For Quick Alerts
ALLOW NOTIFICATIONS  
For Daily Alerts

ತೆರಿಗೆ ಪಾವತಿ ಮಾಡದೆಯೇ ಚಿನ್ನ ಮಾರಾಟ ಮಾಡುವುದು ಹೇಗೆ?

|

ನಾವು ತೆರಿಗೆ ಪಾವತಿ ಮಾಡದೆಯೇ ಚಿನ್ನವನ್ನು ಖರೀದಿ ಮಾಡಬಹುದೇ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆದರೆ ನಾವು ಐಟಿ ಕಾಯಿದೆ 1961 ರ ಸೆಕ್ಷನ್ 54ಎಫ್ ಅಡಿಯಲ್ಲಿ ಚಿನ್ನದ ಆಸ್ತಿಗಳ ಮಾರಾಟದಿಂದ ದೀರ್ಘಾವಧಿಯ ಬಂಡವಾಳ ಲಾಭದ ಮೇಲೆ ತೆರಿಗೆ ವಿನಾಯಿತಿಯನ್ನು ಕ್ಲೈಮ್ ಮಾಡಬಹುದು. ವಿಭಾಗ 54F ಮನೆ ಆಸ್ತಿಯನ್ನು ಹೊರತುಪಡಿಸಿ ಷೇರುಗಳು, ಚಿನ್ನ, ಬಾಂಡ್‌ಗಳು ಇತ್ಯಾದಿಗಳಂತಹ ಬಂಡವಾಳ ಆಸ್ತಿಗಳನ್ನು ಮಾರಾಟ ಮಾಡುವುದರಿಂದ ಗಳಿಸಿದ ಬಂಡವಾಳ ಲಾಭದ ಮೇಲೆ ಆದಾಯ ತೆರಿಗೆ ವಿನಾಯಿತಿಯನ್ನು ಒದಗಿಸುತ್ತದೆ.

 

ನೀವು ಚಿನ್ನವನ್ನು ಮಾರಾಟ ಮಾಡಿದರೆ ಮತ್ತು ಮನೆ ಆಸ್ತಿಯನ್ನು ಖರೀದಿಸಲು ಅಥವಾ ನಿರ್ಮಿಸಲು ಸಂಪೂರ್ಣ ಮಾರಾಟದ ಆದಾಯವನ್ನು ಮರುಹೂಡಿಕೆ ಮಾಡಿದರೆ, ನೀವು ಗಳಿಸುವ ಬಂಡವಾಳ ಲಾಭವನ್ನು ಸೆಕ್ಷನ್ 54F ಅಡಿಯಲ್ಲಿ ತೆರಿಗೆ ವಿನಾಯಿತಿಯಾಗಿ ಅನುಮತಿಸಲಾಗುತ್ತದೆ.

Gold Rate Today: ಅಕ್ಷಯ ತದಿಗೆ: ದೇಶದ ಪ್ರಮುಖ ನಗರಗಳಲ್ಲಿ ಮೇ 3ರ ಚಿನ್ನದ ದರ ಎಷ್ಟಿದೆ?

ಉದಾಹರಣೆಗೆ ನೀವು ಹಣಕಾಸು ವರ್ಷ 2012-13 ರಲ್ಲಿ 6 ಲಕ್ಷ ರೂಪಾಯಿ ನೀಡಿ ಚಿನ್ನವನ್ನು ಖರೀದಿಸಿದ್ದರೆ ಮತ್ತು ಹಣಕಾಸು ವರ್ಷ 2018-19 ರಲ್ಲಿ ಆ ಚಿನ್ನವನ್ನು 10 ಲಕ್ಷ ರೂಪಾಯಿಗೆ ಮಾರಾಟ ಮಾಡಿದರೆ ನಿಮ್ಮ ದೀರ್ಘಾವಧಿಯ ಬಂಡವಾಳ ಲಾಭ 1.6 ಲಕ್ಷ ರೂಪಾಯಿ ಆಗಲಿದೆ. ಚಿನ್ನದಿಂದ ಬರುವ 10 ಲಕ್ಷ ರೂಪಾಯಿಯ ಸಂಪೂರ್ಣ ಮಾರಾಟವನ್ನು ನೀವು ಮನೆ ಆಸ್ತಿಯಲ್ಲಿ ಹೂಡಿಕೆ ಮಾಡಿದರೆ, 1.6 ಲಕ್ಷ ರೂಪಾಯಿಯ ಬಂಡವಾಳ ಲಾಭವು ತೆರಿಗೆಗೆ ಒಳಪಡಲ್ಲ.

 ತೆರಿಗೆ ಪಾವತಿ ಮಾಡದೆಯೇ ಚಿನ್ನ ಮಾರಾಟ ಮಾಡುವುದು ಹೇಗೆ?

ಆದರೆ ನೀವು ತೆರಿಗೆ ವಿನಾಯಿತಿಯನ್ನು ಪಡೆಯಲು ಈ ಕೆಳಗಿನ ವಿಧಾನದಲ್ಲಿ ಚಿನ್ನದಿಂದ ಮಾರಾಟದ ಆದಾಯವನ್ನು ಬಳಸಬೇಕಾಗುತ್ತದೆ. ಅವು ಯಾವುದು ಎಂದು ಇಲ್ಲಿ ವಿವರಿಸಲಾಗಿದೆ.

Akshaya Tritiya 2022 : ಅಕ್ಷಯ ತದಿಗೆ: ಚಿನ್ನ ಖರೀದಿಗೂ ಮುನ್ನ ಓದಿ

ಚಿನ್ನ ಮಾರಾಟದ ಹಣ ಹೇಗೆ ಬಳಕೆ ಮಾಡಿದರೆ ತೆರಿಗೆ ವಿನಾಯಿತಿ?

* ಬಂಡವಾಳದ ಆಸ್ತಿಯನ್ನು ಮಾರಾಟ ಮಾಡುವ ಒಂದು ವರ್ಷದ ಮೊದಲು ನೀವು ಹೊಸ ವಸತಿ ಆಸ್ತಿಯನ್ನು ಖರೀದಿಸಬೇಕು.
* ಬಂಡವಾಳದ ಆಸ್ತಿಯ ಮಾರಾಟದಿಂದ ಎರಡು ವರ್ಷಗಳಲ್ಲಿ ನೀವು ವಸತಿ ಆಸ್ತಿಯನ್ನು ಖರೀದಿಸಬೇಕು.
* ಬಂಡವಾಳದ ಆಸ್ತಿಯನ್ನು ಮಾರಾಟ ಮಾಡಿದ ದಿನಾಂಕದಿಂದ ಮೂರು ವರ್ಷಗಳೊಳಗೆ ನೀವು ವಸತಿ ಆಸ್ತಿಯನ್ನು ನಿರ್ಮಿಸಬೇಕು.

 

ನೀವು ಐಟಿಆರ್ ಫೈಲಿಂಗ್ ದಿನಾಂಕದ ಮೊದಲು ಹೊಸ ಮನೆಯನ್ನು ಖರೀದಿಸಲು/ನಿರ್ಮಾಣ ಮಾಡಲು ಮಾರಾಟದಿಂದ ಬರುವ ಸಂಪೂರ್ಣ ಮೊತ್ತವನ್ನು ಬಳಸಲು ಸಾಧ್ಯವಾಗದೆ ಇರಬಹುದು. ಅಂತಹ ಸಂದರ್ಭಗಳಲ್ಲಿ, ನೀವು ಸಾರ್ವಜನಿಕ ವಲಯದ ಬ್ಯಾಂಕ್‌ನಲ್ಲಿ ಕ್ಯಾಪಿಟಲ್ ಗೇನ್ಸ್ ಖಾತೆಯಲ್ಲಿ ಚಿನ್ನದ ಮಾರಾಟದ ಆದಾಯವನ್ನು ಠೇವಣಿ ಮಾಡಬಹುದು. ಅಗತ್ಯವಿರುವ ಸಮಯದೊಳಗೆ ಹೊಸ ಮನೆಯನ್ನು ಖರೀದಿಸಲು/ನಿರ್ಮಾಣ ಮಾಡಲು ನೀವು ಈ ಮೊತ್ತವನ್ನು ಬಳಸಬಹುದು.

English summary

How to sell gold without paying taxes: Here's a Details in Kannada

How to sell gold without paying taxes: Here's a Details in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X