For Quick Alerts
ALLOW NOTIFICATIONS  
For Daily Alerts

ಮದುವೆ ಖರ್ಚು ಹೇಗೆ ಪ್ಲ್ಯಾನ್ ಮಾಡಬೇಕು? ಹಣ ಎಲ್ಲಿ ಉಳಿಸಬೇಕು?

|

ಒಂದು ಕುಟುಂಬದಲ್ಲಿ ಮದುವೆ ಎಂಬ ಸಮಾರಂಭ ಬಹಳ ಮುಖ್ಯವಾದದ್ದು. ಮಗನೇ ಇರಲಿ, ಮಗಳೇ ಇರಲಿ ಮದುವೆ ಮಾಡುವಾಗ ಒಂದು ಬಜೆಟ್ ಇರಲೇಬೇಕು. ಆದರೆ ಬಹುಪಾಲು ಜನರ ಬಜೆಟ್ ಅಳತೆಗೂ ಮೀರಿ ಆಪತ್ತನ್ನು ತರುತ್ತದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಜಮೀನು- ಮನೆ ಮಾರುವಂಥ ಸ್ಥಿತಿಗೆ ಬಂದವರು ಅದೆಷ್ಟೋ ಮಂದಿ ಇದ್ದಾರೆ.

ಆದ್ದರಿಂದ ಮದುವೆಗೆ ಸಿದ್ಧತೆ ಎಲ್ಲಿಂದ ಆರಂಭವಾಗಬೇಕು? ಯಾವ ಖರ್ಚಿಗೆ ಹೇಗೆ ಪ್ಲ್ಯಾನ್ ಮಾಡಬೇಕು ಎಂಬ ಬಗ್ಗೆ ಸರಳವಾದ ಸಲಹೆ ನೀಡುವ ಪ್ರಯತ್ನ ಇಲ್ಲಿದೆ. ಮದುವೆಯ ಸಂದರ್ಭದಲ್ಲಿ ಭಾವನಾತ್ಮಕವಾಗಿ ಆಲೋಚನೆ ಮಾಡುವ ಜನರು, ಹಣಕಾಸಿನ ಬಗ್ಗೆ ಅಷ್ಟಾಗಿ ಆಲೋಚಿಸುವುದಿಲ್ಲ. ಆದ್ದರಿಂದ ಇಲ್ಲಿ ಪ್ರಸ್ತಾಪಿಸುವ ಅಂಶಗಳು ಮದುವೆ ತಯಾರಿಗೆ ಸಹಾಯ ಆಗಬಹುದು.

 

ಮಗು ಹೆಣ್ಣಿರಲಿ ಅಥವಾ ಗಂಡಿರಲಿ, ಶಿಕ್ಷಣ, ಮದುವೆ ಹಾಗೂ ಆರೋಗ್ಯ ಈ ಮೂರನ್ನೂ ಗಮನದಲ್ಲಿಟ್ಟುಕೊಂಡು, ಹುಟ್ಟಿದ ತಕ್ಷಣವೇ ಉಳಿತಾಯ ಯೋಜನೆ ಅಥವಾ ಇನ್ಷೂರೆನ್ಸ್ ಪ್ಲ್ಯಾನ್ ಮಾಡುವುದು ಅತ್ಯುತ್ತಮ. ಇಪ್ಪತ್ತೊಂದು ಅಥವಾ ಇಪ್ಪತ್ತೈದು ವರ್ಷದ ಅವಧಿಗೆ ಯೋಜನೆ ಹಾಕಿಕೊಂಡು ಹಣ ಉಳಿತಾಯವನ್ನು ಆರಂಭಿಸಿ. ತಿಂಗಳಿಗೆ ಅಥವಾ ವರ್ಷಕ್ಕೆ ಇಂತಿಷ್ಟು ಚಿನ್ನವನ್ನು ನಾಣ್ಯ ಅಥವಾ ಇಟಿಎಫ್ ರೂಪದಲ್ಲಿ ಖರೀದಿಸುತ್ತಾ ಹೋಗಬೇಕು.

ಮನೆ ಕಟ್ಟುವುದಕ್ಕೆ ಎಷ್ಟು ಖರ್ಚು ಮಾಡಬೇಕು? ಇಲ್ಲಿದೆ ಬಜೆಟ್ ಲೆಕ್ಕಾಚಾರ

ಆಭರಣ ಖರೀದಿ ಮಾಡುವುದಕ್ಕಿಂತ ಹೀಗೆ ಇಟಿಎಫ್ ಅಥವಾ ನಾಣ್ಯದ ರೂಪದಲ್ಲಿ ಖರೀದಿ ಮಾಡಿದರೆ, ಮದುವೆ ಹೊತ್ತಿಗೆ ಯಾವುದು ಟ್ರೆಂಡ್ ಇರುತ್ತದೋ ಅಂಥ ಒಡವೆಯನ್ನು ಮಾಡಿಸಬಹುದು. ಆಭರಣವನ್ನೇ ಖರೀದಿಸಿದರೆ ಅದನ್ನು ಕರಗಿಸಿ, ಹೊಸದನ್ನು ಮಾಡಿಸಬೇಕಾಗುತ್ತದೆ. ಅದರಿಂದ ವೇಸ್ಟೇಜ್ ಇತ್ಯಾದಿಯಾಗಿ ನಷ್ಟ.

ಮುಖ್ಯ ಖರ್ಚನ್ನು ಪಟ್ಟಿ ಮಾಡಿಕೊಳ್ಳಿ

ಮುಖ್ಯ ಖರ್ಚನ್ನು ಪಟ್ಟಿ ಮಾಡಿಕೊಳ್ಳಿ

ಚಿನ್ನಾಭರಣವನ್ನು ಹೊರತುಪಡಿಸಿ ಮದುವೆಯಲ್ಲಿ ಬರುವ ಮುಖ್ಯ ಖರ್ಚನ್ನು ಪಟ್ಟಿ ಮಾಡಿಕೊಳ್ಳಿ. ಊಟ, ಛತ್ರ, ಜವಳಿ (ಬಂಧುಗಳಿಗೂ ಸೇರಿ ನೀಡುವ ಉಡುಗೊರೆ). ಈ ಮೂರಕ್ಕೆ ಅತಿ ಹೆಚ್ಚಿನ ಖರ್ಚು ಬರುತ್ತದೆ. ಆದ್ದರಿಂದ ಈ ಮೂರು ವಿಚಾರಲ್ಲಿ ಸ್ಪಷ್ಟತೆ ಬಹಳ ಮುಖ್ಯ. ಇತ್ತೀಚೆಗೆ ಮದುವೆ ಊಟ ಅಂದರೆ ಕನಿಷ್ಠ ನಲವತ್ತು ಬಗೆಯ ಆಹಾರ ಖಾದ್ಯ ಮಾಡುವ ಟ್ರೆಂಡ್ ಬೆಳೆದುಹೋಗಿದೆ. ಬಂದ ಅಭ್ಯಾಗತರು, ಅತಿಥಿಗಳು ತಿನ್ನುವುದಕ್ಕಿಂತ ಹೆಚ್ಚಾಗಿ ವ್ಯರ್ಥವಾಗುವುದೇ ಹೆಚ್ಚು. ಮದುವೆಯಲ್ಲಿ ತುಂಬ ಒಳ್ಳೆ ಊಟ ಹಾಕಬೇಕು ಎಂಬುದು ನಿಜ. ನಲವತ್ತೋ ಐವತ್ತೋ ಬಗೆಯ ಆಹಾರ ಖಾದ್ಯ ಮಾಡುವ ಬದಲಿಗೆ ಅದರ ಅರ್ಧದಷ್ಟು ಸಂಖ್ಯೆಯ ಪದಾರ್ಥಗಳೇ ಇದ್ದರೂ ಎಲ್ಲವೂ ರುಚಿಕಟ್ಟಾಗಿರುವಂತೆ ಮತ್ತು ಕೂಡಿಸಿ- ಬಡಿಸುವಂಥ ವ್ಯವಸ್ಥೆ ಮಾಡಿದರೆ ಹಣ ಉಳಿತಾಯ ಆಗುತ್ತದೆ. ಜತೆಗೆ ಹಾಗೆ ಊಟಕ್ಕೆ ಕುಳಿತಾಗ ಪ್ರತಿಯೊಬ್ಬರ ಬಳಿಯೂ ಹೋಗಿ ಉಪಚಾರದ ಮಾತನಾಡಿದರೆ ಮತ್ತೂ ಚೆಂದ. ಅಡುಗೆ ಕಾಂಟ್ರ್ಯಾಕ್ಟ್ ಅಥವಾ ಲೇಬರ್ ಏನೇ ವಹಿಸಿದರೂ ನಾಲ್ಕು ಮಂದಿಯ ಬಳಿ ಬೆಲೆ ವಿಚಾರಿಸಿದ ನಂತರವೇ ನಿರ್ಧಾರಕ್ಕೆ ಬನ್ನಿ.

 ಮುಹೂರ್ತಕ್ಕಿಂತ ಆರತಕ್ಷತೆಗೆ ಬರುವವರು ಹೆಚ್ಚು
 

ಮುಹೂರ್ತಕ್ಕಿಂತ ಆರತಕ್ಷತೆಗೆ ಬರುವವರು ಹೆಚ್ಚು

ಛತ್ರವನ್ನು ಮಾಡುವಾಗ ಅಲ್ಲೇ ಉಳಿದುಕೊಳ್ಳಲು ಕೋಣೆಯ ವ್ಯವಸ್ಥೆಗಳಿವೆಯಾ, ಪಾರ್ಕಿಂಗ್ ಇದೆಯಾ ಎಂಬಿತ್ಯಾದಿಗಳನ್ನು ಗಮನಿಸಿ. ಅದರ ಜತೆಗೆ ಎರಡೂ ಕುಟುಂಬದವರಿಗೆ ಹತ್ತಿರ ಆಗಬಹುದಾದ ಸ್ಥಳದಲ್ಲೇ ಛತ್ರವನ್ನು ಗೊತ್ತು ಮಾಡುವುದು ಉತ್ತಮ. ಈಚೆಗೆ ಮದುವೆ ಮುಹೂರ್ತಕ್ಕಿಂತ ಆರತಕ್ಷತೆಗೆ ಬರುವವರು ಹೆಚ್ಚು. ಆದ್ದರಿಂದ ಮದುವೆ ಹಾಗೂ ಆರತಕ್ಷತೆ ಬೇರೆ- ಬೇರೆ ಕಡೆ (ವೆಚ್ಚವನ್ನು ಗಮನದಲ್ಲಿ ಇಟ್ಟುಕೊಂಡು) ಮಾಡಿದರೂ ಅಡ್ಡಿ ಇಲ್ಲ. ಮದುವೆ ಈಗ ಆಡಂಬರವಾಗಿ ಮಾಡುವುದು ಕಷ್ಟ ಅಲ್ಲ. ಏಕೆಂದರೆ, ಸಾಲವೂ ಸುಲಭವಾಗಿ ಸಿಗುತ್ತದೆ. ಲೆಕ್ಕಾಚಾರ ಇಲ್ಲದೆ ಮುಂದಕ್ಕೆ ಹೆಜ್ಜೆ ಇಟ್ಟರೆ ವರ್ಷಾನುಗಟ್ಟಲೆ ಅದರ ಸಾಲವನ್ನೇ ತೀರಿಸಬೇಕಾಗುತ್ತದೆ. ಈ ಮಧ್ಯೆ ಫೋಟೋಗ್ರಫಿಗೂ ಲಕ್ಷಾಂತರ ರುಪಾಯಿ ಖರ್ಚಾಗುತ್ತದೆ. ಇದಕ್ಕೂ ಕೂಡ ಅಗತ್ಯಕ್ಕೆ ತಕ್ಕಂತೆ ಮದುವೆ ಮುಹೂರ್ತದ ಹೊತ್ತಿಗೆ ಹಾಗೂ ಆರತಕ್ಷತೆಗೆ ಬೇರೆಯವರಿಗೆ ವಹಿಸಬಹುದು. ಇದರಿಂದ ಖರ್ಚು ಉಳಿಸುವ ಅವಕಾಶ ಇದೆ.

ಲಕ್ಷಗಟ್ಟಲೆ ಬೆಲೆಯ ಸೀರೆಗಳನ್ನು ಖರೀದಿಸುತ್ತಾರೆ

ಲಕ್ಷಗಟ್ಟಲೆ ಬೆಲೆಯ ಸೀರೆಗಳನ್ನು ಖರೀದಿಸುತ್ತಾರೆ

ಮದುವೆ ಸಂದರ್ಭದಲ್ಲಿ ಬರುವ ಅತಿ ದೊಡ್ಡ ಖರ್ಚಿನ ಮುಖ್ಯ ಭಾಗ ಜವಳಿ. ಬಹಳ ಹೆಣ್ಣುಮಕ್ಕಳು ಧಾರೆ ಸೀರೆ, ಆರತಕ್ಷತೆಗೆ ಅಂತ ಲಕ್ಷಗಟ್ಟಲೆ ಬೆಲೆಯ ಸೀರೆಗಳನ್ನು ಖರೀದಿಸುತ್ತಾರೆ. ಆದರೆ ಆ ಸೀರೆಗಳನ್ನು ಮದುವೆ- ಆರತಕ್ಷತೆ ನಂತರ ಒಂದೆರಡು ಬಾರಿ ಕೂಡ ಧರಿಸುವುದಿಲ್ಲ. ಇದೇ ಮಾತು ಹುಡುಗರಿಗೂ ಅನ್ವಯಿಸುತ್ತದೆ. ಮದುವೆ- ಆರತಕ್ಷತೆಗೆ ಖರೀದಿಸುವ ಸೂಟು, ಶೂ, ಶೇರ್ವಾನಿ ಇತ್ಯಾದಿಗಳನ್ನು ಒಮ್ಮೆ ಬಳಸಿದರೆ ಇನ್ನೊಮ್ಮೆ ಧರಿಸುವುದಿಲ್ಲ. ಆದರೆ ಅದಕ್ಕೆ ಸಾವಿರಾರು ರುಪಾಯಿ ಖರ್ಚು ಮಾಡಿರುತ್ತಾರೆ. ಮದುವೆಯ ದಿನ ತುಂಬ ಚೆಂದದ ದಿರಿಸು ಹಾಕಿಕೊಳ್ಳಬೇಕು ಅನ್ನೋದು ನಿಜ. ಆದರೆ ಒಮ್ಮೆ ಮಾತ್ರ ಧರಿಸುವ ಬಟ್ಟೆಗೆ ಸಾವಿರಾರು- ಲಕ್ಷಾಂತರ ರುಪಾಯಿ ಕೊಟ್ಟರೆ ವ್ಯರ್ಥವಾಗುತ್ತದೆ. ಇನ್ನು ಬಂಧುಗಳಿಗೆ ಉಡುಗೊರೆಯಾಗಿ ಜವಳಿ ನೀಡಬೇಕಾಗುತ್ತದೆ. ಆದ್ದರಿಂದ ಹೋಲ್ ಸೇಲ್ ಆಗಿ ಖರೀದಿಸಿದರೆ ಉತ್ತಮ. ಎಲ್ಲರ ಹೆಸರನ್ನೂ ಪಟ್ಟಿ ಮಾಡಿಕೊಂಡು, ಒಮ್ಮೆಗೆ ಹೋಲ್ ಸೇಲ್ ಆಗಿ ಖರೀದಿಸಿದರೆ ಚೌಕಾಶಿ ಮಾಡಬಹುದು. ಹಣ ಉಳಿಸಬಹುದು.

