For Quick Alerts
ALLOW NOTIFICATIONS  
For Daily Alerts

ಗಮನಿಸಿ: ಆಧಾರ್‌ ಅಪ್‌ಡೇಟ್‌, ವೇರಿಫಿಕೇಶನ್‌ಗೆ ಯಾವ ದಾಖಲೆ ಬೇಕು?

|

ಆಧಾರ್ ಕಾರ್ಡ್ ಇದು ಸರ್ಕಾರದಿಂದ ನೀಡಲಾಗುವ ಅತ್ಯಂತ ಮಹತ್ವದ ಗುರುತಿನ ಚೀಟಿಗಳಲ್ಲೊಂದಾಗಿದೆ. ಆಧಾರ್ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನೀಡಿದ 12-ಅಂಕಿಯ ಗುರುತಿಸುವಿಕೆಯ ಸಂಖ್ಯೆಯಾಗಿದೆ. ಆಧಾರ್‌ ಕಾರ್ಡ್ ಈಗ ಭಾರತದಲ್ಲಿ ಬಹುಮುಖ್ಯ ದಾಖಲೆಯಾಗಿದೆ. ಬ್ಯಾಂಕ್, ಏರ್‌ಪೋರ್ಟ್‌, ಶಾಲೆ ಕಾಲೇಜು, ಪಿಎಫ್‌, ಹೀಗೆ ಹಲವು ಸಂದರ್ಭದಲ್ಲಿ ಆಧಾರ್‌ ಕಾರ್ಡ್‌ಗಳನ್ನು ಬಳಸುವುದು ಈಗ ಕಡ್ಡಾಯವೆಂಬಂತೆ ಪರಿಗಣಿಸಲ್ಪಟ್ಟಿದೆ. ಕೊರೊನಾ ವೈರಸ್‌ನ ವಿರುದ್ದದ ಲಸಿಕೆ ಪಡೆಯಬೇಕಾದರೂ ಆಧಾರ್‌ ಸಂಖ್ಯೆ ಮುಖ್ಯವಾಗಿದೆ.

 

ಈ ಆಧಾರ್‌ ಕಾರ್ಡ್ ಅನ್ನು ಮಾಡಬೇಕಾದರೆ ಅಥವಾ ಅಪ್‌ಡೇಟ್‌ ಮಾಡಬೇಕಾದರೆ ಅಥವಾ ವೇರಿಫಿಕೇಶನ್‌ ಮಾಡಬೇಕಾದರೆ ಹಲವಾರು ದಾಖಲೆಗಳನ್ನು ನಾವು ಸಲ್ಲಿಸಬೇಕಾಗುತ್ತದೆ. ಆದರೆ ಹೆಚ್ಚಿನ ಜನರಿಗೆ ತಾವು ಯಾವ ದಾಖಲೆಯನ್ನು ಸಲ್ಲಿಸಬೇಕು ಎಂಬುವುದು ತಿಳಿಯದ ಕಾರಣ ಆಧಾರ್‌ ಅನ್ನು ಅಪ್‌ಡೇಟ್‌ ಮಾಡುವ ಗೋಜಿಗೆ ಹೋಗದೆ ಮತ್ತೆ ತೊಂದರೆ ಉಂಟಾಗಬಹುದು. ಇನ್ನು ಯುಐಡಿಎಐ ಆಧಾರ್‌ ಕಾರ್ಡ್ ಮಾಡಲು ಮುಂದಾದವರಿಗೆ ಅಗತ್ಯ ಸಲಹೆಯನ್ನು ಹಲವು ಬಾರಿ ನೀಡಿದೆ. "ನೀವು ಆಧಾರ್‌ ಕಾರ್ಡ್ ಅನ್ನು ಮಾಡುವ ಸಂದರ್ಭದಲ್ಲಿ ಬೇರೆ ಎಲ್ಲಾ ದಾಖಲೆಗಳಲ್ಲಿ ಯಾವ ಮಾಹಿತಿ, ಹೆಸರು ಇದೆಯೋ ಅದೇ ಮಾಹಿತಿ, ಹೆಸರನ್ನು ನಿಮ್ಮ ಆಧಾರ್‌ ಕಾರ್ಡ್‌‌ಗೆ ನೀಡಿ, ಇಲ್ಲವಾದರೆ ಭವಿಷ್ಯದಲ್ಲಿ ತೊಂದರೆ ಉಂಟಾಗುತ್ತದೆ," ಎಂದು ಹಲವಾರು ಬಾರಿ ಹೇಳಿದೆ.

