For Quick Alerts
ALLOW NOTIFICATIONS  
For Daily Alerts

EPF claim : ಇಪಿಎಫ್ ಕ್ಲೈಮ್ ತಿರಸ್ಕೃತವಾಗುತ್ತಿದ್ದೆಯೇ, ಸರ್ಕಾರದ ಮಾರ್ಗಸೂಚಿ ನೋಡಿ

|

ನೀವು ಇಪಿಎಫ್‌ ಕ್ಲೈಮ್ ಮಾಡಲು ನಿರಂತರವಾಗಿ ಅರ್ಜಿ ಸಲ್ಲಿಸುತ್ತಾ ಇದ್ದರೂ ಅರ್ಜಿ ತಿರಸ್ಕಾರವಾಗುತ್ತಿದ್ದೆಯೇ?. ಪದೇ ಪದೇ ನಿಮ್ಮ ಕ್ಲೈಮ್ ತಿರಸ್ಕಾರವಾದರೆ ನಿಮಗೆ ತಲೆ ಬಿಸಿ ಆಗುವುದಿಲ್ಲವೇ?. ಅದಕ್ಕಾಗಿ ಮೊದಲು ಸರ್ಕಾರದ ಮಾರ್ಗಸೂಚಿ ಏನಿದೆ ಎಂದು ನೋಡಿಕೊಳ್ಳಿ.

 

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಗೆ (ಇಪಿಎಫ್‌ಒ) ನೀವು ಸಲ್ಲಿಸುತ್ತಿರುವ ಅರ್ಜಿ ತಿರಸ್ಕಾರವಾಗುವುದಕ್ಕೆ ಸರ್ಕಾರ ಮಾರ್ಗಸೂಚಿಯನ್ನು ಬಿಗಿ ಮಾಡಿರುವುದೇ ಕಾರಣವಾಗಿರಬಹುದು. ಸಚಿವಾಲಯದ ಪ್ರಕಾರ ಉದ್ಯೋಗಿಗಳ ಇಪಿಎಫ್ ಕ್ಲೈಮ್ ನಿಯಮಬಾಹಿರವಾಗಿರುವುದರಿಂದ ತಿರಸ್ಕಾರ ಮಾಡಲಾಗುತ್ತದೆ.

 

 ಆನ್‌ಲೈನ್‌ನಲ್ಲಿ ಇಪಿಎಫ್ ಖಾತೆಗೆ ಇ-ನಾಮಿನೇಷನ್‌ ಸಲ್ಲಿಸುವುದು ಹೇಗೆ? ಆನ್‌ಲೈನ್‌ನಲ್ಲಿ ಇಪಿಎಫ್ ಖಾತೆಗೆ ಇ-ನಾಮಿನೇಷನ್‌ ಸಲ್ಲಿಸುವುದು ಹೇಗೆ?

ಉದ್ಯೋಗಿಗಳ ಪಿಎಫ್ ಕ್ಲೈಮ್ ಇಪಿಎಫ್‌ಒನಿಂದ ಹಲವಾರು ಬಾರಿ ತಿರಸ್ಕಾರವಾಗಿದ್ದರೆ, ಅದಕ್ಕೆ ಬೇರೆ ಬೇರೆ ಕಾರಣಗಳು ಇರುತ್ತದೆ. ಸರ್ಕಾರ ಹೇಳಿರುವ ನೀತಿಯನ್ನು ನಾವು ಪಾಲನೆ ಮಾಡಬೇಕು. ಇಲ್ಲವಾದರೆ ತಿರಸ್ಕಾರವಾಗುತ್ತದೆ ಎಂದು ಸರ್ಕಾರ ಹೇಳಿಕೊಂಡಿದೆ.

 ಇಪಿಎಫ್ ಕ್ಲೈಮ್ ತಿರಸ್ಕಾರ?, ಸರ್ಕಾರದ ಮಾರ್ಗಸೂಚಿ ನೋಡಿ

ಕ್ಲೈಮ್ ಮೊತ್ತ ವಿಳಂಬ?

