For Quick Alerts
ALLOW NOTIFICATIONS  
For Daily Alerts

ಚಿನ್ನ ಖರೀದಿಸುವ ಮುನ್ನ ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ?

|

ಭಾರತೀಯರಿಗೆ ಚಿನ್ನ ಎಂದರೆ ಎಲ್ಲಿಲ್ಲದ ಪ್ರೀತಿ. ಭಾರತೀಯರು ಚಿನ್ನ ಖರೀದಿಯಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ, ಹೀಗಾಗೇ ವಿಶ್ವದಲ್ಲೇ ಚಿನ್ನ ಖರೀದಿಯ 2ನೇ ಅತಿದೊಡ್ಡ ಗ್ರಾಹಕರಾಗಿದ್ದಾರೆ. ಹಳದಿ ಲೋಹದ ಮೇಲಿನ ವ್ಯಾಮೋಹವಂತೂ ಎಂದಿಗೂ ಕಮ್ಮಿ ಆಗಲ್ಲ. ಆದರೆ ಒಡವೆ ಖರೀದಿಸಲು ಹೋದಾಗ ಎಷ್ಟು ಜನರು ಚಿನ್ನದ ಶುದ್ಧತೆಯನ್ನು ಪರೀಕ್ಷಿಸುತ್ತಾರೆ? ಶುದ್ಧತೆಯ ಚಿನ್ನವನ್ನು ತಿಳಿದುಕೊಳ್ಳುವುದು ಹೇಗೆ ಎಂದು ಎಷ್ಟೋ ಗ್ರಾಹಕರಿಗೆ ತಿಳಿದಿರುವುದಿಲ್ಲ. ಇದರಿಂದ ಮೋಸ ಹೋಗುವ ಸಾಧ್ಯತೆಯು ಹೆಚ್ಚಿದೆ.

ಬಹುತೇಕ ಆಭರಣಗಳ ಸ್ವರೂಪದಲ್ಲಿ ಖರೀದಿಸುವ ಹೆಚ್ಚಿನ ಚಿನ್ನವು ಶುದ್ಧತೆಗೆ ಪ್ರಮಾಣಿಕರಿಸಲ್ಪಟ್ಟಿಲ್ಲ. ಯಾವುದೇ ಚಿನ್ನದ ಪರಿಶುದ್ಧತೆಯನ್ನು ತಿಳಿಸಲು ಹಾಲ್‌ಮಾರ್ಕ್ ಮಾಡಬೇಕಾಗಿದೆ. ಆದರೆ ಚಿನ್ನ ಖರೀದಿಸುವವರಲ್ಲಿ ಎಷ್ಟು ಜನರು ಈ ಹಾಲ್‌ಮಾರ್ಕ್ ಪರೀಕ್ಷಿಸುತ್ತಾರೆ ಹೇಳಿ? ತುಂಬಾ ಕಡಿಮೆ ಗ್ರಾಹಕರು ಚಿನ್ನದ ಶುದ್ಧತೆಯನ್ನು ಅರಿತು ಖರೀದಿಗೆ ಮುಂದಾಗುತ್ತಾರೆ. ಆದರೆ ಅನೇಕ ಗ್ರಾಹಕರು ಏನೂ ಅರಿಯದೆ ಕಡಿಮೆ ಶುದ್ಧತೆಗೆ ಜಾಸ್ತಿ ಬೆಲೆ ನೀಡುತ್ತಾರೆ.

 

ಕೇಂದ್ರ ಸರ್ಕಾರವು ದೇಶದಲ್ಲಿ ಮಾರಾಟವಾಗುವ ಎಲ್ಲಾ ಚಿನ್ನಾಭರಣಗಳಿಗೆ 2021ರಿಂದ ಹಾಲ್‌ಮಾರ್ಕ್ ಕಡ್ಡಾಯಗೊಳಿಸಲು ನಿರ್ಧರಿಸಿದೆ. 2021 ಜನವರಿಯಿಂದ ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳಿಗೆ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ(ಬಿಐಎಸ್) ಹಾಲ್‌ಮಾರ್ಕ್ ಕಡ್ಡಾಯವಾಗಲಿದೆ. ಹಾಲ್‌ಮಾರ್ಕ್ ಅಧಿಸೂಚನೆಯನ್ನು ಉಲ್ಲಂಘಿಸಿದರೆ ಚಿನ್ನದ 5 ಪಟ್ಟು ಮತ್ತು ಒಂದು ಜೈಲು ಶಿಕ್ಷೆ ವಿಧಿಸುವ ಅವಕಾಶವೂ ಸೃಷ್ಠಿಯಾಗಲಿದೆ.

2021ರಿಂದ ಚಿನ್ನಾಭರಣಕ್ಕೆ ಹಾಲ್‌ಮಾರ್ಕ್ ಕಡ್ಡಾಯ, ತಪ್ಪಿದರೆ ಭಾರೀ ದಂಡ

ಚಿನ್ನದ ಆಭರಗಳಲ್ಲಿನ ಶುದ್ಧತೆ ಪರಿಶೀಲಿಸುವುದು ಹೇಗೆ?