ಯಾವ ಆಧಾರ್‌ ಮಾನ್ಯ?: ವಿವಿಧ ನಮೂನೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ

ನಿಮ್ಮ ಹೆಸರು ಹಾಗೂ ಫೋಟೋವನ್ನು ಹೊಂದಿರುವ ಐಡಿ ಕಾರ್ಡ್, ನಿಮ್ಮ ಹೆಸರನ್ನು ಸರಿಯಾಗಿ ಹೊಂದಿರುವ ದಾಖಲೆಗಳು, ನಿಮ್ಮ ಕುಟುಂಬದ ಮುಖ್ಯಸ್ಥರ ಹೆಸರು, ನಿಮ್ಮ ಜನನ ದಿನ, ನಿಮ್ಮ ವಿಳಾಸವಿರುವ ದಾಖಲೆ ಸಾಮಾನ್ಯವಾಗಿ ನಿಮ್ಮ ಆಧಾರ್‌ ವೇರಿಫಿಕೇಶನ್‌ಗೆ ಬೇಕಾಗುವ ದಾಖಲೆಗಳು ಆಗಿದೆ. ಆದರೆ ನೀವು ಆಧಾರ್‌ ಅನ್ನು ಅಪ್‌ಡೇಟ್‌ ಮಾಡಲು ಹಾಗೂ ವೇರಿಫಿಕೇಶನ್‌ ಮಾಡಲು ನಿರ್ದಿಷ್ಟವಾಗಿ ಯಾವ ದಾಖಲೆಗಳನ್ನು ಹೊಂದಿರಬೇಕು?, ಇಲ್ಲಿ ವಿವರಿಸಲಾಗಿದೆ, ಮುಂದೆ ಓದಿ.

 ನಿಮ್ಮ ಗುರುತಿನ ಚೀಟಿ ಅತೀ ಮುಖ್ಯ

ನಿಮ್ಮ ಗುರುತಿನ ಚೀಟಿ ಅತೀ ಮುಖ್ಯ

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಪ್ರಕಾರ ನಿಮ್ಮ ಗುರುತಿನ ಚೀಟಿ ಆಧಾರ್‌ ಕಾರ್ಡ್‌ ಅಪ್‌ಡೇಟ್‌ ಮಾಡಲು ಹಾಗೂ ವೇರಿಫಿಕೇಶನ್‌ ಮಾಡಲು ಬೇಕಾದ ಅತೀ ಮುಖ್ಯ ದಾಖಲೆಯಾಗಿದೆ. ಹಾಗಾದರೆ ಯಾವೆಲ್ಲಾ ದಾಖಲೆಗಳು ನಿಮ್ಮ ಗುರುತಿನ ದಾಖಲೆಗಳು ಆಗುತ್ತದೆ. ಈ ಕೆಳಗೆ ಪಟ್ಟಿ ಮಾಡಲಾಗಿದೆ.

* ಪಾಸ್‌ಪೋರ್ಟ್

* ಪ್ಯಾನ್‌ ಕಾರ್ಡ್

* ರೇಷನ್‌ ಕಾರ್ಡ್

* ವೋಟರ್‌ ಕಾರ್ಡ್ (ಮತ ಚೀಟಿ)

