ಯುಪಿಐ ಬಳಸಿಕೊಂಡು ಎಲ್ಐಸಿ ಐಪಿಒಗೆ ಅರ್ಜಿ ಸಲ್ಲಿಕೆ ಹೇಗೆ?
ಬಹುನಿರೀಕ್ಷಿತ ಎಲ್ಐಸಿ ಐಪಿಒ ಮಾರ್ಚ್ 11ರಿಂದ ಆರಂಭವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಿಂದಾಗಿ ಸದ್ಯ ಎಲ್ಐಸಿ ಐಪಿಒ ಹೂಡಿಕೆದಾರರಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿದೆ. ಹೂಡಿಕೆದಾರರು ಎಲ್ಐಸಿ ಐಪಿಒ ಮೇಲೆ ಹೂಡಿಕೆ ಮಾಡಲು ಎಲ್ಲಾ ಸಿದ್ದತೆಯನ್ನು ಈಗಲೇ ಮಾಡಿಕೊಳ್ಳುತ್ತಿದ್ದಾರೆ. ಹೂಡಿಕೆದಾರರು ಯುಪಿಐ ಬಳಸಿಕೊಂಡು ಕೂಡಾ ಎಲ್ಐಸಿ ಐಪಿಒಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಹೂಡಿಕೆದಾರರು ಯುನೈಟೆಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಬಳಸಿಕೊಂಡು ಹೂಡಿಕೆದಾರರು ಎಲ್ಐಸಿ ಐಪಿಒಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಆದರೆ ಎಲ್ಐಸಿಯ ಉದ್ಯೋಗಿಗಳು ಮತ್ತು ಪಾಲಿಸಿದಾರರು ಮಾತ್ರ ಯುಪಿಐ ಬಳಸಿಕೊಂಡು ಐಪಿಒಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಪಿಎಫ್ ಹಣ ಬಳಸಿ ಎಲ್ಐಸಿ ಪ್ರೀಮಿಯಂ ಪಾವತಿ ಹೇಗೆ?
ಎಲ್ಐಸಿ ಐಪಿಒ ಸಲ್ಲಿಕೆಗೆ ಯುಪಿಐ ವಿಧಾನವನ್ನು ಬಳಸಲು ಅರ್ಜಿ ಸಲ್ಲಿಸಲು, ಹೂಡಿಕೆದಾರರು ಅರ್ಜಿಯನ್ನು ಸಲ್ಲಿಸುವಾಗ ಪಾವತಿ ವಿಧಾನವಾಗಿ 'Pay using UPI ID' ಅನ್ನು ಆಯ್ಕೆ ಮಾಡಬೇಕು. ಅಲ್ಲದೇ ಎಕನಾಮಿಕ್ ಟೈಮ್ಸ್ ಪ್ರಕಾರ, ಹೂಡಿಕೆದಾರರು ಬ್ರೋಕರ್ಗೆ ಅದರ ಬಗ್ಗೆ ತಿಳಿಸಬೇಕು. ಚಿಲ್ಲರೆ ಹೂಡಿಕೆದಾರರು ಆ ಚಾನಲ್ ಮೂಲಕ ಬಿಡ್ ಸಲ್ಲಿಸಲು ಯುಪಿಐ ವಿನಂತಿಯನ್ನು ಸಹ ಅಧಿಕೃತಗೊಳಿಸಬೇಕಾಗುತ್ತದೆ.

ಅಲ್ಲದೆ ಯುಪಿಐ ವಿಧಾನವು ಸರಿಯಾಗಿ ಕಾರ್ಯನಿರ್ವಹಿಸಲು ಬ್ಯಾಂಕ್ ಖಾತೆಯು ಎನ್ಪಿಸಿನಿಂದ ಯುಪಿಐ 2.0 ಪ್ರಮಾಣೀಕರಣ ಹೊಂದಿರಬೇಕಾಗಿದೆ. ಎಲ್ಐಸಿ ಇದನ್ನು ಎಲ್ಐಸಿ ಐಪಿಒನ ಡಿಆರ್ಹೆಚ್ಪಿಯಲ್ಲಿ ನಿರ್ದಿಷ್ಟವಾಗಿ ಸೂಚಿಸಿದೆ. ರಾಯಿಟರ್ಸ್ ವರದಿಯ ಪ್ರಕಾರ, ಎಲ್ಐಸಿ ಐಪಿಒ ಮಾರ್ಚ್ 11, 2022 ರಂದು ಬಿಡ್ಡಿಂಗ್ಗೆ ಆರಂಭ ಮಾಡುವ ನಿರೀಕ್ಷೆಯಿದೆ. ಹಾಗಾದರೆ ಎಲ್ಐಸಿ ಐಪಿಒ ಬಳಸಿಕೊಂಡು ಐಪಿಒ ಅರ್ಜಿ ಸಲ್ಲಿಕೆ ಮಾಡುವುದು ಹೇಗೆ? ಇಲ್ಲಿದೆ ವಿವರ..
ಎಲ್ಐಸಿ ಐಪಿಒ: ಹೂಡಿಕೆ ಮಾಡುವ ಮುನ್ನ ಇದನ್ನು ಓದಿ
ಎಲ್ಐಸಿ ಐಪಿಒ ಬಳಸಿಕೊಂಡು ಐಪಿಒ ಅರ್ಜಿ ಸಲ್ಲಿಕೆ ಹೇಗೆ?
* bseindia.com ನಿಂದ ಎಲ್ಐಸಿ ಐಪಿಒ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ
* ಫಾರ್ಮ್ನಲ್ಲಿ ನಿಮ್ಮ ಐಪಿಒ ಐಡಿಯನ್ನು ನಮೂದಿಸಿ ಮತ್ತು ಅದನ್ನು ಸಲ್ಲಿಸಿ
* ಯುಪಿಐ ಮೊಬೈಲ್ ಅಪ್ಲಿಕೇಶನ್ನಲ್ಲಿ, ಹೂಡಿಕೆದಾರರು ಅಗತ್ಯವಿರುವ ಹಣವನ್ನು ಬ್ಲಾಕ್ ಮಡಲು ವಿನಂತಿ ಸ್ವೀಕಾರ ಮಾಡಲಿದ್ದಾರೆ
* ವಿನಂತಿಯನ್ನು ಅನುಮೋದಿಸಬೇಕು
* ಈಗ, ಹಂಚಿಕೆ ಪ್ರಕ್ರಿಯೆ ಮುಗಿಯುವವರೆಗೆ ಹಣವನ್ನು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಬ್ಲಾಕ್ ಮಾಡಲಾಗುತ್ತದೆ
* ಯುಪಿಐ ಬಳಸಿಕೊಂಡು ಇಂತಹ ಬಿಡ್ಗಳಿಗೆ 2 ಲಕ್ಷ ರೂ.ಗಳ ಮೇಲಿನ ಮಿತಿಯನ್ನು ನಿಗದಿಪಡಿಸಲಾಗಿದೆ.
* ಮಂಜೂರು ಮಾಡಿದರೆ, ಖಾತೆಯಿಂದ ಹಣವು ಸ್ವಯಂಚಾಲಿತವಾಗಿ ಡೆಬಿಟ್ ಆಗುತ್ತದೆ
* ಇಲ್ಲದಿದ್ದಲ್ಲಿ ಇತರೆ ಬಳಕೆಗೆ ಹಣ ಬಿಡುಗಡೆ ಮಾಡಲಾಗುವುದು
ಜೀವ ವಿಮಾ ನಿಗಮದ (ಎಲ್ಐಸಿ) ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಗಾಗಿ ಮಾರುಕಟ್ಟೆ ನಿಯಂತ್ರಕ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಗೆ ಸರ್ಕಾರವು ಈಗಾಗಲೇ ಕರಡು ಪತ್ರಗಳನ್ನು ಸಲ್ಲಿಸಿದೆ. ಎಲ್ಐಸಿ ಐಪಿಒ ಭಾರತದ ಅತಿದೊಡ್ಡ IPO ಆಗಿದ್ದು, ಮಾರ್ಚ್ 2022 ರ ಎರಡನೇ ವಾರದಲ್ಲಿ ಸಾರ್ವಜನಿಕವಾಗಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಮೂಲಕ ಎಲ್ಐಸಿಯು ಕೂಡಾ ಖಾಸಗೀಕರಣದತ್ತ ಮುಖ ಮಾಡಲಿದೆ.
ಕೊರೊನಾ ವೈರಸ್ ಸೋಂಕು ದೇಶದಲ್ಲಿ ಕಂಡು ಬಂದ ನಂತರ ಆರ್ಥಿಕತೆಗೆ ಭಾರೀ ಪೆಟ್ಟು ಬಿದ್ದಿದೆ. ಕೊರೊನಾ ಬಳಿಕ ದೇಶದಲ್ಲಿ ಮಂಡನೆ ಮಾಡಲಾದ ಬಜೆಟ್ಗಳಲ್ಲಿನ ಕೊರತೆಯನ್ನು ನಿಭಾಯಿಸಲು ಸರ್ಕಾರಕ್ಕೆ ಹಣದ ಅಗತ್ಯವಿದೆ. ಹೀಗಾಗಿ ಎಲ್ಐಸಿ ಐಪಿಒ ಅನ್ನು ನಡೆಸಲಾಗುತ್ತಿದೆ. ಎಲ್ಐಸಿ ಐಪಿಒ ಪ್ರಾರಂಭದ ಹಿಂದಿನ ಕಲ್ಪನೆಯು ಭಾರತೀಯ ಆರ್ಥಿಕತೆಯನ್ನು ಉತ್ತೇಜಿಸುವುದು ಆಗಿದೆ.