For Quick Alerts
ALLOW NOTIFICATIONS  
For Daily Alerts

ರೆಪೋ ದರ ಏರಿಕೆ: ನಿಮ್ಮ ಇಎಂಐ ಹೊರೆ ಕಡಿಮೆ ಮಾಡುವುದು ಹೇಗೆ?

|

ಮೇ 4 ರಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅನಿರೀಕ್ಷಿತವಾಗಿ ರೆಪೋ ದರವನ್ನು 40 ಬೇಸಿಸ್ ಪಾಯಿಂಟ್‌ಗಳಿಂದ (100 ಬೇಸಿಸ್ ಪಾಯಿಂಟ್‌ಗಳು ಒಂದು ಶೇಕಡಾವಾರು ಪಾಯಿಂಟ್‌ಗೆ ಸಮ) ಹೆಚ್ಚಳ ಮಾಡಿದೆ. ಮುಂದಿನ ಹಣಕಾಸು ನೀತಿ ಸಭೆಯು ಕೇವಲ ಒಂದು ತಿಂಗಳು ಬಾಕಿಯಿದೆ ಅದಕ್ಕೂ ಮುನ್ನವೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಏರಿಕೆ ಮಾಡಿದೆ.

 

ಹಣದುಬ್ಬರ ನಿರ್ವಹಣೆ ಕಾರಣದಿಂದಾಗಿ ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದೆ. ಆದರೆ ಆರ್‌ಬಿಐನ ಈ ಕ್ರಮದಿಂದಾಗಿ ಸಾಲ ಪಡೆದಿರುವವರ ಅಥವಾ ಇನ್ನು ಸಾಲ ಪಡೆಯಲಿರುವವರ ಮೇಲೆ ಇಎಂಐ ಹೊರೆಯು ಹೆಚ್ಚಾಗುವ ಸಾಧ್ಯತೆ ಇದೆ. ಬಡ್ಡಿ ದರವು ಹೆಚ್ಚಾಗುವ ಕಾರಣದಿಂದಾಗಿ ಇಎಂಐ ಕೂಡಾ ಅಧಿಕವಾಗಲಿದೆ.

ರೆಪೋ ದರ ಹೆಚ್ಚಳ: ಇಎಂಐ ಹೊರೆ ಹೆಚ್ಚಳ, ಯಾವ ವಲಯದ ಮೇಲೆ ಏನು ಪ್ರಭಾವ?

ಈಗಾಗಲೇ ತರಕಾರಿ, ಹಣ್ಣು, ಆಹಾರ, ಇಂಧನ ಎಲ್ಲಾ ಅಗತ್ಯ ವಸ್ತುಗಳ ಬೆಲೆಯು ತೀವ್ರ ಮಟ್ಟಕ್ಕೆ ಏರಿದೆ. ಒಂದು ನಿಂಬೆ ಹಣ್ಣಿಗೆ ಹತ್ತು ರೂಪಾಯೊ ಕೊಡಬೇಕಾಗಿದೆ. ಈ ನಡುವೆ ಆರ್‌ಬಿಐ ರೆಪೋ ದರ ಏರಿಕೆಯು ಜನರ ಮೇಲೆ ಮತ್ತಷ್ಟು ಹೊರೆ ಹೆಚ್ಚು ಮಾಡಲಿದೆ. ಹಾಗಾದರೆ ಈ ಇಎಂಐ ಹೆಚ್ಚಳವಾಗುವ ನಡುವೆ ನಾವು ನಮ್ಮ ಮಾಸಿಕ ಬಜೆಟ್ ಅನ್ನು ಹೇಗೆ ನಿರ್ವಹಣೆ ಮಾಡುವುದು, ಈ ಇಎಂಐ ಹೊರೆಯನ್ನು ಕಡಿಮೆ ಮಾಡುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

