ಶೀಘ್ರವಾಗಿ ಇ-ಪ್ಯಾನ್ ಪಡೆಯುವುದು ಹೇಗೆ?: ಹಂತಗಳ ವಿವರಣೆ
ಪರ್ಮನೆಂಟ್ ಅಕೌಂಟ್ ನಂಬರ್ ಕಾರ್ಡ್ (ಪ್ಯಾನ್) ಹತ್ತು ಅಂಕಿಗಳ ಮುಖ್ಯವಾದ ದಾಖಲೆಗಳಲ್ಲಿ ಒಂದಾಗಿದೆ. ಆದಾಯ ತೆರಿಗೆ ಇಲಾಖೆ ನೀಡುವ ಈ ಪ್ಯಾನ್ ನಮ್ಮ ಬ್ಯಾಂಕಿನ ಅಥವಾ ಬೇರೆ ಯಾವುದೇ ಆರ್ಥಿಕ ವಹಿವಾಟಿಗೆ ಮುಖ್ಯವಾಗಿದೆ. ಈ ಪ್ಯಾನ್ ಅತೀ ಮುಖ್ಯವಾಗಿರುವ ಕಾರಣದಿಂದಾಗಿ ನೀವು ಕೂಡಾ ಮಾಡಿಸಿಕೊಳ್ಳಿ.
ನೀವು ಈಗ ಶೀಘ್ರವಾಗಿ ಇ-ಪ್ಯಾನ್ ಮಾಡಿಕೊಳ್ಳಬಹುದು. ಅದಕ್ಕಾಗಿ ನಿಮಲ್ಲಿ ಆಧಾರ್ ಸಂಖ್ಯೆ, ಆಧಾರ್ಗೆ ಲಿಂಕ್ ಆದ ಮೊಬೈಲ್ ಸಂಖ್ಯೆ ಇದ್ದರೆ ಸಾಕಾಗುತ್ತದೆ. ಹಾಗಾದರೆ ಈ ಪ್ಯಾನ್ ಅನ್ನು ಪಡೆಯಲು ಏನು ಅರ್ಹತೆ ಇದೆ, ಯಾವೆಲ್ಲಾ ದಾಖಲೆಗಳು ಬೇಕಾಗುತ್ತದೆ ಎಂಬುವುದನ್ನು ತಿಳಿಯಲು ಮುಂದೆ ಓದಿ.
ಎಲ್ಐಸಿಗೆ ಪ್ಯಾನ್, ಆಧಾರ್ ಶೀಘ್ರ ಅಪ್ಡೇಟ್ ಮಾಡಿಕೊಳ್ಳಿ: ಇಲ್ಲಿದೆ ವಿವರ
ಮುಖ್ಯವಾಗಿ ಪ್ಯಾನ್ ಕಾರ್ಡ್ ಅನ್ನು ಪಡೆಯಲು ನಮಗೆ ಆಧಾರ್ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆ ಹಾಗೂ ಮಾನ್ಯವಾದ ಆಧಾರ್ ಪ್ರಾಥಮಿಕ ದಾಖಲೆಗಳು ಆಗಿದೆ. ಅದನ್ನು ಹೊರತುಪಡಿಸಿ ನಿಮ್ಮನ ಛಾಯಾಚಿತ್ರ ಬೇಕಾಗುತ್ತದೆ. ಇನ್ನು ಈ ಪ್ಯಾನ್ ಕಾರ್ಡ್ ಅನ್ನು ಪಡೆಯಬೇಕಾದರೆ ನೀವು ಮುಖ್ಯವಾಗಿ ಅಪ್ರಾಪ್ತ ವಯಸ್ಕರು ಆಗಿರಬಾರದು. ಹಾಗಾದರೆ ಇ-ಪ್ಯಾನ್ ಕಾರ್ಡ್ ಅನ್ನು ತ್ವರಿತವಾಗಿ ಮಾಡುವುದು ಹೇಗೆ, ಅದರ ಹಂತಗಳು ಯಾವುದು ಎಂದು ತಿಳಿಯಲು ಮುಂದೆ ಓದಿ.