* ಡ್ರೈವಿಂಗ್‌ ಲೈಸೆನ್ಸ್‌

* ಸರ್ಕಾರದ ಪೋಟೋ ಐಡಿ ಕಾರ್ಡ್ ಅಥವಾ ಪಿಎಸ್‌ಯು ನೀಡುವ ಸೇವಾ ಫೋಟೋ ಗುರುತಿನ ಚೀಟಿ

* ಎನ್‌ಆರ್‌ಇಜಿಎಸ್‌ ಉದ್ಯೋಗ ಕಾರ್ಡ್

* ನಿಮ್ಮ ಶಿಕ್ಷಣ ಸಂಸ್ಥೆಯಲ್ಲಿ ನೀಡಲಾಗಿರುವ ಐಡಿ ಕಾರ್ಡ್

* ಪಿಸ್ತೂಲು ಇಟ್ಟಿಕೊಳ್ಳುವ ಪರವಾನಗಿ ಪತ್ರ

* ಫೋಟೋ ಇರುವ ಎಟಿಎಂ ಕಾರ್ಡ್‌ನ

* ಪಿಂಚಣಿಯ ಕಾರ್ಡ್

* ಸ್ವಾತಂತ್ಯ್ರ ಹೋರಾಟಗಾರರು ಎಂಬ ಐಡಿ

* ಕಿಸಾನ್‌ ಫೋಟೋ ಪಾಸ್‌ ಬುಕ್‌

* ಸಿಜಿಎಚ್‌ಎಸ್‌/ಇಸಿಎಚ್‌ಎಸ್‌ ಫೋಟೋ ಕಾರ್ಡ್

* ವಿಳಾಸ, ಹೆಸರು, ಚಿತ್ರ ಇರುವ ಅಂಚೆ ಇಲಾಖೆಯ ದಾಖಲೆ

* ಗೆಜೆಟೆಡ್ ಅಧಿಕಾರಿ ಅಥವಾ ತಹಸೀಲ್ದಾರ್ ನೀಡಿದ ಫೋಟೋ ಹೊಂದಿರುವ ಗುರುತಿನ ಪ್ರಮಾಣಪತ್ರ

* ಆಯಾ ರಾಜ್ಯ/ ಯುಟಿ ಸರ್ಕಾರಗಳು/ ಆಡಳಿತದಿಂದ ನೀಡಲಾದ ಅಂಗವೈಕಲ್ಯ ಗುರುತಿನ ಚೀಟಿ/ ಅಂಗವಿಕಲ ವೈದ್ಯಕೀಯ ಪ್ರಮಾಣಪತ್ರ

* ರಾಜಸ್ಥಾನ ಸರ್ಕಾರದ ಜನ-ಆಧಾರ್ ಕಾರ್ಡ್

* ಅನಾಥಾಶ್ರಮದ ವಾರ್ಡನ್‌, ಇತರೆ ಸಿಬ್ಬಂದಿಗಳು ನೀಡಿದ ಪ್ರಮಾಣ ಪತ್ರ

* ಶಾಸಕರು, ಸಂಸದರು ನೀಡಿದ ಪ್ರಮಾಣಪತ್ರ

* ಗ್ರಾಮ ಪಂಚಾಯಿತಿ ಮುಖ್ಯಸ್ಥ ಗುರುತಿನ ಪ್ರಮಾಣಪತ್ರ

* ಹೆಸರು ಬದಲಾವಣೆಯಾದ ದಿನಪತ್ರಿಕೆ ದಾಖಲೆ

* ಚಿತ್ರದೊಂದಿಗೆ ಇರುವ ವಿವಾಹ ಪ್ರಮಾಣಪತ್ರ

* ಆರ್‌ಎಸ್‌ಬಿವೈ ಕಾರ್ಡ್

* ಚಿತ್ರವಿರುವ ಎಸ್‌ಎಸ್‌ಎಲ್‌ಸಿ ಪ್ರಮಾಣಪತ್ರ

* ಚಿತ್ರವಿರುವ ಎಸ್‌ಸಿ, ಎಸ್‌ಟಿ, ಒಬಿಸಿ ಪ್ರಮಾಣಪತ್ರ

* ಶಾಲೆಯ ವರ್ಗಾವಣೆ ಪ್ರಮಾಣಪತ್ರ

* ಹೆಸರು, ಜನನ ದಿನ, ಚಿತ್ರ ಇರುವ ಭವಿಷ್ಯ ನಿಧಿಯ ದಾಖಲೆ

ನಿಮ್ಮ ಆಧಾರ್‌ ಮೂಲಕ ಎಷ್ಟು ಸಿಮ್‌ ಖರೀದಿ ಮಾಡಲಾಗಿದೆ ಎಂದು ತಿಳಿಯುವುದು ಹೇಗೆ?

