PM-KISAN Samman Nidhi Scheme: ಪಿಎಂ ಕಿಸಾನ್ ಸಮ್ಮಾನ್ ನಿಧಿ ಮೊತ್ತ ಬಾರದಿದ್ದಲ್ಲಿ ಎಲ್ಲಿ ದೂರು ನೀಡಬೇಕು?
ಎಲ್ಲ ಅರ್ಹ ಫಲಾನುಭವಿಗಳಿಗೆ ಪಿಎಂ- ಕಿಸಾನ್ (PM-KISAN) ಯೋಜನೆಯ ನೆರವು ಸಿಗಬೇಕು ಎಂಬ ಕಾರಣಕ್ಕೆ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಯೋಜನೆಗೆ ಆಧಾರ್ ಕಡ್ಡಾಯ. ಉಳಿದಂತೆ ಎಲ್ಲವೂ ಸಾರ್ವಜನಿಕ ಇಂಟರ್ಫೇಸ್ ಮೂಲಕವೇ ದೊರೆಯುವ ವ್ಯವಸ್ಥೆ ಇದೆ. ಸಣ್ಣ ಪ್ರಮಾಣದ ರೈತರಿಗೆ ವಾರ್ಷಿಕವಾಗಿ 6 ಸಾವಿರ ರೂಪಾಯಿ, ಅಂದರೆ ಮೂರು ಕಂತುಗಳಲ್ಲಿ ತಲಾ 2 ಸಾವಿರ ರೂಪಾಯಿಯಂತೆ ಸಿಗಲು ಈ ಯೋಜನೆ ರೂಪಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು 9.5 ಲಕ್ಷ ಕೃಷಿಕ ಫಲಾನುಭವಿಗಳಿಗೆ ಅಂದಾಜು 20,000 ಕೋಟಿ ರೂಪಾಯಿಯಷ್ಟನ್ನು ಪಿಎಂ- ಕಿಸಾನ್ ಯೋಜನೆ ಅಡಿಯಲ್ಲಿ ವಿತರಿಸಿದ್ದಾರೆ. ಆದರೂ ಇನ್ನೂ ಸಾಕಷ್ಟು ರೈತರಿಗೆ ಈ ಯೋಜನೆಯ ಅನುಕೂಲ ಸಿಗಬೇಕಿದೆ. ತಮ್ಮ ಹೆಸರನ್ನು ಸೇರಿಸಲು ಅಂಥವರು ಪಿಎಂ ಕಿಸಾನ್ ವೆಬ್ ಸೈಟ್ ಮತ್ತು ಮೊಬೈಲ್ ಆ್ಯಪ್ ಮೂಲಕ ಪ್ರಯತ್ನಿಸಬಹುದು. ಈ ಮಧ್ಯೆ ಸರ್ಕಾರದಿಂದ ಫೋನ್ ನಂಬರ್ಗಳ ಪಟ್ಟಿಯನ್ನು ನೀಡಲಾಗಿದೆ. ಒಂದು ವೇಳೆ ತಮ್ಮ ಕಂತು ಬಂದಿಲ್ಲ ಎಂದಾದಲ್ಲಿ ಅದರ ಮೂಲಕ ಜನರು ದೂರು ನೀಡಬಹುದು.
https://t.co/eleIAtFooE #PMKisanApp #pmkisansammanyojana #PMKisanGoi @pmkisanyojana
— PM Kisan Yojana (@pmkisanyojana) October 16, 2021
ದೂರು ನೀಡುವುದು ಹೇಗೆ?