ನೀವು ಕ್ಲೈಮ್ ಮೊತ್ತವನ್ನು ಪಡೆದ ಬಳಿಕವೂ ನಿಮ್ಮ ಕ್ಲೈಮ್ ಮೊತ್ತವನ್ನು ವಿತ್‌ಡ್ರಾ ಮಾಡಿದ ಪ್ರಕ್ರಿಯೆಯಲ್ಲಿನ ಸಮಸ್ಯೆಯನ್ನು ಸರಿಪಡಿಸಲಾಗಿರುವುದಿಲ್ಲ. ಚಂದಾದಾರರು ಸರಿಯಾದ ವಿಧಾನವನ್ನು ಪಾಲಿಸಿಕೊಂಡು ಇಪಿಎಫ್ ಮೊತ್ತ ಕ್ಲೈಮ್ ಮಾಡಿಕೊಳ್ಳಬೇಕು ಎಂದು ಸರ್ಕಾರ ಹೇಳಿಕೊಂಡಿದೆ.

ಪಿಎಫ್‌ ಚಂದಾದಾರರು, ಇತರರಿಂದ ಹಲವಾರು ದೂರುಗಳು ಬಂದಿದೆ. ಮುಖ್ಯವಾಗಿ ದೌರ್ಜನ್ಯ, ಪಾವತಿ ವಿಳಂಬ, ನಿಗದಿತ ಸಮಯದಲ್ಲಿ ಪಿಎಫ್ ಮೊತ್ತ ಪಾವತಿ ಆಗದಿರುವುದಕ್ಕೆ ಸಂಬಂಧಿಸಿದ ದೂರುಗಳು ಅಧಿಕವಾಗಿ ಬರುತ್ತಿದೆ. ಹಾಗೆಯೇ ಅರ್ಜಿಗಳನ್ನು ಕೂಡಾ ಹಲವಾರು ಕಾರಣದಿಂದಾಗಿ ತಿರಸ್ಕಾರ ಮಾಡಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಐಟಿ ಇ-ಪೋರ್ಟಲ್‌ನಲ್ಲಿ ಮುಂದುವರಿದ ತಾಂತ್ರಿಕ ದೋಷ: ಇನ್ಫೋಸಿಸ್‌ CEOಗೆ ಸಮನ್ಸ್ ನೀಡಿದ FMಐಟಿ ಇ-ಪೋರ್ಟಲ್‌ನಲ್ಲಿ ಮುಂದುವರಿದ ತಾಂತ್ರಿಕ ದೋಷ: ಇನ್ಫೋಸಿಸ್‌ CEOಗೆ ಸಮನ್ಸ್ ನೀಡಿದ FM

ನಾವು ಸಂಬಂಧಪಟ್ಟ ಇಲಾಖೆಗೆ ಸರಿಯಾಗಿ ಕಾರ್ಯನಿರ್ವಹಣೆ ಮಾಡಲು ಸೂಚನೆಯನ್ನು ನೀಡಿದ್ದೇವೆ. ಎಲ್ಲ ಕ್ಲೈಮ್ ಅನ್ನು ನಾವು ಪರಿಷ್ಕರಣೆ ಮಾಡುತ್ತೇವೆ. ಚಂದಾದಾರರು ತಾವು ಯಾಕಾಗಿ ಈ ಕ್ಲೈಮ್ ಅನ್ನು ಮಾಡುತ್ತಿದ್ದಾರೆ ಎಂದು ಕಾರಣವನ್ನು ನೀಡಬೇಕು. ಸರಿಯಾದ ಕಾರಣವನ್ನು ನೀಡಬೇಕು. ಎಲ್ಲವನ್ನು ಸರಿಯಾಗಿ ಪರಿಶೀಲನೆ ಮಾಡಿದ ಬಳಿಕವೇ ಕ್ಲೈಮ್ ಅನ್ನು ಅನುಮೋದನೆ ಮಾಡಲಾಗುತ್ತದೆ. ಕ್ಲೈಮ್ ಪ್ರಕ್ರಿಯೆಯಲ್ಲಿ ಪದೇ ಪದೇ ತಪ್ಪಾದರೆ ಕ್ಲೈಮ್ ತಿರಸ್ಕಾರ ಮಾಡಲಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

English summary

Irritated with Repeated Rejections of Your EPF Claim, Check Government Guidelines

If your EPF claim is continually being denied, you no longer need to be concerned. Irritated with Repeated Rejections of Your EFP Claim, Check Government Guidelines.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X