 ಇಎಂಐ ಅವಧಿಯನ್ನು ಹೆಚ್ಚಳ ಮಾಡಿ

ಇಎಂಐ ಅವಧಿಯನ್ನು ಹೆಚ್ಚಳ ಮಾಡಿ

ಇಎಂಐನ ಬಡ್ಡಿದರವು ಏರಿಕೆ ಆದಾಗ ನಿಮಗೆ ಮಾಸಿಕ ಇಎಂಐ ಹೊರೆಯು ಹೆಚ್ಚಾಗಲಿದೆ. ಅದಕ್ಕಾಗಿ ನೀವು ಈಗಲೇ ಕೊಂಚ ತಲೆ ಓಡಿಸುವುದು ಮುಖ್ಯವಾಗಿದೆ. ನೀವು ನಿಮ್ಮ ಸಾಲದ ಮರುಪಾವತಿ ಅವಧಿಯನ್ನು ವಿಸ್ತರಣೆ ಮಾಡುವಂತೆ ಬ್ಯಾಂಕ್‌ಗೆ ಮನವಿ ಮಾಡಿ. ಅವಧಿ ಹೆಚ್ಚಾದಂತೆ ನಿಮ್ಮ ಮೇಲಿನ ಇಎಂಐ ಹೊರೆಯು ಕೊಂಚ ಕಡಿಮೆ ಆಗಲಿದೆ. ಈ ಬಗ್ಗೆ ಮಾಹಿತಿ ನೀಡಿದ ಆಂಡ್ರೊಮಿಡಾ ಮಾರಾಟ ಮತ್ತು ವಿತರಣೆ ಸಂಸ್ಥೆಯ ನಿರ್ದೇಶಕ ಅರುಣ್ ರಾಮಮೂರ್ತಿ, "ಇಎಂಐನ ಅವಧಿ ಹೆಚ್ಚಾದಂತೆ ಹೊರೆ ಕಡಿಮೆ ಆಗಲಿದೆ. ಆದ್ದರಿಂದ ಜನರು ಇಎಂಐ ಅವಧಿ ಹೆಚ್ಚು ಮಾಡುವಂತೆ ಬ್ಯಾಂಕ್‌ಗಳಲ್ಲಿ ಮನವಿ ಮಾಡುವುದು ಉತ್ತಮ," ಎಂದು ಹೇಳಿದ್ದಾರೆ. ಸಾಲಮರುಪಾವತಿ ಅವಧಿಯನ್ನು ಹೆಚ್ಚಿಸುವಾಗ ಬ್ಯಾಂಕುಗಳು ಸಾಮಾನ್ಯವಾಗಿ ತಮ್ಮ ಸಾಲಗಾರರು 65 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು ಎಂದು ಬಯಸುತ್ತಾರೆ.

 ಭಾಗಶಃ ಪೂರ್ವ ಪಾವತಿ ಮಾಡುವುದು ಕೂಡಾ ಉತ್ತಮ
 

ಭಾಗಶಃ ಪೂರ್ವ ಪಾವತಿ ಮಾಡುವುದು ಕೂಡಾ ಉತ್ತಮ

ಹೆಚ್ಚಿನ ಇಎಂಐನ ಹೊರೆಯನ್ನು ಸರಿದೂಗಿಸಲು ನೀವು ಸಾಲದ ಭಾಗಶಃ ಪೂರ್ವ ಮರುಪಾವತಿ ಮಾಡಲು ಸಾಧ್ಯವಾದರೆ ಭವಿಷ್ಯವು ಸುಲಭವಾಗಲಿದೆ. "ನಿಮ್ಮ ಬಡ್ಡಿ ಹೆಚ್ಚಳಕ್ಕೆ ಸಮನಾದ ಮೊತ್ತವನ್ನಾದರೂ ಮುಂಗಡವಾಗಿ ಪಾವತಿಸಿ. ಆದ್ದರಿಂದ, ನೀವು ರೂ 1 ಕೋಟಿ ಸಾಲವನ್ನು ಹೊಂದಿದ್ದರೆ, ರೂ 5 ಲಕ್ಷವನ್ನು ಪೂರ್ವಪಾವತಿ ಮಾಡಿ," ಎಂದು ಆಂಡ್ರೊಮಿಡಾ ಮಾರಾಟ ಮತ್ತು ವಿತರಣೆ ಸಂಸ್ಥೆಯ ನಿರ್ದೇಶಕ ಅರುಣ್ ರಾಮಮೂರ್ತಿ ಹೇಳಿದ್ದಾರೆ. ಉದಾಹರಣೆಗೆ, ನೀವು ಯಾವುದೇ ಹೆಚ್ಚುವರಿ ಮೊತ್ತವನ್ನು ಹೊಂದಿದ್ದರೆ ಅಥವಾ ಸರ್ಕಾರದಿಂದ ತುಟ್ಟಿಭತ್ಯೆ ಹೆಚ್ಚಳ ಬಂದಿದ್ದರೆ, ಸಾಲವನ್ನು ಮರುಪಾವತಿ ಮಾಡಿದರೆ ಉತ್ತಮ. ಇಎಂಐ ಹೊರೆ ಕಡಿಮೆ ಆಗಲಿದೆ.