 ಸಂಬಂಧದ ಪುರಾವೆಯು ಬೇಕು (ಪಿಒಆರ್‌)
 

ಸಂಬಂಧದ ಪುರಾವೆಯು ಬೇಕು (ಪಿಒಆರ್‌)

* ಪಿಡಿಎಸ್‌ ಕಾರ್ಡ್

* ಎಮ್‌ಎನ್‌ಆರ್‌ಇಜಿಎ ಉದ್ಯೋಗ ಕಾರ್ಡ್

* ಸಿಜಿಎಚ್‌ಎಸ್‌/ರಾಜ್ಯ ಸರ್ಕಾರ/ಇಸಿಎಚ್‌ಎಸ್‌/ಇಎಸ್‌ಐಸಿ ಮೆಡಿಕಲ್‌ ಕಾರ್ಡ್

* ಪಿಂಚಣಿ ಕಾರ್ಡ್

* ಆರ್ಮಿ ಕ್ಯಾಂಟಿನ್‌ ಕಾರ್ಡ್

* ಪಾಸ್‌ಪೋರ್ಟ್

* ಜನನ ಪ್ರಮಾಣ ಪತ್ರ

* ಕೇಂದ್ರ/ ರಾಜ್ಯ ಸರ್ಕಾರದ ಬೇರೆ ದಾಖಲೆಗಳು

* ಸರ್ಕಾರದಿಂದ ನೀಡಲಾದ ವಿವಾಹ ಪ್ರಮಾಣ ಪತ್ರ

* ಹೆಸರು, ಚಿತ್ರವಿರುವ ಅಂಚೆ ಇಲಾಖೆಯ ವಿಳಾಸ ಕಾರ್ಡ್

* ರಾಜಸ್ತಾನ ಸರ್ಕಾರದ ಜನ ಆಧಾರ ಕಾರ್ಡ್

* ಜನನ ಪ್ರಮಾಣ ಪತ್ರ

* ಶಾಸಕರು, ಸಂಸದರು ನೀಡಿದ ಪ್ರಮಾಣಪತ್ರ

 ನಿಮ್ಮ ಜನನ ದಿನಾಂಕವಿರುವ ದಾಖಲೆಗಳು ಮುಖ್ಯ

ನಿಮ್ಮ ಜನನ ದಿನಾಂಕವಿರುವ ದಾಖಲೆಗಳು ಮುಖ್ಯ

* ಜನನ ಪ್ರಮಾಣ ಪತ್ರ

* ಎಸ್‌ಎಸ್‌ಎಲ್‌ಸಿ ಪ್ರಮಾಣ ಪತ್ರ

* ಪಾಸ್‌ಪೋರ್ಟ್

* ಜನನ ದಿನಾಂಕವಿರುವ ಸರ್ಕಾರ ನೀಡಿರುವ ಗುರುತಿನ ಚೀಟಿ

* ಜನನ ದಿನಾಂಕವಿರುವ ಶಾಲೆಯ ಗುರುತಿನ ಚೀಟಿ

* ಪ್ಯಾನ್‌ ಕಾರ್ಡ್

* ಯಾವುದೇ ಸರ್ಕಾರಿ ವಿಶ್ವವಿದ್ಯಾನಿಲಯ ನೀಡಿರುವ ಫಲಿತಾಂಶ ದಾಖಲೆ

* ಸರ್ಕಾರಿ ಗುರುತಿನ ಚೀಟಿ

* ಕೇಂದ್ರ/ ರಾಜ್ಯ ಪಿಂಚಣಿ ಪಾವತಿ ಆದೇಶ ಪತ್ರ

* ಕೇಂದ್ರ ಸರ್ಕಾರದ ಆರೋಗ್ಯ ಸೇವಾ ಯೋಜನೆ ಫೋಟೋ ಕಾರ್ಡ್ ಅಥವಾ ಮಾಜಿ ಸೈನಿಕರ ಕೊಡುಗೆ ಆರೋಗ್ಯ ಯೋಜನೆ ಫೋಟೋ ಕಾರ್ಡ್

* ಜನನ ದಿನಾಂಕವಿರುವ ಶಾಲೆಯ ವರ್ಗಾವಣೆ ಪ್ರಮಾಣಪತ್ರ

* ಹೆಸರು, ಜನನ ದಿನ ಹಾಗೂ ಚಿತ್ರವಿರುವ ಶಾಲೆಯ ದಾಖಲೆ

* ಯುಐಡಿಎಐ ಪ್ರಮಾಣಿತ ಶಾಲೆ ನೀಡಿರುವ ಗುರುತಿನ ಪ್ರಮಾಣ ಪತ್ರ

ಏನಿದು ಸೈಬರ್‌ ವಿಮೆ, ನಿಮಗೇನು ಪ್ರಯೋಜನ?

