Masked ಆಧಾರ್ ಕಾರ್ಡ್ ಎಂದರೇನು? Download ಮಾಡುವುದು ಹೇಗೆ?
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಎಲ್ಲಾ ಆಧಾರ್ ಕಾರ್ಡ್ ಬಳಕೆದಾರರಿಗೆ ಮಹತ್ವದ ಸೂಚನೆ ನೀಡಿದೆ. ಆಧಾರ್ ಕಾರ್ಡ್ನ ಫೋಟೊಕಾಪಿಯನ್ನು ಯಾವುದೇ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಬಾರದು ಏಕೆಂದರೆ ಅದು ದುರುಪಯೋಗವಾಗಬಹುದು ಎಂದು ಸೂಚಿಸಿತ್ತು. ಆದರೆ, ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಗ್ಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿ, ಚರ್ಚೆ ಆರಂಭವಾದ ಬಳಿಕ ಎಚ್ಚರಿಕೆ ಸೂಚನೆಯನ್ನು ಹಿಂಪಡೆದುಕೊಂಡಿದೆ.
"ನಿಮ್ಮ ಆಧಾರ್ನ ಫೋಟೊಕಾಪಿಯನ್ನು ಯಾವುದೇ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಬೇಡಿ ಏಕೆಂದರೆ ಅದನ್ನು ದುರುಪಯೋಗಪಡಿಸಿಕೊಳ್ಳಬಹುದು. ಪರ್ಯಾಯವಾಗಿ, ದಯವಿಟ್ಟು ನಿಮ್ಮ ಆಧಾರ್ ಸಂಖ್ಯೆಯ ಕೊನೆಯ 4-ಅಂಕಿಗಳನ್ನು ಮಾತ್ರ ಪ್ರದರ್ಶಿಸುವ masked ಆಧಾರ್ ಅನ್ನು ಬಳಸಿ'' ಎಂದು ಯುಐಡಿಎಐ ತಿಳಿಸಿತ್ತು.
ಆಧಾರ್ ಕಾರ್ಡ್ ಜೊತೆಗೆ ಎಷ್ಟು ಸಿಮ್ ಕಾರ್ಡ್ ಜೋಡಣೆ ಸಾಧ್ಯ?
Masked ಆಧಾರ್ ಕಾರ್ಡ್ ಕುರಿತಂತೆ ಪ್ರಾಧಿಕಾರ ನೀಡಿದ ಅಧಿಕೃತ ಪ್ರಕಟಣೆಯಂತೆ, ''ಮಾಸ್ಕ್ ಆಧಾರ್ ಆಯ್ಕೆಯು ನಿಮ್ಮ ಡೌನ್ಲೋಡ್ ಮಾಡಿದ ಇ-ಆಧಾರ್ನಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ಮಾಸ್ಕ್ ಮಾಡಲು ಅನುಮತಿಸುತ್ತದೆ. ಮಾಸ್ಕ್ಡ್ ಆಧಾರ್ ಸಂಖ್ಯೆಯು ಆಧಾರ್ ಸಂಖ್ಯೆಯ ಮೊದಲ 8 ಅಂಕೆಗಳನ್ನು "xxxx-xxxx" ನಂತಹ ಕೆಲವು ಅಕ್ಷರಗಳೊಂದಿಗೆ ಬದಲಿಸುವುದನ್ನು ಸೂಚಿಸುತ್ತದೆ ಆದರೆ ಆಧಾರ್ ಸಂಖ್ಯೆಯ ಕೊನೆಯ 4 ಅಂಕೆಗಳು ಮಾತ್ರ ಗೋಚರಿಸುತ್ತವೆ.

