For Quick Alerts
ALLOW NOTIFICATIONS  
For Daily Alerts

ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ ಸಾಲ ಪಡೆಯುವುದು ಹೇಗೆ, ಯಾವ ಬಡ್ಡಿ ಕಡಿಮೆ?

|

ಕೊರೊನಾ ಬಿಕ್ಕಟ್ಟು ಸೃಷ್ಟಿಸಿರುವ ಆತಂಕಕ್ಕೆ ಮನೆಯಿಂದ ಹೊರಗೆ ಬರುವುದಕ್ಕೇ ಭಯ ಪಡುವಂತಾಗಿದೆ. ಹಾಗೊಂದು ವೇಳೆ ಮನೆಯಿಂದ ಅನಿವಾರ್ಯವಾಗಿ ಆಚೆಗೆ ಹೋಗಬೇಕು ಅಂದರೂ ಸಾರ್ವಜನಿಕ ಸಾರಿಗೆ ಬಳಸಲು ಒಂದಕ್ಕೆ ನೂರು ಸಲ ಆಲೋಚಿಸುವಂತಾಗಿದೆ. ಆ ಕಾರಣಕ್ಕೆ ಹೊಸದಾಗಿ ಕಾರು ಅಥವಾ ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ ಮುಂದಾಗುತ್ತಿದ್ದಾರೆ.

ಸೆಕೆಂಡ್ ಹ್ಯಾಂಡ್ ಕಾರು ಕೊಳ್ಳಬೇಕು ಎಂದು ಸಾಲಕ್ಕಾಗಿ ಪ್ರಯತ್ನಿಸಬೇಕು ಎಂದಿದ್ದಲ್ಲಿ ಈ ಲೇಖನ ಖಂಡಿತಾ ನಿಮಗೆ ಸಹಾಯ ಮಾಡುತ್ತದೆ. ನೆನಪಿಟ್ಟುಕೊಳ್ಳಿ ಕೆಲವು ಹಣಕಾಸು ಸಂಸ್ಥೆಗಳು ಮೂರು ವರ್ಷಕ್ಕಿಂತ ಹಳೆಯ ಕಾರು ಖರೀದಿಗೆ ಹಣಕಾಸು ಸೌಲಭ್ಯವನ್ನು ನೀಡುವುದಿಲ್ಲ. ಸೆಕೆಂಡ್ ಹ್ಯಾಂಡ್ ಕಾರು ಸಾಲ ಪಡೆಯುವುದು ಹೇಗೆ ಎಂಬ ಬಗ್ಗೆ ಸಮಗ್ರವಾದ ವಿವರ ಇಲ್ಲಿದೆ.

ಯಾವ ಬ್ಯಾಂಕ್ ಅಥವಾ ಸಂಸ್ಥೆ ಎಂಬುದನ್ನು ಆರಿಸಿ
 

ಯಾವ ಬ್ಯಾಂಕ್ ಅಥವಾ ಸಂಸ್ಥೆ ಎಂಬುದನ್ನು ಆರಿಸಿ

ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಬಹುತೇಕ ಬ್ಯಾಂಕ್ ಗಳು, ಹಣಕಾಸಿನ ಸಂಸ್ಥೆಗಳು ಸಾಲ ಒದಗಿಸುತ್ತವೆ. ಕೆಲವು ಬ್ಯಾಂಕ್ ಗಳು ಶೇಕಡಾ ನೂರರಷ್ಟು ಸಾಲವನ್ನು ನೀಡಿದರೆ, ಮತ್ತೆ ಕೆಲವು 70ರಿಂದ 80%ನಷ್ಟು ಸಾಲ ನೀಡುತ್ತವೆ. ಉಳಿದ ಮೊತ್ತವನ್ನು ನೀವು ಹೊಂದಿಸಿಕೊಳ್ಳಬೇಕಾಗುತ್ತದೆ. ಎನ್ ಬಿಎಫ್ ಸಿಗಳಿಗೆ ಹೋಲಿಸಿದರೆ ಬ್ಯಾಂಕ್ ಗಳಲ್ಲಿ ಬಡ್ಡಿದರ ಕಡಿಮೆ ಇರುತ್ತದೆ. ಉದಾಹರಣೆಗೆ ಹೇಳುವುದಾದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 9.2ರಿಂದ 10.5 ಪರ್ಸೆಂಟ್ ಬಡ್ಡಿ ದರ ಇದ್ದಲ್ಲಿ, ಎಚ್ ಡಿಎಫ್ ಸಿ ಬ್ಯಾಂಕ್ ನಲ್ಲಿ 13.75%ನಿಂದ 16% ಇದೆ. ಟಾಟಾ ಕ್ಯಾಪಿಟಲ್ ನಂಥ ಎನ್ ಬಿಎಫ್ ಸಿ ಗಳಲ್ಲಿ 15%ನಿಂದ ಶುರುವಾಗುತ್ತದೆ. ಈ ಬಡ್ಡಿ ದರವು ಸೆಪ್ಟೆಂಬರ್ 22, 2020ರ ಮಾಹಿತಿ. ನಿಮಗೆ ಬಡ್ಡಿ ದರ ಹಾಗೂ ಸಿಗುವ ಮೊತ್ತ ಎಷ್ಟು ಎಂಬುದು ತಿಳಿದ ಮೇಲೆ ಆ ಸಾಲಕ್ಕೆ ನೀವು ಅರ್ಹರೆ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಮರುಪಾವತಿ ಅವಧಿ, ಇಎಂಐ ಇತ್ಯಾದಿ ಬಗ್ಗೆ ತಿಳಿಯಿರಿ. ಒಂದು ವೇಳೆ ಸಾಲವನ್ನು ಅವಧಿಗೆ ಮುಂಚೆಯೇ ತೀರಿಸಿದರೆ ಶುಲ್ಕ ಇರುತ್ತದೆಯೇ ಎಂಬುದರ ಮಾಹಿತಿಯನ್ನೂ ಪಡೆಯಿರಿ.