 ಸರಿಯಾದ ವಿಳಾಸವಿರುವ ದಾಖಲೆ ನೀಡಿ

ಸರಿಯಾದ ವಿಳಾಸವಿರುವ ದಾಖಲೆ ನೀಡಿ

* ಪಾಸ್‌ಪೋರ್ಟ್

* ಬ್ಯಾಂಕ್‌ ಸ್ಟೇಟ್‌ಮೆಂಟ್‌/ ಪಾಸ್‌ಬುಕ್‌

* ಅಂಚೆ ಕಚೇರಿ ಖಾತೆ ಸ್ಟೇಟ್‌ಮೆಂಟ್‌/ ಪಾಸ್‌ಬುಕ್‌

* ರೇಷನ್‌ ಕಾರ್ಡ್

* ಚುನಾವಣಾ ಆಯೋಗ ನೀಡಿದ ಗುರುತಿನ ಚೀಟಿ/ ವೋಟರ್‌ ಐಡಿ

* ಡ್ರೈವಿಂಗ್‌ ಲೈಸನ್ಸ್‌/ಚಾಲನಾ ಪರವಾನಿಗೆ

* ಸರ್ಕಾರದ ಫೋಟೋ ಐಡಿ ಕಾರ್ಡ್

* ವಿದ್ಯುತ್‌ ಬಿಲ್‌ (ಮೂರು ತಿಂಗಳಿಗಿಂತ ಹಳೆಯದ್ದು ಆಗಿರಬಾರದು)

* ನೀರಿನ ಬಿಲ್‌ (ಮೂರು ತಿಂಗಳಿಗಿಂತ ಹಳೆಯದ್ದು ಆಗಿರಬಾರದು)

* ಟೆಲಿಫೋನ್‌ ಲ್ಯಾಂಡ್‌ಲೈನ್‌ ಬಿಲ್‌ (ಮೂರು ತಿಂಗಳಿಗಿಂತ ಹಳೆಯದ್ದು ಆಗಿರಬಾರದು)

* ಆಸ್ತಿ ತೆರಿಗೆ ರಶೀದಿ (ಮೂರು ತಿಂಗಳಿಗಿಂತ ಹಳೆಯದ್ದು ಆಗಿರಬಾರದು)

* ಕ್ರೆಡಿಟ್‌ ಕಾರ್ಡ್ ಸ್ಟೇಟ್‌ಮೆಂಟ್‌ (ಮೂರು ತಿಂಗಳಿಗಿಂತ ಹಳೆಯದ್ದು ಆಗಿರಬಾರದು)

* ವಿಮೆ ಪಾಲಿಸಿ

* ಬ್ಯಾಂಕಿನ ಸಹಿ ಇರುವ, ನಿಮ್ಮ ಚಿತ್ರವಿರುವ ದಾಖಲೆ

* ನೀವು ಕಾರ್ಯನಿರ್ವಹಿಸುವ ಸಂಸ್ಥೆ ಸಹಿ ಹಾಕಿ, ನಿಮ್ಮ ಚಿತ್ರವಿರುವ ದಾಖಲೆ

* ಶಿಕ್ಷಣ ಸಂಸ್ಥೆಯಿಂದ ನೀಡಲಾದ ಫೋಟೋ ಹೊಂದಿರುವ ಸಹಿ ಪತ್ರ

* ಎನ್‌ಆರ್‌ಇಜಿಎಸ್‌ ಉದ್ಯೋಗ ಕಾರ್ಡ್

* ಶಸ್ತ್ರಾಸ್ತ್ರ ಪರವಾನಗಿ

* ಪಿಂಚಣಿ ಕಾರ್ಡ್

* ಸ್ವಾತಂತ್ಯ್ರ ಹೋರಾಟಗಾರರ ಕಾರ್ಡ್

* ಕಿಸಾನ್‌ ಪಾಸ್‌ಬುಕ್‌

* ಸಿಜಿಎಚ್‌ಎಸ್‌/ಇಸಿಎಚ್‌ಎಸ್‌ ಕಾರ್ಡ್

* ನಿಮ್ಮ ವಿಳಾಸ ಇದುವೇ ಎಂದು ಶಾಸಕರು, ಕಾಪೋರೇಟರ್‌ಗಳು, ಸಂಸದರು, ತಹಶೀಲ್ದಾರರು ಪ್ರಮಾಣೀಕರಿಸುವ ಪತ್ರ