 ಗೃಹ ಸಾಲ ಉಳಿತಾಯ ಖಾತೆ ಸ್ವಿಚ್

ಗೃಹ ಸಾಲ ಉಳಿತಾಯ ಖಾತೆ ಸ್ವಿಚ್

ಇತ್ತೀಚೆಗೆ, ಅನೇಕ ಸಾಲ ನೀಡುವ ಬ್ಯಾಂಕ್‌ಗಳು ಮನೆ ಉಳಿತಾಯ ಖಾತೆ ಅಥವಾ ಹೋಮ್-ಪ್ಲಸ್ ಸಾಲದ ಖಾತೆಯನ್ನು ತೆರೆಯುತ್ತಿದ್ದಾರೆ. ಇದು ಓವರ್‌ಡ್ರಾಫ್ಟ್ ಖಾತೆಯೊಂದಿಗೆ ಗೃಹ ಸಾಲವಾಗಿದೆ. ಇಲ್ಲಿರುವ ಅನುಕೂಲವೆಂದರೆ ಈ ಓವರ್‌ಡ್ರಾಫ್ಟ್ ಖಾತೆಯಲ್ಲಿ ನೀವು ಯಾವುದೇ ರೀತಿಯ ಹೆಚ್ಚುವರಿ ಹಣವನ್ನು ಠೇವಣಿ ಮಾಡಬಹುದು ಮತ್ತು ಅದೇ ಬಾಕಿ ಇರುವ ಗೃಹ ಸಾಲಕ್ಕೆ ಲೆಕ್ಕ ಹಾಕಲಾಗುತ್ತದೆ. ಬ್ಯಾಲೆನ್ಸ್‌ಗೆ ಬಡ್ಡಿ ಅನ್ವಯಿಸುತ್ತದೆ. ಅಗತ್ಯವಿದ್ದಾಗ ಹೆಚ್ಚುವರಿ ಹಣವನ್ನು ಹಿಂಪಡೆಯಬಹುದು. ಆದ್ದರಿಂದ, ನಿಮ್ಮ ಬಾಕಿಯು 35 ಲಕ್ಷ ರೂ ಆಗಿದ್ದರೆ ಮತ್ತು ನೀವು ನಾಲ್ಕು ತಿಂಗಳ ಕಾಲ ಓವರ್‌ಡ್ರಾಫ್ಟ್ ಖಾತೆಯಲ್ಲಿ ರೂ 7 ಲಕ್ಷವನ್ನು ಇರಿಸಿದ್ದರೆ, ನಂತರ ಬ್ಯಾಂಕ್ ಆ ನಾಲ್ಕು ತಿಂಗಳಿಗೆ ರೂ 28 ಲಕ್ಷದ ಮೇಲೆ ಬಡ್ಡಿಯನ್ನು ವಿಧಿಸುತ್ತದೆ. ಇದರಿಂದಾಗಿ ಬಡ್ಡಿಯ ಹೊರೆ ಕಡಿಮೆ ಆಗಲಿದೆ.

 ಸಾಲದ ಬ್ಯಾಂಕ್‌ ಬದಲಾವಣೆಗೂ ಮುನ್ನ ಸರಿಯಾಗಿ ಪರಿಶೀಲಿಸಿ

ಸಾಲದ ಬ್ಯಾಂಕ್‌ ಬದಲಾವಣೆಗೂ ಮುನ್ನ ಸರಿಯಾಗಿ ಪರಿಶೀಲಿಸಿ

ಒಂದು ಬ್ಯಾಂಕ್‌ನಲ್ಲಿ ಬಡ್ಡಿದರಗಳು ಹೆಚ್ಚಾದಾಗ ಮತ್ತೊಂದು ಬ್ಯಾಂಕ್‌ನಲ್ಲಿ ಸಾಲ ಪಡೆಯುವುದು ಸಹಜ ಕ್ರಮವಾಗಿದೆ. ಆದರೆ ಇದು ನಿರರ್ಥಕ ಎಂದು ಸಾಲ ಸಲಹೆಗಾರರು ಸೂಚಿಸುತ್ತಾರೆ. "ರೆಪೋ ದರವನ್ನು ಹೆಚ್ಚಿಸಿದಾಗ, ಬಡ್ಡಿದರದ ಬದಲಾವಣೆಯು ಎಲ್ಲಾ ಸಾಲ ನೀಡುವ ಬ್ಯಾಂಕ್‌ಗಳ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ. ಬೇರೊಂದು ಬ್ಯಾಂಕ್‌ನಿಂದ ಸಾಲ ಪಡೆಯಲು ಮುಂದಾಗುವುದರಿಂದ ಯಾವುದೇ ಪ್ರಯೋಜನ ಇಲ್ಲ," ಎಂದು ತಜ್ಞರು ಹೇಳಿದ್ದಾರೆ. ಆದರೆ ನೀವು ಬದಲಾವಣೆ ಮಾಡಿಕೊಳ್ಳುವುದಕ್ಕೂ ಮುನ್ನ ಪರಿಶೀಲನೆ ಮಾಡುವುದು ಉತ್ತಮ.

English summary

How to manage your budget against the RBI’s rate hike and high EMI burden

After the RBI’s sudden 40-basis-point repo rate hike on May 4. Your auto loans, home loans set to become higher. Here is How to manage your budget against the RBI’s rate hike and high EMI burden.
Story first published: Thursday, May 5, 2022, 14:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X