ಇ-ಆಧಾರ್ ಡೌನ್ಲೋಡ್
ಇ-ಆಧಾರ್ ಡೌನ್ಲೋಡ್ ಮಾಡಲು ದಯವಿಟ್ಟು ಇಂಟರ್ನೆಟ್ ಕೆಫೆ/ಕಿಯೋಸ್ಕ್ನಲ್ಲಿ ಸಾರ್ವಜನಿಕ ಕಂಪ್ಯೂಟರ್ ಬಳಸುವುದನ್ನು ತಪ್ಪಿಸಿ ಎಂದು ಹೇಳಿಕೆಯಲ್ಲಿ ತಿಳಿಸಲಾಗಿತ್ತು. ಡೌನ್ಲೋಡ್ ಮಾಡಿದ ಎಲ್ಲಾ ಇ-ಆಧಾರ್ ಪ್ರತಿಗಳನ್ನು ನೀವು ಕಂಪ್ಯೂಟರ್ನಿಂದ ಶಾಶ್ವತವಾಗಿ ಡಿಲೀಟ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

Masked ಆಧಾರ್ ಕಾರ್ಡ್ ಎಂದರೇನು?
Masked ಆಧಾರ್ ಕಾರ್ಡ್ ಒಂದು ರೀತಿಯ ಆಧಾರ್ ಕಾರ್ಡ್ ಆಗಿದ್ದು, ಅಪರಿಚಿತರಿಗೆ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸದೆ 12-ಅಂಕಿಯ ಸಂಖ್ಯೆಯನ್ನು ಹಂಚಿಕೊಳ್ಳಬಹುದು. Masked ಆಧಾರ್ ಕಾರ್ಡ್ನಲ್ಲಿ ಮೊದಲ ಎಂಟು ಅಂಕೆಗಳನ್ನು XXXX-XXXX ಎಂದು ಗುರುತಿಸಲಾಗಿದೆ.

ಡೌನ್ಲೋಡ್ ಮಾಡುವುದು ಹೇಗೆ?
Masked ಆಧಾರ್ ಕಾರ್ಡ್ ಅನ್ನು ಡೌನ್ಲೋಡ್ ಮಾಡುವುದು ಹೇಗೆ?
- https://eaadhaar.uidai.gov.in/ ಗೆ ಹೋಗಿ
- 'ಡೌನ್ಲೋಡ್ ಆಧಾರ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ನಿಮ್ಮ 12-ಅಂಕಿಯ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ.
- 'ನನಗೆ ಮಾಸ್ಕ್ಡ್ ಆಧಾರ್ ಬೇಕು' ಕ್ಲಿಕ್ ಮಾಡಿ.
- ಕ್ಯಾಪ್ಚಾ ಪರಿಶೀಲನೆ ಕೋಡ್ ನಮೂದಿಸಿ
- 'ಒಟಿಪಿ ಕಳುಹಿಸಿ' ಕ್ಲಿಕ್ ಮಾಡಿ.
- ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ. ಒಟಿಪಿ ನಮೂದಿಸಿ.
Masked ಇ-ಆಧಾರ್ ಪ್ರತಿಯನ್ನು ಡೌನ್ಲೋಡ್ ಮಾಡಿ. ಇದು PDF ಸ್ವರೂಪದಲ್ಲಿರುತ್ತದೆ ಮತ್ತು ಪಾಸ್ವರ್ಡ್ ಅನ್ನು ನಮೂದಿಸಿ ಪ್ರತಿಯನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.

ಪಾಸ್ವರ್ಡ್ 8 ಅಕ್ಷರಗಳನ್ನು ಹೊಂದಿದೆ
- ಮಾಸ್ಕ್ ಆಧಾರ್ ಕಾರ್ಡ್ ಪಾಸ್ವರ್ಡ್ 8 ಅಕ್ಷರಗಳನ್ನು ಹೊಂದಿದೆ.
- ಮೊದಲ ನಾಲ್ಕು ಅಕ್ಷರಗಳು ನಿಮ್ಮ ಹೆಸರಿನ (ಆಧಾರ್ನಲ್ಲಿರುವಂತೆ) ಕ್ಯಾಪಿಟಲ್ ಅಕ್ಷರಗಳಲ್ಲಿವೆ
- ಕೊನೆಯ ನಾಲ್ಕು ಅಕ್ಷರಗಳು YYYY ಸ್ವರೂಪದಲ್ಲಿ ನಿಮ್ಮ ಜನ್ಮ ವರ್ಷವಾಗಿದೆ.