* ಗ್ರಾಮ ಪಂಚಾಯತ್‌ನ ಮುಖ್ಯಸ್ಥರು ಪ್ರಮಾಣೀಕರಿಸುವ ಪತ್ರ

* ಆಸ್ತಿ ತೆರಿಗೆ ಮೌಲ್ಯಮಾಪನ ಆದೇಶ

* ವಾಹನ ನೋಂದಣಿ ಪ್ರಮಾಣಪತ್ರ

* ನೋಂದಾಯಿತ ಮಾರಾಟ/ ಗುತ್ತಿಗೆ/ ಬಾಡಿಗೆ ಒಪ್ಪಂದ

* ನಿಮ್ಮ ಫೋಟೋ ಇರುವ, ಅಂಚೆ ಇಲಾಖೆ ನೀಡಿದ ವಿಳಾಸ ಪತ್ರ

* ರಾಜ್ಯ ಸರ್ಕಾರ ನೀಡಿರುವ ಜಾತಿ ಅಥವಾ ವಾಸಸ್ಥಾನ ಪ್ರಮಾಣಪತ್ರ

* ಆಯಾ ರಾಜ್ಯ ಸರ್ಕಾರ/ ಕೇಂದ್ರಾಡಳಿತ ಪ್ರದೇಶ ಸರ್ಕಾರಗಳು/ ಜಿಲ್ಲಾಡಳಿತ ನೀಡಿದ ಅಂಗವೈಕಲ್ಯ ಗುರುತಿನ ಚೀಟಿ/ ಅಂಗವಿಕಲ ವೈದ್ಯಕೀಯ ಪ್ರಮಾಣಪತ್ರ

* ಗ್ಯಾಸ್‌ ಬಿಲ್‌ (ಮೂರು ತಿಂಗಳಿಗಿಂತ ಹಳೆಯದ್ದು ಆಗಿರಬಾರದು)

* ನಿಮ್ಮ ಸಂಗಾತಿಯ ಪಾಸ್‌ಪೋರ್ಟ್

* ನಿಮ್ಮ ಪೋಷಕರ ಪಾಸ್‌ಪೋರ್ಟ್ (ನೀವು ಅಪ್ರಾಪ್ತರಾಗಿದ್ದರೆ)

* ಕೇಂದ್ರ/ ರಾಜ್ಯ ಸರ್ಕಾರದಿಂದ ನೀಡಲಾದ ವಸತಿ ನಿವೇಶನದ ಹಂಚಿಕೆ ಪತ್ರ (ಮೂರು ತಿಂಗಳಿಗಿಂತ ಹಳೆಯದ್ದು ಆಗಿರಬಾರದು)

* ರಾಜಸ್ತಾನ ಸರ್ಕಾರದ ಜನ ಆಧಾರ ಕಾರ್ಡ್

* ಅನಾಥಾಶ್ರಮದ ವಾರ್ಡನ್‌, ಇತರೆ ಸಿಬ್ಬಂದಿಗಳು ನೀಡಿದ ಪ್ರಮಾಣ ಪತ್ರ

* ಶಿಕ್ಷಣ ಸಂಸ್ಥೆಯಲ್ಲಿ ನೀಡಿದ ದಾಖಲೆ

* ಎಸ್‌ಎಸ್‌ಎಲ್‌ಸಿ ಪ್ರಮಾಣ ಪತ್ರ

* ಶಾಲೆಯ ಗುರುತಿನ ಚೀಟಿ

* ಶಾಲೆಯ ವರ್ಗಾವಣೆ ಪ್ರಮಾಣಪತ್ರ

* ಶಾಲೆಯಲ್ಲಿ ನೀಡಲಾದ ವಿಳಾಸ ದಾಖಲೆ

* ಭವಿಷ್ಯ ನಿಧಿಯಲ್ಲಿ ದಾಖಲಾಗಿರುವ ವಿಳಾಸ

English summary

List of Documents Required For Aadhaar Update & Verification, Details in Kannada

List of Documents Required For Aadhaar Update & Verification, Details in Kannada. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X