For Quick Alerts
ALLOW NOTIFICATIONS  
For Daily Alerts

ನಿಮ್ಮ ಮೊಬೈಲ್‌ನಲ್ಲಿ ಈ ಆ್ಯಪ್ ಇದ್ರೆ ಮೊದಲು ಡಿಲೀಟ್ ಮಾಡಿ: ಇಲ್ಲದಿದ್ರೆ ನಿಮ್ಮ ಹಣ ಗಾಯಬ್

|

ಟೆಕ್ನಾಲಜಿ ಬೆಳೆದಂತೆ ಸೌಲಭ್ಯಗಳು, ಸೇವೆಗಳು ಜನಸ್ನೇಹಿ ಆಗುತ್ತಾ ಹೋಗುತ್ತಿದೆ. ಕೈನಲ್ಲಿ ಮೊಬೈಲ್‌ ಇದ್ರೆ ಇಡೀ ಜಗತ್ತನ್ನೇ ಸುತ್ತಿ ಬಿಡಬಹುದು. ಬ್ಯಾಂಕಿಂಗ್ ಸೇವೆಗಳು, ಆನ್‌ಲೈನ್ ಶಾಪಿಂಗ್, ಯಾವುದೇ ಟಿಕೆಟ್ ಬುಕ್ಕಿಂಗ್ ಹೀಗೆ ನಾನಾ ಸೇವೆಗಳನ್ನು ಮೊಬೈಲ್ ಮೂಲಕವೇ ಪಡೆಯಬಹುದು.

 

ಆದರೆ ಸೌಲಭ್ಯಗಳು ಹೆಚ್ಚಾದಂತೆ ಸೈಬರ್ ವಂಚನೆಯು ಹೆಚ್ಚಾಗುತ್ತಿದೆ. ಸೈಬರ್ ಕಳ್ಳರು ಕೂತಲ್ಲಿಯೇ ಯಾರದ್ದೋ ಮೊಬೈಲ್‌ಗೆ ಲಗ್ಗೆ ಇಟ್ಟು ಜನರಿಗೆ ಟೋಪಿ ಹಾಕುತ್ತಿದ್ದಾರೆ. ಅದರಲ್ಲೂ ರಿಮೋಟ್ ಕಂಟ್ರೋಲ್ ಮೂಲಕವೇ ಎಲ್ಲಾ ಖಾಸಗಿ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.

ರಿಮೋಟ್ ಕಂಟ್ರೋಲ್ ಬಳಸುವ ಖದೀಮರು

ರಿಮೋಟ್ ಕಂಟ್ರೋಲ್ ಬಳಸುವ ಖದೀಮರು

ಟೆಕ್ನಾಲಜಿ ಬೆಳೆದಂತೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಸೈಬರ್ ಖದೀಮರು ಜನರ ಹಣ ಲೂಟಿ ಮಾಡಲು ರಿಮೋಟ್ ಕಂಟ್ರೋಲ್ ಆ್ಯಪ್‌ಗಳನ್ನು ಬಳಸುತ್ತಿದ್ದಾರೆ. ಈ ಆ್ಯಪ್‌ಗಳನ್ನು ನೀವು ನಿಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಂಡ್ರೆ ನಿಮಗೆ ಗೊತ್ತಿಲ್ಲದ ರೀತಿಯಲ್ಲಿ ಮೊಬೈಲ್‌ನಲ್ಲಿರುವ ಮಾಹಿತಿಗಳನ್ನು ಕಳವು ಮಾಡುತ್ತಾರೆ.

ನಿಮ್ಮ ಪ್ರತಿಯೊಂದು ವ್ಯಾಪಾರ, ವ್ಯವಹಾರ ಹಾಗೂ ಖಾಸಗಿ ಫೋಟೊಗಳು ಎಲ್ಲವೂ ಕೂಡ ಸೋರಿಕೆ ಆಗುತ್ತದೆ. ಈ ಕುರಿತು ಈಗಾಗಲೇ ಸಾಕಷ್ಟು ದೂರುಗಳು ಸಹ ದಾಖಲಾಗಿವೆ.

ಮೊಬೈಲ್ ರಿಪೇರಿಗೆ ಹೋದಾಗ ಹುಷಾರ್!

ಮೊಬೈಲ್ ರಿಪೇರಿಗೆ ಹೋದಾಗ ಹುಷಾರ್!