ಅರ್ಹ ರೈತರಾಗಿದ್ದು ಹತ್ತನೇ ಕಂತಿನ 2 ಸಾವಿರ ರೂಪಾಯಿಯನ್ನು ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಪಡೆಯದಿದ್ದಲ್ಲಿ ಪಿಎಂ ಕಿಸಾನ್ ಹೆಲ್ಪ್ ಡೆಸ್ಕ್ನಲ್ಲಿ ದೂರು ನೀಡಬಹುದು. ಸೋಮವಾರದಿಂದ ಶುಕ್ರವಾರದ ತನಕ ಅವಕಾಶ ಇರುತ್ತದೆ. ದೂರು ನೀಡಬಹುದು. ಅಷ್ಟೇ ಅಲ್ಲ, ಇಮೇಲ್ ಐಡಿ- pmkisan-ict@gov.in ಮತ್ತು pmkisan-funds@gov.in ಅಥವಾ
ಕರೆ ಮಾಡುವುದಾದಲ್ಲಿ ಪಿಎಂ-ಕಿಸಾನ್ ಸಹಾಯವಾಣಿ ಸಂಖ್ಯೆ: 011-24300606, 155261
ಪಿಎಂ ಕಿಸಾನ್ ಟೋಲ್-ಫ್ರೀ ಸಂಖ್ಯೆ: 1800-115-526
ಜತೆಗೆ ಆನ್ಲೈನ್ ಮೂಲಕ ಈ ಲಿಂಕ್ ಬಳಸಿ ದೂರು ನೀಡಬಹುದು: https://pmkisan.gov.in/grievance.aspx
ಆಧಾರ್ ಸಂಖ್ಯೆ ಅಥವಾ ಖಾತೆ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಆ ನಂತರ "Get Details" ಎಂಬುದರ ಮೇಲೆ ಕ್ಲಿಕ್ ಮಾಡಬೇಕು.

ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಪರಿಶೀಲಿಸುವುದು ಹೇಗೆ?
ಹಂತ 1: ಅಧಿಕೃತ ಪಿಎಂ ಕಿಸಾನ್ ಪೋರ್ಟಲ್ಗೆ ತೆರಳಬೇಕು
ಹಂತ 2: Farmers Corner ಅಡಿಯಲ್ಲಿ ಮತ್ತು Beneficiary List ಬಟನ್ ಮೇಲೆ ಕ್ಲಿಕ್ ಮಾಡಬೇಕು
ಹಂತ 3: ರಾಜ್ಯ, ಜಿಲ್ಲೆ, ಉಪ-ಜಿಲ್ಲೆ, ಬ್ಲಾಕ್, ಹಳ್ಳಿ ವಿವರಗಳನ್ನು ನಮೂದಿಸು ಮತ್ತು "Get Report" ಬಟನ್ ಮೇಲೆ ಕ್ಲಿಕ್ ಮಾಡಬೇಕು
ಪಿಎಂ ಕಿಸಾನ್ ಫಲಾನುಭವಿಯ ಸ್ಥಿತಿಯನ್ನು (Status) ಪ್ರದರ್ಶಿಸಲಾಗುತ್ತದೆ. ಪಿಎಂ ಕಿಸಾನ್ ಫಲಾನುಭವಿಯ ಸಂಪೂರ್ಣ ವಹಿವಾಟು ಇತಿಹಾಸ ಪ್ರದರ್ಶಿಸಲಾಗುತ್ತದೆ. ಫಲಾನುಭವಿಗಳ ಖಾತೆಗೆ ಹಣ ವರ್ಗಾಯಿಸಿದ ದಿನಾಂಕ ಮತ್ತು ಅದನ್ನು ಜಮಾ ಮಾಡಿದ ಬ್ಯಾಂಕ್ ಖಾತೆ ಸೇರಿದಂತೆ ಕೊನೆಯ ಕಂತಿನ ವಿವರಗಳು ಸ್ಕ್ರೀನ್ ಮೇಲೆ ಕಾಣಿಸುತ್ತವೆ. ಫಲಾನುಭವಿಗಳ ನಗದನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ವಿನಾ ನಗದು ಮೂಲಕ ಅಲ್ಲ.