ಚಿನ್ನದ ಆಭರಗಳಲ್ಲಿನ ಶುದ್ಧತೆ ಪರಿಶೀಲಿಸುವುದು ಹೇಗೆ?

ಬಹುತೇಕ ನೋಂದಾಯಿಸಲಾದ ಆಭರಣದ ಅಂಗಡಿಗಳಲ್ಲಿ ಹಾಲ್‌ಮಾರ್ಕ್‌ವುಳ್ಳ ಆಭರಣಗಳನ್ನೇ ಮಾರಾಟ ಮಾಡಲಾಗುತ್ತದೆ. ಆದರೆ ಬಹುತೇಕ ಆಭರಣಗಳಿಗೆ ಹಾಲ್‌ಮಾರ್ಕ್ ಇಲ್ಲದೆಯು ಅಥವಾ ಹಾಲ್‌ಮಾರ್ಕ್ ಬಗ್ಗೆ ಗೊತ್ತಿಲದೇ ಗ್ರಾಹಕರು ಚಿನ್ನ ಖರೀದಿಸುತ್ತಾರೆ. ಆದರೆ ಆಭರಣ ಖರೀದಿಗೆ ಮುನ್ನ ಹಾಲ್‌ಮಾರ್ಕ್ ಇದೆಯಾ ಎಂದು ಪರೀಕ್ಷಿಸಿಕೊಳ್ಳಿ.

ಚಿನ್ನದ ಶುದ್ಧತೆ ಎಷ್ಟಿದೆ ಎಂದು ಹೇಗೆ ತಿಳಿದುಕೊಳ್ಳುವುದು?

ಚಿನ್ನದ ಶುದ್ಧತೆ ಎಷ್ಟಿದೆ ಎಂದು ಹೇಗೆ ತಿಳಿದುಕೊಳ್ಳುವುದು?

ಚಿನ್ನದ ಶುದ್ಧತೆಯನ್ನು ಕ್ಯಾರೆಟ್ ಆಧಾರದಲ್ಲಿ ಅಳೆಯಲಾಗುತ್ತದೆ. ಪರಿಶುದ್ಧ ಚಿನ್ನವು 24 ಕ್ಯಾರೆಟ್‌ನೊಂದಿಗೆ ಆರಂಭಗೊಳ್ಳುತ್ತದೆ. ಆಭರಣದ ಚಿನ್ನವು 22 ಕ್ಯಾರೆಟ್‌ ಆಗಿದ್ದು, 14 ರಿಂದ 22 ಕ್ಯಾರೆಟ್‌ವರೆಗೆ ಆಭರಣ ಚಿನ್ನದ ಶುದ್ಧತೆಯನ್ನು ನಿರ್ಧರಿಸಲಾಗುತ್ತದೆ. ಆಭರಣ ಚಿನ್ನದ ಹಾಲ್‌ಮಾರ್ಕ್ 14K, 18K ಮತ್ತು 22K ಆಗಿದೆ. ಚಿನ್ನವು ಎಷ್ಟು ಕ್ಯಾರೆಟ್ ಇದೆ ಎಂಬುದನ್ನು ತಿಳಿಸಲು ಪರ್ಸೆಂಟ್ ಮೂಲಕ ತಿಳಿಸಲಾಗುತ್ತದೆ. ಈ ಕೆಳಗಿನಂತೆ ಚಿನ್ನದ ಶುದ್ಧತೆಯನ್ನು ಆಭರಣಗಳಲ್ಲಿ ನಮೂದಿಸಲಾಗಿರುತ್ತದೆ.

24K - 99.9%(999)

22K - 91.6%(916)

20K - 83.3%(833)

18K - 75.0%(750)

14K - 58.5%(585)

10K - 41.7%(417)

ಈ ಮೇಲಿನ ಅಂಕಿ-ಅಂಶಗಳಿಗೆ ಅನುಗುಣವಾಗಿ 14 ಕ್ಯಾರೆಟ್ ಚಿನ್ನವು 58.5 ಪರ್ಸೆಂಟ್ ಶುದ್ಧತೆಯನ್ನು, 18 ಕ್ಯಾರೆಟ್ ಚಿನ್ನವು 75 ಪರ್ಸೆಂಟ್ ಶುದ್ಧತೆ ಹಾಗೂ 22 ಕ್ಯಾರೆಟ್ ಚಿನ್ನವು 91.6 (916) ಶುದ್ಧತೆ ಹೊಂದಿದೆ.

ಹಾಲ್‌ಮಾರ್ಕ್ ಆಭರಣ ಖರೀದಿಸುವಾಗ ಗಮನಿಸಬೇಕಾದ ಅಂಶಗಳು
 

ಹಾಲ್‌ಮಾರ್ಕ್ ಆಭರಣ ಖರೀದಿಸುವಾಗ ಗಮನಿಸಬೇಕಾದ ಅಂಶಗಳು

ಹಾಲ್‌ಮಾರ್ಕ್ ಆಭರಣಗಳನ್ನು ಖರೀದಿಸುವಾಗ ಈ 4 ಅಂಶಗಳನ್ನು ಮುಖ್ಯವಾಗಿ ಗಮನಿಸಬೇಕಾಗಿದೆ. ಮೊದಲನೆಯದಾಗಿ ಬಿಐಎಸ್(BIS) ಚಿಹ್ನೆ, ಚಿನ್ನದ ಶುದ್ಧತೆ (22 ಕ್ಯಾರೆಟ್ ಚಿನ್ನಕ್ಕೆ 916), ಹಾಲ್‌ಮಾರ್ಕ್ ಸೆಂಟರ್ ಮಾರ್ಕ್, ಆಭರಣಕಾರರ ಗುರುತನ್ನು ಗಮನಿಸಬೇಕು. ಈ ಮೂಲಕ ಚಿನ್ನದ ಶುದ್ಧತೆಯ ಮಟ್ಟವನ್ನು ಹಾಲ್‌ಮಾರ್ಕ್ ಮೂಲಕ ತಿಳಿದುಕೊಳ್ಳಬಹುದು. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಹಾಲ್‌ಮಾರ್ಕ್ ಕಡ್ಡಾಯಗೊಳಿಸುವುದು. ಆದ್ದರಿಂದ ಹಾಲ್‌ಮಾರ್ಕ್ ಇರುವಂತಹ ಆಭರಣಗಳನ್ನೇ ಖರೀದಿಸಿ.

ಹಾಲ್‌ಮಾರ್ಕ್ ವರ್ಷವನ್ನು ತಿಳಿದುಕೊಳ್ಳುವುದು ಹೇಗೆ?

ಹಾಲ್‌ಮಾರ್ಕ್ ವರ್ಷವನ್ನು ತಿಳಿದುಕೊಳ್ಳುವುದು ಹೇಗೆ?

ಚಿನ್ನದ ಆಭರಣಗಳಲ್ಲಿ ಹಾಲ್‌ಮಾರ್ಕ್ ಗುರುತನ್ನು ನೋಡಿಕೊಂಡು ಗ್ರಾಹಕರು ಖರೀದಿಸುತ್ತಾರೆ. ಹಾಗಿದ್ದರೆ ಈ ಹಾಲ್‌ಮಾರ್ಕ್ ಯಾವ ವರ್ಷದಲ್ಲಿ ಆಗಿದೆ ಎಂಬುದನ್ನು ಇಂಗ್ಲೀಷ್‌ ಅಕ್ಷರಗಳ ಮೂಲಕ ನೀಡಲಾಗಿರುತ್ತದೆ. ಉದಾಹರಣೆಗೆ 'A' ಅಕ್ಷರವು 2000ನೇ ಇಸವಿಯನ್ನು, 'J' 2008ನೇ ಇಸವಿಯನ್ನು, 'I' 2010ನೇ ಇಸವಿಯನ್ನು, 'M' 2011ನೇ ಇಸವಿ, 'N' 2012, 'R' 2016, 'T' 2018 ಇತ್ಯಾದಿ.

ಗಮನಿಸಬೇಕಾದ ಮುಖ್ಯವಾದ ಅಂಶಗಳು

ಗಮನಿಸಬೇಕಾದ ಮುಖ್ಯವಾದ ಅಂಶಗಳು

* ನೀವು ಚಿನ್ನವನ್ನು ಖರೀದಿಸಲು ತೆರಳಿದ ಆಭರಣದ ಅಂಗಡಿಯು ಹಾಲ್‌ಮಾರ್ಕ್ ಚಿನ್ನವನ್ನು ಮಾರುತ್ತಿದೆಯೇ ಇಲ್ಲವೇ ಎಂದು ಪರೀಕ್ಷಿಸಿಕೊಳ್ಳಿ

* ಹಾಲ್‌ಮಾರ್ಕ್ ಚಿನ್ನವನ್ನು ಮಾತ್ರ ಖರೀದಿಸಿ

* ಚಿನ್ನ ಖರೀದಿ ಚೀಟಿ ಪಡೆಯಿರಿ. ಇದರಿಂದ ಏನೇ ದೂರಿದ್ದರು ಇದರ ಮೂಲಕ ಬಿಐಎಸ್ ಸಹಾಯ ಮಾಡುತ್ತದೆ.

* ಚಿನ್ನದ ಆಭರಣಗಳ ಮೇಲೆ ಹಾಲ್‌ಮಾರ್ಕ್ ಶುಲ್ಕ ಕೇವಲ 25 ರುಪಾಯಿ. KDM ಆಭರಣಗಳು ಹಾಲ್‌ಮಾರ್ಕ್ ಮಾಡಿದ ಆಭರಣವಲ್ಲ, ಆದ್ದರಿಂದ KDM ಚಿನ್ನದ ಶುದ್ಧತೆಯನ್ನು ಖಚಿತವಾಗಿ ತಿಳಿಸುವುದಿಲ್ಲ.

English summary

How To Check Gold Purity In Gold Shops

These are the tips for check gold purity in gold shops before you buy gold jewellery.
Story first published: Wednesday, December 11, 2019, 19:30 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more