For Quick Alerts
ALLOW NOTIFICATIONS  
For Daily Alerts

ಪ್ರತಿದಿನ 2 ರೂ ಹೂಡಿಕೆ ಮಾಡಿ 36,000 ಪಿಂಚಣಿ ಪಡೆಯಿರಿ!

|

ಸರ್ಕಾರವು ಕಾರ್ಮಿಕರು ಹಾಗೂ ದುಡಿಯುವ ವರ್ಗಕ್ಕೆ ಹಲವಾರು ಯೋಜನೆಗಳನ್ನು ಪರಿಚಯಿಸಿದೆ. ನೀವು ಪ್ರತಿದಿನ ಬರೀ 2 ರೂಪಾಯಿ ಹೂಡಿಕೆ ಮಾಡುವ ಮೂಲಕ ವಾರ್ಷಿಕವಾಗಿ 36 ಸಾವಿರ ರೂಪಾಯಿ ಪಿಂಚಣಿಯನ್ನು ಪಡೆಯುವ ಯೋಜನೆಯನ್ನು ಸರ್ಕಾರ ಹೊಂದಿದೆ. ಆ ಯೋಜನೆಯ ಬಗ್ಗೆ ನಾವಿಲ್ಲಿ ವಿವರಣೆ ನೀಡಿದ್ದೇವೆ.

ಕೇಂದ್ರ ಸರ್ಕಾರವು ಪ್ರಸ್ತುತ ದುಡಿಯುವ ವರ್ಗಕ್ಕಾಗಿ ಹಲವಾರು ಯೋಜನೆಗಳನ್ನು ಹೊಂದಿದೆ. ಕಾರ್ಮಿಕರ ಆರ್ಥಿಕ ಸ್ಥಿತಿ ಉತ್ತಮಗೊಳಿಸುವುದು ಈ ಯೋಜನೆಯ ಪ್ರಮುಖ ಉದ್ಧೇಶವಾಗಿದೆ. ಈ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ ಯೋಜನೆ ಕೂಡಾ ಒಂದಾಗಿದೆ.

LIC Dhan Varsha: 10 ಲಕ್ಷ ರೂ ಹೂಡಿಕೆ ಮಾಡಿ 10 ಪಟ್ಟು ಅಧಿಕ ರಿಟರ್ನ್ ಪಡೆಯಿರಿ!LIC Dhan Varsha: 10 ಲಕ್ಷ ರೂ ಹೂಡಿಕೆ ಮಾಡಿ 10 ಪಟ್ಟು ಅಧಿಕ ರಿಟರ್ನ್ ಪಡೆಯಿರಿ!

ಈ ಯೋಜನೆಯಡಿಯಲ್ಲಿ ಕಾರ್ಮಿಕರು ವಾರ್ಷಿಕವಾಗಿ 36 ಸಾವಿರ ರೂಪಾಯಿ ಪಿಂಚಣಿಯನ್ನು ಪಡೆಯುವ ಅವಕಾಶವಿದೆ. ಅದು ಕೂಡಾ ಪ್ರತಿ ದಿನ ಬರೀ ಎರಡು ರೂಪಾಯಿ ಹೂಡಿಕೆ ಮಾಡುವ ಮೂಲಕ! ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

 ದಾಖಲೆಗಳು ಏನು ಬೇಕು?

ದಾಖಲೆಗಳು ಏನು ಬೇಕು?

ಈ ಯೋಜನೆಯ ಫಲಾನುಭವಿಗಳು ನೀವಾಗಬೇಕಾದರೆ ನಿಮ್ಮಲ್ಲಿ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಇರಬೇಕಾಗುತ್ತದೆ. ಇವೆರಡು ಇದ್ದರೆ ಮಾತ್ರ ನೀವು ಈ ಯೋಜನೆಯ ರಿಜಿಸ್ಟ್ರೇಷನ್ ಮಾಡಲು ಸಾಧ್ಯವಾಗುತ್ತದೆ. ನೀವು ಮಾಸಿಕವಾಗಿ ಕನಿಷ್ಠ 55 ರೂಪಾಯಿ ಹೂಡಿಕೆ ಮಾಡಲೇಬೇಕು. ನಿಮಗೆ 60 ವರ್ಷವಾದಾಗ ಪಿಂಚಣಿ ಆರಂಭವಾಗುತ್ತದೆ.ನೀವು ಪ್ರತಿ ದಿನ 2 ರೂಪಾಯಿಯಂತೆ ಮಾಸಿಕ 60 ರೂಪಾಯಿ ಹೂಡಿಕೆ ಮಾಡಿದರೆ ನಿಮಗೆ ಮಾಸಿಕ 3000 ರೂಪಾಯಿಯಂತೆ ವಾರ್ಷಿಕವಾಗಿ 36 ಸಾವಿರ ರೂಪಾಯಿ ಪಿಂಚಣಿ ಲಭ್ಯವಾಗುತ್ತದೆ.

 ಯಾರೆಲ್ಲ ಹೂಡಿಕೆ ಮಾಡಬಹುದು?

ಯಾರೆಲ್ಲ ಹೂಡಿಕೆ ಮಾಡಬಹುದು?

ಈ ಯೋಜನೆಯು ಬೀದಿಬದಿ ವ್ಯಾಪಾರಸ್ಥರು, ಆಟೋ ಡ್ರೈವರ್‌ಗಳು, ಕಟ್ಟಡ ಕಾರ್ಮಿಕರು,ಇತರ ಕಾರ್ಮಿಕರಿಗಾಗಿ ಸರ್ಕಾರವು ಈ ಯೋಜನೆಯನ್ನು ಆರಂಭ ಮಾಡಿದೆ. ಅಸಂಘಟಿತ ವರ್ಗದ ಕಾರ್ಮಿಕರು ನಿವೃತ್ತಿ ಬಳಿಕ ಆರ್ಥಿಕ ಸುರಕ್ಷತೆ ಹೊಂದಿರಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಈ ಯೋಜನೆಯನ್ನು ಆರಂಭ ಮಾಡಿದೆ. ಈ ಯೋಜನೆಯು 18 ವರ್ಷದಿಂದ 40 ವರ್ಷದವರಿಗಾಗಿದೆ. ಈ ವಯೋಮಿತಿಯಲ್ಲಿ ಮಾತ್ರ ಹೂಡಿಕೆ ಮಾಡಬಹುದು.

LIC Jeevan Akshay Policy : ಮಾಸಿಕ 36,000 ರೂ ಪಡೆಯಲು ಈ ಯೋಜನೆಯಲ್ಲಿ ಹೂಡಿಕೆ ಮಾಡಿ!LIC Jeevan Akshay Policy : ಮಾಸಿಕ 36,000 ರೂ ಪಡೆಯಲು ಈ ಯೋಜನೆಯಲ್ಲಿ ಹೂಡಿಕೆ ಮಾಡಿ!

 2 ರೂ ಹೂಡಿಕೆ ಮಾಡಿ 36 ಸಾವಿರ ರೂ ಪಡೆಯುವುದು ಹೇಗೆ?

2 ರೂ ಹೂಡಿಕೆ ಮಾಡಿ 36 ಸಾವಿರ ರೂ ಪಡೆಯುವುದು ಹೇಗೆ?

ನೀವು ಈ ಯೋಜನೆಗೆ 18 ವರ್ಷದಲ್ಲಿ ಹೂಡಿಕೆ ಆರಂಭಿಸಿದರೆ, ಪ್ರತಿ ತಿಂಗಳು 55 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ವಾರ್ಷಿಕವಾಗಿ 36 ಸಾವಿರ ಪಿಂಚಣಿ ಪಡೆಯಬಹುದು. ನಿಮಗೆ 40 ವರ್ಷವಾಗಿದ್ದರೆ ಮಾಸಿಕವಾಗಿ 200 ರೂಪಾಯಿ ಅಥವಾ ಪ್ರತಿದಿನ 6.50 ರೂಪಾಯಿ ಹೂಡಿಕೆ ಮಾಡಿ 36 ಸಾವಿರ ರೂಪಾಯಿ ಪಿಂಚಣಿ ಪಡೆಯಬಹುದು. ಆದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕಾದರೆ ನೀವು ಮಾಸಿಕ 15 ಸಾವಿರ ಆದಾಯವನ್ನು ಹೊಂದಿರಬೇಕಾಗುತ್ತದೆ.

English summary

Invest Rs 2 every day in PM Shram Yogi Maandhan scheme and get pension of Rs 36,000, Details in Kannada

How to Get Over Rs 36,000 pension With by investing of Rs. 2 daily, Explained in Kannada. read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X