ಇನ್ವಿಟೇಷನ್ ಅನ್ನು ಮದುವೆ ನಂತರವೂ ಯಾರಾದರೂ ಇಟ್ಟುಕೊಳ್ಳುತ್ತಾರಾ?

ಇನ್ವಿಟೇಷನ್ ಅನ್ನು ಮದುವೆ ನಂತರವೂ ಯಾರಾದರೂ ಇಟ್ಟುಕೊಳ್ಳುತ್ತಾರಾ?

ಮದುವೆಗೆ ಇನ್ವಿಟೇಷನ್ ಮಾಡಿಸುತ್ತಾರಲ್ಲಾ ಅದಕ್ಕೆ ನೂರಾರು ರುಪಾಯಿ ಖರ್ಚು ಮಾಡುವವರಿದ್ದಾರೆ. ನೂರು ರುಪಾಯಿಯ ಇನ್ವಿಟೇಷನ್ ಅಂದರೆ ಸಾವಿರಕ್ಕೆ ಎಷ್ಟಾಯಿತು, ಪ್ರಿಂಟಿಂಗ್ ಸೇರಿ ಎಷ್ಟು ಖರ್ಚಾದಂತೆ ಆಗುತ್ತದೆ. ಎಲ್ಲರೂ ನೂರು ರುಪಾಯಿ ಮಾಡುತ್ತಾರೆ ಅಂತಲ್ಲ. ಕೆಲವರು ನಲ್ಲವತ್ತರಿಂದ ಎಪ್ಪತ್ತೈದರವರೆಗೆ ಖರ್ಚು ಮಾಡುತ್ತಾರೆ. ಇಂಥ ಕಡೆ ಮದುವೆ ಇದೆ ಎಂಬುದನ್ನು ತಿಳಿಸುವುದಕ್ಕೆ ಇಷ್ಟೆಲ್ಲ ಖರ್ಚಿನ ಅಗತ್ಯ ಇದೆಯಾ? ಆ ಇನ್ವಿಟೇಷನ್ ಅನ್ನು ಮದುವೆ ನಂತರವೂ ಯಾರಾದರೂ ಇಟ್ಟುಕೊಳ್ಳುತ್ತಾರಾ? ಅದರ ಬದಲಿಗೆ ಮದುವೆಗೆ ಆಹ್ವಾನ ನೀಡುವಾಗಲೇ ಎಲ್ಲರಿಗೂ ಪುಟ್ಟದೊಂದು ಉಡುಗೊರೆ ನೀಡಬಹುದು. ಇನ್ನು ಹನಿಮೂನ್ ಗೆ ವಿದೇಶಕ್ಕೆ ಹೋಗುವುದಕ್ಕೆ ಪ್ಲ್ಯಾನ್ ಮಾಡಿದ್ದರೆ ಕನಿಷ್ಠ ಮೂರು ತಿಂಗಳ ಮುಂಚಿತವಾಗಿ ಬುಕ್ ಮಾಡಿಕೊಂಡರೆ ಅದರಲ್ಲಿ ಹಣ ಉಳಿಸಿಕೊಳ್ಳಬಹುದು. ವಿದೇಶ ಅಂತಲ್ಲ. ಯಾವುದೇ ಪ್ಲ್ಯಾನ್ ಆದರೂ ಕೊನೆ ಕ್ಷಣದಲ್ಲಿ ಖರ್ಚು ಹೆಚ್ಚಾಗುತ್ತದೆ. ಮದುವೆಗೆ ಪ್ಲ್ಯಾನಿಂಗ್ ಬಹಳ ಮುಖ್ಯ. ಇನ್ನು ಅಗತ್ಯ ಖರ್ಚು- ಅನಗತ್ಯ ವೆಚ್ಚ ಯಾವುದು ಎಂಬ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೆ ಆ ನಂತರ ಕಷ್ಟಪಡಬೇಕಾಗುತ್ತದೆ.

English summary

How To Plan A Marriage And How To Save Money?

How to plan a marriage and save money by effective planning? Here is an explainer.
Story first published: Sunday, February 16, 2020, 15:49 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more