ಒಂದು ವೇಳೆ ತಪ್ಪಾದ ಘೋಷಣೆ ಮಾಡಿದ್ದ ಸಂದರ್ಭದಲ್ಲಿ ಸ್ವೀಕರಿಸುವವರು ವರ್ಗಾವಣೆಗೊಂಡ ಹಣಕಾಸಿನ ಪ್ರಯೋಜನದ ಮರುಪಡೆಯುವುದಕ್ಕೆ ಮತ್ತು ಹೆಚ್ಚುವರಿ ಕಾನೂನು ದಂಡಗಳಿಗೆ ಜವಾಬ್ದಾರರಾಗಿರುತ್ತಾರೆ ಎಂಬ ಅಂಶಗಳನ್ನು ಇಲ್ಲಿ ಗಮನಿಸಬೇಕು.
ಪಿಎಂ ಕಿಸಾನ್ ವೆಬ್ಸೈಟ್ ಪ್ರಕಾರ ಯೋಜನೆಗೆ ಸಂಬಂಧಿಸಿದಂತೆ ಇವು ಪ್ರಮುಖ ಪ್ರಶ್ನೋತ್ತರಗಳು
1) ಯೋಜನೆಯಡಿ 'ಕುಟುಂಬ'ದ ವ್ಯಾಖ್ಯಾನವೇನು?
ಜಮೀನು ಇರುವ ರೈತರ ಕುಟುಂಬದಲ್ಲಿ ಗಂಡ, ಹೆಂಡತಿ ಮತ್ತು ಅಪ್ರಾಪ್ತ ಮಕ್ಕಳು ಒಳಗೊಂಡಿರುವುದನ್ನು ಕುಟುಂಬ ಎಂದು ವ್ಯಾಖ್ಯಾನಿಸಲಾಗಿದೆ. ಹೀಗೆ ಸಂಬಂಧಪಟ್ಟವರು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ಭೂ ದಾಖಲೆಗಳ ಪ್ರಕಾರ ಸಾಗುವಳಿ ಭೂಮಿಯನ್ನು ಹೊಂದಿರಬೇಕು. ಅಸ್ತಿತ್ವದಲ್ಲಿರುವ ಭೂ-ಮಾಲೀಕತ್ವ ವ್ಯವಸ್ಥೆಯನ್ನು ಫಲಾನುಭವಿಗಳನ್ನು ಗುರುತಿಸಲು ಬಳಸಲಾಗುತ್ತದೆ.
2) ಜಮೀನುವುಳ್ಳ ರೈತರ ಕುಟುಂಬದವರ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಸೇರಿದೆ ಎಂದು ಹೇಗೆ ತಿಳಿಯುತ್ತದೆ?
ಹೆಚ್ಚಿನ ಪಾರದರ್ಶಕತೆ ಮತ್ತು ಮಾಹಿತಿಯನ್ನು ಖಚಿತಪಡಿಸಿಕೊಳ್ಳಲು ಫಲಾನುಭವಿಗಳ ಪಟ್ಟಿಗಳನ್ನು ಪಂಚಾಯತ್ಗಳಲ್ಲಿ ಪ್ರದರ್ಶಿಸಲಾಗುತ್ತದೆ. ಇದಲ್ಲದೆ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಲಾಭದ ಮಂಜೂರಾತಿಯನ್ನು ಸಿಸ್ಟಮ್ ರೂಪಿಸಿದ ಎಸ್ಸೆಮ್ಮೆಸ್ ಮೂಲಕ ಫಲಾನುಭವಿಗಳಿಗೆ ಸೂಚಿಸುತ್ತವೆ. ಫಲಾನುಭವಿಗಳು ಪಿಎಂ-ಕಿಸಾನ್ ಪೋರ್ಟಲ್ನಲ್ಲಿ ರೈತರ ಕಾರ್ನರ್ ಮೂಲಕ ಸ್ಟೇಟಸ್ ಸಹ ಖಚಿತಪಡಿಸಿಕೊಳ್ಳಬಹುದು.
3) ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಹಣಕಾಸು ಪ್ರಯೋಜನವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತದೆಯೇ?
ಹೌದು. ಯೋಜನೆಯಡಿಯಲ್ಲಿ ಹಣಕಾಸಿನ ಪ್ರಯೋಜನವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತದೆ.