ಆಧಾರ್ ಕಾರ್ಡ್ ಮೂಲಕ ತ್ವರಿತ ಸಾಲ ಪಡೆಯುವುದು ಹೇಗೆ?
ಈ ಹಿಂದೆ ವೈಯಕ್ತಿಕ ಸಾಲ ಪಡೆಯುವುದು ಸುಲಭವಾಗಿರಲಿಲ್ಲ. ಆದರೆ ಡಿಜಿಟಲ್ ತಂತ್ರಜ್ಞಾನದಿಂದಾಗಿ ವೈಯಕ್ತಿಕ ಸಾಲಗಳನ್ನು ಪಡೆಯುವುದು ಈಗ ಸುಲಭವಾಗಿದೆ. ಈ ಹಿಂದೆ ಡಿಜಿಟಲೀಕರಣದ ಮೊದಲು ಸಂಪೂರ್ಣ ಪ್ರಕ್ರಿಯೆಯು ಹಲವು ದಿನಗಳನ್ನು ತೆಗೆದುಕೊಳ್ಳುತ್ತಿತ್ತು. ಹಣದ ಅಗತ್ಯವಿರುವ ಜನರು ಕುಟುಂಬ ಮತ್ತು ಪರಿಚಯಸ್ಥರಿಂದ ಸಾಲ ಪಡೆಯಬೇಕಾಗಿತ್ತು. ಆದರೆ ಈಗ ಕೇವಲ 24-48 ಗಂಟೆಗಳಲ್ಲಿ ಸಾಲವನ್ನು ಪಡೆಯಬಹುದು. ಈ ಸಾಲ ಪಡೆಯಲು ನಾವು ರಜೆಯನ್ನು ಕೂಡಾ ಮಾಡಬೇಕಾಗಿಲ್ಲ.
ಈ ಸಾಲವನ್ನು ಪಡೆಯಲು ನಿಮಗೆ ಏನು ಅರ್ಹತೆ ಬೇಕು, ಬಡ್ಡಿ ದರ ಎಷ್ಟು, ವೈಯಕ್ತಿಕ ಸಾಲಗಳಿಗೆ ಅರ್ಜಿ ಸಲ್ಲಿಸುವುದು ಮತ್ತು ಪಡೆಯುವುದು ಹೇಗೆ ಎಂಬ ಮಾಹಿತಿಗಾಗಿ ನೀವು ಬ್ಯಾಂಕಿನಿಂದ ಬ್ಯಾಂಕಿಗೆ ಹೋಗಬೇಕಾಗಿಲ್ಲ. ನೀವು ಆನ್ಲೈನ್ನಲ್ಲಿ ಅತ್ಯುತ್ತಮ ವೈಯಕ್ತಿಕ ಸಾಲಗಳನ್ನು ನೋಡಿಕೊಂಡು ಅರ್ಜಿ ಸಲ್ಲಿಕೆ ಮಾಡಬಹುದು. ಬ್ಯಾಂಕ್ ನಿಮ್ಮ ಆಧಾರ್ ಕಾರ್ಡ್ ಅನ್ನು ಬಳಸಿಕೊಂಡು ನಿಮ್ಮ ಗುರುತನ್ನು ಪರಿಶೀಲನೆ ಮಾಡಿ, ಕೆಲವೇ ದಿನಗಳಲ್ಲಿ ನಿಮ್ಮ ಖಾತೆಗೆ ಹಣವನ್ನು ಜಮಾ ಮಾಡುತ್ತದೆ. ಕೆವೈಸಿ ಮಾಡಲಿದೆ .
ಗೂಗಲ್ ಪೇ ಮೂಲಕ ವೈಯಕ್ತಿಕ ಸಾಲಕ್ಕೆ ಯಾರು ಅರ್ಜಿ ಸಲ್ಲಿಸಬಹುದು?
ಕೆವೈಸಿ ಎಂದರೆ "ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ", ಅಥವಾ "Know Your Customer," ಎಂದಾಗಿದೆ. ಇದು ಹಣಕಾಸಿನ ಅಪರಾಧಗಳು, ಮನಿ ಲಾಂಡರಿಂಗ್ ತಪ್ಪಿಸಲು ಹಾಗೂ ಸರಿಯಾದ ಗ್ರಾಹಕರನ್ನು ಗುರುತಿಸಲು ಸಹಾಯಕವಾಗಿದೆ. 2004 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲಾ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಕ್ಲೈಂಟ್ ಪರಿಶೀಲನೆಯನ್ನು ಕಡ್ಡಾಯಗೊಳಿಸಿದಾಗ ಇದನ್ನು ಜಾರಿಗೆ ತರಲಾಯಿತು. ನೀವು ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಿದಾಗ ನಿಮ್ಮ ಗುರುತನ್ನು ಪರಿಶೀಲಿಸಲು ನಿಮ್ಮ ಬ್ಯಾಂಕ್ ಇದನ್ನು ಬಳಸುತ್ತದೆ. ಹಾಗಾದರೆ ನೀವು ಈ ಆಧಾರ್ ಕಾರ್ಡ್ ಬಳಸಿ ತ್ವರಿತ ಸಾಲವನ್ನು ಪಡೆಯುವುದು ಹೇಗೆ, ಅರ್ಹತೆ ಏನು ಎಂದು ತಿಳಿಯಲು ಮುಂದೆ ಓದಿ..

ಆಧಾರ್ ಕಾರ್ಡ್ ವೈಯಕ್ತಿಕ ಸಾಲಕ್ಕೆ ಅರ್ಹತೆ
* 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಆಗಿರಬಾರದು. 60 ವರ್ಷಕ್ಕಿಂತ ಮೇಲಿನವರು ಆಗಿರಬಾರದು
* ಮಾಸಿಕ ಆದಾಯ ರೂ. 15,000 ಅಗತ್ಯ
* ಪ್ರಸ್ತುತ ಉದ್ಯೋಗದಲ್ಲಿ ಒಂದು ವರ್ಷ ಸೇರಿದಂತೆ ಒಟ್ಟು ಎರಡು ವರ್ಷ ಉದ್ಯೋಗದ ಅನುಭವ ಇರಬೇಕು
* 750 ಅಥವಾ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಇರಬೇಕು

ಅವಶ್ಯಕ ದಾಖಲೆಗಳು ಯಾವುದು?
* ಗುರುತಿನ ಪುರಾವೆ: ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಅಥವಾ ಪಾಸ್ಪೋರ್ಟ್
* ವಿಳಾಸ ಪುರಾವೆ: ಆಧಾರ್ ಕಾರ್ಡ್, ಯುಟಿಲಿಟಿ ಬಿಲ್ಗಳು ಅಥವಾ ಪಾಸ್ಪೋರ್ಟ್
* ಆದಾಯ ಪುರಾವೆ: ಸಂಬಳದ ಚೀಟಿಗಳು, ಬ್ಯಾಂಕ್ ಹೇಳಿಕೆಗಳು ಮತ್ತು ಐಟಿಆರ್
* ಪಾಸ್ಪೋರ್ಟ್ ಗಾತ್ರದ ಛಾಯಾಚಿತ್ರಗಳು

ಹೀಗೆ ಲೆಕ್ಕ ಹಾಕಿಕೊಳ್ಳಿ
ನಿಮ್ಮ ಆಧಾರ್ ಕಾರ್ಡ್ ಅನ್ನು ಬಳಸಿಕೊಂಡು ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಅರ್ಹತೆಯನ್ನು ಮೌಲ್ಯಮಾಪನ ಮಾಡಲು ನೀವು ವೈಯಕ್ತಿಕ ಸಾಲದ ಅರ್ಹತಾ ಕ್ಯಾಲ್ಕುಲೇಟರ್ ಅನ್ನು ಬಳಸಬೇಕು. ನೀವು ಎಷ್ಟು ಸಾಲವನ್ನು ಪಡೆಯಬಹುದು ಮತ್ತು ಆರಾಮವಾಗಿ ಮರುಪಾವತಿ ಮಾಡಬಹುದು ಎಂಬುದನ್ನು ಇದು ನಿಮಗೆ ತಿಳಿಸುತ್ತದೆ. ಅದೇ ಸಮಯದಲ್ಲಿ, ನಿಮ್ಮ ಒಟ್ಟಾರೆ ಮಾಸಿಕ ಪಾವತಿ ಎಷ್ಟು ಎಂದು ತಿಳಿಯಲು ನೀವು ಇಎಂಐ ಕ್ಯಾಲ್ಕುಲೇಟರ್ ಅನ್ನು ಬಳಸಬೇಕು. ಬಜಾಜ್ ಫಿನ್ಸರ್ವ್ ಪರ್ಸನಲ್ ಲೋನ್ ನಿಮಗೆ ಕಡಿಮೆ ಬಡ್ಡಿ ದರಗಳನ್ನು ಒದಗಿಸುತ್ತದೆ. ನೀವು ಅರ್ಹತೆ ಪಡೆಯುವ ಹೆಚ್ಚಿನ ಮೊತ್ತಕ್ಕೆ ಅರ್ಜಿ ಸಲ್ಲಿಸಿ. ಆ ಬಳಿಕ ಇಎಂಐ ಕ್ಯಾಲ್ಕುಲೇಟರ್ ಅನ್ನು ಬಳಕೆ ಮಾಡಿ.

ಕೊನೆಯದಾಗಿ ಮಾಡುವುದು ಏನು?
ನೀವು ಮೊತ್ತ ಮತ್ತು ಅವಧಿಯನ್ನು ನಿರ್ಧರಿಸಿದ ನಂತರ, ಬ್ಯಾಂಕ್ಗೆ ಅಗತ್ಯವಿರುವ ಎಲ್ಲಾ ದಾಖಲೆಗಳ ಪ್ರತಿಗಳನ್ನು ನೀವು ಆನ್ಲೈನ್ ಮೂಲಕ ಅಪ್ಲೋಡ್ ಮಾಡಬೇಕಾಗುತ್ತದೆ. ಎಲ್ಲಾ ದಾಖಲೆ ಪರಿಶೀಲನೆ ಬಳಿಕ ನಿಮ್ಮ ಖಾತೆಯು ಅನುಮೋದಿತ ಮೊತ್ತವು ಕ್ರೆಡಿಟ್ ಆಗುತ್ತದೆ. ನಿಮ್ಮ ಅರ್ಜಿಯನ್ನು ಅನುಮೋದಿಸಿದರೆ 24-48 ಗಂಟೆಗಳ ಒಳಗೆ ಸಾಲದ ಮೊತ್ತವನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ.