For Quick Alerts
ALLOW NOTIFICATIONS  
For Daily Alerts

ಎಲ್‌ಐಸಿಗೆ ಪ್ಯಾನ್‌, ಆಧಾರ್‌ ಶೀಘ್ರ ಅಪ್‌ಡೇಟ್‌ ಮಾಡಿಕೊಳ್ಳಿ: ಇಲ್ಲಿದೆ ವಿವರ

|

ಜೀವ ವಿಮೆಯ ಪ್ರಮುಖ ಸಂಸ್ಥೆಯಾದ ಎಲ್‌ಐಸಿಯು ಡಿಮ್ಯಾಟ್ ಖಾತೆಯನ್ನು ಹೊಂದಿರುವ ತನ್ನ ಪಾಲಿಸಿದಾರರಿಗೆ ತಮ್ಮ ಆದಾಯ ತೆರಿಗೆ ಪ್ಯಾನ್ ಅನ್ನು ತಮ್ಮ ಪಾಲಿಸಿಗಳೊಂದಿಗೆ ಲಿಂಕ್ ಮಾಡಲು ಹೇಳಿದೆ. ಹಾಗೆಯೇ ಹಾಗೆಯೇ ಪಾಲಿಸಿಗಳಿಗೆ ಆಧಾರ್ ಜೋಡಣೆ ಮಾಡಬಹುದು.

 

ಡಿಮ್ಯಾಟ್ ಖಾತೆಯನ್ನು ಹೊಂದಿಲ್ಲದಿರುವ ಎಲ್ಐಸಿ ಪಾಲಿಸಿದಾರರು ಈ ವರ್ಗದ ಅಡಿಯಲ್ಲಿ ಐಪಿಒ ಅರ್ಜಿ ಸಲ್ಲಿಕೆ ಮಾಡಲು ತಮ್ಮ ಪಾಲಿಸಿಗಳಿಗೆ ಪ್ಯಾನ್‌ ಅನ್ನು ಲಿಂಕ್‌ ಮಾಡಬಹುದು. ಈ ಮೂಲಕವಾಗಿ ಮೀಸಲಿಟ್ಟ ವಿಭಾಗದಲ್ಲಿ ಐಪಿಒಗೆ ಅರ್ಜಿ ಸಲ್ಲಿಸಬಹುದು. ಇನ್ನು ಆಧಾರ್‌ ಕಾರ್ಡ್ ಅನ್ನು ಎಲ್‌ಐಸಿ ಪಾಲಿಸಿಗೆ ಆನ್‌ಲೈನ್‌ ಮೂಲಕ ಅಥವಾ ಆಫ್‌ಲೈನ್‌ ಮೂಲಕ ಅಪ್ಡೇಟ್‌ ಮಾಡಿಕೊಳ್ಳಬಹುದಾಗಿದೆ.

ಎಚ್‌ಡಿಎಫ್‌ಸಿ ಎಫ್‌ಡಿ, ಆರ್‌ಡಿ ಬಡ್ಡಿದರ ಪರಿಷ್ಕರಣೆ: ನೂತನ ಬಡ್ಡಿದರವೆಷ್ಟು?

ಪ್ರಸ್ತಾವಿತ ಯೋಜನೆಯ ಪ್ರಕಾರ, ಎಲ್‌ಐಸಿಯ ಐಪಿಒದ 10 ಪ್ರತಿಶತದವರೆಗೆ ಪಾಲಿಸಿದಾರರಿಗೆ ಕಾಯ್ದಿರಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ವಿಮೆದಾರರು ಪ್ಯಾನ್ ಅನ್ನು ಹೇಗೆ ನವೀಕರಿಸಬೇಕು ಮತ್ತು ಪ್ಯಾನ್ ಅನ್ನು ನವೀಕರಿಸಿದರೆ ಸ್ಟೇಟಸ್‌ ಅನ್ನು ಪರಿಶೀಲಿಸುವುದು ಹೇಗೆ ಎಂಬುದು ಈ ಕೆಳಗೆ ವಿವರಿಸಲಾಗಿದೆ, ಹಾಗೆಯೇ ಆಧಾರ್‌ ಅನ್ನು ಆನ್‌ಲೈನ್‌ ಮೂಲಕ ಅಥವಾ ಆಫ್‌ಲೈನ್‌ ಮೂಲಕ ಅಪ್ಡೇಟ್‌ ಮಾಡಿಕೊಳ್ಳುವ ಬಗ್ಗೆಯೂ ವಿವರಿಸಲಾಗಿದೆ ಮುಂದೆ ಓದಿ.

ಪ್ಯಾನ್‌ ಸಂಖ್ಯೆಯನ್ನು ಈ ರೀತಿಯಾಗಿ ಲಿಂಕ್ ಮಾಡಿಕೊಳ್ಳಿ

ಪ್ಯಾನ್‌ ಸಂಖ್ಯೆಯನ್ನು ಈ ರೀತಿಯಾಗಿ ಲಿಂಕ್ ಮಾಡಿಕೊಳ್ಳಿ

* ಮೊದಲು ಎಲ್‌ಐಸಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ https://licindia.in/
* ಬಳಿಕ ಆನ್‌ಲೈನ್ ಪ್ಯಾನ್ ನೋಂದಣಿಯ ಆಯ್ಕೆಯನ್ನು ಆರಿಸಿ
* ನಂತರ ಆನ್‌ಲೈನ್ ಪ್ಯಾನ್ ನೋಂದಣಿ ಪುಟದ ಮೇಲೆ ಕ್ಲಿಕ್ ಮಾಡಿ
* ಅದೇ ಪುಟದಲ್ಲಿ continue ಮೇಲೆ ಕ್ಲಿಕ್ ಮಾಡಿ
* ನಿಮ್ಮ ಇಮೇಲ್ ಐಡಿ, ಪ್ಯಾನ್‌, ಮೊಬೈಲ್ ಸಂಖ್ಯೆ ಮತ್ತು ಎಲ್‌ಐಸಿ ಪಾಲಿಸಿ ಸಂಖ್ಯೆಯನ್ನು ಹಾಕಿ
* ಬಾಕ್ಸ್‌ನಲ್ಲಿ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ
* ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಒಟಿಪಿ ರಿಕ್ವೇಸ್ಟ್‌ ನೀಡಿ
* ಒಟಿಪಿ ಬಂದ ಬಳಿಕ ಅದನ್ನು ಹಾಕಿ, submit ಮಾಡಿ
* ಫಾರ್ಮ್ ಅನ್ನು ಸಲ್ಲಿಸಿದ ನಂತರ, ನಿಮ್ಮ ಪ್ಯಾನ್‌ ಅಪ್ಡೇಟ್‌ ಆಗಿದೆ ಎಂದು ಬರಲಿದ್ದು, ಅಲ್ಲಿಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ

ಪ್ಯಾನ್ ಸ್ಟೇಟ್‌ಮೆಂಟ್‌ ಹೇಗೆ ಪರಿಶೀಲಿಸುವುದು?

ಪ್ಯಾನ್ ಸ್ಟೇಟ್‌ಮೆಂಟ್‌ ಹೇಗೆ ಪರಿಶೀಲಿಸುವುದು?

* https://linkpan.licindia.in/UIDSeedingWebApp/getPolicyPANStatus ಗೆ ಭೇಟಿ ನೀಡಿ
* ಪಾಲಿಸಿ ಸಂಖ್ಯೆ, ಜನ್ಮ ದಿನಾಂಕ ಮತ್ತು ಪ್ಯಾನ್ ಸಂಖ್ಯೆಯನ್ನು ಭರ್ತಿ ಮಾಡಿ
* ಬಾಕ್ಸ್‌ನಲ್ಲಿ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ
* ನಂತರ submit ಮೇಲೆ ಕ್ಲಿಕ್ ಮಾಡಿ
* ಪ್ರಕ್ರಿಯೆಯು ಪೂರ್ಣಗೊಂಡ ನಂತರ ನಿಮ್ಮ ಪ್ಯಾನ್‌ ಎಲ್‌ಐಸಿ ಪಾಲಿಸಿಯಲ್ಲಿ ಲಿಂಕ್‌ ಆಗಿದೆಯೇ, ಇಲ್ಲವೇ ತಿಳಿಯಲಿದೆ

ಆನ್‌ಲೈನ್‌ ಮೂಲಕ ಆಧಾರ್‌ ಲಿಂಕ್‌
 

ಆನ್‌ಲೈನ್‌ ಮೂಲಕ ಆಧಾರ್‌ ಲಿಂಕ್‌

* ಎಲ್‌ಐಸಿಯ ಅಧಿಕೃತ ವೆಬ್‌ಸೈಟ್ www.licindia.in ಗೆ ಭೇಟಿ ನೀಡಿ
* Link Aadhaar and PAN to policy ಗೆ ಮೇಲೆ ಕ್ಲಿಕ್‌ ಮಾಡಿ
* ಎಲ್ಲಾ ಸೂಚನೆಗಳನ್ನು ಓದಿ Proceed ಮೇಲೆ ಕ್ಲಿಕ್‌ ಮಾಡಿ
* ಆಧಾರ್, ಹುಟ್ಟಿದ ದಿನಾಂಕ ಮತ್ತು ಆಧಾರ್ ಸಂಖ್ಯೆಯಲ್ಲಿ ನಮೂದಿಸಿದಂತೆ ಹೆಸರನ್ನು ನಮೂದಿಸಿ
* ಲಿಂಗವನ್ನು ಆಯ್ಕೆ ಮಾಡಲು ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ
* ಇಮೇಲ್ ಐಡಿ, ಪ್ಯಾನ್ ಸಂಖ್ಯೆ, ಯುಐಡಿಎಐ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಪಾಲಿಸಿ ಸಂಖ್ಯೆಯನ್ನು ನಮೂದಿಸಿ
* ಬಳಿಕ Add Policy ಮೇಲೆ ಕ್ಲಿಕ್‌ ಮಾಡಿ
* ಕ್ಯಾಪ್ಚಾ ನಮೂದಿಸಿ, ಕ್ಯಾಪ್ಚಾದಲ್ಲಿ ಅನುಮಾನವಿದ್ದರೆ Refresh Captcha ಮೇಲೆ ಕ್ಲಿಕ್‌ ಮಾಡಿ
* Get OTP ಮೆಲೆ ಕ್ಲಿಕ್‌ ಮಾಡಿ ಬಂದ ಒಟಿಪಿ ನಮೂದಿಸಿ
* ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ನಿಮ್ಮ ಆಧಾರ್‌ ಲಿಂಕ್‌ ಆಗಲಿದೆ

ಆಫ್‌ಲೈನ್‌ ಮೂಲಕ ಎಲ್‌ಐಸಿಗೆ ಆಧಾರ್‌ ಲಿಂಕ್‌

ಆಫ್‌ಲೈನ್‌ ಮೂಲಕ ಎಲ್‌ಐಸಿಗೆ ಆಧಾರ್‌ ಲಿಂಕ್‌

ನಿಮಗೆ ಇಂಟರ್‌ನೆಟ್‌ ಬಳಸಲು ಸಾಧ್ಯವಾಗದಿದ್ದರೆ ನೀವು ಆಫ್‌ಲೈನ್‌ ಮೂಲಕವೂ ಎಲ್‌ಐಸಿಗೆ ಆಧಾರ್‌ ಲಿಂಕ್‌ ಮಾಡಿಕೊಳ್ಳಬಹುದು. ನೀವು ಆಫ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬಹುದು. ಅದಕ್ಕಾಗಿ ಈ ಕೆಳಗಿನ ಹಂತಗಳನ್ನ ಪಾಲಿಸಬೇಕು.

* ಎಲ್‌ಐಸಿ ಆಧಾರ್ ಲಿಂಕ್ ಮಾಡುವ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ
* ಅಥವಾ ನಿಮ್ಮ ಹತ್ತಿರದ ಎಲ್‌ಐಸಿ ಶಾಖೆಗೆ ಹೋಗಿ ಫಾರ್ಮ್‌ ಪಡೆದುಕೊಳ್ಳಿ
* ನೀವು ಲಿಂಕ್ ಮಾಡಲು ಬಯಸುವ ಎಲ್ಲಾ ಪಾಲಿಸಿ ಸಂಖ್ಯೆಗಳನ್ನು ನೀವು ನಮೂದಿಸಬಹುದು
* ಆಧಾರ್ ಮತ್ತು ಪ್ಯಾನ್ ಕಾರ್ಡ್/ಫಾರ್ಮ್ 60 ರ ಸ್ವಯಂ-ದೃಢೀಕರಿಸಿದ ಒಂದು ಕಾಪಿ ಇರಬೇಕು
* ನಂತರ ನೀವು "ಪಾಲಿಸಿದಾರರ ಸಹಿ" ಮೇಲೆ ಸಹಿ ಮಾಡಬೇಕು
* ಲಿಂಕ್ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಡಾಕ್ಯುಮೆಂಟ್‌ಗಳನ್ನು ಅಧಿಕಾರಿಗೆ ಸಲ್ಲಿಸಿ

English summary

How to link Aadhaar number and PAN to LIC policy? Know in Kannada

Link PAN and Aadhar to LIC policies, Check here Details in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X