ಶೀಘ್ರ ಇ-ಪ್ಯಾನ್ ಪಡೆಯುಲು ಪಾಲಿಸಬೇಕಾದ ಹಂತ
* https://eportal.incometax.gov.in/ ಗೆ ಮೊದಲು ಭೇಟಿ ನೀಡಿ
* Quick Services ಟ್ಯಾಬ್ ಅಡಿಯಲ್ಲಿ Instant e-PAN ಮೇಲೆ ಕ್ಲಿಕ್ ಮಾಡಿ
* ಬಳಿಕ Get New e-PAN ಮೇಲೆ ಕ್ಲಿಕ್ ಮಾಡಿ
* ನಂತರ ನಿಮ್ಮ ಹನ್ನೆರಡು ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಿ
* ಅದು submit ಮಾಡಿ
* ನಿಮ್ಮ ರಿಜಿಸ್ಟಾರ್ ಆದ ಮೊಬೈಲ್ ಸಂಖ್ಯೆಗೆ ದೃಢೀಕರಣ ಕೋಡ್ (authentication code) ಬರಲಿದೆ
* ಈ authentication code ಅನ್ನು ನಮೂದಿಸಿ
* ನಿಮ್ಮ ಛಾಯಾಚಿತ್ರ, ವಿಳಾಸ ಹಾಕಿ
* ಹುಟ್ಟಿದ ದಿನಾಂಕ, ವಿಳಾಸ, ನಿಮ್ಮ ಲಿಂಗ ಮೊದಲಾದ ಪ್ರಾಥಮಿಕ ಮಾಹಿತಿಯನ್ನು ಉಲ್ಲೇಖಿಸಿ
* ಬಳಿಕ submit ಮಾಡಿ
* ನಿಮ್ಮ ಮುಂದಿನ ರೆಫೆರೆನ್ಸ್ಗಾಗಿ authentication code ಬರಲಿದೆ
* ಇಲ್ಲಿಗೆ ಎಲ್ಲಾ ಹಂತಗಳು ಕೊನೆಯಾಗಲಿದೆ
ಇನ್ನು ಇ-ಪ್ಯಾನ್ ಮಾಡಲು ನೀವು ಹಣವನ್ನು ತೆರಬೇಕಾಗುತ್ತದೆ ಎಂದು ನಿಮಲ್ಲಿ ಪ್ರಶ್ನೆ ಮೂಡಬಹುದು. ಆದರೆ ಇದು ಉಚಿತ ಸೇವೆ ಆಗಿದೆ. ಇದಕ್ಕಾಗಿ ಯಾವುದೇ ಚಾರ್ಜ್ ಅನ್ನು ವಿಧಿಸಲಾಗುವುದಿಲ್ಲ. ಇನ್ನು-ಪ್ಯಾನ್ ನಮ್ಮ ಪ್ಯಾನ್ ಅಪ್ಲಿಕೇಶನ್ ವಿಧಾನವನ್ನು ಬಳಸಿಕೊಂಡು ನೀಡಿದ ಭೌತಿಕ ಪ್ಯಾನ್ ಕಾರ್ಡ್ ಆಗಿದೆ. ನಮ್ಮ ಕೈಯಲ್ಲಿ ಇರುವ ಪ್ಯಾನ್ ಕಾರ್ಡ್ನಷ್ಟೇ ಮೌಲ್ಯವನ್ನು ಇ-ಪ್ಯಾನ್ ಹೊಂದಿದೆ. ಇ-ಪ್ಯಾನ್ ಅನ್ನು ನಿಗದಿಪಡಿಸಿದ ನಂತರ ವ್ಯಕ್ತಿಯು ಇ-ಕೆವೈಸಿ ವಿವರಗಳನ್ನು ಆಧರಿಸಿ ಆದಾಯ ತೆರಿಗೆ ಇ-ಫೈಲಿಂಗ್ ಖಾತೆಯನ್ನು ರಚಿಸಬಹುದು.
ಈಗ ಎಲ್ಐಸಿ ಪಾಲಿಸಿಗೂ ಕೂಡಾ ಪ್ಯಾನ್ ಅಪ್ಡೇಟ್ ಅಗತ್ಯವಾಗಿದೆ. ಇನ್ನು ಬ್ಯಾಂಕ್, ಇಪಿಎಫ್, ಆದಾಯ ತೆರಿಗೆ ಎಲ್ಲಾ ಆರ್ಥಿಕ ವ್ಯವಹಾರಕ್ಕೆ ಪ್ಯಾನ್ ಕಾರ್ಡ್ ಮುಖ್ಯವಾಗಿದೆ. ಭಾರತೀಯ ಕಂದಾಯ ಸೇವೆಯು ತೆರಿಗೆದಾರರಿಗೆ ಪ್ಯಾನ್ ಸಂಖ್ಯೆಯನ್ನು ಕಾರ್ಡ್ ರೂಪದಲ್ಲಿ ವಿತರಿಸುತ್ತದೆ. ತೆರಿಗೆದಾರ ತನ್ನ ಜೀವಿತಾವಧಿಯಲ್ಲಿ ನಡೆಸುವ ಎಲ್ಲ ರೀತಿಯ ವಹಿವಾಟಿನ ಮೇಲೆ ಪ್ಯಾನ್ ಸಂಖ್ಯೆ ನಿರಂತರ ನಿಗಾ ಇಟ್ಟಿರುತ್ತದೆ. ತೆರಿಗೆದಾರನ ಎಲ್ಲ ವಹಿವಾಟನ್ನು ಪತ್ತೆ ಮಾಡಲು ಪ್ಯಾನ್ ಸಂಖ್ಯೆಯನ್ನು ತೆರಿಗೆ ಇಲಾಖೆ ಬಳಸುತ್ತದೆ. ವೈಯಕ್ತಿಕ ತೆರಿಗೆದಾರನೇ ಇರಬಹುದು, ಉದ್ಯಮ ವ್ಯವಹಾರ ಸಂಸ್ಥೆಗಳು ಅಥವಾ ತೆರಿಗೆ ಪಾವತಿ ಸಂಸ್ಥೆಗಳೇ ಇರಬಹುದು, ಅವುಗಳ ಎಲ್ಲ ವಹಿವಾಟನ್ನು ಪ್ಯಾನ್ ಸಂಖ್ಯೆಯಿಂದಲೇ ಪತ್ತೆ ಮಾಡಲಾಗುತ್ತದೆ.