ ಮಾಡಿ.

ಈ ಹಂತದಲ್ಲಿ 'Add Family Details' ಎಂಬುದನ್ನು ಕ್ಲಿಕ್ ಮಾಡಿ ಒಬ್ಬರಿಗಿಂತ ಹೆಚ್ಚು ಜನರನ್ನು ನಾಮಿನಿಯಾಗಿ ಹೆಸರಿಸಬಹುದು.

'Nomination Details' ಎಂಬುದನ್ನು ಕ್ಲಿಕ್ ಮಾಡಿ ಎಷ್ಟು ಪ್ರಮಾಣದ ಮೊತ್ತ ಯಾರಿಗೆ ಸೇರಬೇಕೆಂಬುದನ್ನು ಸೂಚಿಸಬೇಕು. ನಂತರ 'Save EPF Nomination' ಕ್ಲಿಕ್ ಮಾಡಬೇಕು.

ಈಗ ಓಟಿಪಿ ರಚನೆ ಮಾಡಲು 'e-Sign' ಎಂಬುದನ್ನು ಕ್ಲಿಕ್ ಮಾಡಿ.

ನಿಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಮೊಬೈಲ್ ನಂಬರಿಗೆ ಬಂದಿರುವ ಓಟಿಪಿಯನ್ನು ದಾಖಲಿಸಿ.

ಓಟಿಪಿ ಯಶಸ್ವಿಯಾಗಿ ದೃಢೀಕರಣಗೊಂಡ ನಂತರ ನಿಮ್ಮ ನಾಮಿನೇಶನ್ ವಿವರಗಳು ಇಪಿಎಫ್ ನಲ್ಲಿ ದಾಖಲಿಸಲ್ಪಡುತ್ತವೆ.

ಹೀಗೆ ಇ- ನಾಮಿನೇಶನ್ ನೀಡಿದ ನಂತರ ಭೌತಿಕವಾಗಿ ಮತ್ತಾವುದೇ ಹೆಚ್ಚುವರಿ ದಾಖಲೆಗಳನ್ನು ನೀಡಬೇಕಿರುವುದಿಲ್ಲ.

English summary

How To Change Existing Nominees In EPF Account Online?

How To Change Existing Nominees In EPF Account Online - Here is a detailed description in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X