ಹೊಸ ಹಾಗೂ ಹಳೇ ಕಾರು ಖರೀದಿಗೆ ವ್ಯತ್ಯಾಸ

ಹೊಸ ಹಾಗೂ ಹಳೇ ಕಾರು ಖರೀದಿಗೆ ವ್ಯತ್ಯಾಸ

ಹೊಸ ಕಾರು ಖರೀದಿಗೆ ಹಾಗೂ ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೂ ವ್ಯತ್ಯಾಸ ಇದೆ. ಸೆಕೆಂಡ್ ಹ್ಯಾಂಡ್ ಕಾರಿಗಾದರೆ ಬಡ್ಡಿ ದರ ಹೆಚ್ಚಿರುತ್ತದೆ. ಇನ್ನು ಆ ಕಾರಿನ ಮೌಲ್ಯಕ್ಕೆ ಸಿಗುವ ಸಾಲದ ಪ್ರಮಾಣ ಕಡಿಮೆ ಇರುತ್ತದೆ. ಮಾರಾಟಗಾರರು ಕಾರಿಗೆ ಒಂದು ಬೆಲೆ ನಿಗದಿ ಮಾಡಿದ್ದರೆ, ಅದಕ್ಕೆ ಬ್ಯಾಂಕ್ ಗಳು ಕಟ್ಟುವ ಬೆಲೆಯೇ ಬೇರೆ ರೀತಿ ಇರುತ್ತದೆ. ಇನ್ನು ಮರು ಪಾವತಿ ಅವಧಿಯು ಆ ಕಾರು ಎಷ್ಟು ವರ್ಷ ಹಳೆಯದು ಎಂಬುದರ ಮೇಲೆ ಆಧಾರ ಪಟ್ಟಿರುತ್ತದೆ. ಕಡಿಮೆ ಸಾಲಕ್ಕೆ ಒಪ್ಪಿಕೊಂಡು ಬಿಟ್ಟರೆ, ಹೆಚ್ಚಿನ ಮೊತ್ತವನ್ನು ಕೈಯಿಂದ ಹಾಕಬೇಕಾಗುತ್ತದೆ. ಸಾಲದ ಮೊತ್ತ, ಮರುಪಾವತಿ ಅವಧಿ, ಬಡ್ಡಿ ದರ, ಪೂರ್ವಪಾವತಿ ಶುಲ್ಕ ಇತ್ಯಾದಿಗಳ ಬಗ್ಗೆ ಒಪ್ಪಿಗೆ ಇದ್ದಲ್ಲಿ ಮುಂದಿನ ಹಂತ ದಾಖಲೆಗಳ ಸಲ್ಲಿಕೆ. ಯಾವ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ ಅಂದರೆ,

* ಫೋಟೋ ಐಡಿ ಜತೆಗೆ ವಯಸ್ಸು ದೃಢೀಕರಣ (ಪ್ಯಾನ್ ಕಾರ್ಡ್, ಆಧಾರ್, ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಇವುಗಳಲ್ಲಿ ಯಾವುದಾದರೂ ಒಂದು)

* ಸಹಿ ಹಾಕಿದ ಅರ್ಜಿ ಹಾಗೂ ಮೂರು ಪಾಸ್ ಪೋರ್ಟ್ ಅಳತೆಯ ಫೋಟೋ (ಬ್ಯಾಂಕ್ ನಿಂದ ಬ್ಯಾಂಕ್ ಗೆ ಇದು ಬದಲಾಗುತ್ತದೆ).