ನಿಮ್ಮ ಮೊಬೈಲ್ , ಕಂಪ್ಯೂಟರ್‌ ರಿಪೇರಿಗೆಂದು ನೀವು ಮೊಬೈಲ್ ಅಂಗಡಿಗೆ ತೆರಳುವುದು ಸಹಜ. ಆದರೆ ಸೈಬರ್ ಕಳ್ಳರು ಇಂತಹ ಅವಕಾಶಕ್ಕಾಗಿಯೇ ಎದುರು ನೋಡುತ್ತಿರುತ್ತಾರೆ. ಆ್ಯಪ್‌ಗಳನ್ನು ಹರಿಬಿಟ್ಟು, ನಿಮ್ಮ ಅಕೌಂಟ್‌ಗೆ ಕನ್ನ ಹಾಕಬಹುದು.

ಸ್ವಲ್ಪ ಎಚ್ಚರ ತಪ್ಪಿದರೂ ಸಾಕು ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಇಟ್ಟಿರುವ ಮಾಹಿತಿಗಳು ಖದೀಮರ ಕೈ ತಲುಪುತ್ತದೆ.

ಆ್ಯಪ್ ಮೂಲಕವೇ ನಿಮ್ಮ ಮೊಬೈಲ್‌ ಲಿಂಕ್ ಮಾಡಿಕೊಳ್ಳಬಹುದು
 

ಆ್ಯಪ್ ಮೂಲಕವೇ ನಿಮ್ಮ ಮೊಬೈಲ್‌ ಲಿಂಕ್ ಮಾಡಿಕೊಳ್ಳಬಹುದು

ಮಿರರ್ ಶೇರಿಂಗ್, ಎನಿಡೆಸ್ಕ್‌ ಆ್ಯಪ್‌ಗಳ ಮೂಲಕ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟನ್ ಅನ್ನು ಇನ್ನೊಂದು ಮೊಬೈಲ್ ಅಥವಾ ಕಂಪ್ಯೂಟರ್‌ಗೆ ಲಿಂಕ್ ಮಾಡಿಕೊಳ್ಳಬಹುದು. ಈ ರೀತಿಯಾದ ಹಲವು ಆ್ಯಪ್‌ಗಳು ಈಗ ಸೈಬರ್ ವಂಚನೆಗೆ ಬಳಕೆಯಾಗುತ್ತಿವೆ.

ಮೊಬೈಲ್ ಚಾರ್ಜ್‌ಗೆ ಹಾಕೋಕೆ ಮುನ್ನ ಎಚ್ಚರ, ನಿಮ್ಮ ಬ್ಯಾಂಕ್ ಹಣಕ್ಕೆ ಬೀಳುತ್ತೆ ಕನ್ನ!

ಅನಾಮಧೇಯ ಕರೆ ಹಾಗೂ ಲಿಂಕ್‌ಗಳಿಗೆ ಪ್ರತಿಕ್ರಿಯಿಸದಿರಿ

ಅನಾಮಧೇಯ ಕರೆ ಹಾಗೂ ಲಿಂಕ್‌ಗಳಿಗೆ ಪ್ರತಿಕ್ರಿಯಿಸದಿರಿ

ಕೆಲವೊಂದು ಅನಾಮಧೇಯ ಕರೆ ಮಾಡಿ ಮೊಬೈಲ್ ಕಂಪನಿ ಅಥವಾ ಸಿಮ್ ಕಾರ್ಡ್ ಹೆಸರಿನಲ್ಲಿ ನಿಮ್ಮ ಮೊಬೈಲ್ , ಸಿಮ್‌ನಲ್ಲಿ ಸಮಸ್ಯೆಯಿದೆ ಹೀಗಾಗಿ ಈ ಆ್ಯಪ್ ಹಾಕಿಕೊಳ್ಳಿ. ನಾವು ಇಲ್ಲಿಂದಲೇ ಅಪ್‌ಡೇಟ್ ಮಾಡುತ್ತೇವೆ ಎಂದು ಹೇಳಿದರೆ ಮೋಸ ಹೋಗದಿರಿ. ಹಾಗೇನಾದ್ರೂ ಆ್ಯಪ್ ಡೌನ್‌ಲೋಡ್ ಮಾಡಿದ್ರೆ ನಿಮ್ಮ ಮಾಹಿತಿಗಳು ಸೋರಿಕೆಯಾಗಲಿವೆ.

ಇದೇ ರೀತಿ ನಿಮ್ಮ ಮೊಬೈಲ್‌ಗೆ ಲಿಂಕ್‌ಗಳು ಬರಬಹುದು. ಇದನ್ನು ನೀವು ಕ್ಲಿಕ್ ಮಾಡಿದರೆ ಸ್ವಯಂಚಾಲಿತವಾಗಿ ಡೌನ್‌ಲೋಡ್ ಆಗುವಂತೆ ಮಾಡಲಾಗಿರುತ್ತದೆ. ನಿಮಗೆ ಗೊತ್ತಿಲ್ಲದ ರೀತಿಯಲ್ಲಿ ನಿಮ್ಮ ಮೊಬೈಲ್ ಆಪರೇಟ್‌ ಮಾಡಿ ನಿಮ್ಮ ಮಾಹಿತಿಗೆ ಕನ್ನ ಹಾಕುತ್ತಾರೆ. ನಿಮ್ಮ ಪಾಸ್‌ವರ್ಡ್ ಸಿಕ್ಕಲ್ಲಿ ನಿಮ್ಮ ಖಾತೆಗೂ ಕನ್ನ ಬೀಳುತ್ತದೆ.

ಸೈಬರ್ ಕಳ್ಳರಿಂದ ತಪ್ಪಿಸಿಕೊಳ್ಳಲು ಸುರಕ್ಷತಾ ಕ್ರಮಗಳೇನು?

ಸೈಬರ್ ಕಳ್ಳರಿಂದ ತಪ್ಪಿಸಿಕೊಳ್ಳಲು ಸುರಕ್ಷತಾ ಕ್ರಮಗಳೇನು?

-ನೀವು ನಿಮ್ಮ ಮೊಬೈಲ್‌ಗೆ ಬರುವ ಯಾವುದೇ ಅನಾಮಧೇಯ ಲಿಂಕ್‌ಗಳಿಗೆ ಸ್ಪಂದಿಸದಿರಿ.

-ಯಾವುದೇ ಆ್ಯಪ್ ಡೌನ್‌ಲೋಡ್ ಮಾಡುವ ಮುನ್ನ ಅಧಿಕೃತ ವೆಬ್‌ಸೈಟ್ ಮೂಲಕ ಪರೀಕ್ಷಿಸಿಕೊಳ್ಳಿ

-ಅಪರಿಚಿತರಿಗೆ ನಿಮ್ಮ ಫೋನ್ ಕೊಡದಿರಿ

-ಲಾಕ್, ಪಾಸ್‌ವರ್ಡ್ ಮೂಲಕ ನಿಮ್ಮ ಮೊಬೈಲ್ ಸುರಕ್ಷಿತವಾಗಿಟ್ಟುಕೊಳ್ಳಿ

-ಅಪಾಯಕಾರಿ ಆ್ಯಪ್‌ಗಳು ನಿಮ್ಮ ಮೊಬೈಲ್‌ನಲ್ಲಿದ್ದರೆ ಕೂಡಲೇ ಡಿಲೀಟ್ ಮಾಡಿ

ಅಪಾಯಕಾರಿ ಆ್ಯಪ್‌/ಸಾಫ್ಟ್‌ವೇರ್‌ಗಳು ಯಾವುವು?

ಅಪಾಯಕಾರಿ ಆ್ಯಪ್‌/ಸಾಫ್ಟ್‌ವೇರ್‌ಗಳು ಯಾವುವು?

ಸದ್ಯ ಸೈಬರ್ ಜಗತ್ತಿನಲ್ಲಿ ಸ್ವಲ್ಪ ರಿಸ್ಕ್ ಆಗಿರುವ ಆ್ಯಪ್ ಸಾಫ್ಟ್‌ವೇರ್‌ಗಳೆಂದರೆ ಎನಿ ಡೆಸ್ಕ್‌, ಟೀಮ್ ವೀವರ್, ರಿಮೋಟ್ ಪಿಸಿ, ಕ್ರೋಂ ರಿಮೋಟ್, ಏರ್ ಮಿರರ್ , ರೆಮೋಡ್ರಾಡ್, ಸ್ಕ್ರೀನ್ ಶೇರ್ ಆಗಿವೆ.

English summary

How To Protect Your Phone From Hackers

If you install These unknown apps will scan your mobile and leak your personal information
Story first published: Wednesday, February 26, 2020, 20:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X