ಅಂಚೆ ಇಲಾಖೆಯಿಂದ ಇಂಟರ್ನೆಟ್ ಬ್ಯಾಂಕಿಂಗ್- ಬಳಕೆ ಹೇಗೆ?
ಪ್ರಸ್ತುತ ದಿನದಲ್ಲಿ ಇಂಟರ್ನೆಟ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್, ಆನ್ಲೈನ್ ಬ್ಯಾಂಕಿಂಗ್ ಹೆಸರಿನಲ್ಲಿ ಜನರಿಗೆ ಚಿರಪರಿಚಿತವಾಗಿದೆ. ಹಣಕಾಸು ವ್ಯವಹಾರ, ಬ್ಯಾಂಕಿಂಗ್ ಸೇವೆಗಳು ಮತ್ತು ಉತ್ಪನ್ನಗಳ ಖರೀದಿ ಎಲ್ಲವೂ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಸುಗಮಗೊಂಡಿದೆ. ನೋಟು ಅಮಾನ್ಯೀಕರಣ, ಡಿಜಿಟಲೀಕರಣ ಆದ ಮೇಲೆ ಜನರ ಸಮಯವನ್ನು ಉಳಿಸಲು ಪ್ರಧಾನ ಪಾತ್ರ ವಹಿಸಿರುವ ಇಂಟರ್ನೆಟ್ ಬ್ಯಾಂಕಿಂಗ್ ನಮ್ಮ ದೈನಂದಿನ ಅಗತ್ಯಗಳಲ್ಲಿ ಒಂದಾಗಿದೆ. ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಹಣ ಪಾವತಿ ವ್ಯವಸ್ಥೆಯು ಸುರಕ್ಷಿತವಾಗಿದ್ದು, ಖಾತೆದಾರನಿಗೆ ಸಂಬಂಧಿದ ದಾಖಲೆಗಳು, ಐಡಿಗಳು ಮತ್ತು ಪಾಸ್ವರ್ಡ್ಗಳನ್ನು ಸುರಕ್ಷಿತವಾಗಿಡಬಹುದು.
ಡಿಸೆಂಬರ್ 2018ರಲ್ಲಿ ಭಾರತೀಯ ಅಂಚೆ ಇಲಾಖೆಯು ತನ್ನ ಗ್ರಾಹಕರಿಗಾಗಿ 'ಇಂಡಿಯಾ ಪೋಸ್ಟ್ ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಪೋಸ್ಟ್ ಆಫೀಸ್ ನೆಟ್ ಬ್ಯಾಂಕಿಂಗ್ ಸೇವೆಯನ್ನು ಪ್ರಾರಂಭಿಸಿತು. ಸ್ಥಳೀಯ ಅಂಚೆ ಕಚೇರಿಗಳಲ್ಲಿ ಈ ಸೇವೆ ಲಭ್ಯವಿದೆ. ಇಂಟರ್ನೆಟ್ ಬ್ಯಾಂಕಿಂಗ್ ಒದಗಿಸುವ ಮೊದಲು ಅಂಚೆ ಇಲಾಖೆಯಿಂದ ವಿವಿಧ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಲಾಗುತ್ತದೆ.
ಎಲ್ಲರೂ ಇಂಟರ್ನೆಟ್ ಬ್ಯಾಂಕಿಂಗ್ಗೆ ಅರ್ಹರಾಗಿರುವುದಿಲ್ಲ. ಈ ಇಂಟರ್ನೆಟ್ ಬ್ಯಾಂಕಿಂಗ್ ಭಾರತೀಯ ಅಂಚೆ ಇಲಾಖೆಯೊಳಗೆ ಮಾತ್ರ ಸೀಮಿತವಾಗಿದೆ. ಒಂದು ಅಂಚೆ ಕಚೇರಿಯಿಂದ ಮತ್ತೊಂದು ಅಂಚೆ ಕಚೇರಿ ಖಾತೆದಾರರು ಮಾತ್ರ ಇದನ್ನು ಬಳಸಬಹುದು. ಈ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಯನ್ನು ಇತರ ಬ್ಯಾಂಕ್ಗಳಿಗೆ ಲಿಂಕ್ ಮಾಡಲು ಸಾಧ್ಯವಿಲ್ಲ.