* ವಿಳಾಸ ದೃಢೀಕರಣ: ಪಾಸ್ ಪೋರ್ಟ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಗ್ಯಾಸ್- ಎಲೆಕ್ಟ್ರಿಕಲ್ ಬಿಲ್, ಬ್ಯಾಂಕ್ ಸ್ಟೇಟ್ ಮೆಂಟ್, ನೋಟರಿ ಆದಂಥ ಬಾಡಿಗೆ ಕರಾರು ಪತ್ರ ಇವುಗಳಲ್ಲಿ ಒಂದು.

ಆದಾಯ ದಾಖಲೆಗೆ ಏನೇನು ನೀಡಬೇಕು?
 

ಆದಾಯ ದಾಖಲೆಗೆ ಏನೇನು ನೀಡಬೇಕು?

ವೇತನದಾರರಾಗಿದ್ದಲ್ಲಿ ಕಳೆದ ಮೂರು ತಿಂಗಳ ಸ್ಯಾಲರಿ ಸ್ಲಿಪ್, ಫಾರ್ಮ್ 16 ಅಥವಾ ಐಟಿಆರ್ ದಾಖಲೆ.

ಸ್ವಯಂ ಉದ್ಯೋಗಿಯಾಗಿದ್ದಲ್ಲಿ ಕಳೆದ ಎರಡು ವರ್ಷದ ಬ್ಯಾಲೆನ್ಸ್ ಶೀಟ್ ಹಾಗೂ ಪ್ರಾಫಿಟ್ ಅಂಡ್ ಲಾಸ್ ಅಕೌಂಟ್ ಹಾಗೂ ಆದಾಯದ ಸಮಗ್ರ ಮಾಹಿತಿ.

ಎರಡು ವರ್ಷದ ಐಟಿಆರ್ ದಾಖಲೆ

ವ್ಯವಹಾರ ದೃಢೀಕರಣಕ್ಕಾಗಿ ನೋಂದಣಿ ಪ್ರಮಾಣ ಪತ್ರ, ಸೇವಾ ತೆರಿಗೆ ನೋಂದಣಿ ಮತ್ತಿತರ ದಾಖಲೆ

ಐಟಿ ಅಸೆಸ್ ಮೆಂಟ್/ ಕ್ಲಿಯರೆನ್ಸ್ ಸರ್ಟಿಫಿಕೇಟ್, ಆದಾಯ ತೆರಿಗೆ ಚಲನ್ ಗಳು/ ಟಿಡಿಎಸ್ ಪ್ರಮಾಣಪತ್ರ (ಫಾರ್ಮ್ 16A)/ ಐಟಿಆರ್ ನಲ್ಲಿ ಆದಾಯ ಘೋಷಣೆ ಮಾಡಿದಂತೆ ಫಾರ್ಮ್ 26AS

ಗಮನಿಸಬೇಕಾದ ಇತರ ಅಂಶಗಳು

ಗಮನಿಸಬೇಕಾದ ಇತರ ಅಂಶಗಳು

ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡುವಾಗ ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡಿಕೊಳ್ಳಬೇಕು.

ಆ ಕಾರನ್ನು ಬೇರೆ ಕಡೆ ಅಡಮಾನ ಮಾಡಲಾಗಿದೆಯಾ ಎಂಬುದನ್ನು ಸರಿಯಾಗಿ ನೋಡಿಕೊಳ್ಳಬೇಕು.

ಆ ಕಾರಿನಲ್ಲಿ ಸಂಚಾರ ನಿಯಮ ಉಲ್ಲಂಘನೆಯಾಗಿ, ದಂಡ ಪಾವತಿ ಮಾಡಬೇಕಿದೆಯಾ ಎಂಬುದನ್ನು ಪರೀಕ್ಷಿಸಿಕೊಳ್ಳುವುದು ಕಡ್ಡಾಯ.

ಆನ್ ಲೈನ್ ಮೂಲಕವೇ ಕಾರಿನ ಮಾಲೀಕರು ಯಾರು ಎಂಬ ಹೆಸರು ಮತ್ತಿತರ ವಿವರಗಳನ್ನು ತಿಳಿದುಕೊಳ್ಳುವ ಅವಕಾಶ ಇದೆ. ಅದನ್ನು ಬಳಸಿಕೊಳ್ಳಬಹುದು.

ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದಲ್ಲಿ ಹೆಚ್ಚಿನ ಮೊತ್ತದ ಸಾಲ, ಕಡಿಮೆ ಬಡಿ ದರಕ್ಕೆ ಶೀಘ್ರವಾಗಿ ದೊರೆಯುತ್ತದೆ.

English summary

How To Get Loan For Second Hand Car? Interest Rate, Documents, Repayment Tenure Other Details Here

Second hand or pre owned car loan details in Kannada. Interest rate, documents required, repayment tenure other details here.
Company Search
COVID-19