ನೆಟ್ಫ್ಲಿಕ್ಸ್ನಲ್ಲಿ ಆಟೋ ಪೇ ಸೆಟ್ಟಿಂಗ್ ಮಾಡುವುದು ಹೇಗೆ?
ಈಗ ಭಾರತದಲ್ಲಿರುವ ನೆಟ್ಫ್ಲಿಕ್ಸ್ ಬಳಕೆದಾರರು ತಮ್ಮ ಮಾಸಿಕ ಚಂದಾದಾರಿಕೆಯನ್ನು ಆಟೋ ಪೇ ಮಾಡಬಹುದು. ಭಾರತದ ನೆಟ್ಫ್ಲಿಕ್ಸ್ ಗ್ರಾಹಕರು ಯುನಿಫೈಡ್ ಪೇಮೆಂಟ್ ಇಟರ್ಫೇಸ್ (ಯುಪಿಐ) ಖಾತೆಯಿಂದ ತಮ್ಮ ಮಾಸಿಕ ನೆಟ್ಫ್ಲಿಕ್ಸ್ ಚಂದಾದಾರಿಕೆಯನ್ನು ಆಟೋ ಪೇ ಮಾಡಬಹುದಾಗಿದೆ.
Netflix.com ಬಳಕೆದಾರರು ಹಾಗೂ ಅಡ್ರಾಯ್ಡ್ ಬಳಕೆದಾರರು ಈ ಹೊಸ ಪಾವತಿ ವಿಧಾನದ ವ್ಯಾಪ್ತಿಗೆ ಒಳಗೊಳ್ಳುತ್ತಾರೆ ಎಂದು ವರದಿಯು ಹೇಳುತ್ತದೆ. ಭಾರತದಲ್ಲಿ ಮಾಸಿಕ ಚಂದಾದಾರಿಕೆ ಆಧಾರದಲ್ಲಿ ನೆಟ್ಫ್ಲಿಕ್ಸ್ ಬಳಕೆದಾರರು ತಿಂಗಳ ಚಂದಾದಾರಿಕೆಯನ್ನು ಅಟೋ ಕಡಿತ ಮಾಡಿಸಿಕೊಳ್ಳಬಹುದು. ಇದರಿಂದಾಗಿ ನಿಮ್ಮ ಚಂದಾದಾರಿಕೆ ಅಂತ್ಯವಾಗುವ ಸಂದರ್ಭದಲ್ಲೇ ಯಾವುದೇ ಅಡೆತಡೆಯಿಲ್ಲದೇ ತನ್ನಷ್ಟಕ್ಕೆ ಚಂದಾದಾರಿಕೆಯಾಗಲಿದೆ. ಆಗಸ್ಟ್ 31 ರಿಂದ ಈ ನಿಯಮವು ಅನ್ವಯವಾಗಲಿದೆ.
ಇನ್ಮುಂದೆ ಎರಡು ಇಪಿಎಫ್ ಖಾತೆ: ಯಾರಿಗೆ ಅನ್ವಯ?
ಯುನೈಟೆಡ್ ಸ್ಟೇಟ್ಸ್ನಲ್ಲಿ ಈ ಸ್ವಯಂ ಚಾಲಿತ ಪಾವತಿಯು ಸಾಮಾನ್ಯವಾಗಿದೆ. ಆದರೆ ಭಾರತದಕ್ಕೆ ಹೊಸದಾಗಿ ಪರಿಚಯ ಮಾಡಲಾಗಿದೆ. ಮಾರ್ಚ್ ಸರ್ವೆಯ ಪ್ರಕಾರ, 2021 ರಲ್ಲಿ ವಿಶ್ವದಾದ್ಯಂತ ನೆಟ್ಫ್ಲಿಕ್ಸ್ನ ಚಂದಾದಾರಿಕೆಯ ಮಾರುಕಟ್ಟೆಯು 228 ಬಿಲಿಯನ್ ಡಾಲರ್ಗೆ ಏರಿಕೆಯಾಗುವ ನಿರೀಕ್ಷೆಯನ್ನು ಹೊಂದಲಾಗಿದೆ. ಈ ಹಿಂದಿನ ವರ್ಷಾವಧಿಯಲ್ಲಿ ನೆಟ್ಫ್ಲಿಕ್ಸ್ನ ಚಂದಾದಾರಿಕೆಯ ಮಾರುಕಟ್ಟೆಯು 174 ಬಿಲಿಯನ್ ಡಾಲರ್ ಆಗಿದೆ. ಹಾಗೆಯೇ 2025 ರಲ್ಲಿ ಈ ಚಂದಾದಾರಿಕೆಯ ಮಾರುಕಟ್ಟೆಯು 481ಬಿಲಿಯನ್ ಡಾಲರ್ ಆಗುವ ನಿರೀಕ್ಷೆಯಿದೆ.

ನೆಟ್ಫ್ಲಿಕ್ಸ್ನಲ್ಲಿ ಯುಪಿಐ ಅಟೋಪೇ ಸೆಟ್ಟಿಂಗ್ ಮಾಡುವುದು ಹೇಗೆ?
ಹಂತ ಒಂದು: ನೆಟ್ಫ್ಲಿಕ್ಸ್ನ ಭಾರತದ ವೆಬ್ಸೈಟ್ಗೆ ಭೇಟಿ ನೀಡಿ
ಹಂತ ಎರಡು: ಪ್ರೊಫೈಲ್ಗೆ ಹೋಗಿ
ಹಂತ ಮೂರು: ಅಕೌಂಟ್ ಸೆಕ್ಷನ್ ಅನ್ನು ಒತ್ತಿ
ಹಂತ ನಾಲ್ಕು: ಆ ಸಂದರ್ಭದಲ್ಲಿ ಇದು Netlix.com ಅಥವಾ youraccount ಗೆ ಹೋಗಲಿದೆ
ಹಂತ ಐದು: Manage Payment Info ಮೇಲೆ ಕ್ಲಿಕ್ ಮಾಡಿ
ಹಂತ ಆರು: Change Payment Method ಮೇಲೆ ಕ್ಲಿಕ್ ಮಾಡಿ
ಹಂತ ಏಳು: ಯುಪಿಎ ಆಟೋ ಪೇ ಎಂಬ ಹೊಸ ಆಯ್ಕೆಯು ನಿಮಗೆ ಲಭ್ಯವಾಗಲಿದೆ.
ಗಮನಿಸಿ: ಹೂಡಿಕೆ ಮಾಡುವಾಗ ಈ ತಪ್ಪುಗಳನ್ನು ಎಂದಿಗೂ ಮಾಡದಿರಿ
ಯುಪಿಐ ಆರಂಭಕ್ಕೆ ಮುನ್ನ, ನೆಟ್ಫ್ಲಿಕ್ಸ್ ಇಂಡಿಯಾ ಪಾವತಿ ಆಯ್ಕೆಗಳು ವೀಸಾ, ಮಾಸ್ಟರ್ ಕಾರ್ಡ್, ಅಮೇರಿಕನ್ ಎಕ್ಸ್ ಪ್ರೆಸ್ ಮತ್ತು ಡೈನರ್ಸ್ ಕ್ಲಬ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳಿಗೆ ಸೀಮಿತವಾಗಿತ್ತು. ಭಾರತದ ಕೇಂದ್ರೀಯ ಬ್ಯಾಂಕ್, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅಕ್ಟೋಬರ್ 1 ರಂದು ವಹಿವಾಟುಗಳು ಮತ್ತು ಜನವರಿ 1, 2022 ರಂದು ಕಾರ್ಡ್ ಡೇಟಾ ಸಂಗ್ರಹಣೆಯ ಮೇಲೆ ಹೊಸ ನಿಯಮಗಳನ್ನು ಜಾರಿಗೊಳಿಸುವ ನಿರೀಕ್ಷೆಯಿದೆ. ಆದರೆ ನೆಟ್ಫ್ಲಿಕ್ಸ್ ಈ ಪ್ರಕಟಣೆಯು ಆರ್ಬಿಐ ನಿರ್ಬಂಧನೆಗಳ ಯಾವುದೇ ಉಲ್ಲೇಖವನ್ನು ಮಾಡಿಲ್ಲ.

ಯುಪಿಐ ಅಟೋಪೇ ಫೀಚರ್ಗೆ ನೆಟ್ಫ್ಲಿಕ್ಸ್ ಗ್ರಾಹಕರು ಸೈನ್ ಅಪ್ ಆಗುವುದು ಹೇಗೆ?
ಹಂತ ಒಂದು: ಮೊದಲು ಇಮೇಲ್ ವಿಳಾಸವನ್ನು ರಿಜಿಸ್ಟರ್ ಮಾಡಬೇಕು. ಇಮೇಲ್ ವಿಳಾಸದ ಮೂಲಕ ನೀವು ನಿಮ್ಮ ನೆಟ್ಫ್ಲಿಕ್ಸ್ ಖಾತೆಯನ್ನು ತೆರೆಯಬಹುದಾಗಿದೆ.
ಹಂತ ಎರಡು: ಆಯ್ಕೆಗಳ ಪಟ್ಟಿಯಿಂದ ಯೋಜನೆಯನ್ನು ಆಯ್ಕೆಮಾಡಿ. ನಿಮ್ಮ ಆನ್ಲೈನ್ ಬ್ರೌಸರ್ ಮೂಲಕ ನೀವು ಸೈನ್ ಅಪ್ ಮಾಡಿದರೆ, ನಿಮಗೆ ರೂ .499, ರೂ .699 ಅಥವಾ ರೂ .799 ಪಾವತಿಸುವ ಅವಕಾಶವಿದೆ.
ಹಂತ ಮೂರು: ಪಾವತಿ ವಿಧಾನ (Payment Method) ಸೆಟ್ ಅಪ್ ಮಾಡಿಕೊಳ್ಳಿ
ಹಂತ ನಾಲ್ಕು: ಪಾವತಿ ಮಾಡಲು ನಿಮ್ಮ ಯುಪಿಐ ಖಾತೆಯ ಮಾಹಿತಿಯನ್ನು ಹಾಕಿಕೊಳ್ಳಿ
ಈ ಎಲ್ಲಾ ಪ್ರಕ್ರಿಯೆಗಳು ಮುಗಿದ ನಂತರ ನಿಮ್ಮ ಚಂದಾದಾರಿಕೆ ಇಲ್ಲ ಎಂಬ ಕಾರಣಕ್ಕೆ ನೀವು ನಿಮ್ಮ ನೆಚ್ಚಿನ ವೆಬ್ ಸಿರೀಸ್ ಹಾಗೂ ಸಿನಿಮಾಗಳನ್ನು ಮಿಸ್ ಮಾಡಿಕೊಳ್ಳುವ ಪ್ರಮೇಯವೇ ಬರುವುದಿಲ್ಲ.