ಅಂಚೆ ಇಲಾಖೆಯ ಇಂಟರ್ನೆಟ್ ಬ್ಯಾಂಕಿಂಗ್ (ಡಿಒಪಿ)
ಅಂಚೆ ಇಲಾಖೆ (ಡಿಒಪಿ) ಪ್ರಕಾರ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಬಳಕೆದಾರರು ತಮ್ಮ ಖಾತೆ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದು. ಕೆಲವೊಂದು ಷರತ್ತುಗಳ ಅನ್ವಯ ಹಣಕಾಸು ಹಾಗೂ ಹಣಕಾಸಿನೇತರ ವ್ಯವಹಾರವನ್ನು ಪರಿಶೀಲಿಸಬಹುದು. ಯಾವ ಸೇವೆ ಬೇಕೆಂದು ಮೊದಲೇ ಅಂಚೆ ಇಲಾಖೆಗೆ ಮಾಹಿತಿ ನೀಡಿದ ನಂತರವೇ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಯನ್ನು ಪಡೆದುಕೊಳ್ಳಲು ಸಾಧ್ಯ. ಅದಕ್ಕೆ ಬೇಕಾದ ದಾಖಲೆಗಳೆಂದರೆ
1. ಪ್ಯಾನ್ ಕಾರ್ಡ್ ಸಂಖ್ಯೆ
2. ಮೊಬೈಲ್ ಸಂಖ್ಯೆ
3. ಇ-ಮೇಲ್ ವಿಳಾಸ
4. ಕೆವೈಸಿ ದಾಖಲೆಗಳು
5. ಸಕ್ರಿಯ ಉಳಿತಾಯ ಖಾತೆ (ಸಿಂಗಲ್ ಅಥವಾ ಜಂಟಿ ಬಿ)
6. ಸಕ್ರಿಯವಾಗಿರುವ ಡೆಬಿಟ್ ಕಾರ್ಡ್

ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯಗಳ ಬಗ್ಗೆ ತಿಳಿಯೋಣ
ಬನ್ನಿ, ಭಾರತೀಯ ಅಂಚೆ ಇಲಾಖೆಯು ಒದಗಿಸುವ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯಗಳ ಬಗ್ಗೆ ತಿಳಿಯೋಣ:
ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ (ಸೇವಿಂಗ್ ಅಕೌಂಡ್) ಚಾಲ್ತಿ ಖಾತೆ (ಕರೆಂಟ್ ಅಕೌಂಟ್) ಮತ್ತು ಸ್ಥಿರ ಠೇವಣಿ ಖಾತೆ (ಫಿಕ್ಸೆಡ್ ಅಕೌಂಟ್) ಇರುವವರಿಗೆ ಮಾತ್ರ ಇಂಟರ್ನೆಟ್ ಬ್ಯಾಂಕಿಂಗ್ ಪ್ರಯೋಜನ ಲಭಿಸುತ್ತದೆ.
ಬಳಕೆದಾರರು ಅಥವಾ ಖಾತೆದಾರರ ತಮ್ಮ ಹೆಸರನ್ನು ಅರ್ಜಿಯಲ್ಲಿ ನಮೂದಿಸಿ ಕೊಟ್ಟಾಗ ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ಸ್ವೀಕೃತವಾಗುತ್ತದೆ. ಈ ಸೌಲಭ್ಯ ಪಡೆಯಲು ಕೆಲವೊಂದು ಮಿತಿಗಳು ಹಾಗೂ ಶುಲ್ಕಗಳು ಅನ್ವಯವಾಗುತ್ತವೆ.

ನನ್ನ ವಿವರ
ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯ ಪಡೆಯುವ ಮೊದಲು ನಿಮ್ಮ ವಿವರನ್ನು ನೀಡುವುದು ಕಡ್ಡಾಯವಾಗಿದೆ. ಇದು ನಿಮ್ಮ ಇಂಟರ್ನೆಟ್ ಬ್ಯಾಂಕಿಂಗ್ಗೆ ಹೆಚ್ಚುವರಿ ಭದ್ರತೆ ಜೊತೆಗೆ ಸ್ವಯಂ ದೃಢೀಕರಣಕ್ಕೂ ಸಹಾಯ ಮಾಡುತ್ತದೆ. ಇಲ್ಲಿ ಬಳಕೆದಾರರಿಗೆ ಕೆಲವೊಂದು ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಖಾತೆದಾರರು ಇದನ್ನು ಬಳಕೆ ಮಾಡುವ ಜೊತೆಗೆ ಬದಲಾವಣೆಗಳನ್ನೂ ಮಾಡಿಕೊಳ್ಳಬಹುದು.
1. ವಹಿವಾಟಿನ ಪಾಸ್ವರ್ಡ್ ಬದಲಾಯಿಸುವುದು
2. ನಿಮ್ಮ ಆದ್ಯತೆಗಳನ್ನು ಜೋಡಿಸಬಹುದು.
3. ಲಾಗ್ ಇನ್ ಐಡಿಯನ್ನು ನವೀಕರಿಸಬಹುದು.
4. ನಿಮ್ಮ ವೈಯಕ್ತಿಕ ವಿವರಗಳನ್ನು ವೀಕ್ಷಿಸಬಹುದು.

ವಹಿವಾಟು ಸೌಲಭ್ಯಗಳು
ಖಾತೆಗಳು:
ಖಾತೆಗಳ ಮೇಲೆ ಒದಗಿಸಿರುವ ಸೌಲಭ್ಯಗಳು ಇಲ್ಲಿವೆ
1. ಇಂಟರ್ನೆಟ್ ಬ್ಯಾಂಕಿಂಗ್ನಲ್ಲಿ ನಿಮ್ಮ ಖಾತೆ ಸಾರಾಂಶ ಲಭ್ಯವಿರುತ್ತದೆ.
2. ಉಳಿತಾಯ ಖಾತೆ, ಆರ್ಡಿ ಖಾತೆ, ಟಿಡಿ ಖಾತೆ, ಪಿಪಿಎ್ ಖಾತೆ, ಎನ್ಎಸ್ಇ ಖಾತೆ ವಿವರಗಳನ್ನು ನೋಡಬಹುದು.
3. ನಿಮ್ಮ ಆರ್ಡಿ ಹಣವನ್ನು ಅರ್ಧದಲ್ಲೇ ಹಿಂಪಡೆಯಲು ಸಾಧ್ಯವಿದೆ.
4. ತೆರಿಗೆ ವಿನಾಯಿತಿ
5. ಪಿಪಿಇ (ಸಾರ್ವಜನಿಕ ಭವಿಷ್ಯ ನಿಧಿ) ಲೋನ್ ನಿರ್ವಹಣೆ
ವಹಿವಾಟು ಸೌಲಭ್ಯಗಳು:
1. ಸಂಪೂರ್ಣ ವಹಿವಾಟನ್ನು ವೀಕ್ಷಿಸಬಹುದು.
2. ನಿಗದಿತ ವಹಿವಾಟುಗಳ ವಿವರ ಸಿಗುತ್ತದೆ
3. ಅಪೂರ್ಣಗೊಂಡ ವಹಿವಾಟುಗಳನ್ನು ನೋಡಬಹುದು.
4. ಅರ್ಧಕ್ಕೆ ಪಡೆದ ಆರ್ಡಿ ಹಣವನ್ನು ಮರುಪಾವತಿ ಮಾಡಬಹುದು.
5. ಪಾವತಿಸುವಿಕೆ
6. ಹಣ ವರ್ಗಾವಣೆ
7. ಪಿಪಿಇ (ಸಾರ್ವಜನಿಕ ಭವಿಷ್ಯ ನಿಧಿ) ಹಿಂಪಡೆಯುವಿಕೆ, ಕೊಡುಗೆ
8. ಸಾಲ ಮರುಪಾವತಿ
9. ಎಲ್ಲಾ ರೀತಿಯ ಸೂಚನೆಗಳನ್ನು ವೀಕ್ಷಿಸಬಹುದು.
10. ಆರ್ಡಿ ಠೇವಣಿ ಮತ್ತು ನಿರ್ವಹಣೆ

ಅಂಚೆ ಕಛೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕು
1. ಪ್ರಮುಖ ಸಂಗತಿಗಳನ್ನು ಮೇಲ್ನಲ್ಲಿ ತಿಳಿಸಲಾಗುತ್ತದೆ
2. ಪ್ರಶ್ನೆಗಳು ಮತ್ತು ವಿಚಾರಣೆಗಳು.
3. ವಿವಿಧ ಸೇವಾ ವಿನಂತಿಗಳು.
ಉಪಸಂಹಾರ:
ಖಾತೆದಾರರು ತಮ್ಮ ಇಂಟರ್ನೆಟ್ ಬ್ಯಾಂಕಿಂಗ್ ಅನ್ನು ನಿರ್ವಹಿಸಲು ಬೇರೆಯವರಿಗೆ ಅನುಮತಿ ನೀಡಬಾರದು. ಯಾವುದೇ ರೀತಿಯ ಗೊಂದಲ ಅಥವಾ ಅನುಮಾನಗಳಿದ್ದರೆ ಅಂಚೆ ಕಛೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕು. ಬಳಕೆದಾರರು ತಮ್ಮ ಯಾವುದೇ ವಿವರಗಳು, ಪಿನ್ ಸಂಖ್ಯೆ, ಲಾಗಿನ್ ಐಡಿ, ಪಾಸ್ವರ್ಡ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಹಣ ವರ್ಗಾವಣೆಗೆ ಕೆಲವು ಮಿತಿಗಳಿದ್ದು, ಖಾತೆದಾರರು ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗೆ ಇಂತಿಷ್ಟು ಶುಲ್ಕವನ್ನು ಕಟ್ಟಬೇಕು. ಇಂಟರ್ನೆಟ್ ಸೌಲಭ್ಯ ಅಥವಾ ಸೇವೆಯನ್ನು ಪಡೆಯುವ ಮುನ್ನ ಸಾಕಷ್ಟು ಮಾಹಿತಿ, ಜ್ಞಾನ ಅವಶ್ಯ. ಇದಕ್ಕಾಗಿ ನಿಮ್ಮ ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಿ.